ಜಾಯಿಕಾಯಿ

ಸಸ್ಯದ ಜಾತಿಗಳು
ಜಾಯಿಕಾಯಿ
ಜಾಯಿಕಾಯಿ
Scientific classification
ಸಾಮ್ರಾಜ್ಯ:
plantae
Division:
ವರ್ಗ:
ಗಣ:
ಕುಟುಂಬ:
ಕುಲ:
ಮೈರಿಸ್ಟಿಕ

Gronov.
Species

About ೧೦೦ species, including:

'ಇಂಗ್ಲೀಷ್'ನಲ್ಲಿ Myristica (NutmegMyristicaMyristicaMyristicaMyristica..) ಎಂದು ಕರೆಯಲಾಗುವ ಜಾಯಿಕಾಯಿ ಔಷಧೀಯ ಗುಣಗಳಿಂದಲೂ, ವಾಣಿಜ್ಯಿಕವಾಗಿ ಬಹಳ ಪ್ರಮುಖವಾದ ವನಸ್ಪತಿ. ಪ್ರಕೃತಿಯ ಅಮೂಲ್ಯ ಕೊಡುಗೆ.ಬಹು ಉಪಯೋಗಿಯಾದ ಜಾಯಿಕಾಯಿ ಮರ, ಮೂಲತ: ಉಷ್ಣವಲಯದಲ್ಲಿ ಬೆಳೆಯುತ್ತದೆ.ಕರ್ನಾಟಕದಲ್ಲಿ ಗಿಡವನ್ನು ಬೇರೆ ದೇಶಗಳಿಂದ ಆಮದು ಮಾಡಿ ನೆಡಲಾಗಿದೆ.

ಸಸ್ಯ ಶಾಸ್ತ್ರೀಯ ವರ್ಗೀಕರಣ

ಬದಲಾಯಿಸಿ

ಇದು ಮೈರಿಸ್ಟಿಕಾಸಿ(Myristicaceae)ಕುಟುಂಬಕ್ಕೆ ಸೇರಿದ್ದು,ಮೈರಿಸ್ಟಿಕ ಫ್ರಾಗ್ರನ್ಸ್ (Myristica Fragrans)ಎಂದು ಸಸ್ಯ ಶಾಸ್ತ್ರೀಯ ಹೆಸರು. ಸಂಸ್ಕೃತದಲ್ಲಿ ಜಾತಿ ಫಲ,ವೆಂದು ಕರೆಯಲಾಗುವ ವನಸ್ಪತಿಯ ಉಪಯೋಗಗಳು ಹಲವಾರು. 'ಮನೆಯ ವೈದ್ಯರಾಜ'ನೆಂದು ಹೆಸರಾದ ವನಸ್ಪತಿಯಾಗಿ,ನೂರಾರು ವರ್ಷಗಳಿಂದ 'ಭಾರತೀಯರ ಅಡುಗೆಮನೆಯಲ್ಲಿ ಖಾಯಂಸ್ಥಾನ'ವನ್ನು ಗಳಿಸಿದೆ.

ಸಸ್ಯದ ಗುಣಲಕ್ಷಣಗಳು

ಬದಲಾಯಿಸಿ

ಇದು ಮದ್ಯಮ ಪ್ರಮಾಣದ ನಿತ್ಯಹರಿದ್ವರ್ಣದ ಮರ.

ಉಪಯೋಗಗಳು

ಬದಲಾಯಿಸಿ

ಇದರ ಹಣ್ಣಿನಲ್ಲಿ ಎರಡು ಭಾಗಗಳಿವೆ. ತಿರುಳು(Nutmeg) ಹಾಗೂ ಅದನ್ನು ಆವರಿಸಿರುವ ಸಿಪ್ಪೆ(Mace).ಎರಡೂ ಮಾರುಕಟ್ಟೆಯಲ್ಲಿ ಬೆಲೆಬಾಳುವುವಂತಹುದು. ಒಂದೇ ಮರದಲ್ಲಿ ಜಾಯಿಕಾಯಿ ಮತ್ತು ಜಾಯಿಪತ್ರೆ ಎಂಬ ಎರಡು ಸಾಂಬಾರ ಪದಾರ್ಥಗಳಿರುವುದೇ ಇದರ ವಿಶೇಷತೆ. ತಿರುಳು ಸುಗಂಧ ದ್ರವ್ಯಗಳ ತಯಾರಿಕೆಯಲ್ಲಿ,ಔಷಧಗಳ ತಯಾರಿಕೆಯಲ್ಲಿ ಬಳಕೆಯಾಗುತ್ತದೆ. ಜಾಯಿಪತ್ರೆ ಸಾಂಬಾರ ಪದಾರ್ಥಗಳಲ್ಲಿ ಉಪಯೋಗವಾಗುತ್ತದೆ.ಇದು ಸುವಾಸಿತ,ಉತ್ತೇಜಕ ಹಾಗೂ ವಾತಹರ.ಹೆಚ್ಚಿನ ಪ್ರಮಾಣದಲ್ಲಿ ಇದು ಇಂದ್ರಿಯಸ್ಠಂಭವೂ (Narcotic)ಆಗಿರುವುದು. ಹೊಂಬಣ್ಣದ ಬೀಜದೊಳಗೆ ಸುಂದರವಾದ ಕೆಂಪುಬಣ್ಣದ ಪತ್ರೆಯನ್ನು ಕಾಣುತ್ತೇವೆ. ಇದು ಒಳಗಿನ ಬೀಜಕ್ಕೆ ಕವಚವಿದ್ದಂತೆ. ಕವಚವನ್ನು ಬೇರ್ಪಡಿಸಿ ಒಣಗಿಸಿ ಶೇಖರಿಸಿಡುತ್ತಾರೆ. ಜಾಯಿಕಾಯಿನ ಹೊರಕವಚ ಒಡೆದರೆ ಕಾಯಿದೊರೆಯುತ್ತದೆ. ಇವೆರಡಕ್ಕೂ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆಯಿದೆ.

ಜಾಯಿಕಾಯಿ ಮರದ ಬಗ್ಗೆ

ಬದಲಾಯಿಸಿ

'ಜಾಯಿಕಾಯಿ'ಮರಗಳನ್ನು ಬೆಳೆಯುವುದು ಅತಿ ಸುಲಭ. ಈ ಸಸ್ಯಕ್ಕೆ ಸುಮಾರು ಶೇಕಡಾ ೧೦% ರಷ್ಟು ನೆರಳಿದ್ದರೆ ಉತ್ತಮ. ಹಿತ್ತಲಿನಲ್ಲಿ ಬಿಸಿಲುಬೀಳುವ ಕಡೆ ತೋಟದ ಬದಿಯಲ್ಲಿ ಬೇಲಿಗಳಲ್ಲಿ ಹೀಗೆ ಸದಾ ತೇವಾಂಶವಿರುವ ಮಣ್ಣಿನಲ್ಲಿ ಇವುಗಳನ್ನುನಾಟಿ ಮಾಡಬಹುದು. ನಾಟಿಮಾಡಿದ ೬-೭ ವರ್ಷಗಳಲ್ಲಿ ಕಾಯಿಬಿಡಲು ಆರಂಭವಾಗುತ್ತದೆ. ಮರ ಬೆಳೆದಂತೆ ವಿಸ್ತಾರವಾಗಿ ಹರಡಿಕೊಂಡು ಫಸಲು ಬಿಡಲು ಪ್ರಾರಂಭಿಸುತ್ತದೆ. ರೋಗ ಕೀಟಬಾಧೆ ಕಡಿಮೆ ಇರುವ ಈ ಸಸ್ಯಕ್ಕೆ ಎರಡು ವರ್ಷಕ್ಕೊಮ್ಮೆ ಕೊಟ್ಟಿಗೆ ಗೊಬ್ಬರ ಹಾಗೂ ಸ್ವಲ್ಪ ರಸಗೊಬ್ಬರ ದ ಆರೈಕೆ ಮಾಡುವುದು ಒಳ್ಳೆಯದು.

ಗಂಡು ಮತ್ತು ಹೆಣ್ಣು ಜಾತಿಯ ಮರಗಳು

ಬದಲಾಯಿಸಿ

'ಜಾಯಿಮರ'ಗಳಲ್ಲಿ ಗಂಡು ಹಾಗೂ ಹೆಣ್ಣುಮರಗಳಿದ್ದು, ಕಾಯಿ ಕಚ್ಚಲು ಒಂದು ಎಕರೆಗೆ ೨ ರಿಂದ ೩ ಗಂಡು ಮರಗಳನ್ನು ನಾಟಿ ಮಾಡಬೇಕಾಗುತ್ತದೆ. ಹೊಂಬಣ್ಣದ ಜಾಯಿಕಾಯಿಗಳು ಕಡು ಹಸಿರು ಎಲೆಗಳ ಮಧ್ಯೆ ಗಿಡದಲ್ಲಿ ಗಾಳಿಗೆ ತೊಯ್ದಾಡುವುದು ಕಣ್ಣಿಗೆ ಹಬ್ಬ. ಬೀಜಗಳಿಂದ ಸಸ್ಯಾಭಿವೃದ್ಧಿಮಾಡಬಹುದಾದ ಈ ಸಸ್ಯದಲ್ಲಿ ಗಂಡು ಗಿಡಗಳ ಹಾವಳಿ ತಡೆಯಲು ಕಸಿಕಟ್ಟಿಯೂ ಹೊಸಗಿಡಗಳನ್ನು ಬೆಳೆಸುತ್ತಾರೆ. ಕೊಯ್ಲು ಸುಲಭ, ಹಣ್ಣಾಗಿ ಬಿರಿದ ಕಾಯಿಗಳು ತಾವಾಗಿಯೇ ಕೆಳಗೆ ಬೀಳುತ್ತವೆ. ಮಳೆಗಾಲದಲ್ಲಿ ಈ ರೀತಿ ಬೀಳುವಾಗ ಜಾಪತ್ರೆ ಹಾಳಾಗುವುದರಿಂದ ಕಾಯಿಗಳನ್ನು ಕೊಯ್ದು ಪಾತ್ರೆ ಮತ್ತು ಕಾಯಿಗಳನ್ನು ಬೇರ್ಪಡಿಸಿ ಒಣಗಿಸುವುದು ಒಳ್ಳೆಯದು. ಕಾಯಿಬಿಡುವ ಸಮಯ ಸಾಮಾನ್ಯವಾಗಿ ಮೇ ತಿಂಗಳಿನಿಂದ ಜುಲೈನ ವರೆಗೆ ಹಾಗೂ ಅಕ್ಟೋಬರ್-ನವೆಂಬರ್ ವರೆಗೆ ಕಾಯಿಬಿಡುತ್ತಲೆ ಇರುತ್ತವೆ. 'ಏಷ್ಯಾ' ಮತ್ತು 'ಯೂರೋಪ್' ದೇಶಗಳ ಅಡುಗೆಮನೆಯಲ್ಲಿ ಶಾಶ್ವತ ಸ್ಥಾನ ಗಳಿಸಿರುವ ಈ ಜಾಯಿಕಾಯಿ ಸಿಹಿ ತಿಂಡಿ ಪಾನೀಯಗಳಲ್ಲಿ ಸುವಾಸನೆಯ ವೃದ್ಧಿಗಾಗಿ ಬಳಸಲ್ಪಡುತ್ತವೆ. ಔಷಧೀಯ ಗುಣವನ್ನು ಹೊಂದಿದ ಜಾಯಿಹಣ್ಣಿನ ಸಿಪ್ಪೆಯಲ್ಲಿ ತಂಬುಳಿ, ಜ್ಯಾಮ್, ಹಾಗೂ ಉಪ್ಪಿನಕಾಯಿಗಳನ್ನು ತಯಾರಿಸುತ್ತಾರೆ. ವಿಶಿಶ್ಥ ಸುವಾಸನೆಯನ್ನು ಹೊಂದಿದ 'ಜಾಯಿ ಶ್ಯಾಂಪೂ', 'ಸೋಪು', 'ಸುಗಂಧ ದ್ರವ್ಯ', ಮತ್ತು 'ಕೀಟನಾಶಕ'ಗಳ ತಯಾರಿಕೆಗೆ ಬಳಸುತ್ತಾರೆ.

'ಮಸಾಲೆ'ಯಾಗಿ,'ಅಡುಗೆಮನೆಯ ಔಷಧಿ'ಯಾಗಿ

ಬದಲಾಯಿಸಿ
  • ನಮ್ಮ ಮನಸ್ಸನ್ನು ಸಾಂತ್ವನಗೊಳಿಸುವ ಶಕ್ತಿಯಿದೆ.
  • ಇದರ 'ಬೀಜ' ಹಾಗೂ 'ಪ'ತ್ರೆ ವಿವಿಧ ಔಷಧಿಗಳಲ್ಲಿ ಉಪಯೋಗಿಸುತ್ತಾರೆ.
  • 'ಹುರಿದ ಜಾಯಿಪುಡಿ'ನ್ನು ಬೆಲ್ಲದ ಜೊತೆ ಸೇರಿಸಿ ತಿಂದರೆ ಅಜೀರ್ಣದ ಭೇದಿ ನಿಲ್ಲುತ್ತದೆ.
  • ಇದರ ಚೂರ್ಣವನ್ನು ಬಾಳೆಹಣ್ಣಿನೊಂದಿಗೆ ತಿಂದರೂ ಭೇದಿ ಶಮನವಾಗುತ್ತದೆ.
  • 'ಜಾಯಿಪತ್ರೆ'ಗಳನ್ನು 'ಅಡಿಕೆಪುಡಿ'ಯೊಂದಿಗೆ ಸೇವಿಸಿದರೆ ಅಜೀರ್ಣ ನಿವಾರಣೆಯಾಗುತ್ತದೆ.
  • ನಿದ್ರಾಹೀನತೆಯ ಪರಿಹಾರಕ್ಕಾಗಿ,
  • ತಲೆಗೆ ಬಳಸುವ ಎಣ್ಣೆಗಾಗಿ
  • ಪುಡಿಯನ್ನು ಕುದಿಯುವ ನೀರಿಗೆ ಹಾಕಿಬಾಯಿಮುಕ್ಕಳಿಸಿದರೆ ಬಾಯಿಯ ದುರ್ಗಂಧ ನಿವಾರಣೆಯಾಗುತ್ತದೆ.
  • 'ಜಾಯಿಪುಡಿ'ಯನ್ನು ಸೈಂಧವ ಲವಣದೊಡನೆ ಸೇರಿಸಿ ಹಲ್ಲುಜ್ಜುವುದರಿಂದ ವಸಡುಗಳ ರಕ್ತಸ್ರಾವ ನಿಲ್ಲುತ್ತದೆ.
  • 'ಜಾಯಿಕಾಯಿ'ಯನ್ನು ಅತಿಯಾಗಿ ಬಳಸಿದರೆ ಅಮಲನ್ನು ತರುತ್ತದೆ. ಆದ್ದರಿಂದ ಇದನ್ನು ಅತಿಯಾಗಿ ಸೇವನೆಮಾಡುವುದು ಒಳ್ಳೆಯದಲ್ಲ.

ಆಧಾರ ಗ್ರಂಥಗಳು

ಬದಲಾಯಿಸಿ

೧ ವನಸಿರಿ: ಅಜ್ಜಂಪುರ ಕೃಷ್ಣಸ್ವಾಮಿ