ಶಿವಮೂರ್ತಿ ಸ್ವಾಮಿಜಿ, ಸಿರಿಗೆರೆ

(ಡಾ.ಶಿವಮೂರ್ತಿ ಸ್ವಾಮೀಜಿ ಇಂದ ಪುನರ್ನಿರ್ದೇಶಿತ)

ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಸಿರಿಗೆರೆ ಮಠದ ಈಗಿನ ಮಠಾಧಿಪತಿಗಳು. ಸಿರಿಗೆರೆ ಚಿತ್ರದುರ್ಗ ದಿಂದ ದಾವಣಗೆರೆಗೆ ಹೋಗುವ ದಾರಿಯಲ್ಲಿ ಸುಮಾರು ೩೫ ಕಿಮಿ ದೂರದಲ್ಲಿ ಇದೆ. ಸಿರಿಗೆರೆ ಮಠ ರಾಜ್ಯದಲ್ಲೆ ಶಿಕ್ಷಣ ರಂಗದಲ್ಲಿ ತುಂಬಾ ಪ್ರಸಿದ್ದಿ ಪಡೆದಿದೆ. ಹಿಂದಿನ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಯವರು ಮಠವನ್ನು ಉತ್ತುಂಗಕ್ಕೆ ತಂದರು.ಇವರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಉತ್ತರಾಧಿಕಾರಿಗಳು. ಸ್ವಾಮಿಗಳಾಗುವ ಮೊದಲೇ ದೇಶ ವಿದೇಶಗಳ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡಿ ವಿಶ್ವಪರ್ಯಟನೆಯ ಮೂಲಕ ವಿಶ್ವಜ್ಞಾನ ಪಡೆದವರು.

ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು

ಜನನ: (೧೯೪೭-೦೬-೧೬)೧೬ ಜೂನ್ ೧೯೪೭
ಜನನ ಸ್ಥಳ: ಶಿವಮೊಗ್ಗ ಜಿಲ್ಲೆಯ ಸೂಗೂರು
ಗುರು:
ಶಿಷ್ಯರು:
ಶಿಕ್ಷಣ:ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ ಎಂ. ಎ., ಪಿ. ಎಚ್. ಡಿ.
ತತ್ವಜ್ಞ್ಯಾನ:ಕಾಯಕವೇ ಕೈಲಾಸ
ಸಾಹಿತ್ಯ ರಚನೆಗಳು:ತರಳಬಾಳು ಪತ್ರಿಕೆ, ಪಾಣಿನಿ ಸಂಸ್ಕೃತದ ಕಂಪ್ಯೂಟರೀಕರಣ

ಶಿಕ್ಷಣ

ಬದಲಾಯಿಸಿ

’ಸೂತಸಂಹಿತೆ’ಯ ಮೇಲೆ ಪೌಢ ಪ್ರಬಂಧ ಬರೆದು ಬನಾರಸ್ ಹಿಂದೂ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಡಾಕ್ಟರೇಟ್ ಪದವಿಯನಂತರ ವಿಯನ್ನಾ ವಿಶ್ವವಿದ್ಯಾಲಯದಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಮಾಡಿದ್ದಾರೆ.

ಸಾಧನೆ ಹಾಗೂ ಸೇವೆ

ಬದಲಾಯಿಸಿ

೧೧-೨-೧೯೭೯ರಂದು ಶ್ರೀಮದುಜ್ಜಯಿನಿಸದ್ಧರ್ಮ ಸಿಂಹಾಸನದ ೨೧ನೆಯ ಜಗದ್ಗುರುಗಳಾದರು. ಶರಣರ ವಚನಗಳನ್ನು ’ವಚನ ಗಣಕ ಸಂಪುಟ’ ಹಾಗೂ ಪಾಣಿನಿಯ ಅಷ್ಟಾಧ್ಯಾಯಿ ವ್ಯಾಕರಣ ಗ್ರಂಥವನ್ನು ’ಗಣಕಾಷ್ಟಾಧ್ಯಾಯ’ವಾಗಿ ಇಂಟರ್‌ನೆಟ್‌ಗೆ ಅಳವಡಿಸಿ ವಿದ್ವಾಂಸರ ಗಮನ ಸೆಳೆದಿದ್ದಾರೆ. ೧೦ನೆಯ ವಿಶ್ವಸಂಸ್ಕೃತ ಸಮ್ಮೇಳನವನ್ನು ಬೆಂಗಳೂರಿನ ತರಳಬಾಳು ಕೇಂದ್ರದಲ್ಲಿ ನಡೆಸಿ ವಿಶ್ವದ ವಿದ್ವಾಂಸರ ಗೌರವಕ್ಕೆ ಪಾತ್ರರಾಗಿದ್ದಾರೆ. ನೂರಾರು ಗ್ರಾಮೀಣ ಶಿಷ್ಯರೊಂದಿಗೆ ಎರಡು ಸಲ ’ವಿಶ್ವಶಾಂತಿ ಯಾತ್ರೆ’ ಕೈಕೊಂಡು ಗ್ರಾಮೀಣ ಶಿಷ್ಯರಿಗೆ ವಿದೇಶಗಳ ಪರಿಚಯ ಮಾಡಿಸಿದ್ದಾರೆ. ೧೨ಕ್ಕೂ ಹೆಚ್ಚು ಮೌಲಿಕ ಕೃತಿಗಳನ್ನು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ರಚಿಸಿದ್ದಾರೆ. ’ತರಳಬಾಳು ಗ್ರಾಮೀಣ ಅಭಿವೃದ್ಧಿ ಸಂಸ್ಥೆ’, ’ತರಳಬಾಳು ಕೃಷಿ ವಿಜ್ಞಾನ ಕೇಂದ್ರ’ದ ಮೂಲಕ ಕೃಷಿಕರ ಬದುಕಿಗೆ ಚೈತನ್ಯ ತುಂಬುತ್ತಿದ್ದಾರೆ. ವಿಶ್ವಮಟ್ಟದ ವಿವಿಧ ಸಂಘ-ಸಂಸ್ಥೆಗಳಲ್ಲಿ ಸಕ್ರಿಯ ಸದಸ್ಯರಾಗಿ ವಿಶ್ವಶಾಂತಿಗಾಗಿ ಸದಾ ದುಡಿಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ಸಂಸ್ಕೃತ, ಜರ್ಮನ್, ತಮಿಳು ಮುಂತಾದ ಭಾಷೆಗಳನ್ನು ಬಲ್ಲ ಪೂಜ್ಯರು ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಅಧ್ಯಕ್ಷರಾಗಿ ಗುಣಾತ್ಮಕ ಶಿಕ್ಷಣಕ್ಕೆ ಒತ್ತು ನೀಡುತ್ತಿದ್ದಾರೆ. ಆಡಳಿತ ಸುಗಮವಾಗಲು ಎಲ್ಲ ವ್ಯವಹಾರಗಳನ್ನೂ ಗಣಕೀಕರಣಗೊಳಿಸಿದ್ದಾರೆ. ಮದ್ಯಪಾನದ ವಿರುದ್ಧ ಆಂದೋಲನ ಹಮ್ಮಿಕೊಂಡು ಸರ್ಕಾರದ ಮತ್ತು ಸಾರ್ವಜನಿಕರ ಕಣ್ಣು ತೆರೆಸಿದ್ದಾರೆ. ಸಂಗೀತ ಬಲ್ಲ ಇವರು ಪಿಟೀಲು ನುಡಿಸುವಲ್ಲಿ ಪರಿಣಿತರು. ದೇಶ ವಿದೇಶಗಳ ಹಲವು ವಿಶ್ವವಿದ್ಯಾಲಯಗಳಲ್ಲಿ ಗೌರವ ಪ್ರಾಧ್ಯಾಪಕರಾಗಿ ಉಪನ್ಯಾಸ ನೀಡುತ್ತಿದ್ದಾರೆ. ಪ್ರತಿ ಸೋಮವಾರ ನಡೆಯುವ ’ಸದ್ಧರ್ಮ ನ್ಯಾಯ ಪೀಠ’ದ ಮೂಲಕ ಸಮಾಜಬಾಂಧವರ ಸಮಸ್ಯೆಗಳನ್ನು ಆಲಿಸಿ ಸೂಕ್ತ ನ್ಯಾಯ ನಿರ್ಣಯ ನೀಡುತ್ತಿದ್ದು ನ್ಯಾಯಾಲಯಗಳ ನ್ಯಾಯಾಧೀಶರೂ ಇಲ್ಲಿ ನಡೆಯುವ ನ್ಯಾಯ ತೀರ್ಮಾನವನ್ನು ಗಮನಿಸುವಂತಾಗಿದೆ. ಪ್ರತಿ ಬುಧವಾರ "ವಿಜಯ ಕರ್ನಾಟಕ" ಪತ್ರಿಕೆಯಲ್ಲಿ ಬರುವ ಅವರ ’ಬಿಸಿಲು ಬೆಳದಿಂಗಳು’ ಅಂಕಣ ಬರಹ ಎಲ್ಲ ವರ್ಗದ ಓದುಗರ, ಸಾಹಿತಿಗಳ, ಚಿಂತಕರ, ರಾಜಕಾರಣಿಗಳ ಗಮನ ಸೆಳೆಯುತ್ತಿದೆ. ತಮ್ಮ ಆಧ್ಯಾತ್ಮಿಕ ಪಿತರ ಆಶಯಗಳಿಗನುಗುಣವಾಗಿ ವರ್ಷದಲ್ಲಿ ಒಂದೆರಡು ಸಲವಾದರೂ ವಿದೇಶಗಳಿಗೆ ತೆರಳಿ ತತ್ವಪ್ರಚಾರ ಮಾಡಿ ಬರುತ್ತಿದ್ದಾರೆ. ಪ್ರತಿವರ್ಷ ನಡೆಯುತ್ತ ಬಂದಿರುವ ತರಳಬಾಳು ಹುಣ್ಣಿಮೆಗೆ ವಿಶೇಷ ಮೆರಗು ಬರುವಂತೆ ಅದರ ಕಾರ್ಯಕ್ರಮದ ಸ್ವರೂಪದಲ್ಲಿ ಬದಲಾವಣೆ ತಂದಿದ್ದಾರೆ. ಪ್ರಾಥಮಿಕ ಹಂತದ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡುವ ಸದಾಶಯದಿಂದ ನಗರ, ಗ್ರಾಮೀಣ ಪ್ರದೇಶಗಳಲ್ಲಿ ಪ್ರಾಥಮಿಕ ಶಾಲೆಗಳನ್ನು ತೆರೆದು ಗುಣಾತ್ಮಕ ಶಿಕ್ಷಣಕ್ಕೆ ಒತ್ತು ನೀಡುತ್ತಿದ್ದಾರೆ. ವಿದ್ಯಾಸಂಸ್ಥೆಯ ಸುಗಮ ಆಡಳಿತಕ್ಕಾಗಿ ಕೃಷಿ, ಕಟ್ಟಡ, ಲೆಕ್ಕ ಪರಿಶೋಧನೆ, ವಿದ್ಯಾರ್ಥಿ ನಿಲಯಗಳ ನಿರ್ವಹಣೆ ಹೀಗೆ ಹಲವು ಸಮಿತಿಗಳನ್ನು ರಚಿಸಿದ್ದಾರೆ. ಬರವಣಿಗೆ, ವಿದ್ಯಾಸಂಸ್ಥೆ ಮತ್ತು ಮಠದ ಜವಾಬ್ದಾರಿ ನಿರ್ವಹಣೆಗಳ ನಡುವೆಯೂ ಬಿಡುವು ಮಾಡಿಕೊಂಡು ಹತ್ತು ಹಲವು ಸಭೆಗಳಲ್ಲಿ ಭಾಗಹಿಸಿ ತಮ್ಮ ವಿಚಾರಗಳ ಮೂಲಕ ಜನಮನವನ್ನು ಅರಳಿಸುತ್ತಿದ್ದಾರೆ. ಬಿಡುವಿಲ್ಲದ ನಿರಂತರ ದುಡಿಮೆ ಇದ್ದರೂ ಸಾಹಿತ್ಯ, ಸಂಗೀತ, ಕಲೆಯ ಪ್ರಸಾರ, ಪ್ರಚಾರಕ್ಕಾಗಿ ಹಲವು ಯೋಜನೆಗಳನ್ನು ರೂಪಿಸಿ ಕಾರ್ಯಕಾರಿಗೊಳಿಸುತ್ತಿದ್ದಾರೆ. ಸಿರಿಗೆರೆ ಮಠದಿಂದ ಪ್ರತಿ ವರ್ಷ ನಡೆಯುವ ತರಳಬಾಳು ಹುಣ್ಣೆಮೆತುಂಬಾ ಪ್ರಸಿದ್ದ. ನಾಡಿನ ಎಲ್ಲಾ ಪ್ರಮುಖ ಮಠಾಧೀಶರು ಮತ್ತು ಸಾಹಿತಿಗಳು ಭಾಗವಹಿಸುತ್ತಾರೆ. ಡಾ.ಶಿವಮೂರ್ತಿ ಸ್ವಾಮೀಜಿಯವರು ಪಾಣಿನಿ ಗಣಕವನ್ನು ಗಣಕಯಂತ್ರಕ್ಕೆ ಅಳವಡಿಸಿದ್ಧಾರೆ. ತರಳಬಾಳು ಗ್ರಾಮೀಣ ಅಭಿವೃದ್ಧಿ ಸಂಸ್ಥೆಯನ್ನು ಸ್ಥಾಪಿಸಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ, ರೈತರಿಗೆ ಪರಿಸರ ಮತ್ತು ವಿಜ್ಞಾನದ ಅರಿವು ಮೂಡಿಸುತ್ತಿದಗದಾರೆ. ಇದಕ್ಕಾಗಿ ಇಂದಿರಾ ಪ್ರಿಯದರ್ಶಿನಿ ರಾಷ್ಟ್ರೀಯ ಪುರಸ್ಕಾರ ಲಭಿಸಿದೆ.ತರಳಬಾಳು ಕೃಷಿ ವಿಜ್ಣಾನ ಕೇಂದ್ರ ಸ್ಥಾಪಿಸಿ, ಕೃಷಿಯಲ್ಲಿ ಹೊಸಹೊಸ ಸಂಶೋಧನೆಗಳಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ.

ಉಬ್ರಾಣಿ ಏತ ನೀರಾವರಿ ಯೋಜನೆಯನ್ನು ಜಾರಿಗೊಳಿಸಿ ಚನ್ನಗಿರಿ ತಾಲ್ಲೂಕಿನ ಕೆರೆಗಳನ್ನು ತುಂಬಿಸಿ ಬರ ನೀಗಿಸಿದ್ದಾರೆ. ಈಗ ದಾವಣಗೆರೆ ಜಿಲ್ಲೆಯ ೨೨ ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರು ತುಂಬಿಸುವ ಕಾರ್ಯ ಪ್ರಗತಿಯಲ್ಲಿದೆ. ೧೯೮೬ರಲ್ಲಿ ಬರಗಾಲ ಬಂದಾಗ ತರಳಬಾಳು ಹುಣ್ಣುಮೆ ಯನ್ನು ರದ್ದುಮಾಡಿ ಜಾನುವಾರುಗಳಿಗೆ ಮೇವು ಸಂಗ್ರಹಿಸಿ ಬರಪೀಡಿತ ಪ್ರದೇಶದಲ್ಲಿ ಹಂಚಿದ್ದರು. ಸಧ್ಯ ರೈತರ ಅವೈಜ್ಞಾನಿಕ ಬೆಳೆ ವಿಮೆ ಯೋಜನೆಯ ಪರಿಷ್ಕರಿಸಲು ಸರಕಾರಕ್ಕೆ ಒತ್ತಾಯಿಸುತ್ತಿದ್ದಾರೆ.