ಜೇಮ್ಸ್ ಮೆಕಿಂತೋಷ್
ಸರ್ ಜೇಮ್ಸ್ ಮೆಕಿಂತೋಷ್ (ಅಕ್ಟೋಬರ್ ೨೪ ೧೭೬೫ - ಮೇ ೩೦ ೧೮೩೨) ಸ್ಕಾಟ್ಲೆಂಡಿನ ರಾಜಕಾರಣಿ ಮತ್ತು ಇತಿಹಾಸಕಾರರಾಗಿದ್ದರು. ಇವರು ವೈದ್ಯ ಮತ್ತು ವಕೀಲ ವಿದ್ಯೆಯಲ್ಲಿ ಕೂಡ ಪರಿಣತಿ ಹೊಂದಿದ್ದರು.
ಏಶಿಯಾಟಿಕ್ ಸೊಸೈಟಿಯ ಸ್ಥಾಪನೆ
ಬದಲಾಯಿಸಿಜೇಮ್ಸ್ ಮೆಕಿಂತೋಶ್ ಮುಂಬಯಿಯ ಲಿಟರರಿ ಸೊಸೈಟಿ ಆಫ್ ಬಾಂಬೆ ಎಂಬ ಸಂಸ್ಥೆಯನ್ನು ೧೮೦೪ ರಲ್ಲಿ ಹುಟ್ಟಿಹಾಕಿದರು. ಈಗ ಅದು ಏಶಿಯಾಟಿಕ್ ಸೊಸೈಟಿ ಎಂದು ಹೆಸರುವಾಸಿಯಾಗಿದೆ. ಭಾರತ ದೇಶದ ಕಲೆ, ಸಾಹಿತ್ಯ, ಸಂಸ್ಕೃತಿಗಳ ಅಧ್ಯಯನಮಾಡಲು ಹಾಗೂ ನಮ್ಮದೇಶದ ಉಪಯುಕ್ತ ಮಾಹಿತಿಗಳನ್ನು ಸಂಗ್ರಹಿಸಿ ಅದನ್ನು ಪ್ರಚಾರ ಮಾಡುವ ಉದ್ದೇಶ್ಯದಿಂದ ಇದನ್ನು ಸ್ಥಾಪಿಸಲಾಯಿತು. ಜೇಮ್ಸ್ ಮೆಕಿಂತೋಶ್ ಮುಂಬಯಿನ ರೆಕಾರ್ಡರ್ ಎಂಬ ಹುದ್ದೆಯಲ್ಲಿದ್ದರು. ಮುಂಬಯಿ ನಗರಕ್ಕೆ ಅಗತ್ಯವಾಗಿ ಬೇಕಾಗಿದ್ದ 'ಟವ್ನ ಹಾಲ್' ಕಟ್ಟಡದ ಅಗತ್ಯವನ್ನು ಅನುಮೊದಿಸಿದರು. ಇದರ ಬಗ್ಗೆ ಅನೇಕರು ಪ್ರಸ್ತಾಪಿಸಿದ್ದರೂ, ಮೆಕಿಂತೊಷ್ ರವರ ಮಾತಿಗೆ ಬೆಲೆಬಂತು. ಅವರು ೧೮೦೪ ರಿಂದ ೧೮೧೧ ರವರೆಗೆ ಮುಂಬಯಿನ ಚೀಫ್ ಜಸ್ಟಿಸ್ ಆಗಿ ಸೇವೆಸಲ್ಲಿಸಿದ್ದರು.