ಟ್ರಾಫಿಕ್ ರಾಮಸ್ವಾಮಿ
ಟ್ರಾಫಿಕ್ ರಾಮಸ್ವಾಮಿ ಒಬ್ಬ ಸಾಮಾಜಿಕ ಹೋರಾಟಗಾರ. ತಮಿಳುನಾಡಿನ ಮೂಲದವರು. ಸಾಮಾಜಿಕಸೇವಾ ಕಾರ್ಯಕರ್ತರು.
ಟ್ರಾಫಿಕ್ ರಾಮಸ್ವಾಮಿ/ Traffic Ramaswamy | |
---|---|
ಜನನ | ಕೆ.ಆರ್.ರಾಮಸ್ವಾಮಿ ೧೯೩೪ ತಮಿಳುನಾಡು, ಭಾರತ |
ರಾಷ್ಟ್ರೀಯತೆ | ಭಾರತ |
ಇತರೆ ಹೆಸರು | ಟ್ರಾಫಿಕ್ ರಾಮಸ್ವಾಮಿ |
ವೃತ್ತಿ | ಮಿಲ್ ಕಾರ್ಮಿಕ |
ಗಮನಾರ್ಹ ಕೆಲಸಗಳು | ಸಾಮಾಜಿಕ ಹೋರಾಟಗಾರ |
ಹೆಸರಾಂತ ಕೆಲಸಗಳು | ಚೆನ್ನೈನ ಸಾರಿಗೆ ಸಂಚಾರವನ್ನು ಸುಗಮಗೊಳಿಸಿದ್ದು, ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಮೂಲಕ ಅನೇಕ ಸಮಸ್ಯೆಗಳಿಗೆ ಪರಿಹಾರ. |
ಜನನ, ವಿದ್ಯಾಭ್ಯಾಸ
ಬದಲಾಯಿಸಿಹುಟ್ಟಿದ್ದು ೧೯೩೪ರಲ್ಲಿ. ಮೊದಲ ಹೆಸರು ಕೆ.ಆರ್.ರಾಮಸ್ವಾಮಿ. ೧೨ರಡನೆ ತರಗತಿವರೆಗೆ (ಪಿಯುಸಿಯವರೆಗೆ) ಮಾತ್ರ ಓದಿ, ನಂತರ ಅಂಚೆ ತೆರಪಿನ ಶಿಕ್ಷಣದ ಮೂಲಕ ಎ.ಎಂ.ಐ.ಇ ಪದವಿಯನ್ನು ಪಡೆದಿದ್ದಾರೆ.
ಸಾಮಾಜಿಕ ಜೀವನ
ಬದಲಾಯಿಸಿಇವರು ಮಿಲ್ಲಿನ ಕಾರ್ಮಿಕರಾಗಿದ್ದುಕೊಂಡು, ಭ್ರಷ್ಟಾಚಾರದ ವಿರುದ್ದ, ಅನಧಿಕೃತ ಕಟ್ಟಡಗಳ ತೆರವಿಗೆ, ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವ ಮೂಲಕ ದಶಕಗಳಿಂದಲೂ ಸಾಮಾಜಿಕ ಹೋರಾಟವನ್ನು ಮಾಡಿಕೊಂಡು ಬಂದಿದ್ದಾರೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿ, ಯಾವ ವಕೀಲರ ಸಹಾಯವನ್ನು ತೆಗೆದುಕೊಳ್ಳದೆ, ನ್ಯಾಯಾಲಯದಲ್ಲಿ ತಮ್ಮ ವಾದವನ್ನು ಮಂಡಿಸುವಲ್ಲಿಯೂ ಇವರು ಜನಪ್ರಿಯರು. ಸಾಮಾಜಿಕ ಹೋರಾಟದಿಂದ ಅವರು ಕೆಲವು ದುಷ್ಕರ್ಮಿಗಳಿಂದ ಹಲ್ಲೆಗೂ ಒಳಗಾಗಿದ್ದರು. ಮಧುರೆ ಜಿಲ್ಲಿಯಲ್ಲಿ ನಡೆದ ಬಹುಕೋಟಿ ರೂಪಾಯಿ ಗಣಿ ಹಗರಣವನ್ನು ಐ.ಎ.ಎಸ್ ಅಧಿಕಾರಿ ಸಘಾಯಂ ಅವರ ನೇತೃತ್ವದಲ್ಲಿ ತನಿಖೆಯಾಗುವಂತೆ ಮಾಡಿದ್ದಾರೆ.
ಟ್ರಾಫಿಕ್ ರಾಮಸ್ವಾಮಿಯಾಗಲು ಕಾರಣ
ಬದಲಾಯಿಸಿತಮಿಳುನಾಡಿನ ಸಾರಿಗೆ ಸಂಚಾರದಲ್ಲಿ ಜನದಟ್ಟಣೆ ಕಂಡು, ಸ್ವಯಂಪ್ರೇರಣೆಯಿಂದ ರಸ್ತೆಗಿಳಿದು ಟ್ರಾಫಿಕ್ ನಿಯಂತ್ರಣಕ್ಕೆ ಕಾರಣರಾದರು. ಇವರ ಸಮಾಜಸೇವೆಯನ್ನು ಗುರ್ತಿಸಿದ ಆರಕ್ಷಕ ಇಲಾಖೆ ಇವರಿಗೆ ಟ್ರಾಫಿಕ್ ನಿಯಂತ್ರಣಕ್ಕಾಗಿ ಗುರುತಿನ ಚೀಟಿಯನ್ನು ನೀಡಿದೆ. ಹಾಗಾಗಿ ಇವರ ಹೆಸರು 'ಟ್ರಾಫಿಕ್ ರಾಮಸ್ವಾಮಿ' ಎಂದು ಪ್ರಸಿದ್ಧವಾಯಿತು.
ಪ್ರಸ್ತುತ ಮಾಡಿರುವ ಕೆಲಸ
ಬದಲಾಯಿಸಿಈ ಹಿಂದೆ ತಮಿಳುನಾಡಿನಲ್ಲಿ ಮಾಜಿ ಮುಖ್ಯಮಂತ್ರಿ ಜಯಲಲಿತ ಅವರ ಹೆಸರಿನಲ್ಲಿ ನಡೆಯುತ್ತಿದ್ದ 'ಅಮ್ಮ' ಹೆಸರಿನ ಸರ್ಕಾರಿ ಯೋಜನೆಗಳ ವಾಣಿಜ್ಯೀಕರಣವನ್ನು ವಿರೋಧಿಸಿ, ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವ ಮೂಲಕ 'ಅಮ್ಮ' ಹೆಸರಿನ ವ್ಯಾಪಾರ ವಹಿವಾಟುಗಳನ್ನು ನಿಲ್ಲಿಸಿದ್ದರು. ಪ್ರಸ್ತುತ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತ ಅವರು ನಿರ್ದೋಷಿಯೆಂದು ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪನ್ನು ಪ್ರಶ್ನಿಸಿ ಇವರು ಸುಪ್ರೀಂಕೋರ್ಟ್ ನ ಮೊರೆಹೋಗಿದ್ದಾರೆ.
ಇತರ ಉಲ್ಲೇಖಗಳು
ಬದಲಾಯಿಸಿ- Chennai Best, "Battling for the Cause of Chennai Citizens" Archived 2015-05-17 ವೇಬ್ಯಾಕ್ ಮೆಷಿನ್ ನಲ್ಲಿ. Retrieved: 9 July 2007
- The Hindu, 27 Nov 2006 Online edition of India's National Newspaper Archived 1 October 2007[Date mismatch] ವೇಬ್ಯಾಕ್ ಮೆಷಿನ್ ನಲ್ಲಿ. Retrieved: 10 July 2007
- IBN Live,, January 23, 2007, "This 73-yr-old is largest PIL filer" Archived September 30, 2007[Date mismatch], ವೇಬ್ಯಾಕ್ ಮೆಷಿನ್ ನಲ್ಲಿ.