ಟಾಜ್‍ಪುರ್ ಭಾರತದ ಪಶ್ಚಿಮ ಬಂಗಾಳ ರಾಜ್ಯದ ಪೂರ್ವ ಮೇದಿನೀಪುರ್ ಜಿಲ್ಲೆಯಲ್ಲಿ, ಬಂಗಾಳ ಕೊಲ್ಲಿಯ ತೀರದ ಮೇಲೆ ದೀಘಾ ಹತ್ತಿರ ಸ್ಥಿತವಾಗಿದೆ. ಟಾಜ್‍ಪುರ್ ಮಂದಾರ್‌ಮನಿ ಮತ್ತು ಶಂಕರ್‌ಪುರ್ ನಡುವೆ ಇದೆ. ಟಾಜ್‍ಪುರ್ ರಾಜ್ಯದ ರಾಜಧಾನಿ ಕೊಲ್ಕತ್ತದಿಂದ ೧೭೨.೯ ಕಿ.ಮಿ. ದೂರದಲ್ಲಿದೆ.[] ಇದು ಕೊಂಟಾಯ್ ಉಪವಿಭಾಗ ಪ್ರದೇಶದಡಿ ಸ್ಥಿತವಾಗಿದೆ.

ಟಾಜ್‍ಪುರ್ ಬೀಚ್‍ನಲ್ಲಿ ಸೂರ್ಯಾಸ್ತ
ಟಾಜ್‍ಪುರ್ ಬೀಚ್. ಮೇ 2015.

ಜೊತೆಗೆ ಟಾ‍ಜ್‍ಪುರ್ ಕೃತಕ ಮೀನುಗಾರಿಕೆಗೆ ಸಮರ್ಪಿತವಾದ ಸುಮಾರು ೪೦೦ ಎಕರೆ ಭೂಮಿಯನ್ನು ಹೊಂದಿದೆ. ಈ ಪ್ರದೇಶದಲ್ಲಿ ಅನೇಕ ಭೇರಿ ಗಳು ಅಥವಾ ಮೀನಿನ ಕೊಳಗಳಿವೆ. ಪ್ರವಾಸಿ ಆಕರ್ಷಣೆಯಾಗಿ, ಇದು ತುಲನಾತ್ಮಕವಾಗಿ ಹೊಸದಾಗಿದ್ದು ದೀಘಾ ಮತ್ತು ಮಂದಾರ್‌ಮನಿಗೆ ಹೋಲಿಸಿದರೆ ಕಡಿಮೆ ಸಂಖ್ಯೆಯಲ್ಲಿ ಹೋಟೆಲ್‌ಗಳನ್ನು ಹೊಂದಿದೆ. ಬೀಚ್ ಸ್ವಚ್ಛವಾಗಿದ್ದು ಅಸಂಖ್ಯಾತ ಕೆಂಪು ಏಡಿಗಳಿಗೆ ಮನೆಯಾಗಿದೆ. ಪಶ್ಚಿಮ ಬಂಗಾಳ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ಈ ಪ್ರದೇಶದಲ್ಲಿ ಟಾ‍ಜ್‍ಪುರ್ ಬಂದರನ್ನು ನಿರ್ಮಿಸಲು ನಿರ್ಧರಿಸಿದವು.

ಉಲ್ಲೇಖಗಳು

ಬದಲಾಯಿಸಿ
  1. "Tajpur, West Bengal". westbengaltourism.gov.in. Archived from the original on 21 April 2012.