ಜರ್ಮನ್ ಶೆಫರ್ಡ್

ನಾಯಿ ಜಾತಿ
ಜರ್ಮನ್ ಶೆಫೆರ್ಡ್

ಪ್ರವೇಶನ

ಬದಲಾಯಿಸಿ

ಜರ್ಮನ್ ಶೆಫೆರ್ಡ್ ನಾಯಿ ಒಂದು ದೊಡ್ಡ ಗಾತ್ರದ ಕೆಲಸ ಮಾಡುವ ನಾಯಿ. ಇದು ಸುಮಾರು ೧೮೯೯ ರಲ್ಲಿ ಜರ್ಮನಿಯಲ್ಲಿ ಆರಂಭಗೊಂಡಿತು. ಇದು ಕುರಿಗಳನ್ನು ಮೆಯ್ಯಿಸಲು ಉಪಯೊಗಿಸುತ್ತಿದರು. ಜರ್ಮನ್ ಶೆಫೆರ್ಡ್ ನಾಯಿಯು ಯುನೈಟೆಡ್ ಸ್ಟೇಟ್ಸ್ನಲ್ಲಿ ಬಹಳ ಜನಪ್ರಿಯ ನಾಯಿ ಯಾಕೆಂದರೆ ಇದಕ್ಕೆ ಬಹಳ ಶಕ್ತಿ, ಬುದ್ಧಿವಂತಿಕೆ ಮತ್ತು ವಿಧೇಯತೆ ಇದೆ. ಪೋಲೀಸ್ ಮತ್ತು ಮಿಲಿಟರಿಯವರಿಗೆ ಈ ನಾಯಿಯಿಂದ ಉಪಕಾರವಾಗಿದೆ.

ವಿವರಣೆ

ಬದಲಾಯಿಸಿ

ಜರ್ಮನ್ ಶೆಪರ್ಡ್ಸ್ ದೊಡ್ಡ ಗಾತ್ರದ ನಾಯಿಗಳು. ಇವುಗಳು ಸುಮಾರು ೬೦-೬೫ ಸೆಂಟಿ ಮಿಟರ್ ಎತ್ತಿರ ಬೆಳೆಯುತ್ತದೆ, ೨೫-೪೦ ಕೆಜಿ ಭಾರವಿರುತ್ತದೆ. ಇವುಗಳಿಗೆ ಕಪ್ಪು ಮೂಗುಗಳು ಇರುತ್ತದೆ. ಇದರ ಹಲ್ಲುಗಳ ಶಕ್ತಿ ಕತ್ತರಿಯಂತೆ ಇರುತ್ತದೆ. ಇದರ ಕಿವಿಗಳು ಉದ್ದವಾಗಿ ಇರುತ್ತದೆ. ಇವುಗಳಿಗೆ ಉದ್ದವಾದ ಕತ್ತು ಇದೆ. ಆದರೆ ಅದು ಓಡುವಾಗ ಕತ್ತು ಬಗ್ಗಿಸಿಕೊಂಡು ಓಡುತ್ತದೆ. ಅದರ ಬಾಲ ತುಂಬ ದಪ್ಪ. ಈ ನಾಯಿಯು ವಿವಿಧ ಬಣ್ಣಗಳಲ್ಲಿ ಬರುತ್ತದೆ.