ಜ಼ುಲುಕ್
ಜ಼ುಲುಕ್ ಅಥವಾ ಝುಲುಕ್ ಅಥವಾ ಜಲುಕ್ ಭಾರತದ ಸಿಕ್ಕಿಂ ರಾಜ್ಯದಲ್ಲಿನ ಪಾಕ್ಯಾಂಗ್ ಜಿಲ್ಲೆಯ ರೋಂಗ್ಲಿ ಉಪವಿಭಾಗದಲ್ಲಿರುವ ಒಂದು ಸಣ್ಣ ಹಳ್ಳಿ. ಈ ಸ್ಥಳವು ತುಲನಾತ್ಮಕವಾಗಿ ಪೂರ್ವ ಸಿಕ್ಕಿಂನಲ್ಲಿನ ಉದಯೋನ್ಮುಖ ಹಾಗೂ ವಿಲಕ್ಷಣ ತಾಣವಾಗಿದೆ. ಇಂದು ಇದು ಕಾಂಚನಜುಂಗಾ ಸೇರಿದಂತೆ ಪೂರ್ವ ಹಿಮಾಲಯ ಪರ್ವತ ಶ್ರೇಣಿಯ ವೀಕ್ಷಣೆಗೆ ಒಂದು ಪ್ರವಾಸಿ ತಾಣವಾಗಿದೆ.[೧]
ಸಸ್ಯ ಮತ್ತು ಪ್ರಾಣಿ ಸಂಕುಲ
ಬದಲಾಯಿಸಿಜ಼ುಲುಕ್ ಪಾಂಗೋಲಾಖಾ ವನ್ಯಜೀವಿ ಅಭಯಾರಣ್ಯದಲ್ಲಿ ಸ್ಥಿತವಾಗಿದೆ ಮತ್ತು ಅರಣ್ಯದಿಂದ ಆವೃತವಾಗಿದೆ. ಅವುಗಳಲ್ಲಿ ಕೆಲವು ಸಂಪೂರ್ಣವಾಗಿ ಅಸ್ಪರ್ಶಿತವಾಗಿವೆ. ಜಿಂಕೆ, ಕಾಡು ನಾಯಿಗಳು, ಹಿಮಾಲಯದ ಕರಡಿ ಮತ್ತು ಕೆಂಪು ಪಾಂಡಾಗಳು ಕಾಣುವುದು ಸಾಮಾನ್ಯವಾಗಿವೆ. ಕೆಲವು ಹುಲಿಗಳು ಕೂಡ ಈ ಪ್ರದೇಶದಲ್ಲಿ ಕಂಡುಬಂದಿವೆ ಎಂದು ವರದಿಯಾಗಿದೆ.
ಬ್ಲಡ್ ಫೆಸೆಂಟ್, ಹಿಮಾಲಯನ್ ಮೊನಾಲ್, ಕಾಲಿಜ್ ಫೆಸೆಂಟ್, ಸ್ನೋ ಫೆಸೆಂಟ್ ಮತ್ತು ಇತರ ಹಲವು ಪಕ್ಷಿಗಳನ್ನು ಸಹ ಕಾಣಬಹುದು. ಬೇಸಿಗೆಯ ತಿಂಗಳುಗಳಲ್ಲಿ, ಈ ಪ್ರದೇಶ ಮತ್ತು ಅದರ ಸುತ್ತಮುತ್ತಲಿನ ಬೆಟ್ಟಗಳು ಸಾವಿರಾರು ಹೂಬಿಡುವ ರೋಡೋಡೆಂಡ್ರಾನ್‌ಗಳಿಂದ ಆವೃತವಾಗಿರುತ್ತವೆ. ರೋಡೋಡೆಂಡ್ರಾನ್‌ನ ವೈವಿಧ್ಯತೆಯಿಂದಾಗಿ ಈ ತಿಂಗಳುಗಳಲ್ಲಿ ಜ಼ುಲುಕ್ ವರ್ಣಮಯವಾಗಿರುತ್ತದೆ.
ಹತ್ತಿರದ ಸ್ಥಳಗಳು
ಬದಲಾಯಿಸಿಜ಼ುಲುಕ್ನ ಮೂರು ಹಂತದ ಏರಿಳಿತದ ರಸ್ತೆಗಳು ಕಾಂಚನಜುಂಗಾ ಮತ್ತು ಅದರ ಪರ್ವತ ಶ್ರೇಣಿಯ ವೀಕ್ಷಣೆಗಳನ್ನು ಒದಗಿಸುತ್ತವೆ. ಈ ಸ್ಥಳದ ಇತರ ಆಕರ್ಷಣೆಗಳಲ್ಲಿ ಸರೋವರಗಳು, ದೇವಾಲಯಗಳು, ಕಾಡುಗಳು ಮತ್ತು ಟಿಬೆಟ್‌ಗೆ ಹೋಗುವ ಮಾರ್ಗ ಸೇರಿವೆ.
ಉಲ್ಲೇಖಗಳು
ಬದಲಾಯಿಸಿ
- ↑ Freshfield, D. W. (1903). Round Kangchenjunga: a narrative of mountain travel and exploration. London: Edward Arnold.