ಎಮ್. ಎಸ್. ವಿಜಯಾ ಹರನ್

ಆಕಾಶವಾಣಿ ನಿರ್ದೇಶಕಿ
(ಡಾ. ಎಮ್. ಎಸ್. ವಿಜಯಾ ಹರನ್ ಇಂದ ಪುನರ್ನಿರ್ದೇಶಿತ)

ಡಾ.ವಿಜಯಾ ಹರನ್, ಮೈಸೂರು ಆಕಾಶವಾಣಿ ನಿಲಯದಲ್ಲಿ ೪ ದಶಕಗಳ ಸುದೀರ್ಘ ಸೇವೆಸಲ್ಲಿಸಿ ನಿವೃತ್ತರಾಗಿದ್ದಾರೆ. ಅವರ ಸಮಯದಲ್ಲಿ ಪ್ರಸಾರದಲ್ಲಿ ಹಲವಾರು ಮಹತ್ವದ ಸುಧಾರಣೆಗಳನ್ನು ಮಾಡಿದರು. ಬಹುಮಾಧ್ಯಮ ಸಂದರ್ಭದಲ್ಲೂ ಆಕಾಶವಾಣಿಯ ಪ್ರಸ್ತುತಿಯನ್ನು ಕಾಪಾಡಿಕೊಳ್ಳಲು ಶ್ರಮವಹಿಸಿ ಸಫಲತೆಯನ್ನು ಕಂಡುಕೊಂಡರು ಮೈಸೂರು, ಮಂಗಳೂರು, ಭದ್ರಾವತಿ,ಗುಲ್ಬರ್ಗಾ,ಹಾಸನ ಆಕಾಶವಾಣಿಗಳಲ್ಲಿ ಸೇವೆಸಲ್ಲಿಸಿದ್ದಾರೆ.

ಎಂ. ಎಸ್. ವಿಜಯಾ ಹರನ್
ಜನನ೧೯೫೨
ಕೋಲಾರ, ಮೈಸೂರು ರಾಜ್ಯ
ವೃತ್ತಿಕಾರ್ಯಕ್ರಮ ಪ್ರಸ್ತುತಕರ್ತೆ, ಕಾರ್ಯಕ್ರಮ ನಿರೂಪಕಿ, ದಿಗ್ದರ್ಶಕಿ, ಆಕಾಶವಾಣಿ ಡೈರೆಕ್ಟರ್
ಭಾಷೆಕನ್ನಡ
ಬಾಳ ಸಂಗಾತಿಡಾ. ಬಿ. ಎಸ್. ಪ್ರಣಥಾರ್ತಿ ಹರನ್
ಮಕ್ಕಳು

ವಿದ್ಯಾಭ್ಯಾಸ

ಬದಲಾಯಿಸಿ

ವಿಜಯ, ೧೯೫೨ ರಲ್ಲಿ ಕೋಲಾರದಲ್ಲಿ ಜನಿಸಿದರು. ಚಿಕ್ಕ ಮಗುವಾಗಿದ್ದಾಗಿನಿಂದಲೂ ರೇಡಿಯೋ ಕೇಳುವುದರಲ್ಲಿ ಆಸಕ್ತೆ. ಪ್ರಯತ್ನಿಸಿದ್ದ ಆಕಾಶವಾಣಿಗೆ 'ಆಡಿಶನ್' ಕರೆಬಂದಾಗ ಆಫೀಸರ್ ಗಳಿಗೆ ಒಳ್ಳೆಯ ಅಭಿಪ್ರಾಯ ಮೂಡಿಸಿದರು. ಆಕಾಶವಾಣಿ ಕಾರ್ಯಕ್ರಮಗಳನ್ನು ಪ್ರಸ್ತುರಪಡಿಸುವ ಬಗ್ಗೆ ನಡೆಸಿದ ಪರೀಕ್ಷೆಯಲ್ಲಿ ಉತ್ತೀರ್ಣರಾದರು.ಪ್ರಿಯೂನಿವರ್ಸಿಟಿಯವರೆಗಿನ ವಿದ್ಯಾಭ್ಯಾಸ ಕೋಲಾರದಲ್ಲೇ ನಡೆಯಿತು. ಮುಂದೆ ಬಿ.ಎ.(ಕನ್ನಡ) ಹಾಗೂ ಎಮ್.ಎ.(ಕನ್ನಡ) ಪದವಿ ಬೆಂಗಳೂರು ವಿಶ್ವವಿದ್ಯಾನಿಲಯದಿಂದ. ಮುಂದೆ ಭದ್ರಾವತಿ ಬಾನುಲಿ ನಿಲಯದಲ್ಲಿ ೧೯೭೪ ರಲ್ಲಿ ರೇಡಿಯೋ ಅನೌನ್ಸರ್ ಆಗಿ,ಕೆಲಸಮಾಡಿ, ೮ ವರ್ಷಗಳ ಬಳಿಕ, 'ಪ್ರೋಗ್ರಾಮ್ ಎಕ್ಸಿಕ್ಯುಟೀವ್' ಆಗಿ,ಗುಲ್ಬರ್ಗಾ, ಮೈಸೂರು,ಭದ್ರಾವತಿ, ಹಾಸನ,ಮಂಗಳೂರಿನ ಆಕಾಶವಾಣಿ ನಿಲಯಗಳಲ್ಲಿ ಸೇವೆಸಲ್ಲಿಸಿದರು. ಮೈಸೂರಿಗೆ ಬಂದಮೇಲೆ ಸಹಾಯಕ ನಿರ್ದೇಶಕಿಯಾಗಿ, ಹಾಸನಕ್ಕೆ ಹೋದಾಗ ಸ್ಟೇಷನ್ ಡೈರೆಕ್ಟರ್ ಪದವಿಗಳಿಸಿದರು. ಮೈಸೂರಿಗೆ ಬಂದಮೇಲೆ ೧೯೯೮ ರಲ್ಲಿ ಮೈಸೂರ್ ವಿಶ್ವವಿದ್ಯಾನಿಲಯದ ಪಿ.ಎಚ್.ಡಿ.ಪದವಿ ಗಳಿಸಿದರು. ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಎಂ.ಎ.ಸ್ನಾತಕೋತ್ತರ ಮತ್ತು ಡಾ.ಹಾ.ಮಾ ನಾಯಕರ ಮಾರ್ಗದರ್ಶನದಲ್ಲಿ '-ಆನಂದರ ಬದುಕು ಬರಹವೆಂಬ ಮಹಾಪ್ರಬಂಧ'ಕ್ಕೆ ಡಾಕ್ಟರೇಟ್'ದೊರೆತಿದೆ.

ಆಕಾಶವಾಣಿ ಕೇಳುವರು ಸಾವಿರಾರು ಮಂದಿ. ಮುಖ್ಯವಾಗಿ ರೈತ ಬಂಧುಗಳಿಗೆ ಸಮಗ್ರ ಗ್ರಾಮೀಣ ಅಭಿವೃದ್ಧಿಗಾಗಿ ಬಾನುಲಿ ಬೆಳಗು ವಿಶೇಷ ಕಾರ್ಯಕ್ರಮ ಸರಣಿ ಪ್ರಸಾರ ತರಪೇತಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದು ಪ್ರಸಾರ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆಯೆಂದು ಪರಿಗಣಿಸಲ್ಪಟ್ಟು ಜನಮನ್ನಣೆ ಗಳಿಸಿತ್ತು. ಗ್ರಾಮೀಣ ಶಿಕ್ಷಣ ಕಾರ್ಯಕ್ರಮ ರಚಿಸಿ ಪ್ರಸ್ತುತಿಪಡಿಸಿದರು. 'ಹಟ್ಟಿ ಹರಟೆ' ಗಾದೆಗಳದ್ದೇ ನಾಟಕ ರೂಪದ ಸರಣಿ ಕಾರ್ಯಕ್ರಮಗಳು, ಅನೇಕ ವರ್ಷ ಪ್ರಸಾರಗೊಂಡು ಮನೆಮಾತಾಗಿದ್ದವು. 'ಆಕಾಶವಾಣಿ ಸಾಹಿತ್ಯ ಸಮ್ಮೇಳನ' ಆಕಾಶವಾಣಿ ಇತಿಹಾಸದಲ್ಲಿಯೇ ಕೇಳರಿಯದ 'ಪ್ರಪ್ರಥಮ ಸಾಹಿತ್ಯ ಸಮ್ಮೇಳ'ನವನ್ನು ಮೈಸೂರು ಆಕಾಶವಾಣಿ ನಿಲಯದಲ್ಲಿ ನಿರ್ದೇಶಿಸಿದರು. ಇದು ಅವರ ದೂರದೃಷ್ಠಿ ಮತ್ತು ಮಹತ್ವಾಕಾಂಕ್ಷೆಗಳಿಗೆ ಸಾಕ್ಷಿಯಾಗಿದೆ. ವಿಜಯಾ ಸಾಹಿತ್ಯವಲಯದ ಗಂಭೀರ ವಿದ್ಯಾರ್ಥಿನಿ. ಭಾರತ ಪ್ರಸಾರ ಕಾರ್ಯಕ್ರಮ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಹಳೆಯ ಮೈಸೂರಿನ ಜಿಲ್ಲೆಗಳಲ್ಲಿ ಸ್ಥಾಪಿಸಲ್ಪಟ್ಟ ಆಕಾಶವಾಣಿ ನಿಲಯಗಳಲ್ಲಿ ೩೪ ವರ್ಷಗಳ ಕಾಲ, ಪ್ರಕಟಣೆ ಕಾರ್ಯಕ್ರಮ, ನಿರ್ವಹಣೆ,ಸಹನಿರ್ದೇಶಕಿ ನಂತರ ನಿಲಯದ ನಿರ್ದೇಶಕ,ಹಲವಾರು ನಾಟಕ ಮತ್ತು ವಿಶೇಷ ಕಾರ್ಯಕ್ರಮಗಳ ಪ್ರಸ್ತುತಿಗಳನ್ನು ನಿರ್ವಹಿಸಿದರು. ನಿತ್ಯಜೀವನದ ಪ್ರಾಮುಖ್ಯತೆ ಬಗ್ಗೆ, ೫೨ ಪ್ರಬಂಧಕೃತಿಗಳು,ಆಕಾಶವಾಣಿಯಲ್ಲಿ ಪ್ರತಿದಿನವೂ ಬಿತ್ತರಿಸಲ್ಪಟ್ಟವು. ಖಾಸಗಿ ಚಾನೆಲ್ ಮತ್ತು ಅದರಲ್ಲಿನ ಸವಾಲುಗಳು ಬಗ್ಗೆ ಪ್ರಸಾರಭಾರತಿ ಎಂಬ ಕಾರ್ಯಕ್ರಮ ಮೂಡಿಬಂತು. ಮುಂದೆ ೨೦೦೧ ರಲ್ಲಿ ನವದೆಹಲಿಯಲ್ಲಿ ಲೇಖನ ಮಂಡಿಸಿದ್ದರು. ರೇಡಿಯೋ ಮತ್ತು ಜನತೆಯಮೇಲೆ ಅದರ ಪರಿಣಾಮಗಳು ಎಂಬ ಲೇಖನ. ದಿನಪತ್ರಿಕೆಗಳಲ್ಲಿ ಹಲವಾರು ಲೇಖನಗಳು ಪ್ರಕಟಿತಗೊಂಡವು.

ವೃತ್ತಿ ಜೀವನ

ಬದಲಾಯಿಸಿ

ಕೃತಿಗಳು

ಬದಲಾಯಿಸಿ

ಸಮೂಹ ಮಾಧ್ಯಮದ ಸಂಸ್ಕೃತಿ ಕಾಳಜಿ ಇರುವ ಹರನ್ ಸಾಹಿತ್ಯ ಕೃತಿರಚನೆಯಲ್ಲೂ ಸಾಧಿಸಿದ್ದಾರೆ.

  1. ಆನಂದರ ಬದುಕು ಬರಹ ಒಂದು ಅಧ್ಯಯನ (ಮಹಾಪ್ರಬಂಧ)
  2. ಅಲೋಕ ಸಾಹಿತ್ಯಿಕ ಪ್ರಕಟಣೆಗಳು 
  3. ಎಸ್.ಎಲ್.ಭೈರಪ್ಪನವರ ಸಾಹಿತ್ಯದಲ್ಲಿ ಗಾದೆಗಳು (ಸಂಶೋಧನಾತ್ಮಕ ಕೃತಿ)
  4. ಗಾದೆ ಗದ್ದುಗೆ ಮತ್ತು ನೂರಾರು ಗಾದೆಗಳು' ಸಮಗ್ರ ಪುಸ್ತಕ ರೂಪದಲ್ಲಿ 
  5. ಮೈಸೂರು ಆಕಾಶವಾಣಿ ಅಮೃತ ಮಹೋತ್ಸವ-ಸ್ಮರಣ ಸಂಚಿಕೆ(ಸಮಯದಲ್ಲಿ ಹೊರತಂದ ಪುಸ್ತಕ)
  6. 'ನಮ್ಮ ಭೈರಪ್ಪನವರು' ಡಾ.ಎಸ್.ಎಲ್.ಭೈರಪ್ಪನವರು ೯೦ ನೇ ವರ್ಷದಲ್ಲಿ ಕಾಲಿಟ್ಟಾಗ ಅವರ ಸಾರ್ಥಕ ಬದುಕಿನ ಸ್ಮರಣೆಗಾಗಿ ಹೊರತಂದ ಪುಸ್ತಕ. ಪ್ರಸಾರ ಮಾದ್ಯಮಕ್ಕೆ ಒಂದು 'ಆಕರ ಗ್ರಂಥ'ದರೂಪದಲ್ಲಿದೆ.[]

ಬಾನುಲಿ ಬೆಳಗು

ಬದಲಾಯಿಸಿ

ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆಯ ಅಸಂಖ್ಯಾತ ರೇಡಿಯೋ ಕೇಳುಗರಿಗೆ ರೈತ ಸಮುದಾಯಕ್ಕೆ ಸಮಗ್ರ ಗ್ರಾಮೀಣ ಅಭಿವೃದ್ಧಿಗಾಗಿ, 'ಬಾನುಲಿ ಬೆಳಗು' ಎಂಬ ವಿಶೇಷ ಕಾರ್ಯಕ್ರಮಗಳ ಪ್ರಸಾರವನ್ನೂ ತರಪೇತಿಗಳನ್ನೂ ಆಯೋಜಿಸಿದ್ದು, ಪ್ರಸಾರ ಮಾಧ್ಯಮದಲ್ಲಿ ಒಂದು ಮಹತ್ವದ ಹೆಜ್ಜೆಯಾಗಿ ಜನಮನ್ನಣೆಯನ್ನು ಗಳಿಸಿತು. ಗ್ರಾಮೀಣ ಶಿಕ್ಷಣಕ್ಕಾಗಿ ಅವರು ಪ್ರಸ್ತುತಪಡಿಸುತ್ತಿದ್ದ 'ಹಟ್ಟಿ ಹರಟೆ,' 'ಗಾದೆ ಗದ್ದುಗೆ'-ಕನ್ನಡ ನಾಟಕ ರೂಪದ ಸರಣಿ ಕಾರ್ಯಕ್ರಮಗಳು ವರ್ಷಾನುಗಟ್ಟಲೆ ಪ್ರಸಾರಗೊಂಡು ಅವುಗಳ ಸವಿನೆನಪುಗಳು ಕನ್ನಡ ಜನಮಾನಸದಲ್ಲಿ ಇಂದಿಗೂ ಹಸುರಾಗಿ ಉಳಿದಿವೆ 

ಆಕಾಶವಾಣಿಯ ಸಾಹಿತ್ಯ ಸಮ್ಮೇಳನ

ಬದಲಾಯಿಸಿ

ಮೈಸೂರಿನಲ್ಲಿ ಆಯೋಜಿಸಲ್ಪಟ್ಟ ಪ್ರಪ್ರಥಮ ಕಾರ್ಯಕ್ರಮ : ಆಕಾಶವಾಣಿ ಸಾಹಿತ್ಯ ಸಮ್ಮೇಳನ ಆಕಾಶವಾಣಿಯ ಇತಿಹಾಸದಲ್ಲಿಯೇ ವಿಜಯಾ ಹರನ್ ರವರ ದೂರದೃಷ್ಟಿ ಹಾಗೂ ಮಹತ್ವಾಕಾಂಕ್ಷೆಗಳ ಸಾಕ್ಷಿಯಾಗಿವೆ. ಆಕಾಶವಾಣಿಯ ಸಾಮರ್ಥ್ಯ ಪ್ರಸ್ತುತೆಯನ್ನು ಕಾಪಾಡಿಕೊಳ್ಳಲು ಬಹುವಾಗಿ ಶ್ರಮಿಸಿ ಅದರಲ್ಲಿ ಯಶಸ್ಸು ಕಂಡಿದ್ದಾರೆ. 

ಗಾದೆ ಗದ್ದುಗೆ

ಬದಲಾಯಿಸಿ

ಆಕಾಶವಾಣಿ [] ಕೇಳುಗ ಅಭಿಮಾನಿಗಳ ಒತ್ತಾಯದ ಮೇರೆಗೆ ರಚಿಸಿ ನಿರ್ದೇಶಿಸಿದ ಪ್ರಸ್ತುತಪಡಿಸಿದ ಸರಣಿ ಕಾರ್ಯಕ್ರಮಗಳು, ನಾಟಕಗಳ ರೂಪದಲ್ಲಿ ಪ್ರಸ್ತುತಗೊಂಡವು ಇದೆ ಶೀರ್ಷಿಕೆಯ ಪುಸ್ತಕವು ಲಭ್ಯವಿದೆ.

ಚೆನ್ನೈನಲ್ಲಿ ಸುನಾಮಿ ಬಂದಾಗ

ಬದಲಾಯಿಸಿ

ಸಮುದ್ರದ ಬಳಿ ವಾಸವಾಗಿದ್ದ ಸಾವಿರಾರು ಮೀನುಗಾರರಿಗೆ ಸರ್ಕಾರದ ಹಣದ ಸಹಾಯ ಮತ್ತಿತರ ನೆರವನ್ನು ಒದಗಿಸುವ ಬಗ್ಗೆ ಸಂಪೂರ್ಣ ಮಾಹಿತಿಒದಗಿಸುವ ಕೆಲಸದಲ್ಲಿ ಆಕಾಶವಾಣಿ ಮುಂಚೂಣಿಯಲ್ಲಿತ್ತು. 'ಹಟ್ಟಿ ಹರಟೆ', 'ಏನ್ ಸಮಾಚಾರ', 'ಕಿಸಾನ್ ವಾಣಿ', 'ನವಿಲು ಗರಿ', 'ಬಾನುಲಿ ಕೃಷಿಕರ ಸಂಘ'-೨೦೦೬ಕನ್ನಡದ ಮೇರು ನಟ ರಾಜ್ಕುಮಾರ್ ರವರನ್ನು ವೀರಪ್ಪನ್ ಅಪಹರಿಸಿ ಕಾಡಿಗೆ ಕರೆದುಕೊಂಡು ಹೋದಾಗ, ಆ ದುರ್ಗಮ ಅಡವಿಯಲ್ಲಿ ರೇಡಿಯೋ ಪಾತ್ರ ಬಹಳ ಪ್ರಾಮುಖ್ಯತೆಯನ್ನು ಪಡೆಯಿತು. ಡಾ. ಎಸ್.ಎಲ್.ಭೈರಪ್ಪನವರ ಕಾದಂಬರಿಯಲ್ಲಿ ಗಾದೆಗಳು-ಸಂಶೋಧನಾತ್ಮಕ ಕೃತಿ 

ಉಲ್ಲೇಖಗಳು

ಬದಲಾಯಿಸಿ
  1. ಮಹಾಕಾದಂಬರಿಕಾರ, ಡಾ.ಎಸ್.ಎಲ್.ಭೈರಪ್ಪನವರು-ಸಂಪಾದಕಿ,ಡಾ.ಎಮ್.ಎಸ್.ವಿಜಯಾ ಹರನ್
  2. Akashavani is every person's medium

ಬಾಹ್ಯ ಸಂಪರ್ಕಗಳು

ಬದಲಾಯಿಸಿ
  1. touching rural lives through AIR, feb 18, 2011, Camera speaks
  2. Dr. S.L.Bhairappa a legend in his own life time among novelists Saturday, 17th, October, 2020
  3. Mysore Akashavani is now 75 years old,January 21, 2013,business-standard.com,Gouri Satya, Chennai/Mysore