ಟೊರಾಂಟೋ ಪಬ್ಲಿಕ್ ಲೈಬ್ರರಿ, ಹೈ ಪಾರ್ಕ್ ಬ್ರಾಂಚ್

ಟೊರಾಂಟೋ ಪಬ್ಲಿಕ್ ಲೈಬ್ರೆರಿ, ೧೮೧೦ ರಲ್ಲಿ ಖಾಸಗಿಯಾಗಿ 'ಯಾರ್ಕ್ ನಗರ'ದ ಸಾರ್ವಜನಿಕರ ದೇಣಿಗೆಯ ಸಹಾಯದಿಂದ ಸ್ಥಾಪಿಸಲ್ಪಟ್ಟಿತು. ಆಗ ನಗರದ ಹೆಸರು 'ಯಾರ್ಕ್'ಎಂದು. ೯, ಡಿಸೆಂಬರ್, ಯಾರ್ಕ್ ನಗರವನ್ನು ಅಮೆರಿಕನ್ ಸೈನ್ಯ ಆಕ್ರಮಿಸಿ, ವಶಪಡಿಸಿಕೊಂಡ ಸಮಯದಲ್ಲಿ, ಏಪ್ರಿಲ್ ೧೮೧೩ ರಲ್ಲಿ, ಲೈಬ್ರರಿಯನ್ನು ಲೂಟಿ ಮಾಡಿದರು.[] ನವೆಂಬರ್ ೧೮೧೩ ರಲ್ಲಿ ಅಮೆರಿಕನ್ ಆರ್ಮಿ ಕಮಾಂಡರ್, 'ಐಸಾಕ್ ಚಾನ್ಸಿ,' ಸುಮಾರು ಎರಡು ಕಪಾಟಿನಲ್ಲಿ ತೆಗೆದಿಟ್ಟಿದ್ದ ಲೈಬ್ರೆರಿ ಪುಸ್ತಕಗಳನ್ನು ವಾಪಸ್ ಮಾಡಿದ. 'ಲೈಬ್ರರಿಯ ಟ್ರಸ್ಟಿ'ಗಳ ಮುಂದೆ, ತನ್ನ ತಪ್ಪನ್ನು ಒಪ್ಪಿಕೊಂಡು ಕ್ಷಮಾಪಣೆ ಕೇಳಿಕೊಂಡನು. ಹೀಗೆ 'ಯಾರ್ಕ್ ಮೆಕ್ಯಾನಿಕ್ಸ್ ಇನ್ಸ್ಟಿಟ್ಯೂಟ್' ನ ಸ್ಥಾಪನೆಯಾಯಿತು. ನಗರದ ಹಲವಾರು ಕಾರ್ಖಾನೆಗಳಲ್ಲಿ ಮೆಕ್ಯಾನಿಕ್ಸ್ ಗಳಾಗಿ ದುಡಿಯುತ್ತಿದ್ದ ಕುಶಲ ಕಾರ್ಮಿಕರಿಗೆ, ವೈಜ್ಞಾನಿಕ ತಿಳುವಳಿಕೆ ಹೆಚ್ಛಿಸಲು ಅನುಕೂಲವಾಗುವ ಪುಸ್ತಕಗಳನ್ನು ಒದಗಿಸಲು ಹಾಗೂ ಜ್ಞಾನಾಭಿವೃದ್ಧಿಗೆ ಸಹಾಯಕವಾಗಿ, ಪುಸ್ತಕಗಳನ್ನು ಎರವಲು ಕೊಡಲು ಮತ್ತು ರೆಫರೆನ್ಸ್, ಕೆಲಸಕ್ಕೆ ಒತ್ತುಕೊಡುವ ದೃಷ್ಟಿಯಿಂದ ಹೆಚ್ಛಿನ ಮಹತ್ವದ ಕೆಲಸಗಳು ನಡೆದವು. 'ಯಾರ್ಕ್ ನಗರ'ದ ಹೆಸರು ಬದಲಾಗಿ 'ಟೊರಾಂಟೋ' ಎಂದು ನಾಮಕರಣ ಮಾಡಲಾಯಿತು. 'ಟೊರಾಂಟೋ ಮೆಕಾನಿಕ್ಸ್ ಇನ್ಸ್ಟಿ ಟ್ಯೂಟ್ ಲೈಬ್ರರಿ' ಎನ್ನುವ ಹೆಸರು ಹೊಸದಾಗಿ ಸೇರಿಕೊಂಡಿತು. ಫ್ಯಾಕ್ಟರಿಯಲ್ಲಿ ಕೆಲಸ ಮಾಡಿದ ನಂತರ ಕಾರ್ಮಿಕರಿಗೆ ತಾಂತ್ರಿಕ ವಲಯದಲ್ಲಿ ಹೆಚ್ಚಿನ ಮಾಹಿತಿ ಕೊಡಲು, ಹಲವು ಮಹತ್ವದ ಪ್ರಯತ್ನಗಳು ನಡೆದವು. ತಾಂತ್ರಿಕ ಮಾಹಿತಿಗಳಲ್ಲದೆ, ಫಿಲೋಸೋಫಿ, ಸಂಗೀತ, ಸೈನ್ಸ್, ವಿದ್ಯುತ್ ಚ್ಛಕ್ತಿ, ಕಟ್ಟಡ ನಿರ್ಮಾಣದಲ್ಲಿ ತರಪೇತಿ, ಇವುಗಳಿಗೆ,ಲೈಬ್ರರಿ, ಬಹಳ ಉಪಯೋಗಕಾರಿ ಯೆಂದು ಹೆಸರಾಯಿತು.

'ಲೈಬ್ರರಿಯ ಒಳಭಾಗದ ಮತ್ತೊಂದು ಪಾರ್ಶ್ವ'

ಹೊಸಕಟ್ಟಡದಲ್ಲಿ ಸ್ಕಾರ್ ಬಾರೋ ಉಪನಗರದಲ್ಲಿ ಲೈಬ್ರರಿ ಆರಂಭವಾಯಿತು.

೧೮೪೫ ರಲ್ಲಿ 'ಲೈಬ್ರರಿ' ಹಾಗೂ 'ನ್ಯೂಸ್ ರೂಮ್' ಜಾಗವನ್ನು'ಸೆಂಟ್ರೆಲ್ ಫೈರ್ ಹಾಲ್'ಮೇಲಿನ ಮಹಡಿಗೆ ಬದಲಾಯಿಸಿದರು. ಅದು ('ನ್ಯೂ ಕೌಂಟಿ ಕೋರ್ಟ್ ಹೌಸ್' ನ ಹಿಂಭಾಗದಲ್ಲಿತ್ತು) ಉತ್ತರದ ಕಡೆಯಲ್ಲಿ, ಕೋರ್ಟ್ ಹೌಸ್ ನ(ಈಗ ಕೋರ್ಟ್ ಸ್ಟ್ರೀಟ್ ಇರುವ ಕಡೆ) ಚರ್ಚ್ ನ ಪಶ್ಚಿಮದ ಕಡೆ ಅಂದರೆ, ಕಿಂಗ್ಸ್ ಸ್ಟ್ರೀಟ್ ಮತ್ತು ಅಡಿಲೆಯ್ದ್ ಸ್ಟ್ರೀಟ್ಸ್ ಗಳ ನಡುವೆ. ೧೯೫೮ ವೆಷ್ಟನ್ ಮೆಕ್ಯಾನಿಕ್ಸ್ ಇನ್ಸ್ಟಿಟ್ಯೂಟ್ ಆರಂಭವಾಯಿತು.

೧೮೬೧ ರಲ್ಲಿ

ಬದಲಾಯಿಸಿ

ಲೈಬ್ರರಿ ಹೊಸ ಕಟ್ಟಡಕ್ಕೆ ವರ್ಗಾವಣೆಯಾಯಿತು. ಚರ್ಚ್ ಮತ್ತು ಅಡಿಲೈಡ್ ಸ್ತ್ರೀಟ್ ನ ಉತ್ತರ ಪೂರ್ವದ ಕೊನೆಗೆ, 'ಎಫ್.ಡಬ್ಲ್ಯು ಕಂಬರ್ ಲ್ಯಾಂಡ್' ಮತ್ತು ಜಿ ಎಮ್. ಸ್ಟಾರ್ಮ್, ನಿರ್ಮಿಸಿದ ಕಟ್ಟಡದಲ್ಲಿ ಲೈಬ್ರರಿ ಮತ್ತು ಓದುವ ಕೋಣೆಗಳು ಪ್ರತ್ಯೇಕವಾಗಿ ಆಯೋಜಿಸಲ್ಪಟ್ಟವು. ಒಂದು 'ದೊಡ್ದ ಲೆಕ್ಛರ್ ಹಾಲ್,' 'ದೊಡ್ಡ ಮ್ಯುಸಿಕ್ ಹಾಲ್', ಗಳನ್ನು ಅಳವಡಿಸಲಾಯಿತು.

೧೮೭೦-೧೮೮೦

ಬದಲಾಯಿಸಿ

ಈ ಕಾಲಘಟ್ಟದಲ್ಲಿ 'ಮೆಕ್ಯಾನಿಕ್ಸ್ ಇನ್ಸ್ಟಿಟ್ಯೂಟ್' ಪುಸ್ತಕಗಳನ್ನು ಮನೆಗೆ ತೆಗೆದುಕೊಂಡು ಹೋಗಿ, ವಾಪಸ್ ಕೊಡಲು ಎರವಲು ಕೊಡುವ ವ್ಯವಸ್ಥೆಯನ್ನು ಪ್ರಾರಂಭ ಮಾಡಿತು. ಲೈಬ್ರರಿಯಲ್ಲಿ ಕುಳಿತು ಸುವ್ಯವಸ್ಥಿತವಾಗಿ ಪುಸ್ತಕಗಳನ್ನು ಕಪಾಟಿನಿಂದ ಪಡೆದು, ಟೇಬಲ್ ಮೇಲೆ ಇಟ್ಟುಕೊಂಡು ಓದಲು ಅನುಕೂಲಕರವಾದ 'ರೀಡಿಂಗ್ ರೂಂ ಸೌಲಭ್ಯ'೧೮೭೮ ರಲ್ಲಿ ಜಾರಿಗೆ ಬಂತು. 'ಸ್ಕಾರ್ ಬಾರೋ' ನಲ್ಲಿ ಮತ್ತು ಪ.ಟೊರೊಂಟೋ ಜಂಕ್ಷನ್ ನಲ್ಲಿ, ೧೮೮೮, ಹಾಗೆಯೇ ೧೮೮೫ ರಲ್ಲಿ 'ವೆಸ್ಟನ್'ನಲ್ಲಿ ಹೊಸದಾಗಿ ಶಾಖೆಯೊಂದನ್ನು ತೆರೆಯಲಾಯಿತು. 'ಆಂಟೇರಿಯೋ ಫ್ರೀ ಲೈಬ್ರೆರಿ ಕಾನೂನನ್ನು ಜಾರಿಗೆ ತಂದ ಬಳಿಕ', ಓದುಗರಿಗೆ ಅನುಕೂಲವಾಗತೊಡಗಿತು. ಆ ಸಮಯದಲ್ಲಿ 'ಆಳ್ದರ್ ಮನ್', ಹಾಗೂ, 'ಜಾನ್ ಹಲಂ', ಟೊರಾಂಟೋ ನಗರದಲ್ಲಿ ಸಾರ್ವಜನಿಕ ಲೈಬ್ರರಿ, ಹೂಡಲು ಮುಂದಾಳತ್ವವನ್ನು ವಹಿಸಿದ್ದರು.

ಲೈಬ್ರರಿಯ ಹಲವಾರು ಭಾಷೆಗಳ ಗ್ರಂಥಗಳನ್ನು ಆಯ್ಕೆಮಾಡಿ ತರುವ ಅಭಿಯಾನದಲ್ಲಿ ಜರ್ಮನ ಮತ್ತು ಫ್ರೆಂಚ್ ಪುಸ್ತಕಗಳನ್ನು ಸೇರಿಸಲಾಯಿತು. ೧೯೦೦-೧೯೧೦ ರ ತನಕ, ಸ್ಪಾನಿಷ್ ಮತ್ತು ಇಟ್ಯಾಲಿಯನ್ ಸಾಹಿತ್ಯದ ಪುಸ್ತಕಗಳನ್ನು ಸೇರಿಸಲಾಯಿತು. ಇತರೆ ಯೂರೋಪಿಯನ್ ವಲಸೆಗಾರರರು ಬಂದ ಮೇಲೆ ಆವರಿಗೆ ಇಷ್ಟವಾದ ಅವರ ಭಾಷೆಯ ಪುಸ್ತಕಗಳನ್ನು ಕೊಂಡು ತಂದರು. ಪುಸ್ತಗಳ ವಿವರಣೆಯ ಕ್ಯಾಟಲಾಗ್ ವ್ಯವಸ್ಥೆ ೧೯೧೬ ರಲ್ಲಿ ಆರಂಭವಾಯಿತು. ಹ್ಯಾಮಂಡ್ ಟೈಪ್ ರೈಟರ್ ಖರೀದಿ ಮಾಡಿದ ಮೇಲೆ ಟೈಪ್ ಮಾಡಿ 'ಕಾಲೇಜ್ ಸ್ಟ್ರೀಟ್' ನಲ್ಲಿದ್ದ ಶಾಖೆ ಯಲ್ಲಿ ವಿಶೇಷ ಕ್ಯಾಟಲಾಗ್ ಗಳನ್ನು ಮಾಡರ್ನ್ ಗ್ರೀಕ್, ಯಿಡ್ಡಿಶ್, ಮತ್ತು ರಷ್ಯನ್ ಭಾಷೆಯ ಪುಸ್ತಕಗಳ ಸೇರ್ಪಡೆಯಾಯಿತು. ಜೇಮ್ಸ್ ಬೇಐನ್ ಜೂ. (೧೮೪೨-೧೯೦೮) ಮೊಟ್ಟ ಮೊದಲ 'ಚೀಫ್ ಲೈಬ್ರೆರಿ ಅಧಿಕಾರಿ'ಯಾಗಿ ಕಾರ್ಯ ನಿರ್ವಹಿಸಿದ್ದರು. (೧೮೮೩-೧೯೦೮) ಕೆನೇಡಿ ಯನ್ ಪುಸ್ತಕಗಳ ಸೇರ್ಪಡೆಯಾಗಲು ಒತ್ತಾಯ ಬಂದಿದ್ದರಿಂದ ಅವುಗಳನ್ನು ಕೊಂಡು ಸೇರಿಸುವ ಕಾರ್ಯ ಶುರುವಾಯಿತು. ಜೇಮ್ಸ್ ಬೇನ್ ಲೈಬ್ರರಿಯ ವಿಶೇಷ ಪುಸ್ತಕಗಳ, ಕೈಬರಹಗಳ ಸಂಗ್ರಹ ಮಾಡಿದರು.

೧೮೯೦ ಯಲ್ಲಿ ಟೊರಾಂಟೋ ಪಬ್ಲಿಕ್ ಲೈಬ್ರರಿ ಶಾಖೆ ಡಂಡಾಸ್ ರಸ್ತೆಯಲ್ಲಿ ೧೮೯೦ ಯ ಜನವರಿ ತಿಂಗಳಿನಲ್ಲಿ ಬಾಡಿಗೆ ಮನೆಯಲ್ಲಿ ಆರಂಭ. ಈಗಿನ ಒಸೆಂಗ್ಟನ್ ಅವೆನ್ಯೂ ಕ್ವೀನ್ ಸ್ಟ್ರೀಟ್ ನಲ್ಲಿರುವ ಹಿಂದಿನ 'ಪಾರ್ಕ್ ಡಲ್ಲೆ ಮೆಕ್ಯಾನಿಕ್ಸ್ ಇನ್ಸ್ಟಿಟ್ಯೂಟ್' ನ ಲೈಬ್ರರಿಯ ಪುಸ್ತಕಗಳು ಪೀಠೋಪಕರಣಗಳು ೧೮೮೯ ರಲ್ಲಿ ಸೇರಿಸಿಕೊಳ್ಳಲಾಯಿತು.

ಲೈಬ್ರರಿಯ ಶತಮಾನೋತ್ಸವದ ನೆನಪಿನಲ್ಲಿ ಸ್ಕಾರ್ ಬರೊ ಸೆಂಟಿನೆರಿ ಲೈಬ್ರರಿ ಕಟ್ಟಡವನ್ನು ನಿರ್ಮಿಸಲಾಯಿತು. ಟೊರಾಂಟೊ ನಗರದ ನೂರನೆಯ ವರ್ಷದ ವಿಜೃಂಭಣೆಯ ಮಹೋತ್ಸವದ ಆಚರಣೆಯ ಸಮಯದಲ್ಲಿ ರನಿಮೇಡ್ ಪಬ್ಲಿಕ್ ಲೈಬ್ರರಿ, ಯಾರ್ಕ್ ನಗರ ೧೯೧೨ ರಲ್ಲಿ ಆರಂಭ ಗೊಂಡವು.

೧೯೦೩ ರಲ್ಲಿ ಸಾರ್ವಜನಿಕ ಪುಸ್ತಕಾಲಯಗಳು ಟೊರಾಂಟೋ ನಗರದ ಪೂರ್ವದಲ್ಲಿ ಹುಟ್ಟಿಕೊಂಡವು.

  • ಡೀರ್ ಪಾರ್ಕ್ ೧೯೦೫ ರಲ್ಲಿ
  • ಉತ್ತರ ಟೋರಾಂಟೋ ೧೯೦೯ ರಲ್ಲಿ
  • ರನಿ ಮೇಡ್ ೧೯೦೯ ರಲ್ಲಿ

'ಕಾಲೇಜ್ ಸ್ಟ್ರೀಟ್ ಬ್ರಾಂಚ್,'ಎಂದು ಹೆಸರಾದ ಒಂದು ಶಾಖೆ ಬಾಡಿಗೆ ಮನೆಯಲ್ಲಿ 'ಬ್ರೂನ್ಸ್ ವಿಕ್ ಅವೆನ್ಯೂ' ನ ಕೊನೆಯಲ್ಲಿ ತಯಾರಾಗಿ ಕಾರ್ಯವನ್ನು ಪ್ರಾರಂಭಿಸಿತು.

೬ ಹೊಸ ಶಾಖೆಗಳು ಟೊರಾಂಟೋ ನಗರದಲ್ಲಿ ಹುಟ್ಟಿಕೊಂಡವು. ಅರ್ಲ್ಸ್ ಕೋರ್ಟ್ (೧೯೨೧), ಡಫರಿನ್ ಸ್ಟ್ರೀಟ್ ಸೇಂಟ್ ಕ್ಲೇರ್), ಪೂರ್ವದಲ್ಲಿ (೧೯೨೧,ಈಗಮೇನ್ ಸ್ಟ್ರೀಟ್), ಉತ್ತರದಲ್ಲಿ (೧೯೨೩-೧೯೭೫, ನಂತರ ಸ್ಟ್ರೀಟ್ ಕ್ಲೆಮೆಂಟ್ಸ್), ಗೆರಾರ್ಡ್ (೧೯೨೪, ಈಗ ಗೆರಾರ್ಡ್ ಆಶ್ ಡಲೆ), ಡೌನ್ ಟೌನ್ (೧೯೨೭-೧೯೬೫), ಮತ್ತು ಡಾನ್ ಫೋರ್ತ್ ಹ್ (೧೯೨೯, ಈಗ ಪೇಪ್/ಡಾನ್ ಫೋರ್ಥ್).

೨೦೧೩ ನ ಮಾರ್ಚ್ ೧೧ ರಲ್ಲಿ

ಬದಲಾಯಿಸಿ

ಹಳೆಯ 'ಮೌಂಟ್ ಡೆನ್ನಿಸ್ ಶಾಖೆ' ಹೊಸ ಹೊಸದಾಗಿ ಮತ್ತೆ ಆರಂಭವಾಯಿತು.'ಆಲ್ಬಿಯನ್ ಶಾಖೆ'ಯಲ್ಲಿ ಹೊಸ ಕಾರ್ಯಕ್ರಮಗಳನ್ನು ರೂಪಿಸಲು, ಸಾರ್ವಜನಿಕ ಸಭೆಗಳನ್ನು ಆಯೊಜಿಸಲಾಗುತ್ತಿತ್ತು. ಹಾಗೆಯೇ 'ನಾರ್ದರ್ನ್ ಡಿಸ್ಟ್ರಿಕ್ಟ್ ಬ್ರಾಂಚ್' ನ ಹೊರಭಾಗವನ್ನು ನವೀಕರಿಸಲು ಪ್ರಯತ್ನಗಳು ನಡೆದವು. 'ಬೇ ವ್ಯೂ ಬ್ರಾಂಚ್' ನ್ನು ಮೊದಲಿದ್ದ ಜಾಗದಿಂದ ಬೇರೆಕಡೆ ಸಾಗಿಸಲು ಏರ್ಪಾಡುಗಳು ನಡೆದವು.

'ಈಡನ್ ಸ್ಮಿತ್' ಕಟ್ಟಡ ನಿರ್ಮಾತೃ

ಬದಲಾಯಿಸಿ

'ಇಂಗ್ಲೆಂಡ್' ನಲ್ಲಿ ಜನಿಸಿದ (೧೮೫೮, ೧೦, ಅಕ್ಟೋಬರ್) ಈಡನ್ ಸ್ಮಿತ್,[] ಕಟ್ಟಡ ನಿರ್ಮಾಣ ಕಾರ್ಯದಲ್ಲಿ ನಿಷ್ಣಾತರೆಂದು ಆ ಕಾಲದಲ್ಲಿ ಹೆಸರು ಮಾಡಿದ್ದರು. ೧೮೮೮ ರಲ್ಲಿ ಟೊರಾಂಟೋಗೆ ತಮ್ಮ ಪ್ರೀತಿಯ ಮಡದಿ, ಆನ್ನಿಯ ಜೊತೆಗೆ ಪಾದಾರ್ಪಣೆ ಮಾಡಿದರು. ೧೮೯೨ ರಲ್ಲಿ ತಮ್ಮ ಕಟ್ಟಡ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಿದರು. ಟೊರಾಂಟೋ ನಗರದ ಅನೇಕ ಸುಪ್ರಸಿದ್ಧ ಭವನಗಳು, ಚರ್ಚ್ ಗಳು, ಅವರಿಂದ ನಿರ್ಮಿಸಲ್ಪಟ್ಟಿವೆ. ಹೆಚ್ಚಾಗಿ ಅವರ ಕಾರ್ಯ ವಾಸದ ಮನೆಗಳ ನಿರ್ಮಾಣದ ಕಡೆ ಹೆಚ್ಚು ಒತ್ತು ಕೊಟ್ಟಿವೆ. ೧೯೧೩ ರಲ್ಲಿ ರಿವರ್ಡೇಲ್ ಕೋರ್ಟ್ಸ್ ನಿರ್ಮಾಣ ಕಾರ್ಯ, ಎಲ್ಲರ ಗಮನ ಸೆಳೆಯಿತು.

ಇತಿಹಾಸ

ಬದಲಾಯಿಸಿ

ಮುಂದೆ ಕಾಲಾಂತರದಲ್ಲಿ ಇದೇ ಸೊಸೈಟಿಯ ಹೆಸರು ಬೇನ್ ಕೋ. ಆಪರೇಟೀವ್ ಸೊಸೈಟಿಎಂಬ ಹೆಸರಿನಿಂದ ಪರಿವರ್ತಿತವಾಯಿತು. ಹೀಗೆಯೇ ಅವರು ನಿರ್ಮಿಸಿದ ಕಟ್ಟಡಗಳು ಹಲವಾರು. ಸ್ಟುಡಿಯೋ ಬಿಲ್ಡಿಂಗ್, ಮನೆಯಲ್ಲೇ ಏರ್ಪಡಿಸಲಾದ ಸ್ಟುಡಿಯೋನಲ್ಲಿ ಅನೇಕ ಕಲಾವಿದರು ತರಭೇತಿಗೊಂಡರು. (೭ ಜನರ ಜೊತೆಗೂಡಿ ಮಾಡಿದ ಕಾರ್ಯಗಳು) ಅದರಲ್ಲಿ ಬೆಟ್ಟದ ಮೇಲೆ ನಿರ್ಮಿಸಿದ ಚರ್ಚ್ ಮತ್ತು 'ಸೆಂಟ್. ಆಂಗ್ಲಿಕನ್ ಚರ್ಚ್' ಪ್ರಮುಖವಾದವುಗಳು. 'ಗ್ರೇಸ್ ಚರ್ಚ್', ೨ ನೆಯ ವಿಶ್ವಯುದ್ಧದ ಸಮಯದಲ್ಲಿ '೩ ಕಾರ್ನಗಿ ಲೈಬ್ರರಿ'ಗಳನ್ನು ನಿರ್ಮಿಸಿದರು. ಅವು 'ಟೊರಾಂಟೊ ಪಬ್ಲಿಕ್ ಲೈಬ್ರರಿಗಳ ಒಕ್ಕೂಟ' ಕ್ಕೆ ಸೇರಿವೆ. ದ ಹೈ ಪಾರ್ಕ್, ವಿಚ್ವುಡ್, ಮತ್ತು ಬೀಚ್ ಬ್ರಾಂಚ್, ಗಳು. 'ನ್ಯೂಯಾರ್ಕ್ ನ ಕಾರ್ನಗಿ ಕಾರ್ಪೊರೇಶನ್ ಸಹಾಯಧನ' ೫೦ ಸಾವಿರ ಡಾಲರ್ ದಿಂದ ಕಟ್ಟಿದ ೩ ಲೈಬ್ರರಿಗಳಲ್ಲಿ 'ಹೈಪಾರ್ಕ್ ಶಾಖೆ', ಎರಡನೆಯದು. ಅಲ್ಲಿನ ಮುಖ್ಯ ಲೈಬ್ರರಿ ಅಧಿಕಾರಿ, ಮಿ. ಜಾರ್ಜ್ ಲಾಕ್, 'ಈಡನ್ ಸ್ಮಿತ್ ಅಂಡ್ ಸನ್ ಕಂಪೆನಿ'ಯ ಜೊತೆ ಸೇರಿ '೬ನೇ ಎಡ್ವರ್ಡ್ ಕಾಲೆಜಿಯೇಟ್ ಗ್ರಾಮರ್ ಸ್ಕೂಲ್ ಆರ್ಕಿಟೆಕ್ಚರ್' ನ ಮಾದರಿಯ ಪುನರ್ನಿರ್ಮಾಣ ಕಾರ್ಯದಲ್ಲಿ ಸಿದ್ಧಿ ಪಡೆದರು.

'ಹೈಪಾರ್ಕ್ ಶಾಖೆಯ ಪುಸ್ತಕಾಲಯ'

ಬದಲಾಯಿಸಿ

೩ ಶಾಖೆಗಳೂ ಒಂದೇ ವರ್ಷದಲ್ಲಿ ತಯಾರಾದವು ೧೯೧೬ ನೇ ಇಸವಿ ಅಕ್ಟೋಬರ್ ೩೧ ರಂದು ಶೇಕ್ಸ್ ಪಿಯರ್ ಮಹಾಕವಿಯ ೩೦೦ನೇ ಹುಟ್ಟುಹಬ್ಬವನ್ನು ಆಚರಿಸುವ ಉತ್ಸವದಂದು, ಹೈ ಪಾರ್ಕ್ ಶಾಖೆ ಆರಂಭಗೊಂಡಿತು. ಇದರ ವಾಸ್ತುಶಿಲ್ಪ, 'ವಿಶ್ವ ಸಂಸ್ಥೆಯ ಹೆರಿಟೇಜ್ ಆಸ್ತಿಯ ದಾಖಲಾತಿ' ಯಲ್ಲಿ ದಾಕಲಾಗಿದೆ. ಹೆಚ್ಚುವರಿ ದುರಸ್ತಿಕಾರ್ಯ ಮತ್ತು ಸೇರ್ಪಡೆಗಳು ಕ್ರಮೇಣವಾಗಿ ೧೯೭೯ ಮತ್ತು ೧೯೯೦ ರಲ್ಲಿ ಸಂಪನ್ನಗೊಂಡವು.

ಅತಿ ಹೆಚ್ಚು ಗೃಹನಿರ್ಮಾಣ ಕಾರ್ಯ

ಬದಲಾಯಿಸಿ

'ಸ್ಮಿತ್' ಟೊರಾಂಟೋನಲ್ಲಿ ಅನೇಕ ಗೃಹವಸತಿ ನಿರ್ಮಾಣದಲ್ಲಿ ತಮ್ಮ ಆಸಕ್ತಿಯನ್ನು ಪ್ರದರ್ಶಿಸಿದರು. 'ವಿಚ್ವುಡ್ ಪಾರ್ಕ್, ಸೇರಿದಂತೆ, ಒಟ್ಟಾರೆ ೨,೫೦೦ ಗೃಹಗಳನಿರ್ಮಾಣ ಮಾಡಿದರೆಂದು ತಿಳಿದು ಬಂದಿದೆ. ಇಂಗ್ಲೀಷ್ ಕಲೆ 'ಅಂದ-ಚೆಂದಭರಿತ ವೈಭವ ಶಿಲ್ಪಗಳು' ಎಲ್ಲೆಲ್ಲೂ ಕಾಣಸಿಗುತ್ತವೆ. ಕೆಲವಂತೂ ಪಕ್ಕಾ 'ಇಂಗ್ಲೀಷ್ ಕಾಟೇಜ್ ಶೈಲಿ'ಯಲ್ಲೇ ಇವೆ. ಮೊನಚಾದ ಚಿಮಿನಿಗಳು, ಮೇಲ್ಛಾವಣಿಗಳು, ಚಿಕ್ಕ-ಚಿಕ್ಕ ಪೇನಲ್ ಕಿಟಕಿಗಳು, ಅವುಗಳ ನಮೂನೆಗಳನ್ನು 'ರಾನ್ಸೆ ವೆಲ್ಸ್' ವಲಯದಲ್ಲಿ, 'ಹೈಪಾರ್ಕ್ ಪಾಳ್ಯ', ಮತ್ತು ೯೪-೯೬, 'ಬೊಸ್ಟೆಡ್ ಅವೆನ್ಯೂ ', ೨೬೭, ೨೭೨, ೨೭೬, ೨೯೫, ಮತ್ತು ೩೦೩ 'ಇಂಡಿಯನ್ ರೋಡ್ ಜಿಲ್ಲೆ' ಯಲ್ಲೂ ಕಾಣಬಹುದು.

ನಿವೃತ್ತಿ

ಬದಲಾಯಿಸಿ

'ಈಡನ್ ಸ್ಮಿತ್ ಆಂಡ್ ಕಂಪೆನಿ'ಯ ರುವಾರಿ, ಸ್ಮಿತ್ ತಮ್ಮ ಕಿರಿಯ ಮಗ,(೧೮೯೦-೧೯೭೨) ರಾಲ್ಫ್ ಈಡನ್ ಸ್ಮಿತ್ ಜೊತೆಗೂಡಿ ಟೊರಾಂಟೋನಗರದ ಬಹುಪಾಲು ಕಟ್ಟಡಗಳ ನಿರ್ಮಾಣ ಕಾರ್ಯವನ್ನು ಯಶಸ್ವಿಯಾಗಿ ಮಾಡಿ ಮುಗಿಸಿದರು. 'ಈಡನ್ ಸ್ಮಿತ್' ೧೯೨೫ ರಲ್ಲಿ ಸೇವಾ ನಿವೃತ್ತರಾದರು. ಮರಣಾನಂತರ ಅವರ ಭೂತಪೂರ್ವ ದೇಹವನ್ನು ಗೆಲ್ಫ್, ನ, ವುಡ್ಲಾನ್ ಸ್ಮಶಾನ ದಲ್ಲಿ ಮಣ್ಣು ಮಾಡಲಾಯಿತು.

ನೂರನೆ ವರ್ಷದ ಆಚರಣೆ

ಬದಲಾಯಿಸಿ

'ಹೈಪಾರ್ಕ್ ಶಾಖೆಯ ಪಬ್ಲಿಕ್ ಲೈಬ್ರರಿ' ಈಗ ವರ್ಷ ೨೦೧೨. ಇನ್ನು ೩ ವರ್ಷಗಳಲ್ಲಿ 'ನೂರನೆ ವರ್ಷದ ಹುಟ್ಟು ಹಬ್ಬದ ಸಂಭ್ರಮ'ದಲ್ಲಿದೆ. ಪ್ರಸ್ತುತ ಇಲ್ಲಿ ಶೇಖರಿಸಲ್ಪಟ್ಟಿರುವ ಪುಸ್ತಕಗಳ ಹಾಗೂ ಓದುವ ಪರಿಕರಗಳ ಸಂಖ್ಯೆ: ೫೨,೭೩೧. ಅತ್ಯುತ್ತಮ ಓದುವ ಸಾಮಗ್ರಿಗಳು, ಕಂಪ್ಯೂಟರ್ ಸೇವೆ, ಹಿರಿಯ ಲೈಬ್ರರಿ ಅಧಿಕಾರಿಯ ಅತ್ಯುತ್ತಮ ಸಲಹೆ, ಸಹಕಾರಗಳು, ಹೊಸಬರಿಗೆ ಸಹಾಯ, ಮೇಲಾಗಿ ಓದಲು ಬರುವ ಜವಾಬ್ದಾರಿ ನಾಗರೀಕರಿಗೆ ಒದಗಿಸುವ ಸಹಕಾರಗಳು, ಟೊರಾಂಟೋ ಪಬ್ಲಿಕ್ ಲೈಬ್ರರಿಯ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸಿವೆ.

ಲೈಬ್ರರಿಯ ಸುಮಾರು ೧೦ ದಶಕಗಳ ಇತಿಹಾಸ

ಬದಲಾಯಿಸಿ
  • ೧೯೧೬ ಅಕ್ಟೋಬರ್ ೧೬ ರಂದು 'ಪುಸ್ತಕಾಲಯದ ಶುಭಾರಂಭ'. ಈ ಪುಸ್ತಕಾಲಯ 'ವಿಚ್ವುಡ್', ಮತ್ತು 'ಬೀಚಸ್ ಬ್ರಾಂಚ್' ತರಹವೇ ಇರುವ, 'ಹೈಪಾರ್ಕ್ ಲೈಬ್ರರಿ' ಅಸ್ತಿತ್ವಕ್ಕೆ ಬಂತು.
  • ೧೯೭೯ ಪುನರುದ್ಧಾರ ಕಾರ್ಯ ಜರುಗಿತು. ಮೊಫ್ಫಟ್, ಮೊಫ್ಫಟ್-ಕಿನೊಶಿಟ, ಕಟ್ಟಡ ನಿರ್ಮಾಪಕರು, ಹಾಗೂ ಪ್ಲಾನರ್ಸ್, ಪುನಃ ಲೈಬ್ರರಿಯನ್ನು ಶುರು ಮಾಡಿದರು. ೧೧ ನೇ ಜೂನ್ ನಲ್ಲಿ 'ಟೊರಾಂಟೋ ಇತಿಹಾಸ ಸಮಿತಿಯ ಹೆರಿಟೇಜ್ ಲೆಖ್ಖಪತ್ರಗಳ ಇಲಾಖೆ', ಸಿಟಿ ಕೌನ್ಸಿಲ್, ಅನುಮೋದಿಸಿ ಸ್ವೀಕರಿಸಿತು.
  • ೧೯೯೦ ಕಟ್ಟಡ ನಿರ್ಮಾಪಕ 'ಜೋಸೆಫ್ ಬೊಗ್ಡಾನ್' ಅವರಿಂದ ದುರಸ್ತಿ ಕಾರ್ಯ ಜರುಗಿತು. ನವೆಂಬರ್ ೧೨ ಕ್ಕೆ ಮುಚ್ಚಲಾಯಿತು.
  • ೧೯೯೧ ನವೆಂಬರ್ ೯ ಕ್ಕೆ ಪುನಃ ತೆರೆದರು.
  • ೨೦೦೪ ರಿಪೇರಿ ಕೆಲಸ ನಡೆಯಿತು. ನವೆಂಬರ್ ೧ ರಿಂದ ೨೧ ರವರೆಗೆ ಮುಚ್ಚಲಾಗಿತ್ತು.
  • ೨೦೦೭ ಜನವರಿ ೮ ರಿಂದ ಪ್ರತಿವಾರ ಕೆಲಸದ ಕಾಲಾವಧಿಯನ್ನು ೫೮ ರಿಂದ ೬೨ ಗಂಟೆಗಳಿಗೆ ಏರಿಸಲಾಯಿತು.

ಮುಂದೆ ಹಾಕಿಕೊಂಡಿರುವ ಯೋಜನೆಗಳು

ಬದಲಾಯಿಸಿ
  • Summer Reading Club Launch : Tue, July 10-2.00 P.M-3.15 P.M
  • Summer Reading Club Meets Again : Tue, July 17-2.00-3.00 P.M
  • Summer Reading Club Meets Yet Again :Tue, July 24-2.00 P.M-3.00 P.M

ಲೈಬ್ರರಿಯ ಕೆಲಸದ ವೇಳೆ

ಬದಲಾಯಿಸಿ
  • ಸೋಮವಾರ- ೯.೦೦-೮-೩೦ ರಾತ್ರಿ
  • ಮಂಗಳವಾರ- ೯.೦೦-೮.೩೦ ರಾತ್ರಿ
  • ಬುಧವಾರ- ೯.೦೦-೮.೩೦ ರಾತ್ರಿ
  • ಗುರುವಾರ- ೯.೦೦-೮.೩೦ ರಾತ್ರಿ
  • ಶುಕ್ರವಾರ- ೯.೦೦-೫.೦೦ ಸಾಯಂಕಾಲ
  • ಶನಿವಾರ- ೯.೦೦-೫.೦೦ ಸಾಯಂಕಾಲ
  • ಭಾನುವಾರ- ರಜೆ.

ಈ ಪುಸ್ತಕಾಲಯಕ್ಕೆ ತಲುಪಲು

ಬದಲಾಯಿಸಿ

ಡಂಡಾಸ್ ಸ್ಟ್ರೀಟ್ (ವೆಸ್ಟ್) ನಿಂದ 'ಸ್ತ್ರೀಟ್ ಕಾರ್ ನಲ್ಲಿ ನೇರವಾಗಿ ಪೂರ್ವದ ಕಡೆ ಪ್ರಯಾಣಿಸಿದರೆ, ಫರ್ನ್ ಸ್ಟ್ರೀಟ್ ಸ್ಟಾಪ್ ನಲ್ಲಿಳಿದು ಲೈಬ್ರರಿಯ ಒಳಗೆ ಧಾವಿಸಬಹುದು. ಹೈ ಪಾರ್ಕ್ ಇಲ್ಲಿಗೆ ಬಹಳ ಹತ್ತಿರ.

ಉಲ್ಲೇಖಗಳು

ಬದಲಾಯಿಸಿ
  1. War of 1812: When Toronto was under attack
  2. Eden Smith, noted Architect of Toronto