ಜೈನ್ ಧರ್ಮ

ಬದಲಾಯಿಸಿ

ಆದಿ ಮಾನವ ನಾಗರಿಕತೆಯ ಮೆಟ್ಟಿಲುಗಳನೇರುತ್ತಾ ಬಂದು ಆಧುನಿಕ ಮಾನವಾಗತೊಡಗಿದಂತೆ, ಜೀವನದಲ್ಲಿ ಅನಾಗರಿಕತೆ ಮಾಯಾವಾಗಿ, ಸಂಘ ಜೀವನ ಪ್ರಾರಂಭವಾಗಿ ಸುಸಂಸ್ಕೃತನಾಗಿ ಬಾಳತೊಡಗಿದ. ನಾವಿಲ್ಲಿ ಕಾಣುವುದು ಕೇವಲ ನಾಗರಿಕತೆಯ ವಿಕಾಶವಲ್ಲ, ಸಂಸ್ಕೃತಿಯ ಬೆಳೆವಣಿಗೆ, ನಮ್ಮ ಸಮಾಜದಲ್ಲಿ ಈ ಸಂಸ್ಕೃತಿಯ ಬೆಳಕು ತಲೆ-ತಲಾಂತರಗಳಿಂದ ನಿರಂತರವಾಗಿ ಮಾನವ ಜೀವನವನ್ನು ಬೆಳಗಿಸುತ್ತಾ ಬಮದಿದೆ, ಮನೆ, ನೆರೆಹೊರೆ,ಗುರು-ಹಿರಿಯರು, ಸಮಾಜ..., ಹೀಗೆ ನಾನಾ ಕಡೆಗಳಿಂದ ದೊರೆಯುವ ಸಂಸ್ಕಾರದಿಂದ ತನ್ನ ವ್ಯಕ್ತಿತ್ವವನ್ನು ಸುಸಂಪನ್ನಗೊಳಿಸುವ ವ್ಯಕ್ತಿ, ಆ ಸಂಸ್ಕೃತಿಯಿಂದಲೇ ಗುರುತಿಸಲ್ಪಡುತ್ತಾನೆ, ಗೌರವಿಸಲ್ಪಡುತ್ತಾನೆ. ನಮ್ಮಲ್ಲಿ ವ್ಯಕ್ತಿ ಅಥವಾ ಸಮಾಜದ ಸಂಸ್ಕೃತಿಯಲ್ಲಿ ಬಹು ಮುಖ್ಯ ಪಾತ್ರ ವಹಿಸಿರುವುದೆಂದರೆ "ಧರ್ಮ". ವಿವಿಧೆತೆಯಲ್ಲಿ ಏಕತೆಯನೇ ತನ್ನ ಜೀವಾಳವಾಗಿರಿಸಿಕೂಂಡಿರುವ ಭಾರತೀಯ ಸಂಸ್ಕೃತಿಗೆ ಈ ನೆಲದಲೇ ವಿಕಾಸಗೂಂಡು ವಿಶ್ವ ವ್ಯಾಪಿಯಾಗಿರುವ ಜೈನ ದi ನೀಡಿರುವ ಕೊಡುಗೆ ಅತ್ಯಂತ ಮಹತ್ವಪೂರ್ಣವಾದುದು.

ಜೈನ್ ಸಂಸ್ಕೃತಿಯ ಕುರಿತು ಗಮನಿಸ ಹೊರಟಾಗ ಜೈನ್ ಧರ್ಮದ ಕೆಲವು ಮೂಲಭೂತ ಸಂಗತೀಗಳನ್ನು ಮನಸ್ಸಿನಲ್ಲಿಟ್ಟುಕೂಳ್ಳುವುದು ಅಗತ್ಯ. ಪ್ರತಿಯೊಂದು ಜೀವಿಯು ಪರಮಾತ್ಮನಾಗಬಹುದು ಎಂಬುವುದು ಜೈನ್ ಧರ್ಮದ ಮೂಲ ಸಿದ್ಧಾಂತ. ಅಂದರೆ ಈ ಜಗತ್ತಿನಲ್ಲಿvರುವ ಎಲ್ಲ ಜೀವಿಗಳ ಒಂದು ಆತ್ಮ ಚೈತನ್ಯವಿದೆ. ಅದು ಎಲ್ಲರಿಗು ಸಮಾನವಾಗಿದೆ ಆದರೆ ಪ್ರತಿಯೊಂದು ಜೀವಿಯೂ ತನಗೆ ದೋರೆತ ಜನ್ಮ ಅವಕಾಶದಲ್ಲಿ ಮಾಡಿದ ಒಳ್ಳೇಯ ಮತ್ತು ಕೆಟ್ಟ ಪರಿಣಾಮದಿಂದ ಗಳಿಸಿದ ಪಾಪ ಮತ್ತು ಪುಣ್ಯಗಳ ಅಂಟುವಿಕೆಯಿಂದಾಗಿ ಅಸಮಾನ ಸ್ಥಿತಿ-ಗತಿಯಲ್ಲಿ ಲೋಕದಲ್ಲಿ ಗೊಚರವಾಗುತ್ತಿದೆ. ಈ ಅಂಟಿದ ಕರ್ಮವನ್ನು ಸ್ವಪ್ರಯತ್ನ ಹಾಗೂ ಸಾಧನೆಗಳಿಂದ ನಾಶ ಮಾಡಿದಾಗ ಜೀವಿಯ ಒಳಗಿರುವ ಆತ್ಮನೇ ಪೂರ್ಣ ಪರಿಶುದ್ದನಾಗಿ ಪರಮಾತ್ಮನಾಗುತ್ತಾನೆ. ಅದು ಕರ್ಮರಹಿತನಾದ ಆತ್ಮನಿಗೆ ಸಹಜವಾಗಿ ಒದಗಿ ಬರುವ ಪದವಿ. ಅದೇ ಮೋಕ್ಷ. ಇದನ್ನು ಮನುಷ್ಯರಿಂದ ಮಾತ್ರ ಸಾಧಿಸಲು ಸಾಧ್ಯ. ಯಾರು