ಜಾನ್ ಡನ್ (೨೨ ಜನವರಿ ೧೫೭೨ ರಿಂದ ೩೧ ಮಾರ್ಚ್ ೧೬೩೧) ಇಂಗ್ಲೆಂಡಿನ Metaphysical ಕವಿಗಳಲ್ಲಿ ಪ್ರಮುಖನಾದವನು. ಇವನ ಮತ್ತು ಇವನ ಪ್ರಭಾವಕ್ಕೆ ಒಳಗಾದ ಕವಿಗಳ ಕಾವ್ಯಕ್ಕೆ ಮೆಟಫಿಸಿಕಲ್ ಕಾವ್ಯ ಎಂದು ಹೆಸರು.

John Donne
John Donne
ಜನನbetween 24 January and 19 June 1573[]
London, England
ಮರಣ31 March 1631 (aged 59)
London, England
ವೃತ್ತಿPoet, priest, lawyer
ರಾಷ್ಟ್ರೀಯತೆEnglish
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆOxford University
ಪ್ರಕಾರ/ಶೈಲಿSatire, love poetry, elegy, sermons
ವಿಷಯLove, sexuality, religion, death
ಸಾಹಿತ್ಯ ಚಳುವಳಿMetaphysical poetry

ಜಾನ್ ಡನ್ ಇಂಗ್ಲಿಶ್ ಸಾಹಿತ್ಯದ ಆಧ್ಯಾತ್ಮಿಕ ಕವಿಗಳಲ್ಲಿ ಒಬ್ಬನು.ಪ್ರಮುಖವಾಗಿ ಆಧ್ಯಾತ್ಮಿಕತೆ , ವಿಡಂಬನೆ ಗಳನ್ನು ಒಳಗೊಂಡ ಇವನ ಕವನಗಳು ಹೆಚ್ಚು ಪ್ರಸಿದ್ದಿಯಾಗಿವೆ.ಡನ್ ಎಲಿಜಬೆತ್ ಯುಗದ ಸಾಹಿತ್ಯಕ್ಕೆ ವಿರುದ್ದವಾದ ಸಾಹಿತ್ಯವನ್ನು ಸೃಷ್ಟಿಸಿದನು.ಅಂದರೆ ಇವನು ಆ ಕಾಲದ ಇಂಪಾದ,ಪೆಟ್ರಾರ್ಕನ್,ಪ್ಲೇಟೋನಿಕ್ ಮತ್ತು ಆರ್ಕೆಡಿಯನ್ ಶೈಲಿಯ ಸಾಹಿತ್ಯವನ್ನು ವಿರೋಧಿಸಿದನು. ಇದಕ್ಕೆ ಬದಲಾಗಿ ಸಾಹಿತ್ಯಕ್ಕೆ ಅವನದೇ ಆದ ವಿಚಾರವಂತಿಕೆ,ಕಾಂಪ್ಲೆಕ್ಸಿಟಿ,ಅನಾಲಿಸಿಸ್ ಮತ್ತು ಫಾರ್ ಫೆಚ್ಡ್ ಇಮೇಜರಿ ಗಳನ್ನು ಬಳಸಿ ನೈಜತೆಯನ್ನು ತಂದನು.

ಎಲಿಜಬೆತ್ ಯುಗದ ಕಾವ್ಯಗಳಲ್ಲಿ ಬಹುಭಾಗಕ್ಕೆ ಸಂಗೀತದ ಭಾಂದವ್ಯವಿತ್ತು.ಮತ್ತು ಹಿತವಾದ ಪದ್ಯಮಾದ್ಯಮ ವನ್ನು ಕವಿಗಳು ಆರಿಸಿಕೊಂಡರು.ಆದರೆ ಡನ್ ನ ಕವನಗಳಲ್ಲಿ ವಿಂಡಬನೆ ಉಂಟು.ಗಂಭೀರವಾದ ಅನುಭವವನ್ನು ಹೇಳುವಾಗಲು ಹಾಸ್ಯಬೆರೆಯುತ್ತದೆ. ಒಬ್ಬ ಪ್ರೇಮಕವಿಯಾಗಿಯು ಸಹ ಡನ್ ಪ್ರಸಿದ್ದಿಯಾಗಿದ್ದಾನೆ. ಆದರೆ ಈ ಪ್ರೀತಿಯ ಕವಿತೆಗಳು ಆಧ್ಯಾತ್ಮಿಕತೆಯನ್ನು ಹುಡುಕುತ್ತವೆ. ಈತನ ಪ್ರೇಮ ಕವಿತೆಗಳು ಹೆಚ್ಚಾಗಿ ಅವನ ಅನುಭವದ ಮೂಲಕ ರೂಪುಗೊಂಡವು.ಮತ್ತು ಡನ್ ನನ್ನು ಒಬ್ಬ ಗ್ರೇಟ್ ವಿಟ್ ಎಂದು ಕರೆದಿದ್ದಾರೆ. ಈತನ ವಿಟ್ ಹೆಚ್ಚು ನೈಜವಾದದು,ನಿಜವಾದದು ಮತ್ತು ಪ್ರಾಮಾಣಿಕತೆಯನ್ನು ಹೊಂದಿವೆ. ಈತನ ಕವಿತೆಗಳು ಮೊದಲ ನೋಟಕ್ಕೆ ಅಸಂಬದ್ದ ಎನಿಸಿದರು ಓದುಗ ತನ್ನನ್ನು ಗಂಭೀರವಾಗಿ ಪರಿಗಣಿಸಿ ಕೊನೆಗೆ ಸ್ವೀಕರಿಸುವಂತೆ ಮಾಡುವ ಮೂಲಕ ಈ ಭಾಗಗಳು ಅನುಭವವನ್ನು ಕೇಂದ್ರೀಕರಿಸುತ್ತವೆ ಎಂದು ಹೇಳಿದ್ದಾರೆ. ಡನ್ ಇವನ ಕವನಗಳಲ್ಲಿ ಉತ್ತಮ ಇಮೇಜ್ ಗಳನ್ನು ಸ್ರುಸ್ಟಿಸುತ್ತಿದ್ದನು. ಅವು ಹೆಚ್ಚಾಗಿ ನೈಜತೆ,ವೈಜ್ನಾನಿಕತೆ,ದರ್ಮ,ನಿತ್ಯಜೀವನ ಮತ್ತು ಕಲಿಕೆಗಳಿಂದ ಬಂದವುಗಳಾಗಿವೆ.

ಡನ್ ನ ಕವನಗಳನ್ನು ಹಲವರು ಮೆಚ್ಚಿಕೊಂಡರು.ಅದೇ ರೀತಿ ಕೆಲವರು ಟೀಕಿಸಿದರು.ಪ್ರಮುಖವಾಗಿ ಬೆನ್ ಜಾನ್ಸನ್,ಟಿ. ಎಸ್. ಎಲಿಯಟ್ ಮುಂತಾದವರು....ಇವರು ಡನ್ ನ ಕಾವ್ಯದಲ್ಲಿ ಬೌದ್ದಿಕ ವಿಶ್ಲೇಶಣೆ ಅತಿಯಾಯಿತು ಎಂದು ಹೇಳಿದ್ದಾರೆ.ಎಲಿಜಬೆತ್ ಕವಿಗಳಿಗೆ ಹೋಲಿಸಿದರೆ ಇವರ ವಸ್ತು,ದ್ವನಿ,ಭಾಷೆ ಎಲ್ಲವೂ ಭಿನ್ನವಾದವು.

ಮೆಟಫಿಸಿಕಲ್ ಕವನಗಳನ್ನು ಮುಖ್ಯವಾಗಿ ಡನ್ ನ ಕವನಗಳನ್ನು ಅರ್ಥಮಾಡಿಕೊಳ್ಳುವುದಕ್ಕೆ ಸ್ವಲ್ಪಮಟ್ಟಿನ ವಿಚಾರವಂತಿಕೆ ಇರಬೇಕು.ಕವನವನ್ನು ಗಮನವಿಟ್ಟು ಓದಬೇಕು ಏಕೇಂದರೆ ಇವು ಸಾಮಾನ್ಯವಾಗಿ ವಾದದ ರೂಪದಲ್ಲಿರುತ್ತವೆ. ಮತ್ತು ಡನ್ ಹೆಚ್ಚಾಗಿ 'ಕನ್ಸೀಟ್' ನ ಬಳಕೆಯನ್ನು ಮಾಡಿದ್ದಾನೆ . ಉದಾಹರಣೆ: ಎ ವ್ಯಾಲಿಡಿಕ್ಶನ್ ಫರ್ಬಿಡಿಂಗ್ ಮೌರ್ನಿಂಗ್, ದ ಕೆನನೈಸೇಶನ್, ದ ಸನ್ ರೈಸಿಂಗ್

ಈ ಕವನಗಳಲ್ಲಿ ಅವನ ಆಧ್ಯಾತ್ಮಿಕತೆಯ ಒಲವು, ಅನುಭವ ಇವುಗಳೊಂದಿಗೆ ಈ ಕಾಲದ ಎಲ್ಲಾ ಲಕ್ಶಣಗಳನ್ನು ಕಾಣಬಹುದು. ಡನ್ ತನ್ನ ಪ್ರೇಮ ಮತ್ತು ಧಾರ್ಮಿಕ ಕವನಗಳ ಹೊರತಾಗಿಯೂ ಇವನ ನಾಟಕೀಯ ಪ್ರಾರಂಭಗಳಿಗೆ ಹೆಚ್ಚು ಪ್ರಸಿದ್ಧಿಯಾಗಿದ್ದಾನೆ ಎಂದು ಹೇಳಿದ್ದಾರೆ. ಇಂಗ್ಲೀಶ್ ಸಾಹಿತ್ಯ ಚರಿತ್ರೆ ಪುಸ್ತಕದ ಲೇಖಕ ರಾದ ಎಲ್.ಎಸ್.ಶೇಶಗಿರಿ ರಾವ್ ರವರ ಪ್ರಕಾರ'ಡನ್ ನ ಕವನಗಳಲ್ಲಿ ಚೈತನ್ಯವಿದೆ.ತುರ್ತಿನ ಭಾವನೆ ಇದೆ. ಭಾವತೀವ್ರತೆಯ ವಾದವಿದೆ. ಹಲವೊಮ್ಮೆ ವಾದ ಅನಿರೀಕ್ಶಿತವಾಗಿ ಅತಿ ಬುದ್ದಿವಂತಿಕೆ ಯಿಂದ ಮುಂದುವರೆಯುತ್ತದೆ.ಕಾವ್ಯವನ್ನು ನಿತ್ಯ ಜೀವನದ ಸಂಭಾಶಣೆಗೆ ಹತ್ತಿರ ತಂದಿದ್ದಾನೆ.ನಿತ್ಯಜೀವನದ ಸಂಭಾಶಣೆಯ ದಾಟಿ,ತುರ್ತು ಉದ್ವೇಗ,ಅದರಿಂದ ದೂರವಾದ ವಿದ್ವತ್ತು,ಅನಿರೀಕ್ಶಿತ ಹೋಲಿಕೆಗಳು ಇವುಗಳ ಸಂಗಮ ಡನ್ ನ ಕವನಗಳು ಎಂದಿದ್ದಾರೆ.

ಡನ್ ನ ಕವನಗಳನ್ನು ಪ್ರಮುಖವಾಗಿ ೩ ಭಾಗಗಳಾಗಿ ವಿಂಗಡಿಸಬಹುದು.

  • ಪ್ರೇಮ ಕವನಗಳು
  • ದಿ ಕೆನೊನೈಸೇಶನ್
  • ದಿ ಬ್ಲಾಸಮ್
  • ದಿ ಗುಡ್ ಮಾರೋ
  • ಆಧ್ಯಾತ್ಮಿಕ ಕವನಗಳು
  • ದ ಫಾದರ್
  • ಡೆತ್ ಬಿ ನಾಟ್ ಪ್ರೊಡ್
  • ಓ ಮೈ ಬ್ಲಾಕ್ ಸೋಲ್
  • ಮಿಸಲೇನಿಯನ್ ಕವನಗಳು
  • ಸಟೈರ್ ಆನ್ ರಿಲಿಜಿಯನ್
  • ದಿ ಫಸ್ತ್ರ ಅಂಡ್ ಸೆಕೆಂಡ್ ಆನಿವರ್ಸರಿ ಮುಂತಾದವು

ಇವನು ಪ್ರೇಮಕವಿಯಾಗಿ ನಂತರ ಆಧ್ಯಾತ್ಮಿಕ ಕವಿಯಾಗಿ ಬರೆಯಲಾರಂಭಿಸಿದನು. ಡನ್ ನ ಕಾವ್ಯಶ್ಯಲಿಯನ್ನು ಉತ್ತಮವಾಗಿ ಅಥ್ರಮಾಡಿಕೊಳ್ಳಲು ಈ ಕೆಳಗಿನ ಪದ್ಯವನ್ನು ಗಮನಿಸಿ.

ಕೆನೊನೈಸೇಶನ್

ಬದಲಾಯಿಸಿ

(ಕೆನೊನೈಸೇಶನ್ ಎಂದರೆ ಕ್ರ್ಸಿಸ್ತ ದರ್ಮ ಕ್ಕೆ ಅರ್ಪಣೆ ಎಂದರ್ಥ.) ಇದು ಡನ್ ನ ಉತ್ತಮ ಪ್ರೇಮ ಕವನಗಳಲ್ಲಿ ಒಂದಾಗಿದೆ.ತನ್ನ ಮತ್ತು ತನ್ನ ಪ್ರೇಯಸಿಯಾದ ಅನ್ನಾಮೋರ್ ಳ ಪ್ರೀತಿಯ ಬಗ್ಗೆ ಮಾತಾಡುತ್ತ ಆಧ್ಯಾತ್ಮಿಕತೆಯನ್ನು ತಲುಪುವ ಬಗೆಯನ್ನು ಇಲ್ಲಿ ತಿಳಿಸಿದ್ದಾರೆ.ಕವಿ ತನ್ನ ಬಗ್ಗೆ ಮಾತನಾಡಿಕೊಳ್ಳುವ ಜನರಿಗೆ ಹೇಳುತ್ತಾನೆ,ಇದು ನಮ್ಮ ಪ್ರೀತಿಯ ವಿಶಯ ಅದರ ಕುರಿತು ಬೇರೆಯವರು ಮಾತನಾಡಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ಹೇಳುತ್ತಾನೆ. ಪ್ರೀತಿಗೆ ತಮ್ಮ ಜೀವನವನ್ನು ಅರ್ಪಿಸಿ ಆ ಮೂಲಕ ನಾವು ದೇವರುಗಳಾಗುತ್ತೇವೆ ಎಂದು ಹೇಳಿದ್ದಾರೆ.ಮತ್ತು ಈ ಪ್ರಪಂಚದಲ್ಲಿ ತಮ್ಮ ಪ್ರೀತಿಯ ಅಮರತೆಯ ಬಗ್ಗೆ ಮಾತನಾಡುತ್ತಾರೆ.ಪದ್ಯದ ಒಳಾರ್ಥವನ್ನು ಗಮನಿಸಿದರೆ ಅವರು ಈ ಪ್ರೀತಿಯ ಮೂಲಕ ಕ್ರಿಸ್ತ ಧರ್ಮ ವನ್ನು ಟೀಕಿಸುತ್ತಿದ್ದಾರೆ ಎಂದು ಹೇಳಬಹುದು.

ಕವನ ಈ ರೀತಿಯಾಗಿ ಶುರುವಾಗುತ್ತದೆ.

  • ದೇವರ ಹೆಸರಿನಲ್ಲಿ ನೀವು ಮಾತನಾಡುವುದನ್ನು ನಿಲ್ಲಿಸಿ.ಮತ್ತು ನನ್ನನ್ನು ಮಾತನಾಡುವುದಕ್ಕೆ ಬಿಡಿ.ನೀವು ನನ್ನ ಪ್ರೀತಿಯ ಬಗ್ಗೆ ಬಿಟ್ಟು ಪಾಲ್ಸ ನ ಬಗ್ಗೆ ಗೋಟ್ ನ ಬಗ್ಗೆ ಮಾತನಾಡಿ, ನಿಮ್ಮ ಭವಿಶ್ಯದ ಬಗ್ಗೆ ಮಾತನಾಡಿ,ಯಾವುದಾದರು ಕಲೆಯನ್ನು ಕಲಿತುಕೊಳ್ಳಿ ಆಗ ಬೇರೆಯವರಾದರು ನಿಮ್ಮನ್ನು ಗೊರವಿಸುತ್ತಾರೆ.ಇದೇನು ಆಗಲಿಲ್ಲವಾದರೆ,ನಿಮಗೆ ಯಾರಾದರು ರಾಜ ಉತ್ತಮ ಅನಿಸಿದರೆ ಅವನ ಬಗ್ಗೆ , ಅವನ ಆಡಳಿತದ ಬಗ್ಗೆ ಮಾತನಾಡಿ ಆಗ ಹಣವಾದರು ಸಿಗುತ್ತದೆ.ಆದರೆ ನಮ್ಮ ಪ್ರೀತಿಯ ವಿಶಯಕ್ಕೆ ಬರಬೇಡಿ ದಯವಿಟ್ಟು ನಮ್ಮನ್ನು ಪ್ರೀತಿಸಲು ಬಿಡಿ ಎಂದು ಹೇಳುತ್ತಾರೆ.
  • ನನ್ನ ಪ್ರೀತಿಯಿಂದ ಯಾರಿಗಾದರು ತೊಂದರೆಯಾಗಿದೆಯ ಹೇಳಿ? ನನ್ನ ನಿಟ್ಟುಸಿರಿನಿಂದ ಯಾವುದಾದರು ವ್ಯಾಪಾರಿಯ ಹಡಗು ಮುಳುಗಡೆಯಾಯಿತ?ನನ್ನ ಕಣ್ಣೀರಿನಿಂದ ಎಲ್ಲಾದರು ಪ್ರವಾಹ ಉಂಟಾಯಿತಾ?ಅಥವಾ ನನ್ನ ನೆಗಡಿಯಿಂದ ಎಲ್ಲಾದರು ಚಳಿ ಹೊರಟುಹೋಯಿತ ಅಥವಾ ಯಾರಿಗಾದರು ಖಾಯಿಲೆ ಬಂತಾ..........?

ಸೈನಿಕರು ಯುದ್ದಗಳಲ್ಲಿ ಮತ್ತು ವಕೀಲರು ಕಾನೂನಿನಲ್ಲಿ ಮುಳುಗಿದ್ದಾರೆ.ಎಲ್ಲವು ನಿತ್ಯ ನಿಯಮದಂತೆ ನಡೆಯುತ್ತದೆ.ಅದಕ್ಕಾಗಿ ನಾನು ಮತ್ತು ಅವಳನ್ನು ಪ್ರೀತಿಸಲು ಬಿಡಿ ಎಂದು ಕೇಳುತ್ತಾರೆ.

  • ನೀವು ನಮ್ಮನ್ನು ಪ್ರೀತಿಸುತ್ತಿದ್ದೇವೆ ಎಂಬ ಒಂದೇ ಒಂದು ಕಾರಣದಿಂದ ದೂಶಿಸಬಹುದು.ಸುಡಬಹುದು.ಆದರೆ ನಾವು ಮಾತ್ರ ಹದ್ದು ಮತ್ತು ಪಾರಿವಾಳ ದಂತಹ ಪ್ರೀತಿಯನ್ನು ಹೊಂದಿದ್ದೇವೆ.ಸಾಯುವುದರಲ್ಲೂ ಸಹ ಒಂದಾಗಿರುತ್ತೇವೆ.ಸತ್ತರು ಪೀನಿಕ್ಸ್ ಹಕ್ಕಿಯ ತರ ಮತ್ತೆ ಮತ್ತೆ ಹುಟ್ಟುತ್ತೇವೆ,ನಾವು ಏಕಾಂತದಲ್ಲು ಸಹ ಒಂದಾಗಿರುತ್ತೇವೆ ಎಂದು ಹೇಳಿದ್ದಾರೆ.ಇದು ನಮ್ಮ ಪ್ರೀತಿಗಿರುವ ನಿಗೂಡ ಶಕಿ ಎಂದು ಹೇಳಿದ್ದಾರೆ.
  • ಇಶ್ಟಾದರು ನಮ್ಮನ್ನು ಬಿಡದೆ ಸಾಯಿಸುತ್ತೀರ.ಗೋರಿಯ ಒಳಗೆ ಹಾಕುತ್ತೀರಾ.ಆದರೆ ಆ ಗೋರಿಗು ಕೂಡ ನಾವು ಸತ್ತಿರುವುದು ಇಶ್ಟವಾಗದೆ ಸೇರಿಸಿಕೊಳ್ಳುವುದಿಲ್ಲ.ಆಗ ನಾವು ಪಾಟ ವಾಗುತ್ತೇವೆ ಅದಕ್ಕು ಇಶ್ಟವಾಗಲಿಲ್ಲ ಎಂದರೆ ನಾವು ಸಾನೆಟ್ ಆಗುತ್ತೇವೆ ಎಂದು ಹೇಳಿದ್ದಾರೆ.ಈ ಮೂಲಕ ನಾವು ಅಮರವಾಗುತ್ತೇವೆ ಎಂದಿದ್ದಾರೆ. ನಾವು ಬೂದಿ ಯಾದದನ್ನು ಕಂಡು ನೀವು ಖುಶಿ ಪಡಬಹುದು.ಆದರೆ ನಾವು ಆ ಮೂಲಕ ನಮ್ಮನ್ನು ಪ್ರೀತಿಗೆ ಅರ್ಪಿಸಿಕೊಳ್ಳುತ್ತೇವೆ ಮತ್ತು ದೇವರಿಗೆ ಹತ್ತಿರವಾಗುತ್ತೇವೆ ಎಂದು ಹೇಳುತ್ತಾರೆ.
  • ಪ್ರಪಂಚದ ಶಾಂತಿಗೋಸ್ಕರ ನಾವು ಸಮಾಜದಿಂದ ಹೊರಬಂದು ಋಶಿ ಗಳಾಗುತ್ತೇವೆ. ಅಲ್ಲಿಯೂ ಸಹ ನಮ್ಮ ಪ್ರೀತಿಯನ್ನು ದೂರ ಮಾಡಿಕೊಳ್ಳುವುದಿಲ್ಲ.ಆ ಜಾಗದಲ್ಲೂ ಸಹ ನಾವು ಒಂದಾಗಿರುತ್ತೇವೆ ಮತ್ತು ಏಂಕಾತವಾಗಿ ಇರುತ್ತೇವೆ ಎಂದು ಹೇಳಿದ್ದಾರೆ.ಇಲ್ಲಿ ಕವಿ ಈಗ ಸ್ವ್ಲ್ಪಲ್ಪ ಕಟೊರವಾಗಿ ಉತ್ತರಿಸುತ್ತಾರೆ.ಇಶ್ಟು ದಿವಸ ನಾವು ನೀವು ಹೇಳುತ್ತಿದ್ದನ್ನು ಪ್ರೀತಿಗಾಗಿ ಶಾಂತಿಯಿಂದ ಕೇಳಿಸಿಕೂಳ್ಳುತ್ತಿದ್ದೆವು. ಆದರೆ ಈಗ ನಾವು ಸಿಡಿಯುತ್ತಿದ್ದೇವೆ.ನಿಮ್ಮ ಕಣ್ಣುಗಳ ಮುಖಾಂತರ ನಮ್ಮನ್ನು ಕೆಟ್ಟ ಜೀವಿಗಳಾಗಿ ಮಾಡಿದಿರಿ ಆದರೆ ನಾವು ನಿಮ್ಮ ಕಣ್ಣುಗಳೆಂಬ ಕನ್ನಡಿಯೊಳಗೆ ಇಡೀ ಪಟ್ಟಣ,ದೇಶ,ಪ್ರಪಂಚಕ್ಕೆ ಕಾಣಿಸುತ್ತೇವೆ.ನಮ್ಮನ್ನು ನೋಡಿ ಇಡೀ ಪ್ರಪಂಚವೇ ನಮಗೆ ಸಹಾಯ ಮಾಡುತ್ತದೆ. ಮತ್ತು ಅದೂ ಸಹ ಪ್ರೀತಿ ಮಾಡುತ್ತದೆ ಎಂದು ಹೇಳಿದ್ದಾರೆ.

ಕೊನೆಗೆ ಪ್ರೀತಿಯ ಮೂಲಕವೇ ಮೋಕ್ಶ ಸಾದಿಸಿ ದೇವರಿಗೆ ಹತ್ತಿರವಾಗುತ್ತೇವೆ ಎಂದು ಹೇಳಿದ್ದಾರೆ.

ಇಲ್ಲಿ ಪ್ಯಾರಡಾಕ್ಸ್ ಎನೆಂದರೆ ಚರ್ಚ್ ನಲ್ಲಿರುವ ಪಾದ್ರಿಗಳು ಯಾವತ್ತು ಪ್ರೀತಿ ಪ್ರೆಮ ಎಂದು ಎಹಿಕ ಸುಖಗಳನ್ನು ಇಶ್ತಪಡುವುದಿಲ್ಲ ಏಕೆಂದರೆ ಅದರ ಮೂಲಕ ಮೊಕ್ಶ ಸಾದಿಸಲು ಸಾದ್ಯವಿಲ್ಲ ಎಂದು ಹೇಳುತ್ತಾರೆ.ಆದರೆ ಇಲ್ಲಿ ಕವಿ ಅದರ ಮೂಲಕವೆ ದೇವರಿಗೆ ಹತ್ತಿರವಾಗುತ್ತೇವೆ ಎಂದು ಹೇಳುತ್ತಾರೆ. ಇಲ್ಲಿ ಕವಿ ಎಲ್ಲ ತರಹದ ಇಮೇಜ್ ಗಳು ಮತ್ತು ಕನ್ನ್ಸಿಟ್ ಗಳನ್ನು ಬಳಸಿದ್ದಾರೆ. ಈ ಮೂಲಕ ಇದು ಮೆಟಪಿಸಿಕಲ್ ಪದ್ಯದ ಎಲ್ಲಾ ಲಕ್ಶಣಗಳನ್ನು ಒಳಗೊಂಡು ವಿಶಿಶ್ಟ ಪದ್ಯವಾಗಿದೆ.

ಕೊನೆಯದಾಗಿ ಈ ಪದ್ಯ ಕ್ಯಾಥೊಲಿಕ್ ಪಂಥದ ನಿಯಮಗಳನ್ನು ಟೀಕಿಸುತ್ತ ತಮ್ಮ ಪ್ರೀತಿಯ ಅಮರತ್ವ ದ ಬಗ್ಗೆ ಹೇಳುತ್ತಾರೆ. ಡನ್ ನನ್ನು ಒಬ್ಬ ಉತ್ತಮ ಇಮೇಜ್ ಮೇಕರ್ ಎಂದು ಕರೆಯುತ್ತಾರೆ ಅದನ್ನು ಮೇಲಿನ ಕವನದ ಮೂಲಕ ಉತ್ತಮವಾಗಿ ತಿಳಿಯಬಹುದು. ಉದಾ; ತಮ್ಮ ಮರು ಹುಟ್ಟನ್ನು ಫಿನಿಕ್ಸ್ ಹಕ್ಕಿಗೆ ಹೂಲಿಸಿದ್ದಾರೆ. ಮತ್ತು ಹದ್ದು ಮತ್ತು ಪಾರಿವಾಳ ಗಳು ಇಲ್ಲಿ ಉತ್ತಮ ಸಿಂಬಲ್ ಗಳಾಗಿ ಕೆಲಸ ಮಾಡೀವೆ. ವಾಸ್ಟ್ವವವಾಗಿ ಹದ್ದು ಮತ್ತು ಪಾರಿವಾಳ ಗಳು ಎರಡೂ ಸಹ ವಿರುದ್ದವಾಡ ಲಕ್ಶಣ ಗಳನ್ನು ಹೊಂದಿವೆ. ಹೇಗೆಂದರೆ ಇಲ್ಲಿ ಹದ್ದು ರಕ್ಶಣೆಯನ್ನು ಪ್ರತಿನಿದಿಸಿದರೆ ಪಾರಿವಾಳ ಶಾಂತಿಯ ಸಂಕೇತವಾಗಿದೆ.ಅಓದರೆ ಕವಿ ಇಲ್ಲಿ ಇದನ್ನು ತಂದಿರುವುದು ಅವರು ಪ್ರೀತಿಯ ವಿಶಯಕ್ಕೆ ಎಶ್ಟು ಬದ್ದರಾಗಿದ್ದೇವೆ ಎಂಬುದನ್ನು ತಿಳಿಸಲು ಅಂದರೆ ಅವರು ಪ್ರೀತಿಯ ವಿಶಯ ಬಂದಾಗ ಹದ್ದು ಮತ್ತು ಅದೇ ಸಮಯದಲ್ಲಿ ಪಾರಿವಾಳ ದಂತಹ ಪ್ರೀತಿಯನ್ನು ಹೋಂದಿದ್ದಾರೆ ಎಂಬುದನ್ನು ತೊರಿಸಲು. ಕನ್ಸಿಟ್;ನನ್ನ ನಿಟ್ಟುಸಿರಿನಿಂದ ಯಾವುದಾದರು ವ್ಯಾಪಾರಿಯ ಹಡಗು ಮುಳುಗಡೆಯಾಯಿತಾ? ನನ್ನ ಕಣ್ಣೀರಿನಿಂದ ಎಲ್ಲಾದ್ಸರು ಪ್ರವಾಹ ಉಂಟಾಯಿತ? ನನ್ನ ನೆಗಡಿ ಯಿಂದ ಎಲ್ಲಾದರು ಚಳಿ ಹೊರಟು ಹೋಯಿತಾ? ನನ್ನ ಪ್ರೀತಿ ಯಿಂದ ಯಾರಿಗಾದರು ಖಾಯಿಲೆ ಬಂತ? ಪದ್ಯದ ಶುರು ಅಬ್ರಟ್; ದೇವರ ಹೆಸರಿನಲ್ಲಿ ಮಾತನಾಡುವುದನ್ನು ನಿಲ್ಲಿಸಿ. ಕೊನೆಗೆ ದೇವರಾಗುವುದು.ಕವಿಯ ಪ್ರೀತಿಗು ಕೂಡ ಆಧ್ಯಾತ್ಮಿಕತೆಯ ಒಲವು ಅಂದರೆ ಪ್ರಾಂಪಂಚಿಕ ಸುಕಗಳಲ್ಲು ಆಧ್ಯಾತ್ಮಿಕತೆಯನ್ನು ಹುಡುಕುವುದು. ಈ ರೀತಿಯ ಇಮೇಜ್, ಕನ್ನ್ನ್ಸೇಟ್ ಗಳನ್ನು ಹಿಂದಿನ ಕವಿಗಳ ಕವಿತೆಗಳಲ್ಲಿ ಕಾಣುವುದು ಅಸಾಧ್ಯ. ಆದ್ದರಿಂದ ನಮಗೆ ಮೆಟಾಪಿಸಿಕಲ್ ಕವಿಗಳಲ್ಲೆ ಡನ್ ಒಬ್ಬ ಅಸಾಮಾನ್ಯ ಕವಿಯಾಗಿ ಪ್ರೇಮಿಯಾಗಿ ಕಾಣುವುದು.

ಡನ್ ನ ಮತ್ತೊಂದು ಪದ್ಯ

ಬದಲಾಯಿಸಿ

'ಲೆಕ್ಶರ್ ಅಪಾನ್ ಎ ಶಾಡೊ' ಲೆಕ್ಶರ್ ಅಪಾನ್ ಎ ಶಾಡೊ ಡನ್ ನ ಮತ್ತೊಂದು ಪ್ರೇಮ ಕವನಗಳಲ್ಲಿ ಮುಖ್ಯವಾದುದಾಗಿದೆ. ಇದು ಡನ್ ನ ಮೆಟಾಫಿಸಿಕಲ್ ಇಂಡಿನೇಶನ್ಸ ನ ಪ್ರೀತಿಯ ಭಾವನೆ ಗಳನ್ನು ಕುರಿತು ಮಾತನಾಡುತ್ತದೆ. ಡನ್ ನ ಪ್ರತಿಯೊಂದು ಪ್ರೇಮ ಕವನಗಳು ಕಾಂಪ್ಲೆಕ್ಸ್ ಯುನಿಟ್ ಗಳು ಮತ್ತು ಡಿವರ್ಸ್ ಫೀಲಿಂಗ್ಸ್ ಮತ್ತು ಮಲ್ಟಿಪಲ್ ತಾಟ್ಸ್ ಗಳನ್ನು ಹೊಂದಿದ್ದು ಅವು ನೈಜವಾಗಿಯೊ ಮತ್ತು ಕ್ರುತಕವಾಗಿಯು ಇರುತ್ತವೆ. ಡನ್ ನ ಪ್ರೀತಿ ಸೆನ್ಶಿಯಸ್ ಮತ್ತು ನೈಜವಾದದು.ಪ್ರಸ್ತುತ ಈ ಪದ್ಯ ಪ್ರೀತಿಯ ಅತ್ಯುನ್ನತ ಸ್ತಾನದ ಕುರಿತು ಮತ್ತು ಅದನ್ನು ಸಂಪಾದಿಸುವುದು ಹೇಗೆ ಎಂಬುದರ ಕುರಿತು ಮಾತನಾಡುತ್ತದೆ. ಇಲ್ಲಿ ಡನ್ ತನ್ನ ಪ್ರೇಯಸಿಯ ಎದುರಿನಲ್ಲಿ ನಿಂತು ತನ್ನ ಪ್ರೇಯಸಿಗೆ ಅವರ ಪ್ರೀತಿಯ ಬಗ್ಗೆ ಯೇ ಹೇಳುತ್ತಾರೆ.ಅವರು ಹೇಳುತ್ತಾರೆ ನಾನು ಈಗ ನಮ್ಮ ಪ್ರೀತಿಯ ಬಗ್ಗೆ ಉಪನ್ಯಾಸ ವನ್ನು ನೀಡುತ್ತೇನೆ ನಿನ್ನ ಮುಂದೆ ಎಂದು ಶುರು ಮಾಡುತ್ತಾರೆ. ೩,೪ ಗಂಟೆಗಳಿಂದ ನಾವು ಜೊತೆಯಾಗಿ ನದೆಯುತ್ತಿದ್ದೇವೆ. ಈ ಎಲ್ಲಾ ಸಮಯದಲ್ಲು ಸಹ ನಾವು ಒಂದಾಗಿರುತ್ತೇವೆ ಮತ್ತು ಈ ಸಮಯಗಳಲ್ಲೆಲ್ಲಾ ನಮ್ಮ ಜೊತೆ ನಮ್ಮ ನೆರಳು ಗಳು ಸಹ ನಮ್ಮನ್ನು ಹಿಂಬಾಲಿಸುತ್ತಿರುತ್ತವೆ.

ಇಲ್ಲಿ ನೆರಳು ಎಂಬುದು ಅಗ್ನಾನ ವನ್ನು ಸೂಚಿಸುತ್ತದೆ.ಮತ್ತು ಕವಿ ಹೇಳುತ್ತಾರೆ ಇದು ನಮ್ಮಿಂದಲೇ ಶ್ರುಸ್ಟಿಯಾದದು. ಮತ್ತು ಇಲ್ಲಿ ೩ ಗಂಟೆಗಳು ಎಂದರೆ ಬೆಳಗ್ಗೆ,ಮಧ್ಯಾನ ಮತ್ತು ಸಾಯಂಕಾಲ ಎಂಬ ಅರ್ಥವನ್ನು ನೀಡುತ್ತದೆ. ಅಂದರೆ ಇಡೀ ದಿನ ಮತ್ತು ಜೀವನ ಎಂದು ತಿಳಿಯಬೇಕು. ಈಗ ಕವಿ ಹೇಳುತ್ತಾರೆ ಈ ಸೂರ್ಯ ನಮ್ಮ ಮೇಲಿದ್ದಾಗ ನಮ್ಮ ನೆರಳು ಗಳು ಅಂದರೆ ನಮ್ಮ ತಪ್ಪುಗಳು ನಮಗೆ ಸರಿಯಾಗಿ ಗೊಚರಿಸುತ್ತವೆ. ಈಗ ನಮಗೆ ಎಲ್ಲವು ಸ್ಪಶ್ಟವಾಗಿ ಗೊಚರಿಸುತ್ತದೆ.ಮತ್ತು ಆ ತಪ್ಪು ಗಳು ನಮ್ಮನ್ನು ಶೂನ್ಯ ದೆಡೆಗೆ ಕರೆದೊಯ್ಯುತ್ತವೆ. ಆದ್ದರಿಂದ ನಮ್ಮ ಪ್ರೀತಿ ಶುರುವಾದಾಗ ನಮ್ಮ ಸುತ್ತ ಈ ತಪ್ಪೆಂಬ ನೆರಳು ಗೊಚರಿಸುತ್ತದೆ ಅದು ಸಹ ನಮ್ಮಿಂದ ರಚಿತವಾದದು. ಆದರೆ ನಾವು ನಮ್ಮ ಪ್ರೀತಿಯಲ್ಲಿ ಅತ್ಯುನ್ನತೆಯನ್ನು ಸಾದಿಸಿದಾಗ ಅವು ನಮ್ಮಿಂದ ದೊರವಾಗಿರುತ್ತವೆ. ಈಗ ನಮ್ಮ ಪ್ರೀತಿ ಉನ್ನತೆಯನ್ನು ಸಾದಿಸಿರುತ್ತದೆ.ಇದರಿಂದ ನಮ್ಮ ಪ್ರೀತಿಯ ನೈಜತೆ ಜನಗಳಿಗೆ ತಿಳಿಯುತ್ತದೆ ಇಲ್ಲವಾದರೆ ಅದು ವ್ಯರ್ಥ ವಾಗುತ್ತದೆ ಎಂದು ಹೇಳಿದ್ದಾರೆ. ಮತ್ತು ನಮ್ಮ ಪ್ರೀತಿ ಮಧ್ಯ ದಲ್ಲಿ ದ್ದಾಗ ನಾವು ನಮ್ಮ ತಪ್ಪುಗಳನ್ನು ಸ್ಪಶ್ಟವಾಗಿ ತಿಳಿಯುತ್ತೇವೆ. ಪ್ರೀತಿ ಶುರುವಾದಾಗ ಅದು ಬೇರೆಯವರಿಗೆ ಕುರುಡು ಎನಿಸುತ್ತದೆ.ಆದರೆ ಬೆಳೆಯುತ್ತಾ ಹೊದಂತೆ ನಾವೆ ಕುರುಡರಾಗುತ್ತೇವೆ ಎಂದು ಹೇಳಿದ್ದಾರೆ. ನಮ್ಮ ಪ್ರೀತಿ ಏನದರು ಸೂರ್ಯ ಪಶಿಮದಲ್ಲಿ ಮುಳುಗಿದಂತೆ ಹಾಳಾಗುತ್ತಾ ಹೋದರೆ ನಾವು ಆ ನೆರಳಿನಲ್ಲಿ ಸಾಯುತ್ತೇವೆ ಎಂದು ತಿಳಿದುಕೊ ಎಂದು ಹೇಳಿದ್ದಾರೆ. ಹಾಗಾಗುವ ಬದಲು ಬೆಳಗಿನ ಸೂರ್ಯ ಯಾವಾಗಲು ಬೆಳಗುವಾಂತೆ ನಮ್ಮ ಪ್ರೀತಿಯು ಸಹ ಅದೇ ರೀತಿ ಪ್ರಜ್ವ್ಲಲ ವಾಗಿ ಬೆಳಗಬೇಕು ಎಂದು ಹೇಳುತ್ತಾರೆ. ಪ್ರೀತಿ ಮಾದಲು ಇನ್ನು ಇರುವ ದಿನಗಳು ಕಡಿಮೆ ಆದ್ದರಿಂದ ನಮ್ಮ ಪ್ರೀತಿಯು ಯಾವುದೆ ಅಜ್ನಾನಕ್ಕೆ ಸಿಲುಕದೆ ಬೆಳೆಯಬೇಕು ಎಂದು ಹೇಳಿದ್ದಾರೆ. ಅದು ಯಾವ ರೀತಿ ಎಂದರೆ ಯಾವಾಗಲು ಬೆಳಗುವ ನಿರಂತರ ದೀಪದ ಹಾಗೆ ಬೆಳೆಯಬೇಕು ಎಂದಿದ್ದಾರೆ. ಕೊನೆಯದಾಗಿ ಇಲ್ಲಿ ಕವಿ ಪ್ರೀತಿಯ ಉನ್ನತತೆ ಯ ಕುರಿತು ಮಾತನಾಡಿದ್ದಾನೆ. ಸಾನೆಟ್ 'ಬ್ಯಾಟರ್ ಮೈ ಹಾರ್ಟ್' ಬ್ಯಾಟರ್ ಮೈ ಹಾರ್ಟ್ ಇದು ಡನ್ ನ ಆಧ್ಯಾತ್ಮಿಕ ಸಾನೆಟ್ ಗಳಲ್ಲಿ ಬಹಳ ಪ್ರಮುಖವಾದುದು. ಮತ್ತು ಪ್ರಸಿದ್ದಿಯಾದುದು.ಡನ್ ನ ಬೇರೆ ಯಾವುದೇ ಕವನಗಳು ಸಹ ಇಶ್ಟೊಂದು ಲಕ್ಶಣಗಳು,ನರ್ವಸ್ನೆಸ್ ಮತ್ತು ಇಂಟೆನ್ಸಟಿ ಭಾವನೆಗಳನ್ನು ಒಳಗೊಂಡಿಲ್ಲ ಎಂದು ಹೇಳಿದ್ದಾರೆ. ಮತ್ತು ಇದು ಉತ್ತಮವಾದ ಭಾಶಾ ಶೈಲಿಗೆ ಹೆಸರಾಗಿದೆ. ಸಹಗವಾಗಿ ಇದು ಸಹ ಡನ್ ನ ಆಧ್ಯಾತ್ಮ ದೆಡೆಗೆ ಇರುವ ಸೆಳೆತವನ್ನು ಸೂಚಿಸುತ್ತದೆ. ಮತ್ತು ಇದು ಡನ್ ನ ವೆರೈಟಿ ಆಫ್ ಮೂಡ್ ಮತ್ತು ಅನುಭವವನ್ನು ಹೊಂದಿದೆ. ಈ ಸಾನೆಟ್ ನ ಭಾಷೆ ಬಹಳ ಫೋರ್ಸ್ ಮತ್ತು ಎಮೊಶನ್ ನಿಂದ ಕೂಡಿದೆ. ಈ ಪದ್ಯ ದಲ್ಲಿ ಕವಿ ದೇವರ ಮೂರು ರೂಪಗಳನ್ನು ಕುರಿತು ಮಾತನಾಡುತ್ತಾನೆ. ಅವುಗಳೆಂದರೆ,ಫಾದರ್,ಸನ್,ಮತ್ತು ಹೋಲಿಗೊಸ್ಟ್.ಈ ರೀತಿ ದೇವರಲ್ಲಿ ಕವಿ ಕೇಳಿಕೊಳ್ಳುವುದೇನೆಂದರೆ ತನ್ನ ಹ್ರುದಯವನ್ನು ಶುದ್ದಿ ಮಾಡು ಅಂದರೆ ಒಳ್ಳೆಯವನನ್ನಾಗಿ ಮಾಡು ಎಂದು ಕೇಳಿಕೊಳ್ಳುತ್ತಾನೆ. ಕವನ ಈ ರೀತಿಯಾಗಿ ಶುರುವಾಗುತ್ತದೆ. ಮೊದಲು ಕವಿ ತನ್ನನ್ನು ಪಾಟ್ ಗೆ ಹೋಲಿಸಿಕೊಳ್ಳುತ್ತಾರೆ.ಮತ್ತು ದೇವರನ್ನು ಟಿಂಕರ್ ಗೆ ಹೋಲಿಸುತ್ತಾರೆ. ಟಿಂಕರ್ ಪಾಟನ್ನು ಸವೆಸಿ ಅದಕ್ಕೆ ಒಂದು ಒಳ್ಳೆ ರೂಪ ಕೊಡುವಂತೆ ದೇವರು ಮನುಶ್ಯನಿಗೆ ಕಶ್ಟಗಳನ್ನು ನೀಡಿ ಅನುಭವವನ್ನು ನೀಡುವ ಮೂಲಕ ಅವನನ್ನು ಉತ್ತಮ ಮನುಶ್ಯ ನನ್ನಾಗಿ ಮಾಡುತ್ತಾನೆ.ಕವಿಯ ಪ್ರಕಾರ ಅವನು ಮಾಡಿರುವ ಪಾಪ ಗಳನ್ನು ದೇವರು ಅವನಿಗೆ ಕಶ್ಟ ಗಳನ್ನು ನೀಡುವುದರ ಮೂಲಕ`` ಕಳೆಯಬೇಕು ಆ ಮೂಲಕ ಅವನು ಉತ್ತಮ ಮನುಶ್ಯ ನಾಗಬೇಕು ಎಂದು ಆಸೆ ಪಡುತ್ತಾನೆ. ಕವಿ ದೇವರಲ್ಲಿ ಬೇಡಿಕೂಳ್ಳುದೇನೆಂದರೆ ದೇವರೆ, ನಿನ್ನ ಹ್ರುದಯದಲ್ಲಿ ನನಗೆ ಸ್ತಾನ ನೀಡು ಆ ಮೂಲಕ ನಾನು ಡೆವಿಲ್ ಅನ್ನು ಎದುರಿಸುವ ಅದರಿಂದ ಬಿಡುಗಡೆ ಪಡೆಯುವ ಶಕ್ಠಿಯನ್ನು ಪಡೆಯುತ್ತೇನೆ. ಮತ್ತು ಕವಿ ಕೇಳುತ್ತಾನೆ ಬೇರೆ ಎಲ್ಲಾ ಶಕ್ತಿ ಗಳಿಗಿಂತ, ಶತ್ರು ಗಳಿಗಿಂತ ದೇವರು ದೊಡ್ದವನು. ಆದ್ದರಿಂದ ನನ್ನ ಪಾಪವನ್ನು ತೊಳೆಯುತ್ತಾನೆ ಮತ್ತು ಆ ಡೆವಿಲ್ ನ ಬಂದನದಿಂದ ನನ್ನನ್ನು ಮುಕ್ತ ನನ್ನಾಗಿ ಮಾಡು ಅಲ್ಲಿಂದ ನನ್ನನ್ನು ನಿನ್ನಲ್ಲಿಗೆ ಕರೆದುಕೊಂಡು ಹೋಗು ಬಂದನದಲ್ಲಿಡು ಎಂದು ಕೇಳುತ್ತಾನೆ. ಈಗ ಕವಿ ಹೇಳುತ್ತಾನೆ ದೇವರ ಬಂದನ ದಲ್ಲಿದ್ದಾಗ ಮಾತ್ರ ನಾನು ಸ್ವಾತಂತ್ರವನ್ನು ಅನುಭವಿಸುತ್ತೇನೆ ಎಂದು ಹೇಳುತ್ತಾರೆ. ಆ ಮೂಲಕ ನಾನು ದೇವರಲ್ಲಿ ಒಂದಾಗುತ್ತೇನೆ ಎಂದು ಹೇಳುತ್ತಾರೆ. ಎದು ದೇವರ ಬಗ್ಗೆ ಕವಿಗೆ ಇರುವ ಕಲ್ಪನೆ,ಸತ್ಯತೆ,ಭಕ್ತಿಯ ಉತ್ಕಟತೆ ಎಂದು ಹೇಳಬಹುದು.

ಡನ್ ನ ಕುರಿತು

ಬದಲಾಯಿಸಿ

ಡನ್ ನ ಕವನಗಳನ್ನು ಹಲವರು ಮೆಚ್ಚಿಕೊಂಡರು ಅದರಿಂದ ಪ್ರಾಭಾವಿತರಾದರು ಪ್ರಾರಂಭದಿಂದಲು ಇದು ಕಟುವಾದ ಟೀಕೆಗೆ ಒಳಗಾಯಿತು.ಬೆನ್ ಜಾನ್ಸ್ನ್ನನ್, ಡನ್ ನನ್ನು' ದ ಫಸ್ಟ್ ಪೊಯೆಟ್ ಇನ್ ದ ವರ್ಲ್ದ್ ಫಾರ್ ಸರ್ಟೆನ್ ತಿಂಕ್ಸ್ ಎಂದು ಹೊಗಳಿದರು ' ಡನ್, ಫಾರ್ ನಾಟ್ ಕೀಪಿಂಗ್ ದ ಅಸೆಂಟ್,ಡಿರ್ಸವಡ್ ಹ್ಯಾಂಗಿಂಗ್' ಎಂದ.ಇಪ್ಪತ್ತನೆಯ ಶತಮಾನದ ಪ್ರಾರಂಭದಲ್ಲಿ ಈ ಕವಿಗಳ ಕವನಗಳ ಸಂಕಲನವನ್ನು ಪ್ರಕಟಿಸಿದ ನಂತರ ಈ ಕಾವ್ಯ ವಿಶೇಷ ಗಮನ ಸೆಳೆಯಿತು.ಟಿ.ಎಸ್.ಎಲಿಯೆಟ್ ಇವರ ವಿಶಯ ಬರೆದ ನಂತರ ಈ ಪಂಥದ ಅಧ್ಯಯನಕ್ಕೆ ಚಾಲನೆ ಸಿಕ್ಕಿತು.ಇವರು ವಿಶಾಲವಾದ ವಿದ್ವತ್ತನ್ನು ಗಳಿಸಿದವರು. ತಮ್ಮ ವಿದ್ವತ್ತನ್ನು ಕವಿಗಳಾಗಿ ಅಭ್ಭಿವ್ಯಕ್ತಿ ನೀಡುವಾಗ ಬಳಸಿಕೊಳ್ಳುತ್ತಾರೆ. ಬದುಕಿನ ಯಾವ ಅನುಭವವನ್ನು ಕಾವ್ಯದಿಂದ ಅವರು ದೂರವಿಡಲಿಲ್ಲ.ಅನುಭವದ ವಾಸ್ತವಿಕತೆಯನ್ನು ಅನ್ವೇಶಿಸಿ ಹೊರಟ ಇವರು ಪರಂಪರೆಯನ್ನು ಸಂಪೂರ್ಣ ವಾಗಿ ನಿರಾಕರಿಸಲಿಲ್ಲವಾದರು ಯಾವುದೇ ಸಂಪ್ರದಾಯದ ಚೊಕಟ್ಟಿನಲ್ಲಿ ಅನುಭವನ್ನು ಗ್ರಹಿಸಲು ನಿರಾಕರಿಸಿದರು. ಸಫಲ ಪ್ರೇಮದ ಕವನವನ್ನು ಬೇರೆ ಕವಿಗಳು ಬರೆದಾಗಲು ಪ್ರಿಯತಮೆಯ ರೂಪ,ಪರಿಶುದ್ದತೆಗಳಿಗೆ ಪ್ರಾಧ್ಯಾನ್ಯ. ಆದರೆ ಈ ಕವಿ ಯ ಪ್ರೇಮ ಆರಾಧನೆಯ ಸ್ವರೂಪದ್ದು.ಇವರು ಆಕರ್ಶಣೆಯ ಸ್ವರೂಪವನ್ನು ಗ್ರಹಿಸುವಲ್ಲಿ ಸಚೇತನ ವಾಗುವ ಸಂವೇದನೆಯೇ ಬೇರೆಯ ರೀತಿಯದು. ಇವರ ಭಾವದ ನಿವೇದನೆ ಸಾಮಾನ್ಯವಾಗಿ ವಾದದ ರೂಪದಲ್ಲಿರುತ್ತವೆ.ಇಲ್ಲಿ ಅನುಭವದ ಅಭಿವ್ಯಕ್ತಿಯ ಒಂದು ಪ್ರಮುಕ ಲಕ್ಶಣ 'ಕನ್ಸಿಟ್' ನ ಬಳಕೆ.ಇದಕ್ಕೆ ಒಂದು ಪ್ರಸಿದ್ದ ನಿದರ್ಶನ ಡನ್ ನ 'ಎ ವ್ಯಾಲಿಡಿಕ್ಶನ್ ಫರ್ಬಿಡಿಂಗ್ ಮಾನಿರ್ಂಗ್. ನಲ್ಲಿ ಕಾಣುತ್ತದೆ. ಪ್ರೇಮಿ ತನ್ನ ಪ್ರೇಯಸಿಯಿಂದ ಕೆಲವು ದಿನ ದೂರವಿರಬೇಕಾಗುತ್ತದೆ. ಅವಳನ್ನು ಬೀಳೊಡುತ್ತಾನೆ.ತಮ್ಮ ಪ್ರೇಮ ತಮ್ಮಿಬ್ಬರ ಚೇತನ ಗಳನ್ನು ಒಂದುಗೂಡಿಸಿದೆ. ಅವು ಇಶ್ಟರ ಮಟ್ಟಿಗೆ ಒಂದಾಗಿವೆ ಎಂದರೆ ಅವನು ದೂರ ಹೋದರು ಅವರು ಬೇರೆ ಬೇರೆಯಾಗುವುದಿಲ್ಲ.ಆದರೆ ಅವರ ಅಸ್ತಿತ್ವ ವಿಸ್ತಾರವಾಗುತ್ತದೆ. ಹೇಗೆಂದರೆ ಹಾಳೆಯನ್ನು ಸುತ್ತಿಗೆಯಿಂದ ಹೂಡೆದರೆ ಅದು ತೆಳ್ಲಗಾಗಿ ವಿಸ್ತಾರವಾಗುತ್ತಾ ಹೋಗುತ್ತದೆ,ತುಂಡಗುವುದಿಲ್ಲ. ಮತ್ತೊಂದು ಉದಾಹರಣೆ;ಕಾಂಪಸಿಸ್ ಗೆ ಎರಡು ಬಾಹುಗಳು, ಇವನ್ನು ಮೇಲ್ಬಗದಲ್ಲಿ ಸೇರಿಸಿರುತ್ತಾರೆ, ಒಂದು ಸ್ತಿರವಾಗಿರುತ್ತದೆ ಮತ್ತೂಂದು ಚಲಿಸುತ್ತದೆ.ಒಂದು ಸುತ್ತಿದರೆ ಒಂದು ಚಲಿಸುತ್ತದೆ,ಇಲ್ಲವಾದರೆ ಇಲ್ಲ.ಅಲ್ಲದೆ ಈ ಬಾಹುಗಳು ಬೇರೆ ಬೇರೆ ಯಾಗಿರುವುದಿಲ್ಲ. ಹಾಗೆಯೆ ಪ್ರಿಯ ದೂರ ಹೂದರು ಪ್ರಿಯೆ ಆತಂಕದಿಂದ ಬಾಗುತ್ತಾಳೆ. ಉದಾ;ಸೂರ್ಯನನ್ನು ಬೇರೆ ಬೇರೆ ನಾಡಿನ ಭಾಷೆಗಳ ಕವಿಗಳು ಬೇರೆ ಬೇರೆ ರೀತಿಗಳಲ್ಲಿ ಸಂಭೋದಿಸಿದ್ದಾರೆ,ಆದರೆ ಯಾರು ಆತನನ್ನು 'ಬಿಸಿ ಓಲ್ಡ್ ಫೂಲ್' ಎಂದು ಸಂಭೋದಿಸಿ, ಕಿಟಕಿಗಳಲ್ಲಿ ಪರದೆಗಳ ಮೂಲಕ ಇಣಕಿ ನೋಡುವ ತಲೆಹರಟೆ ಎಂದು ಕರೆದಿದ್ದಾರೆ. ಇದಕ್ಕಾಗಿ ಈ ಪಂಥದ ಪ್ರಮುಖ ಕವಿ ಜಾನ್ ಡನ್ ಎಂದು ಹೇಳಿದ್ದಾರೆ. ಇವನು ಪ್ರೇಮ ಮತ್ತು ಧಾರ್ಮಿಕ ಕವನಗಳನ್ನು ಬರೆದ.ನಾಟಕೀಯ ಪ್ರಾರಂಭಗಳಿಗೆ ಇವನು ಹೆಚ್ಚು ಪ್ರಸಿದ್ದಿಯಾಗಿದ್ದಾನೆ.

ಇದನ್ನೂ ನೋಡಿ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. ಉಲ್ಲೇಖ ದೋಷ: Invalid <ref> tag; no text was provided for refs named ODNB
  2. Donne, John. Columbia Encyclopedia, Sixth Edition

ಮೈಸೂರು ವಿಶ್ವವಿದ್ಯಾನಿಲಯದ ವಿಶ್ವಕೋಶದಲ್ಲಿನ ಮಾಹಿತಿ ಪುಟ