ಜೀವನ ನಾಟಕ (ಚಲನಚಿತ್ರ)

ಕನ್ನಡ ಚಲನಚಿತ್ರ

ಜೀವನ ನಾಟಕ ಚಿತ್ರವು ೧೯೪೨ರಲ್ಲಿ ಬಿಡುಗಡೆಯಾದ ಕನ್ನಡದ ಚಿತ್ರಗಳಲ್ಲಿ ಒಂದು. ಈ ಚಿತ್ರವನ್ನು ಮಹಬ್ ಕಾಶ್ಮೀರಿರವರು ನಿರ್ದೇಶಿಸಿದ್ದಾರೆ. ಗುಬ್ಬಿ ವೀರಣ್ಣರವರು ನಿರ್ಮಿಸಿದ್ದಾರೆ."[]ಈ ಚಿತ್ರದಲ್ಲಿ ವೀರಣ್ಣ ಕೆಂಪರಾಜ್ ನಾಯಕನ ಪಾತ್ರದಲ್ಲಿ ಮತ್ತು ಜಯಮ್ಮ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ. ರಾಮಯ್ಯರ್ ಮತ್ತು ಹಾರ್ಮೋನಿಯಂ ಶೇಷಗಿರಿರಾವ್ರವರು ಈ ಚಿತ್ರದ ಸಂಗೀತ ನಿರ್ದೇಶನವನ್ನು ಮಾಡಿದ್ದಾರೆ.

ಜೀವನ ನಾಟಕ (ಚಲನಚಿತ್ರ)
ಜೀವನ ನಾಟಕ
ನಿರ್ದೇಶನವಹಾಬ್ ಕಾಶ್ಮೀರಿ
ನಿರ್ಮಾಪಕಗುಬ್ಬಿ ವೀರಣ್ಣ
ಕಥೆಅ.ನ.ಕೃಷ್ಣ ರಾಯರು
ಸಂಭಾಷಣೆಅ.ನ.ಕೃಷ್ಣ ರಾಯರು
ಪಾತ್ರವರ್ಗವೀರಣ್ಣ, ಕೆಂಪರಾಜ ಅರಸ್, ಜಯಮ್ಮ, ಶಾಂತಾ ಹುಬ್ಳೀಕರ್
ಸಂಗೀತರಾಮಯ್ಯರ್, ಹಾರ್ಮೋನಿಯಂ ಶೇಷಗಿರಿರಾವ್
ಛಾಯಾಗ್ರಹಣ(ಸ್ಟೂಡಿಯೊ)
ಸಂಕಲನಸ್ಟೂಡಿಯೋ ತಂತ್ರಜ್ಞರು
ಬಿಡುಗಡೆಯಾಗಿದ್ದು೧೯೪೨
ನೃತ್ಯಸೋಹನ್‌ ಲಾಲ್‌, ಇಂದ್ರಾಣಿ ದೇವಿ (ಶಿವತಾಂಡವ ನೃತ್ಯ)
ಚಿತ್ರ ನಿರ್ಮಾಣ ಸಂಸ್ಥೆಗುಬ್ಬಿ ಫಿಲಂಸ್
ಸಾಹಿತ್ಯಬಿ.ಪುಟ್ಟಸ್ವಾಮಯ್ಯ
ಹಿನ್ನೆಲೆ ಗಾಯನಪಾತ್ರಧಾರಿಗಳು

ಕಥಾ ಸಾರಾಂಶ

ಬದಲಾಯಿಸಿ

ಆನಂದ್‌, ನಾಟಕ ಕಂಪೆನಿಯ ಮಾಲಿಕ. ಈತ ಪದ್ಮ ಎಂಬ ಅನಾಥ ಯುವತಿ ಕಂಠಕ್ಕೆ ಮಾರು ಹೋಗಿ ಆಕೆಯನ್ನು ದತ್ತು ತೆಗೆದುಕೊಂಡು ಶಿಕ್ಷಣ ಕೊಡಿಸುತ್ತಾನೆ.ನಾಟಕಗಳಲ್ಲಿ ಅವಕಾಶ ಕೊಡುತ್ತಾನೆ.ಅದೇ ನಾಟಕ ಕಂಪೆನಿಯ ಮೋಹನ್‌ ಪದ್ಮಳನ್ನು ಇಷ್ಟ ಪಡುತ್ತಾನೆ. ನಾಯಕಿ ಪಾತ್ರ ಮಾಡುತ್ತಿದ್ದ ಕಮಲ ಇದನ್ನು ಸಹಿಸದೇ ನಾಟಕ ಕಂಪೆನಿ ಬಿಟ್ಟು ಹೋಗುತ್ತಾಳೆ. ಇದರಿಂದ ಕೋಪಗೊಂಡ ಆನಂದ್‌, ಮೋಹನ್‌ ಹಾಗೂ ಪದ್ಮಾಳನ್ನು ಕಂಪೆನಿಯಿಂದ ಹೊರಹಾಕುತ್ತಾನೆ. ಕಮಲ, ಮೋಹನ್‌ ಮತ್ತು ಪದ್ಮಳನ್ನು ಬೇರೆ ಮಾಡುತ್ತಾಳೆ. ನಂತರ ಹಲವು ತಿರುವುಗಳ ಬಳಿಕ ಅವರಿಬ್ಬರೂ ಒಂದಾಗುತ್ತಾರೆ.

ವಿಶೇಷತೆ

ಬದಲಾಯಿಸಿ

ಅ.ನ.ಕೃಷ್ಣ ರಾಯರು ಚಿತ್ರಕತೆ,ಸಂಭಾಷಣೆ ರಚಿಸಿದ ಮೊದಲ ಚಲನಚಿತ್ರವಾಗಿದೆ.[] ಕೆಂಪರಾಜ ಅರಸ್‌ ಅವರು ಈ ಚಿತ್ರದ ಮೂಲಕ ಚಲನಚಿತ್ರ ರಂಗವನ್ನು ಪ್ರವೇಶಿಸಿದರು. ಕನ್ನಂಬಾಡಿ ಹಾಗೂ ಬೃಂದಾವನದಲ್ಲಿ ಚಿತ್ರಿಕರಣ ನಡೆಸಿ, ಹೊರಾಂಗಣದಲ್ಲಿ ಚಿತ್ರಿತವಾದ ಮೊದಲ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.[] ಡಾ.ರಾಜಕುಮಾರ್‌ ಅವರ ತಂದೆ ರಂಗಭೂಮಿ ನಟ, ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ಅಭಿನಯಿಸಿದ ಏಕೈಕ ಚಲನಚಿತ್ರವಾಗಿದೆ.

ಪಾತ್ರ ವರ್ಗ

ಬದಲಾಯಿಸಿ
  • ವೀರಣ್ಣ
  • ಕೆಂಪರಾಜ್ ಅರಸ್
  • ಜಯಮ್ಮ
  • ಶಾಂತಾ ಹುಬ್ಳೀಕರ್
  • ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ
  • ಬಸವರಾಜಪ್ಪ
  • ಮೋಹನ ಕುಮಾರಿ
  • ಮೂರಡಿ ಕುಳ್ಳ
  • ಎಂಟಡಿ ಲಂಬು
  • ರಾಜಮ್ಮ
  • ಸುಂದರಮ್ಮ
  • ಕಮಲಮ್ಮ
  • ಶಾರದಮ್ಮ
  • ಬೇಬಿ ವಿಜಯ
  • ಮರಿ ರಾವ್‌
  • ಮಹಾಬಲ ರಾವ್

ನಿರ್ಮಾಣ ಮತ್ತು ಬಿಡುಗಡೆ

ಬದಲಾಯಿಸಿ

ಸೆಂಟ್ರಲ್ ಸ್ಟೂಡಿಯೋ, ಕೊಯಮತ್ತೂರಿನಲ್ಲಿ ತಯಾರಾದ ಈ ಚಿತ್ರ, ಕಲ್ಕತ್ತಾ ಥಿಯೇಟರ್ ಗ್ರೂಪ್‍ನ ವಹಾಬ್ ಕಾಶ್ಮೀರಿಯವರು ನಿರ್ದೇಶಿಸಿದ ಮೊದಲ ಕನ್ನಡ ಚಿತ್ರವಾಗಿದೆ. ೧೬೦ ನಿಮಿಷಗಳ ಅವಧಿಯ "ಜೀವನ ನಾಟಕ" ಚಿತ್ರವು ಜನವರಿ ೧,೧೯೪೩ರಲ್ಲಿ ಬಿಡುಗಡೆಯಾಯಿತು. ಅಂದಿನ "ಇಂಡಿಯನ್ ಎಕ್ಸ್ಪ್ರೆಸ್" ಪತ್ರಿಕೆಯ ವಿಮರ್ಶೆಯು "ಗುಬ್ಬಿ ವೀರಣ್ಣನವರ ಅಧ್ಬುತ ಹಾಸ್ಯ ಹಾಗೂ ಜಯಮ್ಮ ಮತ್ತು ಶಾಂತಾ ಹುಬ್ಳಿಕರ್ ಅವರ ನಟನೆ ಜನರ ಮನ ಸೆಳೆಯಿತು. ಇದರೊಂದಿಗೆ ಚಿತ್ರದ ಸಂಗೀತವೂ ಜನರು ಇಷ್ಟ ಪಡುವಂತಿದೆ" ಎಂದಿದೆ. ಗುಬ್ಬಿ ವೀರಣ್ಣನವರು ಸ್ವತಂತ್ರವಾಗಿ ನಿರ್ಮಿಸಿದ ಮೊದಲ ವಾಕ್ಚಿತ್ರ ಇದಾಗಿದೆ.

ಉಲ್ಲೇಖ

ಬದಲಾಯಿಸಿ
  1. "History 15 - Jeevana Nataka - Gubbi Veeranna Independent Producer". chitraloka.com. 13 August 2013. Archived from the original on 15 August 2013. Retrieved 12 April 2017.
  2. Rajadhyaksha, Ashish; Willemen, Paul (1999). Encyclopedia of Indian Cinema. British Film Institute. ISBN 9780851704555.
  3. Goble, Alan (1999). The Complete Index to Literary Sources in Film. Walter de Gruyter. p. 267. ISBN 9783110951943. Retrieved 12 April 2017.