ಜೀನ್-ಜಾಕ್ವೆಸ್ ರೂಸೋ
ಜಿನ್ ಜ಼ಾಕ್ವಸ್ ರುಸೋ. ೨೮ ಜೂನ್ ೧೭೧೨ ರಲ್ಲಿ ಜಿನೇವಾದಲ್ಲಿ ಜನಿಸಿದರು. ಇವರು ೧೮ ನೆ ಶತಮಾನದಲ್ಲಿ ಬಾಳಿದಂಥವರು. ಇವರು ಜಿನೇವಾದ ತತ್ತ್ವ ಜ್ಞಾನಿ, ಬರಹಗಾರರಾಗಿದ್ದಾರೆ ಮತ್ತು ಪ್ರಮುಖ ರಾಜಕೀಯ ಚಿಂತಕರು ಸಹ ಆಗಿದ್ದಾರೆ. ಯುರೊಪಿನಾದ್ಯಂತ ಜ್ಞಾನೋದಯದ ಪ್ರಗತಿಯ ಮೇಲೆ ಪ್ರಭಾವ ಬೀರಿದ ಸಂಯೋಜಕರಾಗಿದ್ದರು. ಜೊತೆಗೆ ಪ್ರೆಂಚ್ ಕ್ರಾಂತಿಯ ಅಂಶಗಳು ಆಧುನಿಕ ರಾಜಕೀಯ ಆರ್ಥಿಕ ಮತ್ತು ಶೈಕ್ಷಣಿಕ ಚಿಂತನೆಯ ಬೆಳವಣಿಗೆಯ ಮೇಲೆ ಪ್ರಭಾವ ಬೀರಿದರು..
ಅವರ ಸಾಮಾಜಿಕ ಒಪ್ಪಂದದ ಕುರಿತಾದ ಮತ್ತು ಅಸಮಾನತೆಯ ಕುರಿತಾದ ಪ್ರವಚನವು ಆಧುನಿಕ ರಾಜಕೀಯ ಮತ್ತು ಸಾಮಾಜಿಕ ಚಿಂತನೆಯ ಮೂಲಾಧಾರ.
- ಅವರ ಕೃತಿ ಗಳು ಜೂಲಿ/ ನ್ಯೂ ಹೇಲೂ ಈಸ್ ಎಂಬ ಕಾದಂಬರಿ ಯಲ್ಲಿ ಪೂರ್ವಭಾವಿ ಸಿದ್ಧಾಂತ ಮತ್ತು ರೋ ಮ್ಯಾಂಟಿಸಂ ನ ಬೆಳವಣಿಗೆ ಬಗ್ಗೆ ಉಲ್ಲೇಖಗೊಂಡಿದೆ.
- ಎಮಿಲಿ/ ಶಿಕ್ಷಣ; ಎಂಬುದು ಸಮಾಜ ದಲ್ಲಿ ವ್ಯಕ್ತಿಯ ಕುರಿತು ಮಾಹಿತಿ ನೀಡುವ ಗ್ರಂಥವಾಗಿದೆ. ಹೀಗೆ ಹಲವಾರು ಗ್ರಂಥಗಳ ಸಂಪಾದನೆ ಮಾಡಿ ಸಾಮಾಜಿಕ ಏಕತೆ ತರುವಲ್ಲಿ ಪ್ರಯತ್ನಿಸಿದರು.
ಮಾನವ ಸ್ವಭಾವದ ಸಿದ್ಧಾಂತಸಂಪಾದಿಸಿ
ತುಂಡು ಭೂಮಿಯಲ್ಲಿ ಬೇಲಿ ಹಾಕಿದ ಮೊದಲ ವಕ್ತಿ. " ಇದು ನನ್ನದು" ಎಂದು ಹೇಳಿದನು. ಮತ್ತು ಜನರು ಅವನನ್ನು ನಂಬುವಷ್ಟು ಮುಗ್ಧರಾಗಿದ್ದರು. ಆ ವ್ಯಕ್ತಿ ನಾಗರಿಕ ಸಮಾಜದ ನಿಜವಾದ ಸ್ಥಾಪಕ. ಎಂದು ರಸೋ ಅವರು ೧೭೫೪ ರಲ್ಲಿ ತಿಳಿಸಿದರು.[೧]
ಸಾಮಾಜಿಕ ಒಪ್ಪಂದ ಸಿದ್ಧಾಂತಸಂಪಾದಿಸಿ
ರುಸೋ ಅವರು ಸಾಮಾಜಿಕ ಒಪ್ಪಂದದ ಮೂಲಕ ರಾಜ್ಯ ಸ್ಥಾಪನೆಯಾಯಿತು ಎಂದು ಹೇಳಿದ್ದಾರೆ. ಮತ್ತು ಅವರು ಆ ಸಿದ್ಧಾಂತವನ್ನೇ ಪ್ರತಿಪಾದಿಸಿದರು. ರುಸೋ ಅವರು ಪ್ರಕಾರ ರಾಜ್ಯವು ಸಾಮಾಜಿಕ ಒಪ್ಪಂದದ ಪ್ರತಿಫಲ ನೈಸರ್ಗಿಕ ಸ್ಥಿತಿಯಲ್ಲಿ ಜೀವನಕ್ಕೆ ಅಡೆತಡೆಗಳು ಹೆಚ್ಚಿದಾಗ, ಆಸ್ತಿ, ಸಂಪತ್ತನ್ನು ರಕ್ಷಿಸಿಕೊಳ್ಳಲು ವಿಫಲನಾದಾಗ ಜನರು ಒಪ್ಪಂದ ಮಾಡಿಕೊಂಡರು. ಸಮಾಜದಲ್ಲಿ ಶಾಶ್ವತವಾದ ಶಾಂತಿ ಸ್ಥಾ ಪಿಸಲು ಕಾನೂನುಗಳನ್ನು ರಚಿಸಿ ಎಲ್ಲರನ್ನೂ ಆಳಲು ಜನರು ತಮ್ಮತಮ್ಮೊಳಗೆ ಒಪ್ಪಂದವನ್ನು ಮಾಡಿಕೊಂಡು ರಾಜ್ಯ ಸ್ಥಾಪಿಸಿದರು ಎಂದು ರುಸೋ ತಿಳಿಸುತ್ತಾರೆ.
ಇಲ್ಲಿ ಒಂದು ಕಡೆ ವ್ಯಕ್ತಿ ಇನ್ನೊಂದು ಕಡೆ ಸಮಾಜ ಒಪ್ಪಂದ ಪಕ್ಷಗಳಾಗುತ್ತವೆ. ಪ್ರತಿಯೊಬ್ಬ ಅಳುವವನು ಆಳಿಸಿಕೊಳ್ಳುವವನು ಆಗುತ್ತಾನೆ. ಹಾಬ್ಸ್ ನ ಸಿದ್ಧಾಂತದಲ್ಲಿ ಎಲ್ಲ ಜನರು ಎಲ್ಲ ಹಕ್ಕುಗಳನ್ನು ಇಡೀ ಸಮಾಜಕ್ಕೆ ಬಿಟ್ಟುಕೊಡುತ್ತಾರೆ. ಇಲ್ಲಿ ಸಮಾಜವು ಸಾರ್ವಭೌಮತ್ವ ಆಗುತ್ತದೆ. ಇದು ಸಾಮಾಜಿಕ ಒಪ್ಪಂದ ಸಿದ್ಧಾಂತ[೨] ವಾಗಿದೆ.
ಜೀನ್ ಜಾಕ್ವೆಸ್ ರೂಸೋ ಇವರು ತಮ್ಮ ಜೀವಿತಾವಧಿಯಲ್ಲಿ ರಾಜ್ಯ ಶಾಸ್ತ್ರಕ್ಕೆ ಮತ್ತು ತತ್ವಶಾಸ್ತ್ರಕ್ಕೆ ಅತಿ ಹೆಚ್ಚು ಕೊಡುಗೆಗಳನ್ನು ಕೊಟ್ಟಿದ್ದಾರೆ ಮತ್ತು ಕ್ರಿ. ಶ ೧೭೭೮ ಜುಲೈ ೨ ನಲ್ಲಿ ಏರ್ಮೇನೋವೆಲ್ಲ ಫ್ರಾನ್ಸ್ ನಲ್ಲಿ ನಿಧನ ಹೊಂದಿದರು. ಇವರ ಸಮಾಧಿ ಮಾಡಿದ ಸ್ಥಳ ಪೆಂಥಿಯನ್ ಪ್ಯಾರಿಸ್ ಇದು ಈಗ ಪ್ಯಾರೀಸ್ ನಲ್ಲಿ ಇದೆ
ಮಾನವ ಅಭಿವೃದ್ಧಿಯ ಹಂತಗಳುಸಂಪಾದಿಸಿ
- ರೂಸೋ ತತ್ತ್ವ- ಸಿದ್ಧಾಂತ
ಕಾಡುಮನುಷ್ಯನ (ಹೋಮೋ ಎರೆಕ್ಟಸ್) ನರವಾನರ (ಸ್ಯಾವೇಜ್) ಹಂತವು (ಹೋಮಿನಿಡ್ ಪ್ರಭೇದ (ನರವಾನರ ಜಾತಿ )ಆದಿಮಾನವ ಆರ್ಡಿಪಿಥೆಕಸ್ ) ಮಾನವ ಅಭಿವೃದ್ಧಿಯ ಮೊದಲ ಹಂತವಲ್ಲ, ಆದರೆ ಅದು ಮೂರನೆ ಹಂತವಾಗಿದೆ ಎಂದು ರೂಸೋ ನಂಬಿದ್ದರು. ಮಾನವ ಸಾಮಾಜಿಕ ಅಭಿವೃದ್ಧಿಯ ಈ ಘೋರ ಹಂತವು ಒಂದು ಕಡೆ ವಿವೇಚನರಹಿತ ಪ್ರಾಣಿಗಳ ಸ್ಥಿತಿ ಮತ್ತು ಪ್ರಾಣಿಗಳಂತಹ "ವಾನರ ಮನುಷ್ಯರು" ಮತ್ತೊಂದೆಡೆ ಕ್ಷೀಣಿಸುತ್ತಿರುವ ಸುಸಂಸ್ಕೃತ ಜೀವನದ ತೀವ್ರತೆಯ ನಡುವೆ ಒಂದು ಅತಿ ಉತ್ತಮವಾಗಿದೆ ಎಂದು ರೂಸೊಗೆ ಉದಾತ್ತ ಘೋರ ಕಾಡುಮಾನವ ಅಥವಾ ನರವಾನರ ಕಲ್ಪನೆಯ ಆವಿಷ್ಕಾರಕ್ಕೆ ಕಾರಣವಾಗಿದೆ. ಆರ್ಥ್ ರ್ ಲವ್ಜೊಯ್- ರೂಸ್ಸೊ ಅವರ ಚಿಂತನೆಯನ್ನು ತಪ್ಪಾಗಿ ನಿರೂಪಿಸಿದ್ದಾರೆ. ನೈತಿಕತೆಯು ಸಮಾಜದಿಂದ ಹುಟ್ಟಿದ್ದಲ್ಲ ಆದರೆ "ಸಹಜ" ಎಂಬ ಅರ್ಥದಲ್ಲಿ "ನೈಸರ್ಗಿಕ"ಎಂಬ ಪದ ಹುಟ್ಟಿದೆ ಎಂಬುದು ರೂಸೊ ಅವರ ಅಭಿಪ್ರಾಯವಾಗಿತ್ತು.ಇದು ಮನುಷ್ಯನ ಸಹಜ ಪ್ರವೃತ್ತಿಯಿಂದ ದುಃಖಕ್ಕೆ ಸಾಕ್ಷಿಯಾಗುವ ಬೆಳವಣಿಗೆಯಾಗಿ ಕಂಡುಬರುತ್ತದೆ, ಇದರಿಂದ ಸಹಾನುಭೂತಿ ಅಥವಾ ಅನುಭೂತಿಯ ಭಾವನೆಗಳು ಉದ್ಭವಿಸುತ್ತವೆ. ಇವು ಪ್ರಾಣಿಗಳೊಂದಿಗೆ ಹಂಚಿಕೊಂಡ ಭಾವನೆಗಳು, ಮತ್ತು ಅವರ ಅಸ್ತಿತ್ವವನ್ನು ಹಾಬ್ಸ್ ಸಹ ಒಪ್ಪಿಕೊಂಡಿದ್ದರು. [೩]