ದೇವಿ ಪ್ರಸಾದ್ ಶೆಟ್ಟಿ

(ಡಾ. ದೇವಿಪ್ರಸಾದಶೆಟ್ಟಿ ಇಂದ ಪುನರ್ನಿರ್ದೇಶಿತ)

ಡಾ. ದೇವಿಪ್ರಸಾದ ಶೆಟ್ಟಿಯವರು ಮೇ ೮, ೧೯೫೩ರಂದು ಮಂಗಳೂರು ತಾಲೂಕಿನ ಸುಂದರ ಪುಟ್ಟ ಗ್ರಾಮವಾದ ಕಿನ್ನಿಗೋಳಿ ಎಂಬಲ್ಲಿ ಜನಿಸಿದರು. ಇಲ್ಲಿನ ಸೇಂಟ್ ಮೇರಿಸ್ ಪ್ರಾಥಮಿಕ ಶಾಲೆಯಲ್ಲಿ ತಮ್ಮ ಪ್ರಾಥಮಿಕ ಅಭ್ಯಾಸವನ್ನು ಮುಗಿಸಿದರು. ಅವರು ಓದುತ್ತಿದ್ದಾಗ ಕನ್ನಡ ಮಾಧ್ಯಮದಲ್ಲಿಯೇ ಕಲಿತರು. ಅವರು ಓರ್ವ ಲೋಕೋಪಕಾರಿ, ಮಾನವ ಹಿತೈಷಿ. ಅವರು ಓರ್ವ ಹೃದಯ ತಜ್ನರು. ಅವರು ಹತೋಟಿ ಕ್ರಯದಲ್ಲಿ ಕಡಿಮೆ, ವೆಚ್ಚದಲ್ಲಿ ಆರೋಗ್ಯವನ್ನು ಚಿಕಿತ್ಸೆಯನ್ನು ಮಾಡುತ್ತಿದ್ದಾರೆ. ಅವರು ಭಾರತದ ನಾಗರಿಕ ಪ್ರಶಸ್ತಿಯಲ್ಲಿ ಅತ್ಯುನ್ನತವಾದ `ಪದ್ಮ ಭೂಷಣ' ಅವರ ಕಡಿಮೆ ವೆಚ್ಚದ ಆರೋಗ್ಯ ಕಾಳಜಿಗಾಗಿ ಕೊಡಲಾಗಿದೆ.

ದೇವಿಪ್ರಸಾದ ಶೆಟ್ಟಿ
ಜನನ (1953-05-08) ೮ ಮೇ ೧೯೫೩ (ವಯಸ್ಸು ೭೧)[]
ಮಂಗಳೂರು, ಕರ್ನಾಟಕ, ಭಾರತ
ವಿದ್ಯಾಭ್ಯಾಸGuy's Hospital London – Cardiothoracic Unit, (1983–1989)
West Midlands Cardio-Thoracic Rotation Program (Trained in Cardiac Surgery)
Kasturba Medical College, Mangalore, (1982)
St. Aloysius Mangalore
ಸಕ್ರಿಯ ವರ್ಷಗಳು1983–present
ಗಮನಾರ್ಹ ಕೆಲಸಗಳುPulmonary Thromboembolectomy Neonatal open heart surgery
Cardiomyoplasty Surgery
Left Ventricular Assist Device Support
Medical career
ProfessionChairman and founder, narayana health. cardiac surgeon
InstitutionsKasturba Medical College, Mangalore
Guy's Hospital United Kingdom
B.M. Birla Hospital ಕೊಲ್ಕತ್ತ
Manipal Hospital ಬೆಂಗಳೂರು
SpecialismCardiovascular Thoracic Surgery
Notable prizesಪದ್ಮ ಭೂಷಣ award for Medicine in 2012
Schwab Foundation's award in 2005
Dr. B C Roy award in 2003
Sir M. Visvesvaraya Memorial Award in 2003
Ernst & Young – Entrepreneur of the Year in 2003
Rajyotsava award in 2002
Karnataka Ratna award in 2001

ದಾ. ದೇವಿಪ್ರಸಾದ ಶೆಟ್ಟಿಯವರು ನಾರಾಯಣ ಹೃದಯಾಲಯದ ಈಗ ನಾರಾಯಣ ಹೆಲ್ತ್ ಇದರ ಸ್ಥಾಆಪಕ ಚೇರ್ ಮ್ಯಾನ್ ಮತ್ತು ಅದರ ಸ್ಥಾಪಕರೂ ಆಗಿದ್ದಾರೆ. ಡಾ. ಶೆಟ್ಟಿಯವರು ದಕ್ಷಿಣ ಕನ್ನಡ ಜಿಲ್ಲೆಯ ಕಿನ್ನಿಗೋಳಿ ಗ್ರಾಮದಲ್ಲಿ ಹುಟ್ಟಿದರು. ಒಂಬತ್ತು ಮಕ್ಕಳಲ್ಲಿ ಎಂಟನೆಯವರಾಗಿದ್ದರು ಅವರು ೫ನೆಯ ಗ್ರೇಡ್ ನಲ್ಲಿರುವಾಗ ಅವರು ಒಬ್ಬ ದಕ್ಷಿಣ ಆಫ್ರಿಕಾದ ಹೃದಯ ತಜ್ನರು ಆಗ ತಾನೇ ಮೊದಲ ಹೃದಯವನ್ನು ಕಸಿಮಾಡಿದರು ಎಂದು ಕೇಳಿದಾಗ ಶ್ತಎಟ್ಜ್ನಟ್ರಾಅರ್ಗೌ ಹ್ಲುಋದಯ ಸರ್ಜನ್ ಆಗಬೇಕೆಂದು ನಿರ್ಧರಿಸಿದರು. ತನ್ನ ಪದವಿ ಮತ್ತು ಸ್ನಾತಕೋತ್ತರ ಶಿಕ್ಷಣವನ್ನು ಜನರಲ್ ಸರ್ಜರಿಯಲ್ಲಿ ಮಂಗಳೂರಿನ ಕಸ್ತುರಬಾ ಮೆಡಿಕಲ್ ಕಾಲೇಜಿನಲ್ಲಿ ಪೂರ್ಣಗೊಳಿಸಿದ ಮೇಲೆ ಅವರು ಯುನೈಟೆಡ್ ಕಿಂಗ್ ಡಮ್ ನಲ್ಲಿ ಹೃದಯ ಶಸ್ತ್ರ ಚಿಕಿತ್ಸೆಯಲ್ಲಿ ಗೈ ಆಸ್ಪತ್ರೆಯಲ್ಲಿ ತರಬೇತಿ ಪಡೆದರು.ಅವರು ಭಾರತಕ್ಕೆ ಮರಳಿದರು ಮತ್ತು ಪ್ರಾರಂಭದಲ್ಲಿ ಕಲ್ಕತ್ತಾದಲ್ಲಿರುವ ಬಿ. ಎಮ್. ಬಿರ್ಲಾ ಆಸ್ಪತ್ರೆಯಲ್ಲಿ ೧೯೮೯ರಲ್ಲಿ ಪ್ರಾರಂಭದಲ್ಲಿ ಕೆಲಸ ಮಾಡಿದರು. ಅವರು ನಮ್ಮ ರಾಷ್ತ್ರದಲ್ಲಿ ನವಜಾತ ಶಿಶುವಿನ ಹೃದಯ ಶಸ್ತ್ರ ಕ್ರಿಯೆಯನ್ನು೧೯೯೨ರಲ್ಲಿ ೯ದಿನದ ಮಗುವಿನ ಮೇಲೆ ಮಾಡಿದರು. ಆ ಮಗುವಿನ ಹೆಸರು ``ರೋನ್ನೀಅದು ವೈದ್ಯಕೀಯ ಇತಿಹಾಸದಲ್ಲಿಯೇ ಯಶಸ್ವಿ ಶಸ್ತ್ರ ಚಿಕಿತ್ಸೆಯಾಗಿತ್ತು. ಕೊಲ್ಕೊತ್ತಾದಲ್ಲಿ ಅವರು ಮದರ್ ತೆರೆಸಾರ ಹೃದಯದ ಶಸ್ತ್ರ ಚಿಕಿತ್ಸೆಯನ್ನು ಅವರಿಗೆ ಹೃದಯಾಘಾತವಾದಾಗ ಮಾಡಿದರು ಮತ್ತು ಆಮೇಲೆ ಅವರ ವೈಯುಕ್ತಿಕ ವೈದ್ಯರಾಗಿ ಸೇವೆ ಸಲ್ಲಿಸಿದರು. ಸ್ವಲ್ಪ ಸಮಯದ ನಂತರ ಅವರು ಬೆಂಗಳೂರಿಗೆ ಬಂದರು ಮತ್ತು ಬೆಂಗಳೂರಿನಲ್ಲಿರುವ ಮಣಿಪಾಲ್ ಆಸ್ಪತ್ರೆಯಲ್ಲಿ ಹಾರ್ಟ್ ಫೌಂಡೇಶನ್ ನನ್ನು ಪ್ರಾರಂಬಿಸಿದರು.ಅಸ್ಪತ್ರೆಯ ಕಟ್ಟಡಕ್ಕೆ ತಗಲುವ ಆರ್ಥಿಕ ವೆಚ್ಚವನ್ನು ಅವರ ಮಾವ ಭರಿಸಿದರು.

ಅವರು ಈವರೆಗೆ ೧೫,೦೦೦ ಹೃದಯ ಶಸ್ತ್ರ ಚಿಕಿತ್ಸೆಯನ್ನು ಮಾಡಿದ್ದಾರೆ.

ಶೆಟ್ಟಿಯವರ ಉತ್ತಮ ಆರೋಗ್ಯಕ್ಕೆ ಉಪದೇಶ

ಬದಲಾಯಿಸಿ

ಡಾ. ದೇವಿಪ್ರಸಾದ ಶೆಟ್ಟಿಯವರು ತಮ್ಮ ಸಂದರ್ಶನವೊಂದರಲ್ಲಿ ಹೇಳುತ್ತಾರೆ:`` ಆರೋಗ್ಯವಂತ ಹೃದಯಕ್ಕಿರುವ ರಹಸ್ಯವೆಂದರೆ ವಾಕಿಂಗ್ ಮತ್ತು ಸಮತೋಲಿತ ಆಹಾರ ಸೇವನೆ. ಅವರು ಹೆಬ್ಬೆರಳಿನ ಐದು ನಿಯಮಗಳನ್ನು ಹೃದಯದ ಕಾಳಜಿಗಾಗಿ ಹೇಳುತ್ತಾರೆ (ಕಡಿಮೆ ಪಿಷ್ಟ ಪದಾರ್ಥದ ಸೇವನೆ, ಅಂದರೆ ಕಡಿಮೆ ಕಾರ್ಬೋಹೈಡ್ರೈಟ್, ನಿಯಮಿತ್ ವ್ಯಾಯಾಮ, ಸ್ಮೋಕಿಂಗನ್ನು ಬಿಟ್ಟುಬಿಡುವುದು, ತೂಕವನ್ನು ನಿಯಂತ್ರಿಸುವುದು, ರಕ್ತದೊತ್ತಡವನ್ನು ನಿಯಂತ್ರಿಸಿಕೊಳ್ಳುವುದು ಮತ್ತು ಶ್ಯುಗರ್ ನ್ನು ನಿಯಂತ್ರಿಸುವುದು)

೨೦೦೧ರಲ್ಲಿ ಶೆಟ್ಟಿಯವರು ಬೊಮ್ಮಸಂದ್ರದಲ್ಲಿ ನಾರಾಯಣ ಹೃದಯಾಲಯವನ್ನು ಸ್ಥಾಪಿಸಿದರು. ಬೆಂಗಳೂರಿನ ಹೊರವಲಯದಲ್ಲಿ ಆ ಆಸ್ಪತ್ರೆ ಇದೆ. ಅದೊಂದು ಮಲ್ಟಿಸ್ಪೆಶಾಲಿಟಿ ಆಸ್ಪತ್ರೆಯಾಗಿದೆ. ಯಾಕೆಂದರೆ ಅವರ ಜೀವನ ದರ್ಶನವನ್ನು ಯಾರೂ ಅರ್ಥ ಮಾಡಿಕೊಳ್ಳಲಿಲ್ಲ. ಆರೋಗ್ಯಕಾಆಳಜಿಯ ೫೦% ವೆಚ್ಚವನ್ನು ಮುಂದಿನ ೫-೧೦ ವರ್ಷಗಳಲ್ಲಿ ಕಡಿಮೆ ಮಾಡಬಹುದು ಎಂದು ಅವರು ನಂಬುತ್ತಾರೆ. ನಾರಾಯ್ಸಣ ಹೃದಯಾಲಯದಲ್ಲಿ ಹೃದಯ ಚಿಕಿತ್ಸೆಗೆ ಹೊರತಾಗಿ ನ್ಯೂರೋಸರ್ಜರಿ, ಪೆಡಿಯಾಟ್ರಿಕ್ ಶಸ್ತ್ರ ಚಿಕಿತ್ಸೆ, ಹೃದಯ ಚಿಕಿತ್ಸೆ, ರಕ್ತ ವಿಜ್ಞಾನ, ಮತ್ತು ಹೃದಯದ ಕೂಡಾ ಇವೆ. ಈ ಹೃದಯ ಚಿಕಿತ್ಸಾಲಯವು ಜಗತ್ತಿನಲ್ಲಿಯೇ ಅತ್ಯಂತ ದೊಡ್ಡ ಆಸ್ಪತ್ರೆಯ್ಗಿದೆ. ಇದರಲ್ಲಿ ೧೦೦೦ ಹಾಸಿಗೆಗಳು, ಪ್ರತಿ ನಿತ್ಯ ೩೦ ಮೇಜರ್ ಹೃದಯ ಶಸ್ತ್ರ ಚಿಕಿತ್ಸೆಗಳು ನಡೆಯುತ್ತಿರುತ್ತವೆ. ಈ ಆರೋಗ್ಯ ನಗರವನ್ನು ಕಟ್ಟಿದ ಭೂಮಿಯು ಮೊದಲು ಜವಗು ಪ್ರದೇಶವಾಗಿತ್ತು. ನೀರಿನಲ್ಲಿ ಮುಳುಗಿದ ಈ ಭೂಮಿಯನ್ನು ದುರಸ್ತಿಪ್ಡಿಸಲಾಯಿತು. ಈ ಆರೋಗ್ಯ ನಗರವು ದಿನಂಪ್ರತಿ ೧೫,೦೦೦ ಹೊರರೋಗಿಗಳನ್ನು (ಔಟ್ ಪೇಶ್ಂಟ್) ಚಿಕಿತ್ಸೆ ಮಾಡುವ ಇರಾದೆಯನ್ನು ಹೊಂದಿದೆ. ಆಗಸ್ಟ್ ೨೦೧೨ರಂದು ಶೆಟ್ಟಿಯವರು ಟ್ರಿಮೆಡ್ ಕ್ಸ್ ನೊಟ್ಟಿಗೆ ಒಪ್ಪಂದ ಮಾಡಿಕೊಂಡು ಇಡೀ ಭಾರತಾದ್ಯಂತಹೆಲ್ತ್ ಕೇರ್ ನ್ನು ತೆಗೆದುಕೊಂಡು ಹೋಗುವ ಆ ಒಪ್ಪಂದವನ್ನು ಅವರು ಘೋಷಿಸಿದ್ದಾರೆ. ಆ ಸಂಸ್ಥೆಯು ಎಸೆನ್ಶ್ನ್ ಹೆಲ್ತ್ ಇದರ ಉಪ ಸಂಸ್ಥೆಯಾಗಿದೆ. ಈ ಹಿಂದೆ ನಾರಾಯಣ ಹೃದಯಾಲವು ಎಸೆನ್ಶ್ನ್ ಆರೋಗ್ಯ ಸಂಸ್ಥೆಯೊಂದಿಗೆ ಸಹಕಾರದೊಂದಿಗೆ ಕೈಮನ್ ದ್ವೀಪಗಳಲ್ಲಿ ಹೆಲ್ತ್ ಸಿಟಿಯನ್ನು ಸ್ಥಾಪಿಸಿದರು ಮತ್ತು ಕೊನೆಗೆ ೨೦೦ ಬೆಡ್ ಗಳ ಯೋಜನೆಯನ್ನು ಸಾಕಾರಗೊಳಿಸಿದರು. ಡಾ. ಶೆಟ್ಟಿಯವರು ಕೊಲ್ಕೊಟ್ಟಾದಲ್ಲಿ ರಬಿಂದ್ರನಾಥ್ ಟಾಗೋರ್ ಇಂಟರ್ ನ್ಯಾಶನಲ್ ಇನ್ಸಿಸ್ಟ್ಯೂಟ್ ಆಫ್ ಕಾರ್ಡೆಯಿಕ್ ಸೈನ್ಸಸ್ (ರ್ ಟಿ ಐ ಐ ಸಿ ಎಸ್) ಸ್ಥಾಪಿಸಿದರು. ಶೆಟ್ಟಿಯವರು ಗ್ಲೋಬಲ್ ಇನ್ವೆಸ್ಟರ್ಸ್ ಸಭೆಯಲ್ಲಿ ಕರ್ನಾಟಕ ಸರಕಾರದೊಂದಿಗೆ ಎಮ್ ಓ ಯು ಅಂದರೆ ಮೆಮೊರೆಂಡಮ್ ಆಫ್ ಅಂಡರ್ ಸ್ಟೇಂಡಿಂಗ್ ಗೆ ಬಂದು ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ೫೦೦೦ ಬೆಡ್ ಗಳುಳ್ಳ ೧೦೦೦ ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುವ ಕಟ್ಟಡಕ್ಕೆ ಸಹಿ ಹಾಕಿದರು. ಅವರ ಕಂಪನಿಯು ಗುಜರಾತ ಸರಕಾರದೊಂದಿಗೂಇಂತದೆ ಒಪ್ಪಂದಕ್ಕೆ ಸಹಿ ಹಾಕಿದೆ.ಅಹಮದಾಬಾದಿನಲ್ಲಿ ೫೦೦೦ ಬೆಡ್ ಗಳುಳ್ಳ ಸುಪರ್ ಸ್ಪೆಷ್ಗಾಲಿಟಿ ಹೊಸ್ಪಿಟಲ್ಸ್ ಸ್ಥಾಪನೆಗೆ ಗೆ ಒಪ್ಪಿಗೆ ನೀಡಿದೆ.

ಅವರಕಂಪನಿಯು ಮೈಸೂರಿನಲ್ಲಿಯೂ೧೫೦ ಬೆಡ್ಡುಗಳ ಆಸ್ಪತ್ರೆಯನ್ನು ಸರಕಾರ ಕೊಟ್ಟ ಜಾಗದಲ್ಲಿ ಕಟ್ಟಿದೆ. ವೆಚ್ಚವನ್ನು ಕ್ಸಡಿಮೆ ಮಾಡಲು ಕ್ರೊಸ್ ವಾತಾಯನವನ್ನು ಏರ್ ಕಡೀಷಂಡ್ ನಿನ ಬದಲಾಗಿ ಉಪ್ಯೋಗಿಅಲಾಗಿದೆ. ಅವರು ಏಳು ಮಂದಿ ಸದಸ್ಯರ ಪೆನಲ್ ಆಫ್ ಬೋರ್ಡ್ ಆಫ್ ಗವರ್ನರ್ಸ್ ರ ಭಾಗವಾಗಿದ್ದರು. ಅದು ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾದ ಬದಲಿಗೆ ಬಂದದ್ದಾಗಿದ್ದು ಅದು ಪುನರ್ರಚನೆಯಾಗುವ ಮೊದಲು ಒಂದು ವರ್ಷ ಕಾಲ ಸೇವೆ ಸಲ್ಲಿಸಿದರು.

ಅವರ ಆಸ್ಪತ್ರೆಯು ಅಮೇರಿಕಾದಲ್ಲಿ ಆಗುವುದಕ್ಕಿಂತ ಹತ್ತು ಪಾಲು ಕಡಿಮೆ ಖರ್ಚಿನಲ್ಲಿ ಹೃದಯ ಶಸ್ತ್ರ ಚಿಕಿತ್ಸೆಯನ್ನು ಮಾಡುತ್ತಿದೆ. ದಿ ವಾಲ್ ಸ್ಟ್ರೀಟ್ ಜರ್ನಲ್ ಅವರಿಗೆ ಹೇನ್ರಿ ಫೋರ್ಡ್ ಉಪಾದಿಯನ್ನುಅವರ ಹೃದಯ ಶಸ್ತ್ರ ಚಿಕಿತ್ಸೆಯ ಸೇವೆಗಾಗಿ ಕೊಡಲಾಗಿದೆ. ೨೦೧೩ರಲ್ಲಿ ಆರು ಸುಪರ್ ಸ್ಪೆಶಾಲಿಟಿ ಆಸ್ಪತ್ರೆಗಳನ್ನು ಉತ್ತ್ಮ ಗುಣಮಟ್ಟದ ಚಿಕಿತ್ಸೆಯನ್ನು ಕಡಿಮೆ ವೆಚ್ಚದಲ್ಲಿ ನಾರಾಯಣ ಹೃದಯಾಲಯದ ಮಾದರಿಯಲ್ಲಿ ರಾಷ್ಟ್ರದ ಹಲವು ಕಡೆ ಪ್ರಾರಂಭಿಸಲಾಗಿದೆ. ಮುಂದಿನ ಏಳು ವರ್ಷಗಳಲ್ಲಿ ಭಾರತ ಮತ್ತು ಆಫ್ರಿಕಾದಲ್ಲಿ ೩೦,೦೦೦ ಬೆಡ್ಡುಗಳುಳ್ಳ ಆಸ್ಪತ್ರೆಗಳನ್ನು ವಿಸ್ತರಿಸುವ ಯೋಜನೆಗಳಿವೆ ಎಂದು ಡಾ. ದೇವಿಪ್ರಸಾದ ಶೆಟ್ಟ್ಸರು ಹೇಳುತ್ತಾರೆ.

ಶೆಟ್ಟಿಯವರು ಮತ್ತು ಅವರ ಕುಟುಂಬಕ್ಕೆ ನಾರಾಯಣ ಹೃದಯಾಲಯದಲ್ಲಿ ೭೫% ಪಾಲು ಇದೆ. ಇದನ್ನು ಅವರು ಇಟ್ಟುಕೊಂಡ್ದ್ದೌ ಯಾಕೆಂದರೆ ಅವರಿಗೆ ಅವರ ಸ್ವಾತಂತ್ರ್ಯಕ್ಕೆ ಅಡ್ಡಿಯಾಗಕೂಡದು. ಮತ್ತು ಬಡಾವರಿಗೆ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ಮಾಡುವ ಅವರ ನಿರ್ಧಾರಗಳನ್ನು ಕೈಕೊಳ್ಳುವುದಕ್ಕೆ ಯಾರದ್ದೂ ಅಡ್ಡಿಯಿರಕೂಡದು. ಇಡಿ ರಾಷ್ಟ್ರಕ್ಕೆ ನನ್ನ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ಯೋಜನೆಯೊಂದಿಗೆ ನಾನು ಹೊಂದಾಣಿಕೆ ಮಾಡಿಕೊಳ್ಳ್ಲಾರೆ. ಇದು ಶೆಟ್ಟಿಯವರ ಘನೋದ್ದೇಶವಾಗಿದೆ.

ಯಶಸ್ವಿನಿ

ಬದಲಾಯಿಸಿ

ಯಶಸ್ವಿನಿ ಇದು ಜಗತ್ತಿನ ಅತಿ ಕಡಿಮೆ ಮತ್ತು ಎಲ್ಲವನ್ನೂ ಒಳಗೊಂಡ ವಿಮಾ ಯೋಜನೆಯಾಗಿದೆ. ಅದು ನ್ತಿಂಗಳಿಗೆ ೨೦ ರೂಪಾಯಿಗಳು. ಇದನ್ನು ಶೆಟ್ಟಿಯವರೆ ಸ್ವತಹ ಕರ್ನಾಟಕ ಸರಕಾರದ ಸಹಯೋಗದೊಂದಿಗೆ ರಚಿಸಲಾಗಿದೆ. ಇದು ಬಡ ರೈತರಿಗಾಗಿ ಮಾಡಿದ ಯೋಜನೆಯಾಗಿದೆ. ಆ ಯೋಜನೆಯನ್ನು ನಮ್ಮ ರಾಜ್ಯದ ೪ ದಶ ಲಕ್ಷ ರೈತರು ಪ್ರಯೋಜನ ಪಡೆಯುತ್ತಿದ್ದಾರೆ.

ಪ್ರಶಸ್ತಿಗಳು ಮತ್ತು ಮನ್ನಣೆಗಳು

ಬದಲಾಯಿಸಿ
  • ಪದ್ಮ ಭೂಷಣ ಪ್ರಶಸ್ತಿ
  • ಎಂತ್ರಪ್ರನರ್ ಆಫ್ ದಿ ಎಯರ್ ಎವಾರ್ಡ್ ೨೦೧೨
  • ಕರ್ನಾಟಕ ರತ್ನ
  • ಇಕೊನೊಮಿಸ್ಟ್ ಇನ್ನೊವೇಶನ್ ಎವಾರ್ಡ್ ಫೊರ್ ದಿ ಬಿಸಿನೆಸ್ ಪ್ರೊಸೆಸ್ ಎವಾರ್ಡ್
  • ಹೊನರರಿ ಡಿಗ್ರಿ, ಯುನಿವರ್ಸಿಟಿ ಆಫ್ ಮಿನ್ನೆಸೊಟಾ ೨೦೧೧ರಲ್ಲಿ
  • ಸ್ಛ್ವಾಬ್ ಫೌಂಡೇಶ್ನ್ ಎವಾರ್ಡ್ ೨೦೦೫ರಲ್ಲಿ
  • ಪದ್ಮಶ್ರಿ ಎವಾರ್ಡ್ ಫೊರ್ ಮೆಡಿಸಿನ್ ೨೦೦೪ರಲ್ಲಿ
  • ಡಾ. ಬಿ. ಸಿ. ರೊಯ್ ಎವಾರ್ಡ್ ೨೦೦೩ರಲ್ಲಿ
  • ಸರ್. ವಿಶ್ವೇಶರಯ್ಯಾ ಮೆಮೊರಿಯಲ್ ಎವಾರ್ಡ್ ೨೦೦೩ರಲ್ಲಿ
  • ಅರ್ನಸ್ಟ್ ಎಂಡ್ ಯಂಗ್- ಎಂಟ್ರಪ್ರನರ್ಸ್ ಎವಾರ್ಡ್ ಆಫ್ ದಿ ಇಯರ್ ೨೦೦೩ಯಲ್ಲಿ
  • ರಾಜ್ಯೋತ್ಸವ ಎವಾರ್ಡ್ ೨೦೦೨ರಲ್ಲಿ
  • ಸಿ ಎನ್ ಎನ್-ಐ ಬಿ ಎನ್ ನಿಂದ ಇಂಡಿಯನ್ ಆಫ್ ದಿ ಯಿಯರ್ ಇನ್ ಪಬ್ಲಿಕ್ ಸೆಕ್ಟರ್ ೨೦೧೨ರಲ್ಲಿ

ಉಲ್ಲೇಖಗಳು

ಬದಲಾಯಿಸಿ
  1. "Dr. Devi Prasad Shetty". MSN India. Retrieved 5 June 2012.