ಪದ್ಮಾ ಸುಬ್ರಹ್ಮಣ್ಯಂ

(ಡಾ. ಪದ್ಮಾ ಸುಬ್ರಹ್ಮಣ್ಯಂ ಇಂದ ಪುನರ್ನಿರ್ದೇಶಿತ)

'ಪದ್ಮಾ ಸುಬ್ರಹ್ಮಣ್ಯಂ', ೨೧ ನೆಯ ಶತಮಾನದ ಅತ್ಯಂತ ಸೃಜನಶೀಲ ಕಲಾವಿದರಲ್ಲಿ ಒಬ್ಬರು. ಭಾರತೀಯ ನೃತ್ಯಶಾಸ್ತ್ರದ ಒಬ್ಬ ಬಹುಮುಖ್ಯ ಸಂಶೋಧಕಿ, ನೃತ್ಯ ಸಂಯೋಜಕಿ, ಸಂಗೀತಜ್ಞೆ, ಉತ್ತಮ ಗುರು, ಮತ್ತು ಭಾರತೀಯ ಸಂಸ್ಕೃತಿಯ ರಾಯಭಾರಿಯೆಂದು ಪ್ರಸಿದ್ಧರು. ಶ್ರೇಷ್ಠ ಅಭಿನಯ, ಸೃಜನಶೀಲ ವ್ಯಕ್ತಿತ್ವ ಮತ್ತು ನಾವೀನ್ಯತೆಗೆ ಆದ್ಯತೆ ಕೊಡುತ್ತಾರೆ.[]

ಡಾ. ಪದ್ಮಾ ಸುಬ್ರಹ್ಮಣ್ಯಂ

'ಪದ್ಮಾರವರು', [] ಪ್ರಸಿದ್ಧ ಚಲನಚಿತ್ರ ನಿರ್ಮಾಪಕ, ಕಲಾಪೋಷಕ, ಕೆ. ಸುಬ್ರಹ್ಮಣ್ಯಂ, ಮತ್ತು ಮೀನಾಕ್ಷಿ, ದಂಪತಿಗಳ ಪ್ರೀತಿಯ ಮಗಳಾಗಿ ಮದ್ರಾಸ್ ನಲ್ಲಿ, ಫೆಬ್ರವರಿ, ೪, ೧೯೪೩ ರಲ್ಲಿ ಜನಿಸಿದರು. ತಾಯಿ ಒಬ್ಬ ಉತ್ತಮ ಸಂಗೀತ ಸಂಯೋಜಕಿ, ಮತ್ತು ತಮಿಳು,ಸಂಸ್ಕೃತದಲ್ಲಿ ಬರಹಗಾರ್ತಿಯಾಗಿ ಗುರುತಿಸಲ್ಪಟ್ಟಿದ್ದರು.

ನೃತ್ಯೋದಯ

ಬದಲಾಯಿಸಿ

ತಂದೆಯವರು ಸ್ಥಾಪಿಸಿದ ನೃತ್ಯ ವಿದ್ಯಾ ಶಾಲೆ. ಪದ್ಮಾ ಸುಬ್ರಹ್ಮಣ್ಯಂ,'ಕೌಸಲ್ಯ' ಎಂಬ ಗುರುವಿನಬಳಿ ಬಾಲಕಿಯಾದಾಗಿನಿಂದ ಕಲಿಕೆ ಆರಂಭಿಸಿದರು. ವಯುವೂರು ಬಿ. ರಾಮಯ್ಯ ಪೈಳ್ಳೆ ಯವರ ಶಿಷ್ಯೆಯಾಗಿದ್ದ ಪದ್ಮ, ೧೯೫೬ ರಲ್ಲಿ ಪ್ರಥಮ ನೃತ್ಯ ಪ್ರದರ್ಶನ ಕೊಟ್ಟರು. ಸಂಗೀತದಲ್ಲಿ ಪದವಿ ಗಳಿಸಿದರು. ಮುಂದೆ, ಎಥ್ನೊ ಮ್ಯೂಸಿಕಾಲಜಿ ಸ್ನಾತಕೋತ್ತರ ಪದವಿ, ನೃತ್ಯದಲ್ಲಿ ಡಾಕ್ಟರೇಟ್ ಶೈಕ್ಷಣಿಕ ಸಾಧನೆಗಳು. ಅವರು ಬರೆದ ಆಕರಗಳು ಪ್ರಮುಖವಾಗಿ ಭಾರತೀಯ ಸಂಸ್ಕೃತಿ, ಸಂಗೀತ, ಕಲೆ, ಮಹತ್ವಪೂರ್ಣವಾದ ಹಲವಾರು ಗ್ರಂಥಗಳನ್ನು ಪ್ರಕಟಿಸಿದರು. ಸಂಶೋಧನೆ. ಭಾರತೀಯ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಆಯೋಗದಲ್ಲಿ ಆಹ್ವಾನಿತರಾಗಿ ಕೊಟ್ಟ ಕೊಡುಗೆಗಳು ಮಹತ್ವದ್ದಾಗಿವೆ. ನೃತ್ಯದ ಜೊತೆಗೆ ಸಂಗೀತದಲ್ಲಿ ಅಪಾರ ಆಸಕ್ತಿ, ಹಲವಾರು ಸಂಗೀತ ಸಂಯೋಜನೆಗಳನ್ನು ಆಯೋಜಿಸಿದ್ದಾರೆ.[]

ಶಾಸ್ತ್ರೀಯ ನೃತ್ಯ ಮತ್ತು ಜಾನಪದ ನೃತ್ಯ ಸಂಯೋಜನೆ

ಬದಲಾಯಿಸಿ

ಗೆಳತಿ ಶಾಮಲಾ ಬಾಲಕೃಷ್ಣನ್, ಜೊತೆ ಹಲವು ಶಾಸ್ತ್ರೀಯ ಮತ್ತು ಜಾನಪದ ಸಂಯೋಜನೆಗಳ ಪ್ರಸ್ತುತಿಗಳು ಅತ್ಯುತ್ತಮವೆಂದು ಗುರುತಿಸಲ್ಪಟ್ಟಿವೆ.

  • ಪುಷ್ಪಾಂಜಲಿ ನೃತ್ಯ
  • ಮೀರಾಭಜನೆ, ನೃತ್ಯ ರೂಪಕ, ಪದವರ್ಣ ಸಂಯೋಜನೆ.
  • ಸಲೀಲ್ ಚೌಧರಿಯವರ, ಬಂಗಾಳಿ ಸಂಗೀತ ರೂಪಕಕ್ಕೆ ನೃತ್ಯ ಸಂಯೋಜನೆ, ಮುಂತಾದ ಪ್ರಥಮಗಳು ಅವರ ವೈವಿಧ್ಯಮಯ ಕಲಾಜೀವನದ ಭಾಗಗಳಾಗಿವೆ.
  • ಕೃಷ್ಣಾಯ ತುಭ್ಯಂ ನಮಃ,
  • ರಾಮಾಯ ತುಭ್ಯಂ ನಮಃ,
  • ಜಯ ಜಯ ಶಂಕರ,
  • ಮೀನಾಕ್ಷಿ ಕಲ್ಯಾಣಂ,
  • ವಿರಲಿ ಮಲೈ, ಕುರುವಂಜಿ,
  • ವಳ್ಳಿ ಕಲ್ಯಾಣಂ,
  • ಸಿಳಪ್ಪಡಿಕರಂ,
  • ಕೃಷ್ಣ ತುಲಾಭಾರಂ,
  • ಪಾರಿಜಾತ ಆಭರಣಂ,
  • ಗೀತಾಂಜಲಿ,
  • ಶ್ಯಾಮ,
  • ಶ್ರೀ ಗುರುವೇ ನಮಃ,
  • ವಂದೇ ಮಾತರಂ,
  • ಜಯತು ಮೋಕ್ಷಂ,
  • ಗಜೇಂದ್ರ ಮೋಕ್ಷಂ, ಮುಂತಾದ ಹತ್ತು ಹಲವು ಪ್ರಖ್ಯಾತ ನೃತ್ಯ ರೂಪಕಗಳನ್ನೂ,
  • ತಮಿಳು ಜಾನಪದದಲ್ಲಿ ವರ್ಣಂ ಮತ್ತು ಕುರುವಂಜಿಗಳ ಸಂಗ್ರಹದಲ್ಲಿ ಅಪಾರ ಸಾಧನೆ ಮಾಡಿದ್ದಾರೆ. ಸೋದರ, ಬಾಲಕೃಷ್ಣ , ಮತ್ತು ಅತ್ತಿಗೆ, ಶ್ಯಾಮಲ ಬಾಲಕೃಷ್ಣನ್ ರ ಸುಶ್ರಾವ್ಯ ಗಾಯನ, ಮತ್ತು ಜಾನಪದ ಆಸಕ್ತಿಗಳನ್ನು ಅವರ ನೃತ್ಯದಲ್ಲಿ ಸಮರ್ಥವಾಗಿ ಬಳಸಿಕೊಂಡಿದ್ದಾರೆ.[]

ನಗರಕ್ಕು ಅಪ್ಪಾಲ್

ಬದಲಾಯಿಸಿ

೧೯೬೩ ರಲ್ಲಿ ಸಂಶೋಧನೆ ಜಾನಪದ ರೂಪಕ, 'ನಗರಕ್ಕು ಅಪ್ಪಾಲ್' ಪ್ರದರ್ಶಿಸಿದ್ದರು. ಭಗವದ್ಗೀತೆಯ ೭೦೦ ಶ್ಲೋಕಗಳಲ್ಲಿ ಸುಂದರವಾದ ೭೮ ಶ್ಲೋಕಗಳನ್ನು ಅಳವಡಿಸಿ, ಒಂದು ಸಂಯೋಜನೆಯನ್ನು ನೃತ್ಯರಂಗದಲ್ಲಿ ತಂದಿದ್ದಾರೆ. ಪದ್ಮಾರವರಿಗೆ, ದೇವಾಲಯಗಳ ಕುರಿತಾದ, ದೇವಾಲಯಗಳ ಕಂಬಗಳ ಮೇಲೆ, ಗೋಡೆಗಳ ಮೇಲೆ ಮೂಡಿದ್ದ ಶಿಲ್ಪಗಳ ಕರಣಗಳ ಬಗ್ಗೆ ಆಸಕ್ತಿಮೂಡಿತು. ಇವುಗಳ ಬಗ್ಗೆ ಹೆಚ್ಚಿಗೆ ತಿಳಿಯಲು, ಆನಂದ ಕೊಮಾರಸ್ವಾಮಿ, ಟಿ.ಎಸ್.ರಾಮಚಂದ್ರನ್, ಸಿ. ಶಿವಮೂರ್ತಿ ಮುಂತಾದವರ ಮಹತ್ವ ಪೂರ್ಣ ಗ್ರಂಥಗಳನ್ನು ಓದಿ, ತಮ್ಮ ಸೋದರನ ಜೊತೆ ಸೇರಿ, ಒಂದು 'ಸಾಕ್ಷ ಚಿತ್ರ' ನಿರ್ಮಿಸಿದರು. ಈ ಮಹ್ತ್ವಾಕಾಂಕ್ಷೆಯ ಪ್ರತೀಕವಾದ ಸಂಶೋಧನಾತ್ಮ್ಕ ರೂಪಕ, ಬಹಳ ಜನಪ್ರಿಯತೆಯನ್ನು ಗಳಿಸಿತು.[]

ಪಿ.ಎಚ್.ಡಿ.ಪದವಿ

ಬದಲಾಯಿಸಿ
  • ಹೀಗೆ ಹಲವು ದೇವಾಲಯಗಳ ಶಿಲ್ಪ ಕಲೆಯ ಬಗ್ಗೆ ಅಧ್ಯಯನ ಮಾಡುತ್ತಾ ಬಹಳ ವಿಷಯಗಳನ್ನು ದಾಖಲೆ ಮಾಡುತ್ತಾ ಹೋದರು. 'ಭಾರತೀಯ ನೃತ್ಯ ಮತ್ತು ಸಂಸ್ಕೃತಿಯಲ್ಲಿ ಕರಣಗಳು' ಎಂಬ ಬಹು ಪ್ರಮುಖ ಸಂಶೋಧನಾ ಕೃತಿಯಾಗಿ ಹೊರಬಂದಿತು. ಅಣ್ಣಾಮಲೈ ವಿಶ್ವವಿದ್ಯಾ ಲಯದಿಂದ ಡಾಕ್ಟರೇಟ್ ಪದವಿ ಅಂಗೀಕೃತವಾಯಿತು. ಪದ್ಮಾರವರು ತಮ್ಮ ಎಲ್ಲಾ ಸಂಶೋಧನೆಗಳ ಮೂಲಕ , ಶಿಲಾವಿಗ್ರಹಗಳು ಮತ್ತು ಚಿತ್ರಗಳಲ್ಲಿ ಕಂಡುಬರುವ ೧೦೮ ಕರಣಗಳು ಸ್ಥಬ್ದವಾಗಿ ನೀಡಿದ ಪೋಸುಗಳಲ್ಲ ; ಅವು ನರ್ತಕ-ನರ್ತಕಿಯರ ನರ್ತನದ ಹಲವಾರು ಭಂಗಿಗಳು ಎನ್ನುವ ವಿಷಯಗಳನ್ನು ಮನದಟ್ಟು ಮಾಡಿಕೊಟ್ಟರು. ಘನ ವಿದ್ವಾಂಸ, ಟಿ.ಎನ್.ರಾಮಚಂದ್ರನ್ , ಮತ್ತು ಹಲವು ಸಂಶೋಧಕರು ಬಹಳವಾಗಿ ಮೆಚ್ಚಿಕೊಂಡರು. ಪದ್ಮಾರವರು, 'ಭರತ ನೃತ್ಯಂ' ಬಗ್ಗೆ, ರಾಷ್ಟ್ರದ ಹಲವು ಕಡೆ ಕಮ್ಮಟಗಳನ್ನು ನಡೆಸಿದ್ದಾರೆ. *ಭರತಮುನಿಗಳ ನಾಟ್ಯ ಶಾಸ್ತ್ರದಲ್ಲಿ ನಮೂದಿತಗೊಂಡು, ಬಳಕೆಯಲ್ಲಿರದ ’ಮಾರ್ಗ’ ಅಭಿವ್ಯಕ್ತಿಗೆ ಪುನಃಚೇತನ ನೀಡಿದರು. ತಮ್ಮ ಸಂಶೋಧನೆಯ ಆಧಾರದಮೇಲೆ ತಮ್ಮ ಕಾರ್ಯಕ್ರಮಗಳನ್ನು 'ಭರತ ನೃತ್ಯಂ 'ಎಂದು ಸಂಬೋಧಿಸಲು ಇಚ್ಛಿಸುಸುತ್ತಾರೆ. ತಮ್ಮ 'ಭರತ ನೃತ್ಯಂ' ರೂಪಕಗಳನ್ನು ಸಂಸ್ಕೃತ, ತಮಿಳು, ಕಾಶ್ಮೀರಿ, ಬಂಗಾಳಿ, ಒರಿಯಾ, ಮರಾಠಿ, ಕನ್ನಡ, ತೆಲುಗು, ಮಲಯಾಳಂ, ರಷ್ಯನ್, ಜಪಾನ್, ಗಳಲ್ಲಿ ನಡೆಸಿಕೊಟ್ಟಿದ್ದಾರೆ. ಬೋಧನೆ ಮತ್ತು ನಿರ್ದೇಶಕಿಯಾಗಿ ದುಡಿಯುತ್ತಿದ್ದಾರೆ.[]

ಪ್ರಶಸ್ತಿಗಳು

ಬದಲಾಯಿಸಿ
  • ಸಂಗೀತ ನಾಟಕ ಅಕ್ಯಾಡೆಮಿ ಪ್ರಶಸ್ತಿ
  • ಪದ್ಮ ಭೂಷಣ
  • ಕಲೈ ಮಣಿ
  • ಕಾಳಿದಾಸ್ ಸಮ್ಮಾನ್
  • ನಾದ ಬ್ರಹ್ಮಂ
  • ಪುಕೋಕ ಏಷ್ಯಾ ಪ್ರಶಸ್ತಿ
  • ಆಳ್ವಾಸ್ ನುಡಿಸಿರಿ ಗೌರವ

ಉಲ್ಲೇಖಗಳು

ಬದಲಾಯಿಸಿ
  1. http://www.webindia123.com/dances/dancer/Padma_Subrahmanyam.htm
  2. Padma subrahmanyam, Compiled by : Lalita Venkat, Jan,2002
  3. "ಆರ್ಕೈವ್ ನಕಲು". Archived from the original on 2014-05-13. Retrieved 2014-02-14.
  4. "ಆರ್ಕೈವ್ ನಕಲು". Archived from the original on 2014-01-10. Retrieved 2014-02-14.
  5. http://www.indiansarts.com/Padmasubramaniampage.htm[ಶಾಶ್ವತವಾಗಿ ಮಡಿದ ಕೊಂಡಿ]
  6. "ಆರ್ಕೈವ್ ನಕಲು". Archived from the original on 2014-05-30. Retrieved 2014-02-14.