ಜೇಸನ್ ಜೊನಾಥನ್ ರಾಯ್ (ಜನನ ೨೧ ಜುಲೈ ೧೯೯೦) ಒಬ್ಬ ಇಂಗ್ಲಿಷ ಅಂತರಷ್ಟ್ರೀಯ ಕ್ರಿಕೆಟಿಗ. ಅವರು ದೇಶೀಯ ಕ್ರಿಕೆಟ್‌ನಲ್ಲಿ ಸರ್ರೆ(Surrey) ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ಪರ ಆಡುತ್ತಾರೆ. ಪ್ರಸ್ತುತ ಅವರು ಏಕದಿನ ಬ್ಯಾಟಿಂಗ್‌ನಲ್ಲಿ ಹತ್ತನೇ ಸ್ಥಾನದಲ್ಲಿದ್ದಾರೆ ಮತ್ತು ಐಸಿಸಿ ೨೦-೨೦ ಯಲ್ಲಿ ಅಂತಾರಾಷ್ಟ್ರೀಯ ಬ್ಯಾಟಿಂಗ್‌ನಲ್ಲಿ ಹದಿನೇಳನೇ ಸ್ಥಾನದಲ್ಲಿದ್ದಾರೆ. ಇವರು ೨೦೧೯ನೆ ಕ್ರಿಕೆಟ್ ವಿಶ್ವಕಪ್ ಗೆದ್ದಾ ತಂಡದ ಬಾಗವಾಗಿದರು.[]

ಜೇಸನ್ ರಾಯ್

ಅವರು ೧೦ ವರ್ಷ ವಯಸ್ಸಿನವರಾಗಿದ್ದಾಗ ದಕ್ಷಿಣ ಆಫ್ರಿಕಾದಿಂದ ತಮ್ಮ ಕುಟುಂಬದೊಂದಿಗೆ ಇಂಗ್ಲೆಂಡ್ ಗೆ ತೆರಳಿದರು. ಅವರು ಬಲಗೈ ಬ್ಯಾಟ್ಸ್ಮನ್. ಸೀಮಿತ ಓವರ ಕ್ರಿಕೆಟನಲ್ಲಿ ಅವರು ಆರಂಭಿಕ ಬ್ಯಾಟ್ಸ್ಮನ್ ಮತ್ತು ಪ್ರಥಮ ದರ್ಜೆ ಪಂದ್ಯಗಳಲ್ಲಿ ಮದ್ಯಮ್ ಕ್ರಮಾಂಕದಲ್ಲಿ ಮದ್ಯಮ್ ಕ್ರಮಂಕದಲ್ಲಿ ಆಡುತ್ತಾರೆ. [] ಅವರು ಸೆಪ್ಟೆಂಬರ್ ೨೦೧೪ರಲ್ಲಿ ಭಾರತ ವಿರುದ್ಧ ಅಂತಾರಾಷ್ಟ್ರೀಯ ಟಿ-೨೦ಯಲ್ಲಿ ಚೊಚ್ಚಲ ಪಂದ್ಯವನ್ನು ಮತ್ತು ೨೦೧೫ರ ಮೇನಲ್ಲಿ ಐರ್ಲೆಂಡ್ ವಿರುದ್ಧದ ತಮ್ಮ ಪ್ರಥಮ ಅಂತಾರಾಷ್ಟ್ರೀಯ ಏಕದಿನ ಪಂದ್ಯವನ್ನು ಆಡಿದರು.[]

ದೇಶೀಯ ವೃತ್ತಿ

ಬದಲಾಯಿಸಿ

ಅವರು ಜೂನ್ ೨೭,೨೦೦೮ ರಂದು ಮಿಡ್ಲ್‌ಸೆಕ್ಸ್‌ ವಿರುದ್ಧದ ಟ್ವೆಂಟಿ-೨೦ ಕಪ್ ಪಂದ್ಯದಲ್ಲಿ ಸರ್ರೆಯ ಮೊದಲ ತಂಡಕೆ ಪಾದಾರ್ಪಣೆ ಮಾಡಿದರು ಮತ್ತು ೨೦೦೮ರ ಜುಲೈ ೨೦ ರಂದು ಯಾರ್ಕ್‌ಷೈರ್ ವಿರುದ್ಧದ ನ್ಯಾಟ್ವೆಸ್ಟ ಪ್ರೊ ೪೦ ಲೇಗ್ ಪಂದ್ಯಗಳಲ್ಲಿ ತಮ್ಮ ೧೮ನೇ ಹುಟ್ಟುಹಬ್ಬದ ಹಿಂದಿನ ದಿನ ತಮ್ಮ ಲಿಸ್ಟ ಎ ಚೊಚ್ಚಲ ಪ್ರವೇಶ ಮಾಡಿದರು.

ವೈಯಕ್ತಿಕ ಜೀವನ

ಬದಲಾಯಿಸಿ

ರಾಯ್ ೨೦೦೮ರಲ್ಲಿ ಕ್ರೀಡಾ ವಿಜ್ಞಾನ ಮತ್ತು ವ್ಯವಹಾರದಲ್ಲಿ ಎ-ಲೆವೆಲ್ ಪರೀಕ್ಷೆಗಳನ್ನು ತೆಗೆದುಕೊಂಡರು. ಅವರು ಸೇಂಟ ಮೇರಿಸ್ ಯೂನಿವರ್ಸಿಟಿ ಕಾಲೇಜಿನಲ್ಲಿ ಸ್ಥಾನ ಪಡೆದರು. ಆದರೆ ಅವರು ಕ್ರಿಕೆಟ್ ನಲ್ಲಿ ಗಮನ ಹರಿಸುವ ಸಲುವಾಗಿ ಅವರು ಈ ಅವಕಾಶವನ್ನು ತಿರಸ್ಕರಿಸಿದರೂ. [] ಅಕ್ಟೋಬರ್ ೭,೨೦೧೭ ರಂದು ರಾಯ್ ಎಲ್ಲಿ ಮೂರ್ ಅವರನ್ನು ವಿವಾಹವಾದರು. ಮಾರ್ಚ್ ೨೦೧೯ರಂದು ಅವರು ತಮ್ಮ ಮೊದಲ ಮಗುವನ್ನು ಹೊಂದಿದ್ದರು. []

ಅಂತಾರಾಷ್ಟ್ರೀಯ ದಾಖಲೆಗಳು

ಬದಲಾಯಿಸಿ
  • ರಾಯ್ ೨೦೧೬ರಲ್ಲಿ ಶ್ರೀಲಂಕಾ ವಿರುದ್ಧ ಅಲೆಕ್ಸ್ ಹೇಲ್ಸ್ ಅವರೊಂದಿಗೆ ೨೫೬ ರನ್ ಗಳ ಆರಂಬಿಕ ಪಾಲುದಾರಿಕೆಯ ಬಾಗವಾಗಿದ್ದರು. ಇದು ಏಕದಿನ ಪಂದ್ಯಗಳಲ್ಲಿ ಯಾವುದೆ ವಿಕೆಟ್ ಕಳೆದುಕೊಳ್ಳದೆ ಅತ್ಯಂತ ಯಶಸ್ವಿ ರನ್ ಚೇಸ್ ಆಗಿತು. [][] ಏಕದಿನ ಪಂದ್ಯಗಳಲ್ಲಿ ಯಾವುದೆ ವಿಕೆಟಗೆ ಇಂಗ್ಲೆಂಡಗೆ ಇದು ಅತ್ಯದಿಕ ಪಾಲುದಾರಿಕೆ.[]
  • ರಾಯ್ ಮತ್ತು ಜೋ ರೂಟ್(೨೨೧ ರನ್,೨೨೦ ಎಸೆತಗಳು) ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ಪರ ಮೂರನೇ ವಿಕೆಟಿಗೆ ಅತ್ಯದಿಕ ಪಾಲುದಾರಿಕೆ ಮಾಡಿದರು. []

ಉಲ್ಲೇಖಗಳು

ಬದಲಾಯಿಸಿ