ಟ್ರೇಡ್ ಮಾರ್ಕ್ (ವಾಣಿಜ್ಯ ಸೂಚಕ ಚಿನ್ಹೆ )
(ಟ್ರೇಡ್ ಮಾರ್ಕ್ ಇಂದ ಪುನರ್ನಿರ್ದೇಶಿತ)
ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ. |
ಟ್ರೇಡ್ ಮಾರ್ಕ್ ಎಂಬುದು ವಾಣಿಜ್ಯಸೂಚಕ ಚಿನ್ಹೆಯಾಗಿದೆ.
ಯಾವುದೇ ವಸ್ತು ಅಥವಾ ತಂತ್ರಜ್ಞಾನವನ್ನು ಉತ್ಪಾದಿಸುವ ವಾಣಿಜ್ಯಸಂಸ್ಥೆಗಳು ತಮ್ಮ ಸರಕುಗಳನ್ನು ಗ್ರಾಹಕರು ಸುಲಭವಾಗಿ ಗುರುತಿಸುವದಕ್ಕಾಗಿ ಟ್ರೇಡ್ ಮಾರ್ಕ್ ನ್ನು ಉಪಯೋಗಿಸುತ್ತಾರೆ.ಜಗತ್ತಿನ ಬಹುತೇಕ ವಾಣಿಜ್ಯ ಸಂಸ್ಥೆ/ಕಂಪೆನಿಗಳು ತಮ್ಮದೇ ಆದ ಟ್ರೇಡ್ ಮಾರ್ಕ್ ನ್ನು ಹೊಂದಿವೆ.ಈ ಟ್ರೇಡ್ ಮಾರ್ಕ್ ಲ್ಲಿ ಎರಡು ವಿಧಗಳಿವೆ.ಇವುಗಳನ್ನು ™ (ನೋಂದಣೆಯಾಗಿಲ್ಲದ್ದು) ಮತ್ತು ® (ನೋಂದಣೆಯಾಗಿದೆ)ಎಂದು ಗುರುತಿಸಬಹುದಾಗಿದೆ.ಸ್ಥಳೀಯ ವಾಣಿಜ್ಯ ಇಲಾಖೆಯಿಂದ ವಾಣಿಜ್ಯ ಸೂಚಕ ಚಿನ್ಹೆಯ ಪರವಾನಿಗೆಯನ್ನು ಪಡೆಯಲಾಗುತ್ತದೆ.ಈ ಚಿನ್ಹೆಯು ಯಾವುದಾದರೂ ಹೆಸರು ಅಥವಾ ಅಕ್ಷರ ಅಥವಾ ಚಿತ್ರವನ್ನು ಹೊಂದಿರಬಹುದಾಗಿದೆ.ಯಾವುದೇ ಒಂದು ವಾಣಿಜ್ಯ ಸೂಚಕ ಚಿನ್ಹೆಯು ಆಯಾ ಸಂಸ್ಥೆಯ ಆಸ್ತಿಯಾಗಿದ್ದು ಇನ್ಯಾವುದೇ ಸಂಸ್ಥೆಯು ಬಳಸುವಂತಿಲ್ಲ. 'ಟ್ರೇಡ್ ಮಾರ್ಕ್'ನ ಅಗತ್ಯ ಕಾರ್ಯವೆಂದರೆ ವಾಣಿಜ್ಯ ಮೂಲವನ್ನು ಹುಡುಕುಹುದು.ಇದು ಮೂಲದ ಬ್ಯಾಡ್ಜ್ ಆಗಿ ಕಾರ್ಯನಿರ್ವಹಿಸುತ್ತದೆ.