ಟಿ. ಕೆ. ವಿ. ದೇಶಿಕಾಚಾರ್

ತಿರುಮಲೈ ಕೃಷ್ಣಮಾಚಾರ್ಯ ವೆಂಕಟ ದೇಶಿಕಾಚಾರ್ [] (೨೧ ಜೂನ್, ೧೯೩೮-೮ ಆಗಸ್ಟ್, ೨೦೧೬) ಗೆಳೆಯರಿಗೆ ಶಿಷ್ಯರಿಗೆ ಟಿ.ಕೆ.ವಿ.ದೇಶಿಕಾಚಾರ್ ಎಂದೇ ಪ್ರಸಿದ್ಧರು. [] ಅವರೊಬ್ಬ ಯೋಗ ಗುರುಗಳು ಸುಪ್ರಸಿದ್ಧ ಯೋಗಾಚಾರ್ಯ; 'ವಿನಿಯೋಗ' ಪದ್ದತಿಯನ್ನು ಪ್ರಸಿದ್ಧಿಪಡಿಸಿದರು.

ಟಿ.ಕೆ.ವಿ.ದೇಶಿಕಾಚಾರ್
Born(೧೯೩೮-೦೬-೨೧)೨೧ ಜೂನ್ ೧೯೩೮
Died8 August 2016(2016-08-08) (aged 78)
Occupation(s)ಯೋಗ ಗುರುಗಳು, ಬರಹಗಾರ
Known forವಿನಿಯೋಗ
Spouseಮೇನಕಾ ದೇಶಿಕಾಚಾರ್
Childrenಭೂಷಣ್ (೧೯೭೦), ಕೌಸ್ತುಭ್ (೧೯೭೫) ಮತ್ತು ಮಗಳು ಮೇನಕ (೧೯೭೮)

ಜನನ ಹಾಗೂ ವಿದ್ಯಾಭ್ಯಾಸ

ಬದಲಾಯಿಸಿ

ಟಿ. ಕೆ. ವಿ. ದೇಶಿಕಾಚಾರ್, ಮೈಸೂರಿನಲ್ಲಿ ಜನಿಸಿದರು. ಆದರೆ ತಂದೆಯವರು ಬೋಧಿಸುತ್ತಿದ್ದ ಯೋಗಶಾಲೆಯನ್ನು ಮಹಾರಾಜ ಕೃಷ್ಣರಾಜ ಒಡೆಯರು ಮುಚ್ಚಿದ ಮೇಲೆ, ಸ್ವಲ್ಪದಿನ ಬೆಂಗಳೂರಿಗೆ ಹೋಗಿ ನೆಲೆಸಿದರು. ಮುಂದೆ, ೧೯೬೦ ರಲ್ಲಿ ಮದ್ರಾಸ್ ನಗರಕ್ಕೆ ಹೋಗಬೇಕಾಗಿಬಂತು. ದೇಶಿಕಾಚಾರ್ ಅವರಿಗೆ ಬಾಲ್ಯದಲ್ಲಿ ಯೋಗದಬಗ್ಗೆ ಆಸಕ್ತಿಯಿರಲಿಲ್ಲ. ಕೃಷ್ಣಮಾಚಾರ್ಯರಿಗೆ ಮಗನಿಗೆ ಆಧುನಿಕ ಪದ್ಧತಿಯಲ್ಲಿ ವಿದ್ಯಾಭ್ಯಾಸ ಕೊಡುವ ಮನಸ್ಸು. ದೇಶಿಕಾಚಾರ್ ತಂದೆಯವರ ಯೋಗಶಿಕ್ಷಣದ ತರಬೇತಿಯ ಕಾರ್ಯಕ್ರಮಗಳ ಬಗ್ಗೆ ತಿಳಿದಿದ್ದರು. ಸಿವಿಲ್ ಇಂಜಿನಿಯರಿಂಗ್ ವಿಷಯದಲ್ಲಿ ಪದವಿಗಳಿಸಿದದ ಬಳಿಕ ಉತ್ತರ ಭಾರತಕ್ಕೆ ನೌಕರಿಗಾಗಿ ಹೋದರು. ೧೯೬೧ ಉತ್ತರ ಭಾರತದಿಂದ ಚೆನ್ನೈಗೆ ವಾಪಸ್ ಬಂದರು.

ಗುರುಗಳಬಗ್ಗೆ ಅಪಾರ ನಿಷ್ಠೆ ಗೌರವ

ಬದಲಾಯಿಸಿ

ಒಂದುದಿನ ಬೆಳಿಗ್ಯೆ ೬ ಗಂಟೆಗೆ ಒಬ್ಬ ವಿದೇಶಿ ಮಹಿಳೆ ತಮ್ಮ ಮನೆಯ ಬಾಗಿಲು ತಟ್ಟಿ, "ಪ್ರೊಫೆಸರ್ ಇದ್ದಾರೆಯೇ ? ನೋಡಬೇಕು" ಎಂದರು. ಬಾಗಿಲಬಳಿ ನಿಂತಿರುವಾಗಲೇ ಆಕೆ ಮನೆಯೊಳಗೆ ಓಡಿ, ಆಗ ತಾನೆ ಎದ್ದು ಬರುತ್ತಿದ್ದ ತಮ್ಮ ತಂದೆಯವರ ಕೈಹಿಡಿದು ಅವರನ್ನು ತಬ್ಬಿಕೊಂಡು, ಪ್ರೀತಿ, ಗೌರವಗಳಿಂದ ಮಾತನಾಡಿಸಿದರು. ಈ ದೃಷ್ಯವನ್ನು ನೋಡಿ ದೇಶಿಕಾಚಾರ್ಯರು ಸ್ಥಬ್ಧರಾದರು. ತಾವು ಪಾಶ್ಚಿಮಾತ್ಯ ಪದ್ಧತಿಯಲ್ಲಿ ಓದಿಕೊಂಡವನಾದರೂ, ಇಳಿವಯಸ್ಸಿನ, ಹಳೆಯ ಸಂಪ್ರದಾಯದ ತಮ್ಮ ತಂದೆಯವರನ್ನು ತಬ್ಬಿಕೊಂಡು ಮಾತಾಡಿಸುವ ದೃಶ್ಯ, ಅವರಿಗೆ ಅವರ ಜೀವನದ ಅಸಾಧಾರಣ ಸನ್ನಿವೇಶವಾಗಿತ್ತು. ಅಂದಿನಿಂದಲೇ ತಂದೆಯವರ ಯೋಗವಿದ್ಯೆಯ ಪ್ರಭಾವವನ್ನು ಕಣ್ಣಾರೆ ಕಂಡುಹಿಡಿಯುವ ಪ್ರಯತ್ನಮಾಡಿದರು. ತಮ್ಮ ಇಂಜಿನಿಯರ್ ನೌಕರಿಗೆ ರಾಜೀನಾಮೆ ಕೊಟ್ಟು, ತಂದೆಯವರ ಯೋಗಾಭ್ಯಾಸವನ್ನು ಅವರ ಜೊತೆಯಲ್ಲೇ ಇದ್ದು ಕಲಿಯಲು ಆರಂಭಿಸಿದರು.

ಯೋಗಮಂದಿರದ ಸ್ಥಾಪನೆ.(A yoga therapy clinic and yoga center)

ಬದಲಾಯಿಸಿ

೩ ದಶಕಗಳ ಕಾಲ ತಂದೆಯವರ ಜೊತೆಯಲ್ಲಿ ಯೋಗಾಭ್ಯಾಸ ಮಾಡಿದ ತರುವಾಯ ೧೯೭೬ ರಲ್ಲಿ ಮದ್ರಾಸ್ ನಲ್ಲಿ "The Krishnamacharya Yoga Mandiram" ಸ್ಥಾಪಿಸಿದರು. ಅಲ್ಲಿ ಯೋಗವಿದ್ಯೆಯನ್ನು ಕ್ರಮವಾಗಿ ಕಲಿಸುವುದರ ಜೊತೆಗೆ ಮಂತ್ರೋಚ್ಚಾರಣೆಯನ್ನೂ ಅಭ್ಯಾಸಮಾಡುವ ಕ್ರಮವನ್ನು ಉತ್ತಮಪಡಿಸಿದರು. ದೇಶವಿದೇಶಗಳಿಂದ ಬಂದ ವಿದ್ಯಾರ್ಥಿಗಳ ವಿಚಾರಿಸಿ ೧೯೬೦-೭೦ ರ ವರೆಗೆ ವಿದೇಶಗಳಿಗೂ ಹೋಗಿ ಅಲ್ಲಿ ಯೋಗ ವಿದ್ಯೆಯ ಪ್ರಚಾರ ಮಾಡಿದರು. ಹಲವಾರು ಪುಸ್ತಕಗಳನ್ನು ಪ್ರಕಟಿಸಿದ್ದಾರೆ ೧೯೯೫ ರಲ್ಲಿ The Heart of Yoga ತಮ್ಮ ಅನುಸಂಧಾನ ಮಾಡಿದರು. ೩೦ ವರ್ಷಗಳಲ್ಲಿ ಯೋಗವನ್ನು ಮೈಗೂಡಿಸಿಕೊಂಡರು. ಹಲವಾರು ಕಾಯಿಲೆಗಳಿಗೆ ಅದನ್ನು ಹೇಗೆ ಬಳಸಬಹುದೆಂದು 'ವಿನಿಯೋಗ' ಅವರು ಕಂಡುಕೊಂಡ ಪದ್ಧತಿ. ಇದು ಪತಂಜಲಿ ಮಹರ್ಷಿಯವರ ಯೋಗಸೂತ್ರದ ಒಂದು ಭಾಗ. ಸಂಪೂರ್ಣ ಯೋಗದ ಪರಿಧಿಯಲ್ಲಿ ಎಲ್ಲಾ ತತ್ವಗಳನ್ನು ಒಳಗೊಂಡಿದೆ.

ಯೋಗದ ಬಗ್ಗೆ ವಿವಿಧ ವ್ಯಾಖ್ಯಾನಗಳು

ಬದಲಾಯಿಸಿ
  • ಯೋಗ ಪದದ ಮೊದಲ ಉಲ್ಲೇಖ ಕಾಣಸಿಗುವುದು ಕಠೋಪನಿಷತ್ತಿನಲ್ಲಿ. ಅದರಲ್ಲಿ ಮನಸ್ಸು ಹಾಗೂ ಇಂದ್ರಿಯಗಳ ನಿಯಂತ್ರಿಸಿ ಉತ್ತುಂಗ ಸ್ಥಿತಿಗೆ ತಲುಪುವ ಬಗೆಯನ್ನು ಉಲ್ಲೇಖಿಸಲಾಗಿದೆ. ಉಪನಿಷತ್ತುಗಳ ನಂತರ ಯೋಗ ಪರಿಕಲ್ಪನೆಯ ಪ್ರಮುಖ ಆಕರ ಗ್ರಂಥಗಳೆಂದರೆ ಭಗವದ್ಗೀತೆ ಹಾಗೂ ಪತಂಜಲಿಯ ಯೋಗಸೂತ್ರಗಳು.
  • ಯೋಗ ತತ್ತ್ವವನ್ನು ಔಪಚಾರಿಕವಾಗಿ ಪ್ರತಿಷ್ಠಾಪಿಸಿದ ಶ್ರೇಯ ಪತಂಜಲಿ ಮುನಿಗೆ ಸಲ್ಲುತ್ತದೆ. ತಮ್ಮ ಎರಡನೇ ಸೂತ್ರದಲ್ಲಿ “ಯೋಗಃ ಚಿತ್ತವೃತ್ತಿ ನಿರೋಧಃ” ಎನ್ನುವ ಮೂಲಕ ಯೋಗದ ನೇರ – ಸರಳ ವ್ಯಾಖ್ಯಾನ ನೀಡುತ್ತಾರೆ ಪತಂಜಲಿ. ಮನಸ್ಸಿನ ಚಟುವಟಿಕೆಗಳನ್ನು ನಿರೋಧಿಸುವುದೇ ಯೋಗದ ಉದ್ದೇಶ. ಸ್ವಾಮಿ ವಿವೇಕಾನಂದರು ಈ ಸೂತ್ರವನ್ನು “ಯೋಗವೆಂದರೆ ಮನಸ್ಸಿನ ಅಂತರಾಳವು ವಿವಿಧ ರೂಪಗಳನ್ನು ತಳೆಯದಂತೆ ನಿಗ್ರಹಿಸುವುದು” ಎಂದು ವ್ಯಾಖ್ಯಾನಿಸಿದ್ದಾರೆ.
  • ಭಗವದ್ಗೀತೆಯು ಯೋಗವನ್ನು ಅತ್ಯಂತ ವಿಸ್ತøತಾರ್ಥದಲ್ಲಿ ಬಳಸುತ್ತದೆ. ಮುಖ್ಯವಾಗಿ ಇದು ಕರ್ಮ, ಭಕ್ತಿ, ಜ್ಞಾನಗಳೆಂಬ ಯೋಗದ ಮೂರು ಪ್ರಧಾನ ವಿಧಗಳನ್ನು ಪರಿಚಯಿಸುತ್ತದೆ. ಗೀತೆಯ ಪ್ರತಿ ಅಧ್ಯಾಯವನ್ನೂ ಒಂದೊಂದು ಯೋಗವೆಂದು ಗುರುತಿಸಲಾಗಿದೆ. ವಿದ್ವಾಂಸರು ಅದರ ಮೊದಲ ಆರು ಅಧ್ಯಾಯಗಳನ್ನು ಕರ್ಮ ಯೋಗವೆಂದೂ ನಡುವಿನ ಆರು ಅಧ್ಯಾಯಗಳನ್ನು ಭಕ್ತಿ ಯೋಗವೆಂದೂ ಕೊನೆಯ ಆರನ್ನು ಜ್ಞಾನ ಯೋಗವೆಂದೂ ಗುರುತಿಸುತ್ತಾರೆ.

`ಹಠಯೋಗ ಪ್ರದೀಪಿಕಾ’ ಗ್ರಂಥ

ಬದಲಾಯಿಸಿ
  • ಹಠ ಯೋಗವು ಭೌತಿಕ ಶರೀರವನ್ನು ಶುದ್ಧೀಕರಿಸಿ, ತನ್ಮೂಲಕ ಮನಸ್ಸು ಹಾಗೂ ಚೈತನ್ಯವನ್ನು ಶುದ್ಧೀಕರಿಸುವ ಪ್ರಕ್ರಿಯೆಗೆ ಆದ್ಯತೆ ನೀಡುವಂಥದ್ದು. ಇಂದಿನ ಯೋಗಾಸನಗಳ ಬಹುತೇಕ ಭಂಗಿಗಳು ಇದನ್ನೇ ಆಧರಿಸಿ ವಿಕಸನಗೊಂಡಂಥವು. ಹದಿನೈದನೇ ಶತಮಾನದಲ್ಲಿ ಆಗಿಹೋದ ಯೋಗಿ ಸ್ವಾತ್ಮಾರಾಮರು ಈ ಪದ್ಧತಿಯ ವಿವರಗಳುಳ್ಳ ಹಠ ಯೋಗ ಪ್ರದೀಪಿಕಾ ಎಂಬ ಗ್ರಂಥವನ್ನು ಸಂಪಾದಿಸಿ ಪ್ರಚುರಪಡಿಸಿದರು.
  • ಹೀಗೆ ಹಲವು ವ್ಯಾಖ್ಯಾನಗಳುಳ್ಳ ಯೋಗವು ದೊಡ್ಡ ಮಟ್ಟದಲ್ಲಿ ಜಗತ್ತನ್ನು ತಲುಪಿದ್ದು ಸ್ವಾಮಿ ವಿವೇಕಾನಂದರ ಮೂಲಕ. ಹದಿನೆಂಟನೇ ಶತಮಾನದಲ್ಲಿ ಸರ್ವಧರ್ಮ ಸಮ್ಮೇಳನಕ್ಕೆಂದು ಷಿಕಾಗೋಗೆ ತೆರಳಿದ ಸ್ವಾಮೀಜಿ, ನಂತರದ ದಿನಗಳಲ್ಲಿ ಭಾರತೀಯ ವೇದಾಂತ – ತತ್ತ್ವಜ್ಞಾನಗಳ ಉಪನ್ಯಾಸ ಮಾಲೆಯನ್ನು ನೀಡುತ್ತ ಹಲವು ದೇಶಗಳನ್ನು ತಿರುಗಿದ್ದು ತಿಳಿದ ವಿಚಾರವೇ. ಈ ತಿರುಗಾಟದ ಸಂದರ್ಭದಲ್ಲಿ ಅವರು ಯೋಗ ದರ್ಶನದ ಬಗ್ಗೆ ನೀಡಿದ ಉಪನ್ಯಾಸಗಳು ಸುಪ್ರಸಿದ್ಧವಾಗಿದೆ.

ಮೇನಕ ಅವರ ಯೋಗದಾನ

ಬದಲಾಯಿಸಿ

ದೇಶಿಕಾಚಾರ್ ಅವರ ಪತ್ನಿ, ಮೇನಕಾದೇಶಿಕಾಚಾರ್ ಯೋಗಾರ್ಥಿಗಳಿಗೆ ಯೋಗವನ್ನು ಶ್ಲೋಕಗಳ ರೂಪದಲ್ಲಿ ಹೇಳಿಕೊಡುತ್ತಾರೆ. ಮಗ ಡಾ.ಭೂಷಣ್ ಯೋಗಮಂದಿರದ ಮುಖ್ಯ ಕಾರ್ಯಕಾರಿ.

ಯೋಗದ ವೈವಿದ್ಯಮಯ ಉಪಯೋಗಗಳು

ಬದಲಾಯಿಸಿ

ಮಕ್ಕಳ ಆರೋಗ್ಯಕ್ಕೆ ಸಂಬಂಧಿಸಿದ ಹಲವಾರು ಸಮಸ್ಯೆಗಳಿಗೆ ತಕ್ಕ ನಿವಾರಣೋಪಾಯಗಳನ್ನು ಕೊಡುವುದು.

  1. children with learning difficulties.
  2. a special two year teacher training diploma course in Yoga studies.
  3. ವೇದಮಂತ್ರಗಳನ್ನು ಶಾಸ್ತ್ರೀಯವಾಗಿ ಉಚ್ಚಾರಣೆಮಾಡುವ ಬಗ್ಗೆ ಬಹಳ ಜನ ಉತ್ಸಾಹ ತೋರಿಸಿದರು. ೧೯೯೯ ರಲ್ಲಿ ವಿಶೇಷವಾಗಿ ಪರಿಣಿತರಾದ 'ಶಿಕ್ಷಕರ ತಂಡ ವೇದವಾಣಿ ಸ್ಥಾಪನೆ'.

To view or download the article “Sound – A means beyond Asana and Pranayama” as a PDF

ವಿಶ್ವದ ಹಲವು ಭಾಗಗಳಲ್ಲಿ ಯೋಗ ಪ್ರಸಾರ

ಬದಲಾಯಿಸಿ

ವಿಶ್ವದ ಬೇರೆ ಬೇರೆ ರಾಷ್ಟ್ರಗಳಿಗೆ ಭೇಟಿನೀಡಿ, TKV Desikachar, ಒಬ್ಬ ಸಮರ್ಥ ಯೋಗ ಗುರುವೆಂದು ಹೆಸರುಗಳಿಸಿದರು. ಕೆಲವು ಅಂತಾರಾಷ್ಟ್ರೀಯ ಸಮ್ಮೇಳನ/ಕಮ್ಮಟಗಳಲ್ಲಿ ಭಾಗವಹಿಸಿ ತಂದೆ, ಕೃಷ್ಣಮಾಚಾರ್ಯರ ಹೆಸರನ್ನು ಪ್ರಸಿದ್ಧಿಪಡಿಸಿದರು. ಇವುಗಳ ಆಧಾರದಮೇಲೆ ಪುಸ್ತಕಗಳನ್ನು ಬರೆದರು. ಬೇರೆದೇಶದ ಇತರರ ಅನುಭವ ಮತ್ತು ಸಮ್ಮತಿಯನ್ನು ಲಾಲಿಸುತ್ತಿದ್ದರು. ಇಂಗ್ಲಿಷ್ ಹಾಗೂ ತಮಿಳುಭಾಷೆಗಳಲ್ಲಿ. 'ಹೆಲ್ತ್ ಅಂಡ್ ಯೋಗ ದ ಕೊಂಡಿ' : []

ಯೋಗಮಂದಿರದ ೩೦ ನೇ ವರ್ಷದ ಆಚರಣೆ

ಬದಲಾಯಿಸಿ

೨೦೦೬ ರಲ್ಲಿ ಯೋಗಮಂದಿರದ ೩೦ ನೆಯ ವಾರ್ಷಿಕ ಆಚರಣೆಯ ಅಂಗವಾಗಿ ವಿಶ್ವಕ್ಕೆ ಅವರ ಕೊಡುಗೆಯನ್ನು ತೋರಿಸಿ ಸನ್ಮಾನಿಸಲು ಒಂದು 'ಸ್ಮರಣ ಸಂಚಿಕೆ'ಯನ್ನು ಲಂಡನ್ ನಲ್ಲಿ ೩೧, ಮಾರ್ಚ್, ೨೦೦೬ ರಲ್ಲಿ ಬಿಡುಗಡೆಮಾಡಲಾಯಿತು. ” TKV Desikachar – A Tribute” 

ಕಾಲಕ್ರಮದಲ್ಲಿ ದೇಶಿಕಾಚಾರ್ ಅವರ ಮಾನಸಿಕ ಸ್ವಾಸ್ಥ್ಯ ಹಾಳಾಯಿತು. ನಿಶ್ಯಕ್ತರಾದರು. ಮಾತಾಡಲೂ ಕಷ್ಟವಾಗುತ್ತಿತ್ತು. ಸಾರ್ವಜನಿಕವಾಗಿ ಭಾಗಗೊಳ್ಳಲು ಆಗುತ್ತಿರಲಿಲ್ಲ. ಹಾಸಿಗೆ ಹಿಡಿದಿದ್ದ ಅವರು, ಆಗಸ್ಟ್, ೮,೨೦೧೬, ರಂದು ಮದ್ರಾಸ್ ನಲ್ಲಿ ನಿಧನರಾದರು. []

ಪರಿವಾರ

ಬದಲಾಯಿಸಿ
  • ಪತ್ನಿ, ಮೇನಕ, (1947) ಅವರ ವಿದ್ಯಾರ್ಥಿಯಾಗಿದ್ದವಳು, ಮಂತ್ರೋಚ್ಚಾರ ಪ್ರವೀಣೆ, ಮಕ್ಕಳು :ಭೂಷಣ್, (೧೯೭೦)ಕೌಸ್ಥುಬ್,(೧೯೭೫),ಮಗಳು, ಮೇಖಲ, (೧೯೭೮) ಮತ್ತು ೪ ಜನ ಮೊಮ್ಮಕ್ಕಳು.

ಉಲ್ಲೇಖಗಳು

ಬದಲಾಯಿಸಿ
  1. My_Fathers_Yoga.pdf
  2. Shearer, Alistair (2020). The Story of Yoga from Ancient India to the Modern West. London: Hurst. pp. 161–165. ISBN 978-1787381926.]
  3. e “Yoga and the XXIst Century” as a PDF
  4. To download the book “TKV Desikachar – A Tribute” as a PDF please click here
  5. "Tribute to T.K.V.Desikachar" Celebrating Sir, 14-15 January 2017

ಬಾಹ್ಯ ಸಂಪರ್ಕಗಳು

ಬದಲಾಯಿಸಿ

೧. The Yoga We Teach

೨. Yoga seminars and events Training