ಟುಂಗ್ರಿಂಬಾಯ್
ಟುಂಗ್ರಿಂಬಾಯ್ ಕಿಣ್ವಿಸಿದ ಸೋಯಾ ಅವರೆಯ ಆಹಾರವಾಗಿದೆ. ಇದು ಈಶಾನ್ಯ ಭಾರತದ ಮೇಘಾಲಯ ರಾಜ್ಯದ ಖಾಸಿ ಮತ್ತು ಜೈನ್ಟಿಯಾ ಬುಡಕಟ್ಟುಗಳಿಗೆ ಸ್ಥಳೀಯವಾಗಿದೆ.[೧]
ಸೋಯಾ ಅವರೆಗಳನ್ನು ತೊಳೆದು ಮೃದು ಆಗುವವರೆಗೆ ಬೇಯಿಸಲಾಗುತ್ತದೆ. ಬೆಂದ ನಂತರ ಹೆಚ್ಚುವರಿ ನೀರನ್ನು ಬಸಿದು ತಣ್ಣಗಾಗಲು ಬಿಡಲಾಗುತ್ತದೆ. ನಂತರ ಅವರೆಗಳನ್ನು ಸ್ಲ್ಯಾಮೆಟ್ ಎಲೆಗಳ ಪದರವಿರುವ ಬಿದಿರಿನ ಬುಟ್ಟಿಗೆ ವರ್ಗಾಯಿಸಿ ಎಲೆಗಳನ್ನು ಅವರೆಗಳ ಮೇಲೆ ಮುಚ್ಚಿ ಅದರ ಮೇಲೆ ಬಿಸಿ ಇದ್ದಲನ್ನು ಇಟ್ಟು ಅದರ ಮೇಲೆ ಎಲೆಗಳ ಮತ್ತೊಂದು ಪದರ ಹಾಕಿ ಬುಟ್ಟಿಯನ್ನು ಒಂದು ಸೆಣಬಿನ ಚೀಲದಲ್ಲಿ ಇಟ್ಟು ಅಗ್ನಿಸ್ಥಳದ ಪಕ್ಕ ಕಿಣ್ವಿಸಲು ೩-೪ ದಿನಗಳು ಬಿಡಲಾಗುತ್ತದೆ.
ಕಿಣ್ವಿಸಿದ ಅವರೆಗಳನ್ನು ಬಹುತೇಕ್ ಪೇಸ್ಟ್ ಆಗುವವರೆಗೆ ಜಜ್ಜಿ ಟುಂಗ್ರಿಂಬಾಯ್‍ನ್ನು ಸಾಮಾನ್ಯವಾಗಿ ತಯಾರಿಸಲಾಗುತ್ತದೆ. ನಂತರ ಇದಕ್ಕೆ ಈರುಳ್ಳಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಕರಿ ಎಳ್ಳಿನ ಪೇಸ್ಟ್, ಸುಗಂಧ ವಸ್ತುಗಳು ಮತ್ತು ಹಂದಿಮಾಂಸವನ್ನು ಸೇರಿಸಿ ಸಾಸಿವೆ ಎಣ್ಣೆಯಲ್ಲಿ ಕರಿಯಲಾಗುತ್ತದೆ.[೨]
ಉಲ್ಲೇಖಗಳು
ಬದಲಾಯಿಸಿ- ↑ O'Yeah, Zac (1 December 2017). "Come to the table". The Hindu BusinessLine. Retrieved 21 March 2019.
- ↑ "A Mouthful of NE". Shillong Times. No. 1 September 2018. Archived from the original on 21 ಮಾರ್ಚ್ 2019. Retrieved 21 March 2019.