ಎಚ್. ಆರ್. ಶ್ರೀಪಾದ್

(ಡಾ. ಎಚ್. ಆರ್. ಶ್ರೀಪಾದ್ ಇಂದ ಪುನರ್ನಿರ್ದೇಶಿತ)

ಡಾ.ಎಚ್. ಆರ್. ಶ್ರೀಪಾದ್ ಪ್ರಸ್ತುತ ಮಂಡ್ಯ[] ನಗರದ 'ಸ್ವಾಯತ್ತ ಸರ್ಕಾರಿ ಮಹಾವಿದ್ಯಾಲಯದಲ್ಲಿ ಸಹ-ಭೌತಶಾಸ್ತ್ರ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ.

ಎಚ್. ಆರ್. ಶ್ರೀಪಾದ್
ಜನನ
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ
ವಿದ್ಯಾಭ್ಯಾಸವಿಶ್ವವಿದ್ಯಾಲಯ ಪಿ.ಎಚ್.ಡಿ
ವೃತ್ತಿಸಹ ಭೌತಶಾಸ್ತ್ರ ಪ್ರಾಧ್ಯಾಪಕ,
ಜಾಲತಾಣsites.google.com/site/vishistsite/

ಜನನ,ಬಾಲ್ಯ,ವಿದ್ಯಾಭ್ಯಾಸ ಹಾಗೂ ವೃತ್ತಿಜೀವನ

ಬದಲಾಯಿಸಿ

'ಶ್ರೀಪಾದ್', [] ಎಚ್.ಎಸ್.ರಾಮಚಂದ್ರ ರಾವ್ ಹಾಗೂ ರಾಜೇಶ್ವರಿ ದಂಪತಿಗಳ ಮಗನಾಗಿ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ[] ಗ್ರಾಮದಲ್ಲಿ ಜನಿಸಿದರು. ಮೈಸೂರಿನ 'ಮಾನಸ ಗಂಗೋತ್ರಿ'ಯಲ್ಲಿ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ವಿದ್ಯಾಭ್ಯಾಸವನ್ನು ಮಾಡಿ, ಪ್ರಥಮ ಶ್ರೇಣಿಯಲ್ಲಿ 'ಐದು ಚಿನ್ನದ ಪದಕ'ಗಳನ್ನು ಗಳಿಸಿದರು. ಮುಂದೆ ಅದೇ ವಿಶ್ವವಿದ್ಯಾಲಯದಲ್ಲಿ ಡಾ. ಎಸ್. ಗೋಪಾಲ್ ರವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ ಸನ್.೧೯೯೨ ರಲ್ಲಿ ಪಿ.ಎಚ್.ಡಿ. ಪದವಿಯನ್ನು ಗಳಿಸಿದರು. ರಾಷ್ಟ್ರೀಯ, 'ಅಂತಾರಾಷ್ಟ್ರೀಯ ವೈಜ್ಞಾನಿಕ ನಿಯತಕಾಲಿಕೆ'ಗಳಲ್ಲಿ ಹಾಗೂ 'ವಿಚಾರಸಂಕಿರಣ'ಗಳಲ್ಲಿ ತಮ್ಮ ಸಂಶೋಧನಾ ಲೇಖನಗಳನ್ನು ಮಂಡಿಸಿದ್ದಾರೆ. ಎಂ. ಫಿಲ್, ಹಾಗೂ ಪಿ.ಎಚ್.ಡಿ. ಪದವಿಗಳಿಗೆ ಮಾರ್ಗದರ್ಶಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. 'ಆಕಾಶವಾಣಿ'ಯಲ್ಲೂ ಹಲವಾರು ಕಾರ್ಯಕ್ರಮಗಳನ್ನು ನೀಡುತ್ತಿರುವ 'ಶ್ರೀಪಾದ'ರು, ಹಲವಾರು ಕವನಗಳನ್ನೂ ಪ್ರಕಟಿಸಿರುತ್ತಾರೆ. ವೃತ್ತಿಜೀವನದಲ್ಲಿ 'ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ'ಯಾಗಿ, 'ಎನ್.ಸಿ.ಸಿ. ಅಧಿಕಾರಿ'ಯಾಗಿ, 'ವಿದ್ಯಾರ್ಥಿಗಳ ಆಪ್ತ ಸಲಹಾಕಾರ'ರಾಗಿಯೂ ಸೇವೆಸಲ್ಲಿಸಿದ್ದಾರೆ. ಭೌತಶಾಸ್ತ್ರದ ೩ ಹೊತ್ತಿಗೆಗಳಿಗೆ ಬರಹಗಾರರಾಗಿ ಕೊಡುಗೆ ನೀಡಿದ್ದಾರೆ.

ಬರಹಗಳು

ಬದಲಾಯಿಸಿ

ಶ್ರೀ.ಶ್ರೀ. ವಿರಜಾನಂದ ಸರಸ್ವತಿಸ್ವಾಮೀಜಿ ನೀಡಿದ ಅನೇಕ ಪ್ರವಚನಗಳನ್ನು ಲೇಖನ ರೂಪಕ್ಕೆ ತಂದು'ಸತ್ಸಂಗಿ' ಎಂಬ 'ಕಾವ್ಯನಾಮ'ದಿಂದ ಸುಮಾರು ೮೦ ಲೇಖನಗಳನ್ನು ಹೊರತಂದಿದ್ದಾರೆ. ಅವುಗಳಲ್ಲಿ ಪ್ರಮುಖವಾದ ಕೃತಿಗಳು :

  • ಆನಂದ ಯಾತ್ರೆ
  • ನವರತ್ನ ಮಾಲೆ
  • ಭಕ್ತಾಷ್ಟಕ
  • ಉದಯ ರವಿ[]
  • ಬೆಲಗೂರಿನ ಅವಧೂತವರೇಣ್ಯ ಶ್ರೀ ಶ್ರೀ ಬಿಂದುಮಾಧವ ಶರ್ಮಾ ಸ್ವಾಮೀಜಿಯವರು-ಒಂದು ಒಳ ನೋಟ

ಪ್ರಶಸ್ತಿ ಪುರಸ್ಕಾರಗಳು

ಬದಲಾಯಿಸಿ
  • 'ಹಾಸನದ ಹೊಯ್ಸಳ ಕರ್ನಾಟಕ ಸಂಘ'ದಿಂದ ಪುರಸ್ಕಾರ,
  • 'ಅರಕಲಗೂಡಿನ ಗೀತಾ ಜ್ಞಾನಯಜ್ಞ ಸಮಿತಿ'ಯ ಪುರಸ್ಕಾರ,
  • ನವೆಂಬರ್, ೨೦೦೮ ರಂದು, 'ತಾಲ್ಲೂಕು ರಾಜ್ಯೋತ್ಸವ ಸಮಿತಿ ಪುರಸ್ಕಾರ',
  • ೨೦೦೯ ರಲ್ಲಿ, 'ಮೈಸೂರಿನ ಸೇಂಟ್ ಫಿಲೋಮಿನ ಕಾಲೇಜ್' ನಲ್ಲಿ ಪ್ರಸ್ತುತ ಪಡಿಸಿದ 'ಸಂಶೋಧನಾ ಕೃತಿಯ ಪ್ರಸ್ತುತಿ' ಅತ್ಯುತ್ತಮವೆಂಬ ಹೆಗ್ಗಳಿಗೆ ಪಾತ್ರವಾಯಿತು.
  • 'ಸಂಶೋಧನ ಕೃತಿ ಪ್ರಸ್ತುತಿ'ಯನ್ನು ಮೆಚ್ಚಿ ಗಳಿಸಲಾದ ಪ್ರಶಸ್ತಿ.[]

ಉಲ್ಲೇಖಗಳು

ಬದಲಾಯಿಸಿ
  1. Wiki Edit.Org. Mandya
  2. "'ಶ್ರೀಪಾದ್ ವ್ಯಕ್ತಿ ಚಿತ್ರ'". Archived from the original on 2016-06-30. Retrieved 2014-08-12.
  3. "'Holalkere', Chitradurga District, Karnataka Pincode 577526". Archived from the original on 2016-03-05. Retrieved 2015-02-23.
  4. Sulekha.com, Udaya Ravi
  5. 'The best Research paper presentation award

ಬಾಹ್ಯ ಸಂಪರ್ಕ

ಬದಲಾಯಿಸಿ
  1. Research Gate. H.R.Sreepad