ಜಲ್ ಮಂದಿರ್ ಭಾರತದ ಬಿಹಾರ ರಾಜ್ಯದ ಪಾವಾಪುರಿಯಲ್ಲಿ ನೆಲೆಗೊಂಡಿದೆ[] (ಅಪಾಪುರಿ ಅಂದರೆ ಪಾಪವಿಲ್ಲದ ಪಟ್ಟಣ ಎಂದೂ ಪರಿಚಿತವಾಗಿದೆ).[] ಇದು ಜೈನರ ಪ್ರಮುಖ ಯಾತ್ರಾ ಸ್ಥಳವಾಗಿದೆ ಮತ್ತು ಈ ದೇವಾಲಯವನ್ನು 24 ನೇ ತೀರ್ಥಂಕರ (ಜೈನ ಧರ್ಮದ ಧಾರ್ಮಿಕ ಬೋಧಕ) ಭಗವಾನ್ ಮಹಾವೀರನಿಗೆ ಸಮರ್ಪಿಸಲಾಗಿದೆ. ಇದು ಅವನ ಶವಸಂಸ್ಕಾರದ ಸ್ಥಳವನ್ನು ಗುರುತಿಸುತ್ತದೆ. ಮಹಾವೀರನು ಕ್ರಿ.ಪೂ 527 ರಲ್ಲಿ ಪಾವಾಪುರಿಯಲ್ಲಿ ನಿರ್ವಾಣವನ್ನು (ಮೋಕ್ಷ) ಪಡೆದನು. [] [] ಕೆಂಪು ಬಣ್ಣದ ಕಮಲದ ಹೂವುಗಳಿಂದ ತುಂಬಿರುವ ಕೊಳದೊಳಗೆ ಈ ದೇವಾಲಯವನ್ನು ಮೂಲತಃ ಮಹಾವೀರನ ಹಿರಿಯ ಸಹೋದರ ರಾಜ ನಂದೀವರ್ಧನನು ನಿರ್ಮಿಸಿದ. [] ಇದು ಪಾವ್‍ಪುರಿಯ ಐದು ಪ್ರಮುಖ ದೇವಾಲಯಗಳಲ್ಲಿ ಒಂದಾಗಿದೆ, ಇಲ್ಲಿ ಮಹಾವೀರನ "ಚರಣ ಪಾದುಕೆ " ಅಥವಾ ಪಾದದ ಗುರುತನ್ನು ಪೂಜಿಸಲಾಗುತ್ತದೆ.

ದಂತಕಥೆಯ ಪ್ರಕಾರ, ಭಗವಾನ್ ಮಹಾವೀರನು ಪಾವಾಪುರಿಯಲ್ಲಿ ನಿರ್ವಾಣವನ್ನು ಪಡೆದನು. ಭಗವಾನ್ ಮಹಾವೀರನ ಚಿತಾಭಸ್ಮದಷ್ಟು ಪವಿತ್ರವೆಂದು ಪರಿಗಣಿಸಲ್ಪಟ್ಟ ಸ್ಥಳದಿಂದ ಹೆಚ್ಚಿನ ಸಂಖ್ಯೆಯ ಯಾತ್ರಾರ್ಥಿಗಳು ಬಹಳ ದೊಡ್ಡ ಪ್ರಮಾಣದಲ್ಲಿ ಮಣ್ಣನ್ನು ಹೊರತೆಗೆದಾಗ ದೊಡ್ಡ ಹಳ್ಳವು ಸೃಷ್ಟಿಯಾಗಿ ನೀರಿನಿಂದ ತುಂಬಿಕೊಂಡು ಕೊಳವಾದಾಗ ಮಹಾವೀರನ ಶವಸಂಸ್ಕಾರದ ಸ್ಥಳವು ತೀರ್ಥಯಾತ್ರಾ ಕೇಂದ್ರವಾಯಿತು. ಅವರ ನಿರ್ವಾಣದ ಸ್ಥಳವನ್ನು ಸ್ಮರಿಸಿಕೊಳ್ಳಲು ಕೊಳದೊಳಗೆ ದೇವಾಲಯವನ್ನು ನಿರ್ಮಿಸಲಾಯಿತು.[][][]

ಛಾಯಾಂಕಣ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. Prasad 1995.
  2. Choudhury 1956.
  3. ೩.೦ ೩.೧ "Pawapuri". Official website of District Administration of Gaya. Retrieved 15 October 2015.
  4. ೪.೦ ೪.೧ "Pawapuri". National Informatics Centre. Archived from the original on 22 ಜುಲೈ 2015. Retrieved 15 October 2015. ಉಲ್ಲೇಖ ದೋಷ: Invalid <ref> tag; name "Apa" defined multiple times with different content
  5. Suriji 2013.
  6. "Jal Mandir". Official site of Pawapuri Tirth Organization. Archived from the original on 19 ಅಕ್ಟೋಬರ್ 2015. Retrieved 15 October 2015.

ಗ್ರಂಥಸೂಚಿ

ಬದಲಾಯಿಸಿ