ಜಾನ್ ಆಸ್ಟಿನ್ (3 ಮಾರ್ಚ್ 1790 – 1 ಡಿಸೆಂಬರ್ 1859)ಇಂಗ್ಲೆಂಡಿನ ನ್ಯಾಯಶಾಸ್ತ್ರಜ್ಞ. ಹುಟ್ಟಿದ್ದು ಸಫೋಕ್ನ ಕ್ರೀಟಿಂಗ್ಮಿಲ್ನಲ್ಲಿ. ಚಿಕ್ಕ ವಯಸ್ಸಿನಲ್ಲಿ ಸೈನ್ಯಕ್ಕೆ ಸೇರಿ, ಐದು ವರ್ಷಗಳ ಕಾಲ ಅಮೂಲ್ಯವಾದ ಸೇವೆಯನ್ನು ಸಲ್ಲಿಸಿ, ಅನಂತರ ವಿದ್ಯಾಭ್ಯಾಸದತ್ತ ಮನಸ್ಸು ತಿರುಗಿಸಿ, 1818ರಲ್ಲಿ ಬ್ಯಾರಿಸ್ಟರ್ ಆದ. 1820ರಿಂದ ಕೆಲವು ಕಾಲ ವಕೀಲಿ ವೃತ್ತಿಯಲ್ಲಿದ್ದು, ಅನಾರೋಗ್ಯದ ನಿಮಿತ್ತ ಅದನ್ನು ತ್ಯಜಿಸಿ, 1826ರಲ್ಲಿ ಹೊಸದಾಗಿ ಸ್ಥಾಪಿತವಾದ ಲಂಡನ್ ವಿಶ್ವವಿದ್ಯಾನಿಲಯದಲ್ಲಿ ನ್ಯಾಯಶಾಸ್ತ್ರದ ಪ್ರಾಧ್ಯಾಪಕನಾದ. 1820ರಲ್ಲಿ ನಾರ್ವಿಚ್ನ ಸರಾಹ್ ಟೇಲರ್ಳನ್ನು ಮದುವೆಯಾದ. ಎರಡು ವರ್ಷಗಳ ಕಾಲ ಜರ್ಮನಿಯಲ್ಲಿ ಪ್ರವಾಸ ಮಾಡಿ, ನ್ಯಾಯಶಾಸ್ತ್ರದ ಬಗ್ಗೆ ಉನ್ನತಮಟ್ಟದ ಪಾಂಡಿತ್ಯ ಪಡೆದು 1828ರಲ್ಲಿ ಲಂಡನ್ ವಿಶ್ವವಿದ್ಯಾನಿಲಯಕ್ಕೆ ಹಿಂದಿರುಗಿದ. ನಾಲ್ಕು ವರ್ಷಗಳ ಕಾಲ ನ್ಯಾಯಶಾಸ್ತ್ರದ ಬಗ್ಗೆ ಉಪನ್ಯಾಸ ಮಾಡಿ 1832ರಲ್ಲಿ ದಿ ಪ್ರಾವಿನ್ಸ್ ಆಫ್ ಜೂರಿಸ್ಪ್ರುಡೆನ್ಸ್ ನ್ಡಿಟರ್ಮಿನ್ಡ್ ಎಂಬ ತನ್ನ ಆರು ಉಪನ್ಯಾಸಗಳನ್ನೊಳಗೊಂಡ ಪುಸ್ತಕವನ್ನು ಪ್ರಕಾಶಪಡಿಸಿದ. ಅದೇ ವರ್ಷ ಪ್ರಾಧ್ಯಾಪಕ ಪದವಿಗೆ ರಾಜೀನಾಮೆಯಿತ್ತ. ಕೆಲವು ಕಾಲ ಪಾರ್ಲಿಮೆಂಟರಿ ಕಮಿಷನ್ಗಳಲ್ಲಿ ಕೆಲಸ ಮಾಡಿ ಲಂಡನ್ನಿನ ಇನ್ನರ್ ಟೆಂಪಲ್ನಲ್ಲಿ ಉಪನ್ಯಾಸಕನಾಗಿ ಕೆಲಸ ಮಾಡಿದ. ಅನಂತರ ಮಾಲ್ಟದ ಬ್ರಿಟಿಷ್ ಕಲೋನಿಯಲ್ ಕಚೇರಿಯಲ್ಲಿ ಸೇವೆ ಸಲ್ಲಿಸಿದ. ಆ ವೇಳೆಗೆ ಆತನ ಪುಸ್ತಕ ಸಾಮಾನ್ಯರ ಪ್ರಶಂಸೆಗೆ ಒಳಗಾಗದೆ ಹೋದರೂ ತಜ್ಞರಿಂದ ಶ್ರೇಷ್ಠ ಗ್ರಂಥವೆಂದು ಪರಿಗಣಿಸಲಾಗಿತ್ತು. ಆತನ ಮರಣಾನಂತರ ಅವನ ಪತ್ನಿ ಗ್ರಂಥದ ಎರಡನೆಯ ಮುದ್ರಣವನ್ನು ಹೊರತಂದಳು (1861). ನ್ಯಾಯಶಾಸ್ತ್ರದ ವಿವಿಧ ವಿಷಯಗಳ ಬಗ್ಗೆ ಆಸ್ಟಿನ್ ಬರೆದಿದ್ದ ಲೆಕ್ಚರ್ ಆನ್ ಜೂರಿಸ್ಪ್ರುಡೆನ್ಸ್ ಎಂಬ ವ್ಯಾಖ್ಯಾನ ಗ್ರಂಥ 1863ರಲ್ಲಿ ಪ್ರಕಟವಾಯಿತು. ಸರ್ ಹೆನ್ರಿ ಮೇನ್ ಎಂಬ ಕೇಂಬ್ರಿಜ್ನ ನ್ಯಾಯಶಾಸ್ತ್ರಜ್ಞ ಆಸ್ಟಿನ್ನ ಪ್ರತಿಭೆ ಆಂಗ್ಲ ನ್ಯಾಯಶಾಸ್ತ್ರದಲ್ಲಿ ಚಿರಸ್ಥಾಯಿಯಾಗಿ ಬೆಳಗುವಂತೆಯೂ ಉಳಿಯುವಂತೆಯೂ ಮಾಡಿದ.

ಜಾನ್ ಆಸ್ಟಿನ್
ಜನನ(೧೭೯೦-೦೩-೦೩)೩ ಮಾರ್ಚ್ ೧೭೯೦
ಕ್ರೀಟಿಂಗ್‍ ಮಿಲ್, ಸಫೋಲ್ಕ್
ಮರಣ1 December 1859(1859-12-01) (aged 69)
ವೇಬ್ರಿಡ್ಜ್,ಸರ್ರೆ
ಕಾಲಮಾನ೧೯ನೆಯ ಶತಮಾನದ ತತ್ವಜ್ಞಾನ
ಪ್ರದೇಶಪಾಶ್ಚಾತ್ಯ ತತ್ವಜ್ಞಾನ
ಪರಂಪರೆLegal positivism
ಮುಖ್ಯ  ಹವ್ಯಾಸಗಳುನ್ಯಾಯಿಕ ತತ್ವಜ್ಞಾನ
ಪ್ರಭಾವಕ್ಕೋಳಗಾಗು
ಪ್ರಭಾವ ಬೀರು

ಆಸ್ಟಿನ್ ಬೆಂಥಂನ ಶಿಷ್ಯ. 19ನೆಯ ಶತಮಾನದಲ್ಲಿ ಇದ್ದ ಐತಿಹಾಸಿಕ ಹಾಗೂ ಆಧ್ಯಾತ್ಮಿಕ ನ್ಯಾಯಶಾಸ್ತ್ರ ಶಾಖೆಗಳ ಹಲವಾರು ನ್ಯೂನತೆಗಳನ್ನು ನಿವಾರಿಸಲು ಆಸ್ಟಿನ್ ವಿಭಜನ ವಿಧಾನದ ನ್ಯಾಯಶಾಸ್ತ್ರದ ಶಾಖೆಯನ್ನು ಸ್ಥಾಪಿಸಿದ. ಅದರ ರೂಪರೇಖೆಗಳನ್ನು ವಿವರಿಸಿ, ವಿಶ್ಲೇಷಿಸಿ, ವ್ಯಾಖ್ಯಾನ ಮಾಡಿದ. ಈ ಶಾಖೆಯ ಗಮನಾರ್ಹ ವೈಶಿಷ್ಟ್ಯಗಳೆಂದರೆ-ವಿಕಸಿತ ಕಾನೂನುಗಳನ್ನು ಗಣನೆಗೆ ತೆಗೆದುಕೊಂಡಿರುವುದು, ಕಾನೂನನ್ನು ಶಾಸನ ಸಭೆ ಅಥವಾ ನ್ಯಾಯಾಂಗ ಆಲೋಚಿಸಿ ರಚಿಸಬೇಕೆಂಬುದು, ಕಾನೂನುಗಳನ್ನು ಪಾಲಿಸುವುದಕ್ಕೆ ಮೂಲಕಾರಣ ಶಿಕ್ಷಾಶಕ್ತಿ (ದಂಡನಾಶಕ್ತಿ) ಎಂಬುದು, ಕಾಯಿದೆ ಮಾದರಿಯಾದ ಕಾನೂನೆಂಬುದು, ತಾತ್ತ್ವಿಕ ದೃಷ್ಟಿಕೋನ ಸರ್ವಜನಹಿತದ್ದಾಗಿರಬೇಕೆಂಬುದು. ಅಂತಾರಾಷ್ಟ್ರೀಯ ಕಾನೂನು ಕಾನೂನಲ್ಲವೆಂದು ವಾದಿಸಿ ಆಸ್ಟಿನ್ ಶಿಕ್ಷಾಶಕ್ತಿರಹಿತವಾದ ಆ ಕಾನೂನು ಮಾನವ ನಿಯಮಿಸಿದ ಕೇವಲ ಅಂತಾರಾಷ್ಟ್ರೀಯ ತತ್ತ್ವವಷ್ಟೇ ಎಂಬುದನ್ನು ಸಮರ್ಥಿಸಿದ್ದಾನೆ.

ಬಾಹ್ಯ ಸಂಪರ್ಕಗಳು

ಬದಲಾಯಿಸಿ