ಟಿಸ್ಸಿ ಥಾಮಸ್

ಟಿಸ್ಸಿ ಥಾಮಸ್ (ಜನನ - ೧೯೬೪) ಭಾರತದ ಬಹು ನಿರೀಕ್ಷಿತ ಅಗ್ನಿ-೪ ಕ್ಷಿಪಣಿ ಯೋಜನೆಯ ನಿರ್ದೇಶಕರು. ಇವರು ಪ್ರಸಕ್ತ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಆರ್ಗನೈಜೇಷನ್) ಯ ಮಹಾನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.'ಡಿ ಆರ್ ಡಿ ಒ'ಮಹಾನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಎರಡನೇ ಮಹಿಳೆ.( ಜೆ.ಮಂಜುಳಾ ಮೊದಲನೆಯವರು). ಇವರು ಭಾರತದ ಕ್ಷಿಪಣಿ ಯೋಜನೆಯ ಮೊದಲ ಮಹಿಳಾ ನಿರ್ದೇಶಕರು. ಇವರನ್ನು 'Missile Woman' (ಕ್ಷಿಪಣಿ ಮಹಿಳೆ) ಎಂದು ಕರೆಯುತ್ತಾರೆ.

ಬಾಲ್ಯ ಮತ್ತು ಶಿಕ್ಷಣಸಂಪಾದಿಸಿ

ಇವರು ಏಪ್ರಿಲ್ ೧೯೬೩ ರಲ್ಲಿ ಕೇರಳದ ಆಲಪುಳದಲ್ಲಿ ಜನಿಸಿದರು. ತಂದೆ ಥಾಮಸ್ ಅಕೌಂಟಂಟ್ ಆಗಿದ್ದರು.ತಾಯಿ ಕುಂಜಮ್ಮ ಥಾಮಸ್ ಗೃಹಿಣಿ. ಇಂಜಿನಿಯರಿಂಗ್ ಪದವಿಯನ್ನು ತ್ರಿಶೂರ್ ನ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪೂರೈಸಿದರು. ಆಗಿನ Institute of Armament Technology (ಈಗ Defence Institute of Advanced Technology) ಪೂನಾದಲ್ಲಿ ಕ್ಷಿಪಣಿ ತಂತ್ರಜ್ಞಾನದಲ್ಲಿ ಎಂ.ಟೆಕ್ ಪದವಿ ಗಳಿಸಿದರು.

ವೃತ್ತಿ ಜೀವನಸಂಪಾದಿಸಿ

ಟಿಸ್ಸಿ ಥಾಮಸ್, ಭಾರತದ ಪ್ರಮುಖ ಕ್ಷಿಪಣಿಗಳಾದ ಅಗ್ನಿ-೩, ಅಗ್ನಿ-೪ ಮತ್ತು ಅಗ್ನಿ-೫ ಯೋಜನೆಯ ನಿರ್ದೇಶಕಿ[೧]. ಇದರಿಂದಾಗಿ ಇವರು "ಅಗ್ನಿಪುತ್ರಿ" ಎಂದೇ ಪ್ರಖ್ಯಾತರಾಗಿದ್ದಾರೆ. ಅಗ್ನಿ-೫ ಕ್ಷಿಪಣಿ ಭಾರತದ ಹೆಮ್ಮೆ.

ವೈಯಕ್ತಿಕ ಜೀವನಸಂಪಾದಿಸಿ

ಇವರು ಭಾರತಿಯ ನೌಕಾಪಡೆಯಲ್ಲಿ ಕಮಾಂಡರ್ ಆಗಿರುವ ಸರೋಜ್ ಕುಮಾರ್ ರನ್ನು ವಿವಾಹವಾಗಿದ್ದಾರೆ. ಇವರ ಮಗ ತೇಜಸ್ ಒಬ್ಬ ಇಂಜಿನಿಯರ್.

ಪ್ರಶಸ್ತಿಗಳುಸಂಪಾದಿಸಿ

  1. ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಪ್ರಶಸ್ತಿ [೨].

ಬಾಹ್ಯ ಸಂಪರ್ಕಸಂಪಾದಿಸಿ

  • ಟಿಸ್ಸಿ ಥಾಮಸ್ ಅವರ ಬಗ್ಗೆ ಇಂಡಿಯಾ ಟುಡೆಯಲ್ಲಿಯ ಲೇಖನ
  • ಬಿಬಿಸಿ ಲೇಖನ

ಉಲ್ಲೇಖಸಂಪಾದಿಸಿ

  1. http://www.deccanherald.com/content/11243/tessy-thomas-agni-v-project.html
  2. http://www.firstpost.com/fwire/missile-woman-tessy-thomas-conferred-shastri-award-476024.html?utm_source=fwire&utm_medium=hp