ರಾಮೋನ್ ಮ್ಯಾಗ್ಸೆಸ್ಸೆ ಪ್ರಶಸ್ತಿ

ರಾಮೋನ್ ಮ್ಯಾಗ್ಸೆಸ್ಸೆ ಪ್ರಶಸ್ತಿ ಇದನ್ನು ೧೯೫೭ರಲ್ಲಿ ನ್ಯೂಯಾರ್ಕ್ ನಗರದಲ್ಲಿರುವ ರಾಕ್ಫೆಲ್ಲರ್ ಬ್ರದರ್ಸ್ ಫಂಡ್ನವರು ಸ್ಥಾಪಿಸಿದರು. ಫಿಲಿಪ್ಪೀನ್ಸ್ ದೇಶದ ಸರಕಾರದ ಅನುಮತಿಯೊಂದಿಗೆ ಈ ಪ್ರಶಸ್ತಿಗೆ ರಾಮೋನ್ ಮ್ಯಾಗ್ಸೆಸ್ಸೆ ಇವರ ಹೆಸರನ್ನಿಡಲು ನಿರ್ಧರಿಸಲಾಯಿತು. ಫಿಲಿಪೈನ್ಸ್ ದೇಶದ ಹಿಂದಿನ ರಾಷ್ತ್ರಾಧ್ಯಕ್ಷರಾಗಿದ್ದ ಇವರ ಗಣತಂತ್ರ ವ್ಯವಸ್ಥೆಯಲ್ಲಿನ ಕಟ್ಟುನಿಟ್ಟಿನ ಸರ್ಕಾರಿ ಆಡಳಿತ, ಹೆದರಿಕೆಯಿಲ್ಲದ ಸಾಮಾನ್ಯ ಜನರ ಸೇವೆ, ಧೇಯೋದ್ದೇಶಿತ ಯೋಜನೆಗಳು ಹೇಗೆ ಜನರಿಗೆ ಉದಾಹರಣೆಯಾಗಬಲ್ಲದು ಎಂದು ತೋರಿಸಿಕೊಡಲು ಇವರ ಹೆಸರನ್ನಿಡಲು ನಿರ್ಧರಿಸಲಾಯಿತು. ಇದನ್ನು ಸಮಾನ್ಯವಾಗಿ ಏಷ್ಯಾ ಖಂಡದ ನೊಬೆಲ್ ಪ್ರಶಸ್ತಿಯೆಂದು ಪರಿಗಣಿಸಲಾಗುತ್ತದೆ.

ರಾಮೋನ್ ಮ್ಯಾಗಸೆಸ್ಸೆ ಪ್ರಶಸ್ತಿ ಪ್ರತಿಷ್ಥಾನವು ಕೊಡಮಾಡುವ ಈ ಪ್ರಶಸ್ತಿಯನ್ನು ಏಷ್ಯಾ ಖಂಡದ ವ್ಯಕ್ತಿಗಳಿಗೆ ಅಥವಾ ಸಂಘ ಸಂಸ್ಥೆಗಳಿಗೆ, ೬ ವಿವಿಧ ಕ್ಷೇತ್ರಗಳಲ್ಲಿನ ಸೇವೆಗೆ ಕೊಡಮಾಡಲಾಗುತ್ತದೆ. ಆ ಕ್ಷೇತ್ರಗಳೆಂದರೆ:

  • ಸರಕಾರೀ ಸೇವೆ
  • ಜನ ಸೇವೆ
  • ಸಂಘೀಯ ನಾಯಕತ್ವ
  • ಪತ್ರಿಕೋದ್ಯಮ, ಸಾಹಿತ್ಯ ಮತ್ತು ಕಲೆ
  • ಶಾಂತಿ ಮತ್ತು ಅಂತರ್ರಾಷ್ಟ್ರೀಯ ತಿಳುವಳಿಕೆ
  • ಬೆಳೆಯುತ್ತಿರುವ ನಾಯಕತ್ವ

ಕರ್ನಾಟಕದ ಮೂವರು ವ್ಯಕ್ತಿಗಳಿಗೆ ಇದುವರೆಗೆ ರಾಮೋನ್ ಮ್ಯಾಗ್ಸೆಸ್ಸೆ ಪ್ರಶಸ್ತಿ ಪುರಸ್ಕ್ರತರಿದ್ದಾರೆ,ರಂಗಕರ್ಮಿ ಕೆ,ವಿ,ಸುಬ್ಬಣ್ಣ ,ಪ್ರಸಿದ್ದ ವ್ಯಂಗ್ಯ ಚಿತ್ರಕಾರ ಆರ್.ಕೆ.ಲಕ್ಷ್ಮಣ್ .ಮತ್ತೊಬ್ಬರು ಸೌರ ಶಕ್ತಿಯ ಹರಿಕಾರಡಾ,ಹರೀಶ್ ಹಂದೆ.. "ನಮನ"