ಆರ್.ಆರ್.ಪದಕಿ

(ಡಾ.ಆರ್.ಆರ್.ಪದಕಿ ಇಂದ ಪುನರ್ನಿರ್ದೇಶಿತ)

ಡಾ.ಆರ್.ಆರ್.ಪದಕಿ(ಡಾ.ರಂಗರಾವ ರಾಮರಾವ ಪದಕಿ)ಯವರು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ಉಚಿತವಾಗಿ ಆರೋಗ್ಯ ಸೇವೆ ನೀಡಿ ಡಾ.ಪದಕಿಯೆಂದೆ ಹೆಸರುವಾಸಿಯಾಗಿದ್ದರು.

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ 22ನೇ ಅಗಷ್ಟ್ 1925ರಲ್ಲಿ ಜನಿಸಿದರು.

ವಿದ್ಯಾಭಾಸ

ಬದಲಾಯಿಸಿ

ಪದಕಿಯವರು ತಾಳಿಕೋಟೆ, ಬಾಗಲಕೋಟೆ, ಗದಗ, ಧಾರವಾಡ, ಮಹಾರಾಷ್ಟ್ರಕೊಲ್ಹಾಪುರದಲ್ಲಿ ಶಿಕ್ಷಣ ಪಡೆದು ಪುಣೆಯ ಬಿಜೆ ಮೆಡಿಕಲ್ ಕಾಲೇಜಿನಲ್ಲಿ 1951 ರಲ್ಲಿ ಎಂಬಿಬಿಎಸ್ ಪದವಿ ಮುಗಿಸಿದ್ದರು.

1952 ರಲ್ಲಿ ಸರ್ಕಾರಿ ವೈದ್ಯರಾಗಿ ಮಹಾರಾಷ್ಟ್ರದ ಸಾಂಗ್ಲಿ, ಕರ್ನಾಟಕಕುಮಟಾದಲ್ಲಿ ಸೇವೆ ಸಲ್ಲಿಸಿದ ಅವರಿಗೆ ಸರ್ಕಾರಿ ನೌಕರಿ ಬೇಡವೆನಿಸಿ ರಾಜೀನಾಮೆ ನೀಡಿ 1957ರಲ್ಲಿ ಮುದ್ದೇಬಿಹಾಳದಲ್ಲಿ ಸ್ವಂತ ಕ್ಲಿನಿಕ್ ಸ್ಥಾಪಿಸಿದರು.

3ನೇ ಅಗಷ್ಟ್ 2018ರಂದು 93ನೇ ವಯಸ್ಸಿನಲ್ಲಿ ನಿಧನರಾದರು. ಮೃತರಿಗೆ ಪತ್ನಿ, ಪುತ್ರ (ಇಂಗ್ಲೆಂಡಿನಲ್ಲಿ ಸಾರ್ವಜನಿಕ ಆರೋಗ್ಯ ನಿರ್ದೇಶಕ) ಡಾ.ಕಿಶೋರ ಸೇರಿದಂತೆ ಇಬ್ಬರು ಪುತ್ರರು, ಇಬ್ಬರು ಪುತ್ರಿಯರಿದ್ದಾರೆ.

ಪ್ರಶಸ್ತಿ

ಬದಲಾಯಿಸಿ

ಅವರ ಸೇವೆಯನ್ನು ಗುರುತಿಸಿ ಅನೇಕ ಸಂಘ, ಸಂಸ್ಥೆಗಳು ಅನೇಕ ಪ್ರಶಸ್ತಿ ನೀಡಿದರೆ, ರಾಜ್ಯ ಸರ್ಕಾರ 2015 ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು.[]

ಉಲ್ಲೇಖಗಳು

ಬದಲಾಯಿಸಿ