ಟಿ. ಎನ್. ಶೇಷನ್
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ತಿರುನೆಲ್ಲೈ ನಾರಾಯಣ ಅಯ್ಯರ್ ಶೇಷನ್ (1932-2019) ಭಾರತದ ಮಾಜಿ ಚುನಾವಣಾ ಆಯುಕ್ತರು (1990-96).
ಜೀವನ
ಬದಲಾಯಿಸಿ1932ರಲ್ಲಿ ಕೇರಳದ ಪಾಲ್ಘಾಟ್‍ನಲ್ಲಿ ಜನಿಸಿದರು. ಮದ್ರಾಸ್ ವಿಶ್ವವಿದ್ಯಾನಿಲಯದಲ್ಲಿ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದು, ಅನಂತರ ಅಮೆರಿಕದ ಹಾರ್ವರ್ಡ್ ವಿಶ್ವವಿದ್ಯಾನಿಲಯದಿಂದ ಸಾರ್ವಜನಿಕ ಆಡಳಿತದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಭಾರತಕ್ಕೆ ಮರಳಿದ ಇವರು ಐ.ಎ.ಎಸ್. ಅಧಿಕಾರಿಯಾಗಿ ಸೇವೆ ಆರಂಭಿಸಿದರು.
ಚುನಾವಣಾ ವ್ಯವಸ್ಥೆಯ ಸುಧಾರಣೆ
ಬದಲಾಯಿಸಿಇವರು ಅಧಿಕಾರ ವಹಿಸಿಕೊಂಡ ಪ್ರಾರಂಭದಲ್ಲೇ ದೇಶದ ಚುನಾವಣಾ ವ್ಯವಸ್ಥೆಯನ್ನು ವಿಶ್ಲೇಷಿಸಿ, ಅದರಲ್ಲಿದ್ದ ನೂರಾರು ದೋಷಗಳನ್ನು ಗುರುತಿಸಿದರು. ಇವುಗಳ ನಿವಾರಣೆಗೆ ಶಾಸನಾತ್ಮಕ ಸುಧಾರಣೆಗಳನ್ನು ತರಲು ಖಚಿತವಾಗಿ ಪ್ರಯತ್ನಿಸಿದರು. ಚುನಾವಣಾ ಆಯೋಗಕ್ಕಿರುವ ಸಂವಿಧಾನದತ್ತ ಅಧಿಕಾರವನ್ನು ಬಳಸಿ ಚುನಾವಣಾ ಸಮಸ್ಯೆಗಳನ್ನು ಹಂತಹಂತವಾಗಿ ತೊಡೆದು ಹಾಕತೊಡಗಿದರು.
ಪ್ರಶಸ್ತಿ, ನನ್ಮಾನಗಳು
ಬದಲಾಯಿಸಿಇವರು ಸಲ್ಲಿಸಿದ ಸೇವೆಗಾಗಿ ರ್ಯಾಮನ್ ಮ್ಯಾಗ್ಸೇಸೆ ಪ್ರಶಸ್ತಿ ಲಭಿಸಿದೆ (1996).
ಇತರ ಮಾಹಿತಿ
ಬದಲಾಯಿಸಿಅವರು ಮೈ ಬರ್ಡ್‍ನ್ಡ್ ಹಾರ್ಟ್ ಎಂಬ ಅನುಭವ ಕಥನವನ್ನು ಬರೆದಿದ್ದಾರೆ.
ನಿಧನ
ಬದಲಾಯಿಸಿ೧೦ ನವೆಂಬರ್ ೨೦೧೯ ರಂದು ಹೃದಯಾಘಾತದಿಂದ ನಿಧನರಾದರು.
ಉಲ್ಲೇಖಗಳು
ಬದಲಾಯಿಸಿ