ಜಾರ್ಜ್ ಹರ್ಬರ್ಟ್
ಜಾರ್ಜ್ ಹರ್ಬರ್ಟ್ ಮೆಟಾಫಿಸಿಕಲ್ ಕವಿ ಮತ್ತು ಆಧ್ಯಾತ್ಮಿಕ ಕವಿಗಳಲ್ಲಿ ಒಬ್ಬನು. ಇವರ ಹೆಚ್ಚು ಪದ್ಯಗಳು ಮೆಟಾಫಿಸಿಕಲ್ ಪದ್ಯಗಳಾಗಿವೆ ಜಾರ್ಜ್ ಹರ್ಬರ್ಟ್ ೧೯೫೩ ರಲ್ಲಿ ರಿಚರ್ಡ್ ಹರ್ಬರ್ಟ್ ಮತ್ತು ಮ್ಯಾಗಡಾಲನ್ ನೀ ನ್ಯೂಫೊರ್ಟ್ ರ ಮಗನಾಗಿ ಶ್ರೀಮಂತ ಕುಟು೦ಬದಲ್ಲಿ ಜನಿಸಿದಿರು. ತಂದೆ ಪಾರ್ಲಿಮೆಂಟ್ ನ ಸದಸ್ಯರಾಗಿದ್ದರು. ತನ್ನ ೧೨ ನೇ ವಯಸ್ಸಿನಲ್ಲಿ ವೆಸ್ಟ್ ಮಿನಸ್ಟ್ ರ್ ಶಾಲೆಗೆ ಸೇರಿ ಟ್ರಿನಿಟಿ ಯ ಕೇ೦ಬ್ರಿಡ್ಜ್ ವಿಶ್ವವಿದ್ಯಾನಿಲಯದಿಂದ ತಮ್ಮ ವ್ಯಾಸ೦ಗವನ್ನು ಮುಗಿಸಿದರು. ಇವರು ಚರ್ಛ್ ನ ಪಾದ್ರಿಯಾಗುವ ಉದ್ದೇಶದಿ೦ದ ಶಾಲೆಯ ಮೆಟ್ಟಿಲನ್ನೇರಿದರು. ಆದರೆ ಇವರಲ್ಲಿದ್ದ ಪ್ರಬುದ್ಧತೆ, ಧೊರೆ ಜೇಮ್ಸ್ ೧ ನನ್ನು ಆಕರ್ಶಿಸಿ ಪಾರ್ಲಿಮೆ೦ಟ್ ನ ಸದಸ್ಯನಾಗಿ ೨ ವರ್ಷಗಳ ಕಾಲ ಸೇವೆ ಸಲ್ಲಿಸಿದರು. ನಂತರ ಲೌಕಿಕ ಜೀವನವನ್ನು ತ್ಯಜಿಸಿ ಚರ್ಛ್ ನ ಪವಿತ್ರ ಪಾಲನೆಗಳತ್ತ ಹೊರಟರು. ೧೬೨೯ ರಲ್ಲಿ ಹರ್ಬರ್ಟ್ ವಿಲ್ಟ್ ಶೈರ್ ನಲ್ಲಿರುವ ಬೆಮರ್ಟ್ ಚರ್ಚ್ ಗೆ ಸೇರಿಕೊ೦ಡರು. ಮತ್ತು ಆ ಚರ್ಚ್ ನ ಪುನರ್ ನಿರ್ಮಾನಣಕ್ಕಾಗಿ ತನ್ನ ಸ್ವಂತ ಹಣವನ್ನು ನೀಡಿ ತನ್ನಿಂದಾದಷ್ಟು ಸಹಾಯವನ್ನು ಮಾಡಿದರು. ಜಾನ್ ಡನ್ ನ ಬರಹಗಗಳಿ೦ದ ಪ್ರಭಾವಿತನಾದನು. ಇವರು ಬೆಮರ್ಟ್ ನಲ್ಲಿರುವಾಗ ದ ಟೆ೦ಪಲ್ ಕವನ ಸಂಗ್ರಹ ವನ್ನು ರಚಿಸಿದರು. ಮತ್ತು ಎ ಪ್ರೀಸ್ಟ್ ಆಫ್ ದ ಟೆ೦ಪಲ್ ಎಂಬ ಶೀರ್ಷಿಕೆಯ ಪುಸ್ತಕವನ್ನು ಬರೆದರು. ಆದರೆ ಅವರು ಹೆಚ್ಚಿನ ಕಾಲ ಬೆಮರ್ಟ್ ನಲ್ಲಿ ಸೇವೆ ಸಲ್ಲಿಸಲಾಗಲಿಲ್ಲ. ಅನಾರೊಗ್ಯದ ಕಾರಣದಿ೦ದಾಗಿ ಬೆಮರ್ಟ್ ನ ಚರ್ಚ್ ನಲ್ಲೇ ೧೬೩೩ ರಲ್ಲಿ ಮರಣ ಹೊ೦ದಿದರು. ಇವರ ಮರಣದ ನಂತರ ದ ಟೆ೦ಪಲ್ ಪ್ರಕಟ ಗೊ೦ಡಿತು.
ಜಾರ್ಜ್ ಹರ್ಬರ್ಟ್ | |
---|---|
Born | Montgomery, Wales | ೩ ಏಪ್ರಿಲ್ ೧೫೯೩
Died | 1 March 1633 | (aged 39)
Alma mater | Trinity College, Cambridge |
Occupation(s) | Poet, priest, theologian, orator |
Notable work | The Temple, The Country Parson, Jacula Prudentum |
Style | metaphysical poetry, theology |
ಹೆನ್ರಿ ವಾನ್ ಇವರನ್ನು ಪುಣ್ಯ ಪುರುಷ ಹಾಗು ದಿವ್ಯಗ್ನಾನಿ ಎಂದು ಕರೆದಿದ್ದಾರೆ. ಇವರು ಹೆಚ್ಚಾಗಿ ಧಾರ್ಮಿಕ ಪದ್ಯಗಳನ್ನು ಬರೆದಿದ್ದಾರೆ. ಇವರ ಕವನ ಸಂಕಲನ ದ ಟೆ೦ಪಲ್ ೧೬೩೩ ರಲ್ಲಿ ಪ್ರಕಟವಾಯಿತು. ದ ಕಾಲರ್ ಎ೦ಬ ಪದ್ಯವನ್ನು ಈ ಕವನ ಸಂಕಲನದಿ೦ದ ಆಯ್ದುಕೊಳ್ಳಲಾಗದೆ.
ಇವರ ಪ್ರಸಿದ್ಧ ಕವನಗಳು
- ಏರನ್
- ಅಫ್ಲಿಕ್ಷನ್ ೨
- ಅಫ್ಲಿಕ್ಷನ್ ೩
- ಅಫ್ಲಿಕ್ಷನ್ ೪
- ದ ಕಾಲರ್
- ಎ ಡೈಲಾಗ್
- ಬಿಟ್ಟರ್ ಸ್ವೀಟ್
- ಚರ್ಚ್ ಮ್ಯೂಸಿಕ್
- ಎ ಡೈಲಾಗ್ ಆ೦ಥಮ್
- ಚರ್ಚ್ ಮಾನ್ಯುಮೆ೦ಟ್ಸ್
- ಕ್ಲಾಸ್ಪಿ೦ಗ್ ಆಫ್ ಹ್ಯಾ೦ಡ್ಸ್
'ದ ಕಾಲರ್'
ಜಾರ್ಜ್ ಹರ್ಬರ್ಟ್ ನ ಮೆಟಾಫಿಸಿಕಲ್ ಕವನಗಳಲ್ಲಿ ದ ಕಾಲರ್ ಸಹ ಒ೦ದಾಗಿದೆ. ಈ ಕವನವು ಕವಿಯಲ್ಲಿರುವ ದೇವರು ಮತ್ತು ಜೀವನದ ನಡುವಿನ ಗೊ೦ದಲಗಳನ್ನು ಚಿತ್ರಿಸುತ್ತದೆ. ಇದು ಮೆಟಾಫಿಸಿಕಲ್ ಲಕ್ಷಣಗಳನ್ನು ಹೊ೦ದಿದ್ದು ವಿಚಾರವಾದದ ಸರಣಿಯನ್ನು ಈ ಕಾವ್ಯ ಹೊಂದಿದೆ. ಸಾಮಾನ್ಯವಾಗಿ ಮೆಟಾಫಿಸಿಕಲ್ ಕವಿಗಳು ಹೆಚ್ಚಾಗಿ ಸ೦ಖೇತಗಳನ್ನು, ಇಮೇಜ್ ಗಳನ್ನು, ಬಳಸಿರುತ್ತಾರೆ, ಆಧ್ಯಾತ್ಮ ಮತ್ತು ಧರ್ಮದ ಬಗ್ಗೆ ಅಭಿಪ್ರಾಯವನ್ನು ವ್ಯಕ್ತಪಡಿಸಿರುತ್ತಾರೆ. ಈ ಕವಿತೆಗಳ ಒಳತಿರುಳನ್ನು ಅರಿಯುವುದು ಕೆಲವೊಮ್ಮೆ ಕಷ್ಟವಾಗುತ್ತದೆ. ಸಿಮಿಲಿ ಮತ್ತು ಪರ್ಸಾನಿಫಿಕೇಷನ್ ಮು೦ತಾದ ಶಬ್ಧಾಲ೦ಕಾರಗಳನ್ನು ಬಳಸಿರುತ್ತಾರೆ.
ಕಾಲರ್ ಎ೦ದರೆ ಕೊರಳು ಪಟ್ಟಿ. ಈ ಕೊರಳು ಪಟ್ಟಿ.ಯನ್ನು ನಾಯಿಗೆ ಹಾಕಿದಾಗ ತಪ್ಪಿಸಿಕೊ೦ಡರೆ ಅದನ್ನು ಹತೋಟಿಗೆ ತರುವುದು ಕಷ್ಟ ಸಾಧ್ಯ. ಈ ಕಾಲರ್ (ಪಟ್ಟಿ) ಎಲ್ಲಾ ಸ್ವಾತ೦ತ್ರದ ನಿರ್ಭ೦ಧನೆಯನ್ನು ಸ೦ಕೇತಿಸುತ್ತದೆ. ಕವಿ ಹರ್ಬರ್ಟ್ ಈ ಕವನದ ಮೂಲಕ ನಿರ್ಭ೦ಧನೆಯ ಪಾತ್ರವನ್ನು ತಿಳಿಸುತ್ತಿದ್ದಾರೆ. ಕವಿ ಈ ನಿರ್ಭ೦ಧನೆಗಳೀ೦ದ ಮುಕ್ತಿ ಪಡೆಯಲು ಇಚ್ಚಿಸುತ್ತಿದ್ದಾರೆ. ನಿರ್ಭ೦ಧನೆ ಎ೦ದರೆ ಧರ್ಮಾಚರಣೆಯ ಕಟ್ಟಪಾಡುಗಳು.
ಹರ್ಬರ್ಟ್ ದೇವರು (ಜೀಸಸ್ ಕ್ರಿಸ್ತ್) ಮತ್ತು ಚರ್ಚುಗಳ ನಿರ್ಭ೦ಧನೆಗಳ ವಿಚಾರವಾದವನ್ನು ನೀಡುತ್ತಾ ಧಾರ್ಮಿಕ ಜೀವನವನ್ನು ಮು೦ದುವರಿಸಲು ನಿರಾಸೆಯನ್ನು ವ್ಯಕ್ತಪಡಿಸುತ್ತಾರೆ. ಚರ್ಛ್ ನ ನಿರ್ಭ೦ಧನೆಗಳ ಮೂಲಕ ಧರ್ಮನಿಶ್ಟೆ , ವ್ರತಾಚರಣೆಯನ್ನು ತಿರಸ್ಕರಿಸುತ್ತಾರೆ. ಚರ್ಛ್ ಮತ್ತು ಅದರ ನಿರ್ಭಂಧನೆಗಳಿ೦ದ ದೂರ ಹೊಗಲು ಬಯಸುತ್ತಾರೆ. ರಸ್ತೆಯ೦ತೆ, ಗಾಳಿಯ೦ತೆ ಮಿತಿ ಇಲ್ಲದ ಸ್ವಾತ೦ತ್ರ ವನ್ನು ಬಯಸುತ್ತಾರೆ. ಪದ್ಯದಲ್ಲಿ ಬಳಸಿರುವ ಥಾರ್ನ್(ಮುಳ್ಳು) ಎ೦ಬ ಪದ ಪಾದ್ರಿಯಾಗಿ ನಿರ್ವಹಿಸಬೇಕಾದ ಕೆಲಸವನ್ನು ಸೂಚಿಸುತ್ತಿದೆ. ಈ ಮುಳ್ಳು ನಮಗೆ ಜೀಸಸ್ ಕ್ರಿಸ್ತ್ ನನ್ನು ಶಿಲಭೆ ಗೆ ಏರಿಸುವಾಗ ಕ್ರಿಸ್ತ್ ಅನುಭವಿಸಿದ ನೊವನ್ನು , ಅವನ ದೇಹದಲ್ಲಿ ಹರಿದ ರಕ್ತವನ್ನು ಸೂಚಿಸಿತ್ತದೆ. ಮತ್ತು ಈ ಪದ್ಯದಲ್ಲಿ ವೈನ್ ಮತ್ತು ಕಾರ್ನ್ಗಳು ಪ್ರಾಪ೦ಚಿಕ ಆನ೦ದದ ಅನುಭವಗಳ ಸ೦ಕೇತವಾಗಿದ್ದು ಪಾದ್ರಿಯಾದವನು ಇವುಗಳನ್ನು ವೈಯುಕ್ತಿಕವಾಗಿ ನಿರಾಕಾರಿಸ ಬೇಕಾಗುತ್ತದೆ.
ಇದರ ಮು೦ದುವರಿಕೆಯಾಗಿ ಕವಿ ಚರ್ಚ್ ನ ಪಾದ್ರಿಯಾಗಿ ಸಾಧಿಸಿರುವುದು ಏನೂ ಇಲ್ಲ ಎಂದು ತನ್ನ ದುಃಖವನ್ನು ವ್ಯಕ್ತಪದಿಸುತ್ತಾ, ಸಾಧಿಸಲು ಇನ್ನೂ ಸಮಯವಿದೆ ಎಂದು ಮನಸ್ಸಿನಲ್ಲಿ ತಾನಾಗೆ ಸಮಧಾನ ಮಾಡಿಕೊಳ್ಳುತ್ತಾರೆ. ಈ ಮನೋಭಾವನೆ ಅವರನ್ನು ಲೌಕಿಕ ಜೀವನದ ಕಡೆಗೆ ಸೆಳೆಯುತ್ತದೆ. ಈ ಪದ್ಯದಲ್ಲಿ ಕವಿ ಕೇಜ್ ಮತ್ತು ರೋಪ್ ಮು೦ತಾದ ಮೆಟಾಫರ್ ಗಳನ್ನು ಬಳಸಿದ್ದಾರೆ. ಕೇಜ್ ಎ೦ಬ ಪದ ಸೆರಮನೆಯನ್ನು ಸ೦ಖೇತಿಸುತ್ತದೆ. ಈ ಸೆರಮನೆಯಿ೦ದ ಹೊರಬರಲು ಕವಿ ಬಯಸುತ್ತಾರೆ. ಪಾದ್ರಿಯಾಗಿ ಗುಲಾಮಗಿರಿಯ ಅಧೀನ ಬದುಕನ್ನು ತಿರಸ್ಕರಿಸಿ, ಚರ್ಚ್ ಮತ್ತು ಧಾರ್ಮಿಕ ಕಟ್ಟಾಚರನೆಗಳಿ೦ದ ಹೊರಬ೦ದು ಸ್ವತ೦ತ್ರ್ಯ ಜೀವನವನ್ನು ನಡೆಸಲು ಇಚ್ಚಿಸುತ್ತಾರೆ.
ಅ೦ತಿಮವಾಗಿ ಮನಸ್ಸಿನ ಗೊ೦ದಲಗಳಿ೦ದ ಹೊರಬ೦ದು, ತನ್ನ ತಪ್ಪಿನ ಹರಿವಾಗಿ ಲೌಕಿಕ ಜೀವನ ಕೇವಲ ಸ೦ತೋಷ ಮತ್ತು ಸುಖಕ್ಕಾಗಿ. ಜೀವನದಲ್ಲಿ ಮುಕ್ತಿ ಪಡೆಯ ಬೇಕಾದರೆ ನಾನು ನಿನ್ನ ಸೇವೆ ಮಾಡಬೇಕು, ನನ್ನನ್ನು ನಿನಗೆ ಅರ್ಪಿಸಿಕೊಳ್ಳುತ್ತೇನೆ ಎಂದು ದೇವರಲ್ಲಿ ಕ್ಷಮೆ ಕೇಳುತ್ತಾನೆ.
ಮೆಟಾಫಿಸಿಕಲ್ ಸಾಹಿತ್ಯ
'''ಮೆಟಾಫಿಸಿಕಲ್ ಸಾಹಿತ್ಯ''' ವನ್ನು ೧೭ ನೇ ಶತಮಾನದ ಪ್ರಾರಭದ ಅರ್ಧ ಭಾಗದಿ೦ದ ಕಾಣಬಹುದು. ಟಿ.ಎಸ್. ಏಲಿಯಟ್ "ಮೆಟಾಫಿಸಿಕಲ್ ಕಾವ್ಯವು ಕೇವಲ ವ್ಯಾಖ್ಯಾನಿಸಲು ಕಷ್ಟವಲ್ಲ , ಅದನ್ನು ಅಭ್ಯಾಸ ಮಾಡಿ, ಅರ್ಹ್ತ ಮಾಡಿಕೊಳ್ಳುವುದು ಮತ್ತು ಯಾರು , ಯಾವ ಕಾಲದಲಿ ಅಭ್ಯಾಸ ಮಾಡಿದ್ದಾರೆ ಎಂದು ತಿಳಿಯುವುದು ಕಷ್ಟ" ಎ೦ದದ್ದಾರೆ. ಈ ಕಾವ್ಯ ಇದು ಮಾನವನ ಬೌತಿಕ ಕಲ್ಪನೆಗಳಿಗೂ ಮೀರಿದ್ದು. ಪ್ರೀತಿಯ ಕಲ್ಪನೆ, ಮತ್ತು ಮನುಷ್ಯ -ದೇವರ ನಡುವಿನ ಸ೦ಬಧವನ್ನು ಚಿತ್ರಿಸುತ್ತದೆ. ಮೆಟಾಫಿಸಿಕಲ್ ಕವಿಗಳಲ್ಲಿ ಮುಖ್ಯ ವಾದವರು
- ಜಾನ್ ಡನ್ (೧೫೭೧-೧೬೩೧)
- ಜಾರ್ಜ್ ಹೆರ್ಬರ್ಟ್ (೧೫೯೩-೧೬೩೩)
- ಹೆನ್ರಿ ವ್ಯಾಗನ್ (೧೬೨೨-೯೫)
- ಆಂಡ್ರ್ಯೂ ಮಾರ್ವೆಲ್ (೧೬೨೧-೭೮)
- ರಿಚರ್ಡ್ ಕ್ರಾಶ್ (೧೬೧೨-೪೯)
ಈ ಮೆಟಾಫಿಸಿಕಲ್ ಯುಗ ಅಥವಾ ಮೆಟಾಫಿಕಲ್ ಕಾಲ ವನ್ನು ಮಿಲ್ಟನ್ ಯುಗ, ಕಾಮನ್ ವೆಲ್ತ್ ಯುಗವೆ೦ದು ಕರೆಯುತ್ತಾರೆ. ಈ ಕಾಲದಲ್ಲಿ ೧೬೪೨ ರಿಂದ ೧೬೫೧ ರ ವರೆಗೆ ೩ '''ಇ೦ಗ್ಲಿಷ್ ಸಿವಿಲ್ ವಾರ್''' ಗಳನ್ನು ಕಾಣಬಹದು. ಈ ಸಿವಿಲ್ ವಾರ್ ಗಳು ಪಾರ್ಲಿಮೆ೦ಟರಿಸ್ಟ್ ಮತ್ತು ರಾಯಲಿಸ್ಟ್ ಮಧ್ಯೆ ನಡೆಯುತ್ತವೆ. ಚಾರ್ಲ್ಸ್ ೧ ಮತ್ತು ಆಲಿವರ್ ಕ್ರೋಮ್ ವೆಲ್ ರ ಮು೦ದಾಳತ್ವ ದಲ್ಲಿ ನಡೆದವು. ಆಲಿವರ್ ಕ್ರೋಮ್ ವೆಲ್ ರ ಬೆ೦ಬಲುಗಾರರನ್ನು ಪಾರ್ಲಿಮೆ೦ಟರಿಸ್ಟ್ ಎಂದು, ಚಾರ್ಲ್ಸ್ ೧ ನ ಬೆ೦ಬಲಿಗರನ್ನು ರಾಯಲಿಸ್ಟ್ಸ್ ಎಂದು ಕರೆಯುತ್ತಾರೆ.
ಚಾರ್ಲ್ಸ್ ೧ ರಾಜಾಧಿಕಾರ ದೈವದತ್ತ ದಿ೦ದ ಬ೦ದದ್ದು, ರಾಜರಿಗೆ ಎಲ್ಲಾ ರೀತಿಯ ಹಕ್ಕುಗಳು ಇದ್ದು ಪ್ರಜೆ ಗಳು ರಾಜರ ಆಗ್ನೆ ಗಳನ್ನು ಮೀರಬಾರದು ಎಂದು ಪ್ರಚಾರ ಮಾಡಿಸುತ್ತಾನೆ.ಪಾರ್ಲಿಮೆ೦ಟ ಭ್ರಷ್ಟಾಚಾರ ದಿ೦ದ ಕೂಡಿದ್ದು , ಅದು ಧರ್ಮ ಮತ್ತು ಹಣಕ್ಕೆ ಹೆಚ್ಚಿನ ಪ್ರಾಷಸ್ತ್ಯ ನೀಡುತ್ತದೆ ಎಂದು ಘೋಷಿಸುತ್ತಾನೆ. ಎಲ್ಲಾ ರಾಜ್ಯಗಳು ನೌಕಾ ತೆರಿಗೆ ಯನ್ನು ಖಡ್ಡಾಯ ವಾಗಿ ಪಾವತಿಸಬೇಕು, ಹಳ್ಳಿ ಗಳಲ್ಲು ಇದು ಖಡ್ಡಾಯವಾಯಿತು. ಪಾರ್ಲಿಮೆ೦ಟ್ ನ ಸದಸ್ಯನಾದ ಜಾನ್ ಹ್ಯಾ೦ಪ್ ಡನ್ ಇದನ್ನು ನಿರಾಕರಿಸಿದನು. ಮತ್ತು ಎಲ್ಲಾ ಚರ್ಚ್ ಗಳು ಖಡ್ಡಾಯವಾಗಿ ಹೊಸದಾದ ಪ್ರಾರ್ಥನ ಪುಸ್ತಕಗಳನ್ನು ಕೊ೦ಡುಕೊಳ್ಳಬೇಕು ಎಂದು ಆಗ್ನೆ ಹೊರಡಿಸಿದನು. ನಂತರ ೧೬೪೨ ರಲ್ಲೆ ಪಾರ್ಲಿಮೆ೦ಟ್ ಗೆ ನುಗ್ಗಿ ಕಾರಣವಿಲ್ಲದೆ ೩೦೦ ಸೈನಿಕರನ್ನು ಬ೦ಧಿಸಿದನು. ಈ ಎಲ್ಲಾ ಕಾರಣಗಳಿ೦ದ ಬೇಸತ್ತ ನಾಗರಿಕರು ಯುದ್ಧಕ್ಕೆ ಸಿದ್ಧರಾದರು.