ಡಯಾನ ಫ್ರಾಮ್ ಎಡುಲ್ಜಿ
(ಆಂಗ್ಲ: Diana Fram Edulji)
ಮುಂಬೈನ ಪಾರ್ಸಿ ಕುಟುಂಬವೊಂದರಲ್ಲಿ ಜನಿಸಿದ ಹೆಸರಾಂತ ಹಿಂದಿನ ಭಾರತೀಯ ಮಹಿಳಾ ಕ್ರಿಕೆಟ್ ಟೆಸ್ಟ್ ಆಟಗಾತಿ. ಚಿಕ್ಕ ಪ್ರಾಯದಲ್ಲೇ ಕ್ರಿಕೆಟ್ ಆಟ ಆಕೆಯನ್ನು ಆಕರ್ಷಿಸಿತ್ತು. ಮುಂದೆ 'ಡಯಾನ ಫ್ರಾಮ್ ಎಡುಲ್ಜಿ' ತಮ್ಮನ್ನು ಕ್ರಿಕೆಟ್ ಆಟಕ್ಕೆ ತಮ್ಮನ್ನು ಸಮರ್ಪಿಸಿಕೊಳ್ಳುವ ಮೊದಲು, 'ಬ್ಯಾಸ್ಕೆಟ್ ಬಾಲ್' ಹಾಗೂ 'ಟೇಬಲ್ ಟೆನ್ನಿಸ್' ಆಟಗಳಲ್ಲಿ ಹೆಚ್ಚು ಪ್ರಭಾವಿತರಾಗಿ, 'ಜೂನಿಯರ್ ನ್ಯಾಷನಲ್ ಮಟ್ಟ' ದವರೆಗೂ ಮೇಲೇರಿ ಆಡಲು ಪ್ರಾರಂಭಿಸಿದ್ದರು.
ತಮ್ಮ ಸಮರ್ಥ ಹಾಗೂ ಪರಿಣಾಮಕಾರಿ ಬೋಲಿಂಗ್ ಕೆಲಸಮಾಡಿತು
ಬದಲಾಯಿಸಿಒಮ್ಮೆ, ಮಾಜೀ ಟೆಸ್ಟ್ ಕ್ರಿಕೆಟ್ ಕ್ಯಾಪ್ಟನ್, 'ಲಾಲಾ ಅಮರ್ನಾಥ್' ರವರು, ಒಂದು 'ಕ್ರಿಕೆಟ್ ಕ್ಯಾಂಪ್' ಅನ್ನು ಆಯೋಜಿಸಿದಾಗ, 'ಡಯಾನ ಫ್ರಾಮ್ ಎಡುಲ್ಜಿ' ರವರು ಅತ್ಯಂತ ಪರಿಣಾಮಕಾರಿ ಸಂಘರ್ಷಮಯ 'ಎಡಗೈ ಸ್ಲೋ-ಬೋಲರ್' ಆಗಿ ಆಟವಾಡಿ, 'ಲಾಲಾ ಅಮರನಾಥ್' ರವರ ಗಮನವನ್ನು ಸೆಳೆದರು.
'ಡಯಾನ ಎಡುಲ್ಜಿ', 'ಇಂಡಿಯನ್ ನ್ಯಾಷನಲ್ ಮಹಿಳಾ-ಕ್ರಿಕೆಟ್ ಟೀಮ್,' ನಲ್ಲಿ ಸೇರ್ಪಡೆಯಾದರು
ಬದಲಾಯಿಸಿ'ಸ್ಲೋ ಆರ್ಥೊಡಾಕ್ಸ್ ಎಡಗೈ ಬೋಲರ್' ಆಗಿದ್ದ, ಎಡುಲ್ಜಿ 'ರೈಲ್ವೆ ಆಟಗಾರರ ತಂಡ' ವನ್ನು ಪ್ರತಿನಿಧಿಸುತ್ತಿದ್ದರು. 'ಇಂಡಿಯನ್ ನ್ಯಾಷನಲ್ ಕ್ರಿಕೆಟ್ ಟೀಮ್,' ನಲ್ಲಿ ಪಾದಾರ್ಪಣೆ ಮಾಡಿದಾಗ, ಆರ್ಥೊಡಾಕ್ಸ್ ಎಡಗೈ ಸ್ಲೋ ಬೋಲರ್ ಆಗಿ, ಅಲ್ಲಿಯೂ ಯಶಸ್ವಿಯಾದರು ಮತ್ತು ಹೆಸರುಮಾಡಿದರು, ಸಹಿತ.
- Diana Edulji Archived 2006-06-30 ವೇಬ್ಯಾಕ್ ಮೆಷಿನ್ ನಲ್ಲಿ.
- Cricinfo