ಜಾನ್ ಟಿರೊಲ್
ಡಾ. ಜಾನ್ ಟಿರೊಲ್‌ಶ (ಜ.೧೯೫೩,ಫ್ರಾನ್ಸ್ ದೇಶದ,ಟ್ರಾಯ್ಸ್, ನಲ್ಲಿ) [೧] ರವರು ಫ್ರಾನ್ಸ್ ದೇಶದ ಫ್ರೆಂಚ್ ಅರ್ಥಶಾಸ್ತ್ರಜ್ಞ, ೨೦೧೪ ರ ಸಾಲಿನ ಅರ್ಥಶಾಸ್ತ್ರ ವಿಭಾಗದ ನೊಬೆಲ್ ಪ್ರಶಸ್ತಿಗೆ ಆಯ್ಕೆಯಾದ ವ್ಯಕ್ತಿ.[೨] ಸರ್ಕಾರ, ವಾಣಿಜ್ಯ ಒಕ್ಕೂಟಗಳೊಂದಿಗೆ ಹೇಗೆ ವ್ಯವಹರಿಸಿ ಮಾರುಕಟ್ಟೆಯಲ್ಲಿ ಏಕಸ್ವಾಮ್ಯವನ್ನು ಯಾವ ರೀತಿ ನಿಯಂತ್ರಿಸಬೇಕು ಎನ್ನುವ ವಿಷಯದ ಬಗ್ಗೆ ಅವರು ಒಂದು ಹೊಸ ನೀತಿಯನ್ನು ಪ್ರಚಾರಕ್ಕೆ ಅನುವುಮಾಡಿಕೊಟ್ಟರು. ಇದು ಅರ್ಥ ಶಾಸ್ತ್ರಕ್ಕೆ ನೀಡುವ ಪಾರಿತೋಷಕವಾದರೂ, ವಿಶೇಷವಾಗಿ, ಮಾರುಕಟ್ಟೆ ಶಕ್ತಿ- ಸಾಮರ್ಥ್ಯ ಮತ್ತು ನಿಯಂತ್ರಣ ಕುರಿತು ಕೈಗೊಂಡ ಸಂಶೋಧನೆಗಾಗಿ 'ಸ್ವೀಡಿಷ್ ರಾಯಲ್ ಅಕ್ಯಾಡೆಮಿ' ಆವರಿಗೆ 'ಆಲ್ಫ್ರೆಡ್ ನೋಬೆಲ್' ನೆನಪಿಗಾಗಿ ಈ ಪ್ರಶಸ್ತಿಯನ್ನು ಪ್ರದಾನಮಾಡುವ ನಿರ್ಣಯ ತೆಗೆದುಕೊಂಡಿದೆ.[೩]
ಜಾನ್ ಟಿರೋಲ್ | |
---|---|
Born | ಆಗಸ್ಟ್,೯,೧೯೫೩ ಟ್ರಾಯ್ಸ್, ಫ್ರಾನ್ಸ್) |
Nationality | ಫ್ರೆಂಚ್ ನಾಗರಿಕ |
Known for | ವರ್ಷ,೨೦೧೪ ರ ಆಲ್ಫ್ರೆಡ್ ನೊಬೆಲ್ ಸ್ಮರಣಾರ್ಥ ಪ್ರಶಸ್ತಿ, ಪುರಸ್ಕೃತ ಅರ್ಥಶಾಸ್ತ್ರಜ್ಞರು, [ಟೊಲೌಸ್ ಸ್ಕೂಲ್ ಆಫ್ ಎಕೊನಾಮಿಕ್ಸ್] |
ಜನನ,ವಿದ್ಯಾಭ್ಯಾಸ,ಹಾಗೂ ವೃತ್ತಿ
ಬದಲಾಯಿಸಿ'ಜಾನ್ ಟಿರೊಲ್' ಫ್ರಾನ್ಸ್ ದೇಶದ 'ಟ್ರಾಯ್ಸ್' ಎಂಬ ಊರಿನಲ್ಲಿ ಆಗಸ್ಟ್, ೯, ೧೯೫೩ ರಲ್ಲಿ ಜನಿಸಿದರು. ವೃತ್ತಿಪರತೆ.[೪]
ಸಂಶೋಧಕ, ಲೇಖಕ,ಉಪನ್ಯಾಸಕಾರ
ಬದಲಾಯಿಸಿ೧೯೮೦ ರ ಮಧ್ಯಭಾಗ, ಮತ್ತು ಮುಂದಿನ ದಿನಗಳಲ್ಲಿ ಮಾರುಕಟ್ಟೆ ವೈಫಲ್ಯ ಕುರಿತ ಸಂಶೋಧನೆಗೆ ಹೊಸ ತಿರುವು ನೀಡುವ ಮೂಲಕ 'ಡಾ.ಜಾನ್ ಟಿರೊಲ್', ವಿಶ್ವದ ಗಮನಸೆಳೆದರು. ಕೆಲವು ಪ್ರಭಾವಿ ಶಕ್ತಿಗಳ ಹಿಡಿತದಿಂದಮಾರುಕಟ್ಟೆಯನ್ನು ಹೇಗೆ ಮುಕ್ತಗೊಳಿಸಬೇಕು ಎಂಬ ಬಗ್ಗೆ ಅವರು ನೀಡಿದ್ದ ಸಲಹೆಗಳಿಂದ ಹೊಸ ಮಾರುಕಟ್ಟೆಯ ನೀತಿಗಳನ್ನು ರೂಪಿಸಲು ನೆರವಾಯಿತು. ಈ ಬಗ್ಗೆ ನಿಯಮಿತವಾಗಿ ಸಂಶೋಧನ ಪತ್ರಗಳು, ಲೇಖನಗಳು, ಪುಸ್ತಕಗಳನ್ನು ಅವರು ಬರೆದಿದ್ದಾರೆ.
ಡಾ.ಜಾನ್ ಟಿರೊಲ್ ಮಾರುಕಟ್ಟೆಯ ಹೊಸನೀತಿ
ಬದಲಾಯಿಸಿಈ ಹೊಸ ಪ್ರಭಾವಿ ಸಂಶೋಧನೆಯಿಂದಾಗಿ ದೂರ ಸಂಪರ್ಕ, ಬ್ಯಾಂಕಿಂಗ್, ಕೈಗಾರಿಕೆಗಳಿಗೆ ಸಂಬಂಧಿಸಿದಂತೆ ನೀತಿಗಳನ್ನು ರೂಪಿಸಲು ಸಹಕಾರಿಯಾಗಿದೆ. ಸ್ವೀಡನ್‌ನ ರಾಯಲ್ ಅಕಾಡೆಮಿ ರವರ ಸಂಶೋಧನೆಯನ್ನು ಪರಿಗಣಿಸಿದೆ. ೨೦೧೪ ರ, ನೋಬೆಲ್ ಪುರಸ್ಕಾರವನ್ನು ಅರ್ಥಶಾಸ್ತ್ರದ ನೋಬೆಲ್ ಪ್ರಶಸ್ತಿ ಎಂದು ಪರಿಗಣಿಸಿದರೂ, ಈ ವಿಶಯ ಆಲ್‌ಫ್ರೆಡ್ ನೊಬೆಲ್ ರವರ ಹಿಂದಿನ ಮೂಲ ಉಯಿಲಿನಲ್ಲಿರಲಿಲ್ಲ. ಇದನ್ನು ೧೯೬೮ ರಲ್ಲಿ ಪ್ರಥಮ ಬಾರಿಗೆ ಸೇರಿಸಲಾಯಿತು. 'ಆಲ್‌ಫ್ರೆಡ್ ನೊಬೆಲ್' ಅವರ ಸ್ಮರಣೆಗಾಗಿ 'ಸ್ವೀಡನ್ ಕೇಂದ್ರೀಯ ಬ್ಯಾಂಕ್' ಇದನ್ನು ವಿತ್ತತಜ್ಞರಿಗೆ ನೀಡುತ್ತದೆ. ಪದಕಕ್ಕೆ ಅರ್ಹತೆಯನ್ನು 'ರಾಯಲ್ ಸ್ವೀಡಿಷ್ ವಿಜ್ಞಾನ ಅಕಾಡೆಮಿ' ನಿರ್ಧರಿಸುತ್ತದೆ.[೫] ಮಾರುಕಟ್ಟೆಯಲ್ಲಿ ಏಕಸ್ವಾಮ್ಯವನ್ನು ಯಾವ ರೀತಿ ನಿಯಂತ್ರಿಸಬೇಕು ಎನ್ನುವ ವಿಷಯದ ಬಗ್ಗೆ ಅವರು ಒಂದು ಹೊಸ ನೀತಿಯನ್ನು ಪ್ರಚಾರಕ್ಕೆ ಅನುವುಮಾಡಿಕೊಟ್ಟಿದ್ದಲ್ಲದೆ, ಜಾನ್ ಟಿರೊಲ್ ರವರು, ನಿಯಮಿತವಾಗಿ ಲೇಖನಗಳು, ಪುಸ್ತಕಗಳನ್ನು ಬರೆದಿದ್ದಾರೆ. ತಮ್ಮ ಭಾಷಣಗಳಲ್ಲಿ ಈ ವಿಶಯಗಳಬಗ್ಗೆ ಬೆಳಕು ಚೆಲ್ಲಿದ್ದಾರೆ.[೬]
ಉಲ್ಲೇಖಗಳು
ಬದಲಾಯಿಸಿ- ↑ Who Is Jean Tirole? Nobel Prize In Economics Goes To French Researcher International business times, October 13 2014
- ↑ "French economist Jean Tirole wins 2014 Nobel Prize for Economics, The Economic times, 14,Oct, 2014". Archived from the original on 2014-10-15. Retrieved 2014-10-16.
- ↑ Jean Tirole wins 2014 Nobel Prize for Economics Hindu, October 13, 2014
- ↑ 'Jean Tirole, Scientific Director of IDEI ಡಾ.ಟಿರೊಲ್ ರವರ ವಿದ್ಯಾರ್ಜನೆ ಮತ್ತು ನಿಭಾಯಿಸಿದ/ನಿಭಾಯಿಸುತ್ತಿರುವ ಹಲವು ಸ್ಥಾನಗಳ'ವಿವರಗಳು
- ↑ 'Lists of Nobel Prizes and Laureates', 'Facts on the Prize in Economic Sciences'
- ↑ 'The Telegraph',13 Oct 2014
ಬಾಹ್ಯ ಸಂಪರ್ಕಗಳು
ಬದಲಾಯಿಸಿ- ಪ್ರಜಾವಾಣಿ, ೧೦-೧೪-೨೦೧೪,ಟಿರೊಲ್‌ಗೆ ಅರ್ಥಶಾಸ್ತ್ರದ ನೊಬೆಲ್ Archived 2016-03-04 ವೇಬ್ಯಾಕ್ ಮೆಷಿನ್ ನಲ್ಲಿ.
- Why Jean Tirole Won the Economics Nobel, THE NEW YORKER, BY JOHN CASSIDY, OCTOBER 13, 2014
- ecgi Biography of Professor Jean Tirole Jean Tirole is scientific director of 'the Institut d'Economie Industrielle, University of Social Sciences, Toulouse'. Archived 2014-10-18 ವೇಬ್ಯಾಕ್ ಮೆಷಿನ್ ನಲ್ಲಿ.