ಜಾಫರಾಬಾದ್ - ಈಗಿನ ಗುಜರಾತ್ ರಾಜ್ಯದಲ್ಲಿಯ ಒಂದು ಪಟ್ಟಣ; ಜಾನ್‍ಪುರ ತಹಸೀಲಿನ ಅದೇ ಹೆಸರಿನ ಕಸಬೆ. ಉ.ಅ 25º 41` ಮತ್ತು ಪೂ.ರೇ. 82º 44` ಮೇಲೆ, ಜೌನ್ ಪುರದಿಂದ ಆಗ್ನೇಯಕ್ಕೆ 5 ಮೈ. ಮತ್ತು ಮುಂಬಯಿಯಿಂದ 135 ಮೈ.ದೂರದಲ್ಲಿ ಇದೆ. ಸಮುದ್ರ ದಂಡೆಯಿಂದ ಒಂದು ಮೈ.ಮೇಲೆ ರಣಾಯಿ ನದಿಯ ತೀರದಲ್ಲಿದೆ. ಈ ನದಿ ಜನಮಾರ್ಗಕ್ಕೆ ಅನುಕೂಲವಾದ್ದರಿಂದ ವ್ಯಾಪಾರ ವ್ಯವಹಾರಕ್ಕೆ ತುಂಬ ಅನುಕೂಲಕರ. ಇಲ್ಲಿಯ ವಾರ್ಷಿಕ ಮಳೆ 25.

ಸಜ್ಜೆ, ಗೋಧಿ, ಮತ್ತು ಹತ್ತಿ ಇಲ್ಲಿಯ ಮುಖ್ಯ ಬೆಳೆಗಳು. ಕಟ್ಟಡಗಳನ್ನು ಕಟ್ಟಲು ಕಲ್ಲುಚಪ್ಪಡಿಗಳು ಇಲ್ಲಿ ಸಿಕ್ಕುತ್ತವೆ. ದಪ್ಪ ಹತ್ತಿ ಬಟ್ಟೆಗಳು ತಯಾರಾಗುತ್ತವೆ.

ಇತಿಹಾಸ

ಬದಲಾಯಿಸಿ

ಇದೊಂದು ಪ್ರಾಚೀನ ನಗರ. ಬುದ್ಧನ ಕಾಲದಲ್ಲಿ ಇದನ್ನು ಮನೈಭ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತೆಂದು ತಿಳಿದು ಬಂದಿದೆ. ಜಾಫರಾಬಾದ್ ಹಿಂದಿನ ಜಂಜೀರಾ ಸಂಸ್ಥಾನದ ನವಾಬನ ಆಡಳಿತದಲ್ಲಿತ್ತು. 1621ರಲ್ಲಿ ಘಿಯಾಸ್-ಉದ್-ದೀನ್ ತುಘಲಕನ ಮಗ ಈ ನಗರವನ್ನು ಗೆದ್ದದ್ದರಿಂದ ಇದಕ್ಕೆ ಜಾಫರಾಬಾದ್ ಎಂಬ ಹೆಸರು ಬಂತೆನ್ನಲಾಗಿದೆ. ನಗರದ ಸುತ್ತಮುತ್ತ ಪ್ರಾಚೀನ ಕಟ್ಟಡಗಳ ಅನೇಕ ಭಗ್ನಾವಶೇಷಗಳನ್ನು ಕಾಣಬಹುದು.


 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: