ಜಯಮ್ಮ ಚೆಟ್ಟಿಮಾಡ
ಜಯಮ್ಮರವರು ಬರಹಗಾರ್ತಿ, ಕವಯಿತ್ರಿ, ಪ್ರಬಂಧಗಾರ್ತಿ, ಮಕ್ಕಳ ಸಾಹಿತಿ ಹೀಗೆ ಕರೆಸಿಕೊಂಡವರು. ಅಧ್ಯಾಪಕಿಯಾಗಿದ್ದಾರೆ. ಇವರ ರಚನೆಗಳು ನವೋದಯ ಕಾಲದ ಸಮನ್ವಯ-ಸಮಚಿತ್ತ ಪ್ರವೃತ್ತಿಯಾಗಿ ಕಂಡು ಬರುತ್ತವೆ.
ವಿದ್ಯಾಭ್ಯಾಸ
ಬದಲಾಯಿಸಿಬರವಣಿಗೆಯ ಕ್ಷೇತ್ರ
ಬದಲಾಯಿಸಿಇವರ ಸಾಹಿತ್ಯವು ಹೆಚ್ಚಾಗಿ ಸಾಂಸ್ಕೃತಿಕ ಪರಂಪರೆಯ ಕುರಿತಾದದ್ದಾಗಿದೆ. ಅವರ ಬದುಕಿನ ಹಿನ್ನೆಲೆಯು ಪ್ರೇರಣೆಯಾಗಿ ಮುಂದಿನ ತಲೆಮಾರಿಗೆ ಸಾಂನ್ಕೃತಿಕ ವಾತಾವರಣ ಮತ್ತು ಗ್ರಾಮ್ಯತೆಯ ವಿಶಿಷ್ಟ ಪರಿಕಲ್ಪನೆಯ ಅರಿವು ವಿಸ್ಮೃತಿಗೆ ಸರಿದು ಹೋಗದಂತೆ ಹಳಬರ ಜೋಳಿಗೆ ಎನ್ನುವ ಕೃತಿಗಳನ್ನು ಸಂಪಾದಿಸುತ್ತಿದ್ದಾರೆ. ತುಳು ಮತ್ತು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಇವರಿಗೆ ಮಾನ್ಯತೆ ಇದೆ. ಸುಳ್ಯದಲ್ಲಿ ನಡೆದ ಮೂರನೇ ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷರಾಗಿದ್ದರು.[೧]
ಜನನ ಜೀವನ
ಬದಲಾಯಿಸಿಸುಳ್ಯ ತಾಲೂಕಿನ ಜಾಲ್ಸೂರು ಸಮೀಪದ ಕಾಳಮನೆಯ ಶಿಕ್ಷಕ ದಂಪತಿಗಳಾದ ಶ್ರೀಮತಿ ಯಶೋದ ಮತ್ತು ಶ್ರೀ ಚಿನ್ನಪ್ಪ ಗೌಡರ ಮೂರು ಗಂಡು ಎರಡು ಹೆಣ್ಣು ಮಕ್ಕಳಲ್ಲಿ ಮೂರನೆಯವರಾಗಿ ೧೭.೦೮.೧೯೪೮ರಂದು ಜೆ.ಕೆ. ಜಯಮ್ಮ ಬ. ಚೆಟ್ಟಿಮಾಡರು ಉಪ್ಪಿನಂಗಡಿಯ ]ಜಂಗಮ ಸ್ಠಳದಲ್ಲಿ ಜನಿಸಿದರು. ತಂದೆ ತಾಯಿ ಇಬ್ಬರೂ ಶಿಕ್ಷಕರಾಗಿದ್ದರು. ಶಿಕ್ಷಕ ತಂದೆಯವರು ಕೋಟ ಶಿವರಾಮ ಕಾರಂತರಿಂದ ಪ್ರೇರಣೆ ಮತ್ತು ಶಿಕ್ಷಣ ಪಡೆದವರಾಗಿ ಯಕ್ಷಗಾನದ ಅರ್ಥ-ಪಾತ್ರಧಾರಿಯೂ ಆಗಿದ್ದರು. ತಾಯಿ ಶಿಕ್ಷಕಿ ಜೊತೆಗೆ ಹಳ್ಳಿಯ ಮನೆಯ ಪಾಡು ಅವರಲ್ಲಿ ಹಾಡಾಗಿ ಬಂದು ಮಕ್ಕಳ ಪದ್ಯಗಳನ್ನು ರಚಿಸಿದರು. ಹೀಗೆ ತಂದೆಯ ಮೂಲಕ ಸಾಹಿತ್ಯ ಕಲೆಗಳ ಪ್ರಭಾವವಾದರೆ, ತಾಯಿ ಸೃಜನಶೀಲ ರಚನೆಗಳ ಹಿನ್ನಲೆಯ ಪ್ರಭಾವದಿಂದಾಗಿ ಶಿಕ್ಷಣ ಸಂಸ್ಕಾರಯುಕ್ತ ವಾತಾವರಣದಲ್ಲ್ಲಿ ಜಯಮ್ಮರು ಬೆಳೆದರು.
ಪ್ರಭಾವ-ಪ್ರೇರಣೆ
ಬದಲಾಯಿಸಿತಂದೆಯವರು ಹಾಡುತ್ತಿದ್ದ ಯಕ್ಷಗಾನದ ಪದಗಳು, ತಾಯಿಯ ಮಕ್ಕಳ ಚಮತ್ಕಾರದ ಕವಿತೆಗಳು ಸಹಜವಾಗಿ ಪ್ರೇರಣೆಗಳಾಗಿದ್ದವು. ಸಾಹಿತ್ಯಗುರುವಾಗಿ 'ಕಾಲೂರ ಚೆಲುವೆ'ಯೆನ್ನುವ ಅಚ್ಚಕನ್ನಡ ಕಾವ್ಯದ ಕರ್ತ ಕೊಳಂಬೆ ಪುಟ್ಟಣ್ಣ ಗೌಡರ ಪ್ರೋತ್ಸಾಹವಿತ್ತು. ಇವರಿಂದ ಅಚ್ಚಕನ್ನಡ ಬರೆಯಲು ಪ್ರಭಾವವಿತರಾಗಿದ್ದರು. ಸಾಂಸ್ಕೃತಿದ ಸೊಗಡು ಇವರ ಅಜ್ಜಿಯಿಂದ ಹಾಗೂ ಕೆದಂಬಾಡಿ ಜತ್ತಪ್ಪ ರೈಯವರಿಂದ ಮೈಗೂಡಿದೆ.
ಸಾಧನೆ
ಬದಲಾಯಿಸಿ- ೧೯೯೫ರಲ್ಲಿ 'ಕಾವ್ಯ ಕಾವೇರಿ ಸಾಹಿತ್ಯ ಸಂಜೀವಿನಿ' ಎಂಬ ಪ್ರಕಾಶನ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ.
- ಮಾಸ್ತರ್ ಕೀಲಾರ್ ಕಜೆ ವೆಂಕಪ್ಪಯ್ಯರಿಂದ 'ನಗೆಮಲ್ಲಿಗೆ' ಎನ್ನುವ ಪ್ರಶಂಸೆಗೆ ಪಾತ್ರರಾಗಿದ್ದರು.
- ಗುರುಕಾಣಿಕೆಯಾಗಿವಿದ್ವಾನ್ ಕೊಳಂಬೆ ಪುಟ್ಟಣ್ಣ ಗೌಡರನ್ನು ಕೇಂದ್ರೀಕರಿಸಿ
- 'ಗುರುವಿಗೆ' (ಲಹರಿ-೧೯೯೩ ಪು.೧೫)
- 'ಕೊಳ್ಳಂಬೆ ಕನ್ನುಡಿಯ ಕವಿಯ ಕೈಂಕರ್ಯ' (ಕಾಡುಮೇಡಿನ ಜಾಡು: ೧೯೯೯ ಪು.೨೦) ಎಂಬ ಕವನರೂಪ
- ಕನ್ನಡಕ್ಕೊರ್ವನೆ ಅಚ್ಚಗನ್ನಡಿಗಂ ಕೊಳಂಬೆ ಪುಟ್ಟಣ್ಣ ಗೌಡಂ' (ಪುರುಷಾರ್ಥ ಸಾಧಕರು: ೧೯೯೨ ಪು.೫೨-೫೩) ಎಂಬ ಗದ್ಯವನ್ನು ಅಚ್ಚಗನ್ನಡದಲ್ಲೆ ಬರೆದರು.
- ಜಯಮ್ಮ ತಮ್ಮ ಮನೆಯಲ್ಲಿ'ಕೆದಂಬಾಡಿ ಪುಸ್ತಕ ಭಂಡಾರ್'ವನ್ನು ಸಾಹಿತ್ಯ ಓದುಗರ ಆಸಕ್ತಿಗಾಗಿ ಮೀಸಲಿಟ್ಟು ಸಾಹಿತ್ಯ ವಾತಾವರಣ ರೂಪಿಸುವಲ್ಲಿ ಶ್ರಮಿಸಿದ್ದಾರೆ.
ಕೃತಿಗಳು
ಬದಲಾಯಿಸಿಅನುವಾದಗಳು ಕತೆಗಳು
ಬದಲಾಯಿಸಿ- 'ಠುಕ್ರಾ ದೋ ಯಾ ಪ್ಯಾರ್ ಕರೋ' ಹಿಂದಿ ಕವಿತೆಯನ್ನು 'ತುಳಿ ಇಲ್ಲವೇ ಬಲಿ' ಕನ್ನಡಕ್ಕೆ
- ನಾ ಮರೆಯಲೆಂತು ನಿನ್ನ
- ಕೋಗಿಲೆ ಕಾಡಿನ ಕತ್ತಲಲ್ಲಿ
- ನರಬೇಟೆ
- ತಬ್ಬಲಿಗಳು
ಮಕ್ಕಳ ಸಾಹಿತ್ಯ
ಬದಲಾಯಿಸಿ- ತನನ ದಿನನ ಐದು ಗೀತರೂಪಕಗಳ ಸಂಕಲನ
- ಕತ್ತಲೆಯೊಳಗಿನ ಕಿಡಿ - ಸಾಹಸ ಕಥೆ
- ಗುಬ್ಬಿ ಮತ್ತು ನತ್ತು - ರೂಪಕ
- ಹೆಣ್ಣಾನೆಯ ಕರುಣೆ
- ದೇವರೆಲ್ಲಿ
- ಅಂದು-ಇಂದು ಸಾಹಸ ರೂಪಕ
ಪ್ರಬಂಧ
ಬದಲಾಯಿಸಿ- ವಿಗಂಡನೆ
- ಕೈಮರ
ವ್ಯಕ್ತಿ ಚಿತ್ರಣ
ಬದಲಾಯಿಸಿ- ಪುರುಷಾರ್ಥ ಸಾಧಕರು
ಸಂಪಾದನೆ
ಬದಲಾಯಿಸಿ- ಹನಿಹೊನಲು
- ಮುತ್ತು ಮಲ್ಲಿಗೆ
ಹಳಬರ ಜೋಳಿಗೆಗೆ ವಿಶೇಷ ಮಹತ್ವವಿದೆ. ತಲೆಮಾರುಗಳ ನೆನಪುಗಳಲ್ಲಿ ಮಾಗಿದ ಹಲವು ವಿಚಾರಗಳನ್ನು ಜೆ. ಕೆ. ಜಯಮ್ಮ ಬ. ಚೆಟ್ಟಿಮಾಡರ ಬರಹದಲ್ಲಿ ಕಾಣಬಹುದು.
ಪ್ರಶಸ್ತಿಗಳು
ಬದಲಾಯಿಸಿ- ಕುಂಬ್ರ ಜೇಸೀಸ್ ಸಂಸ್ಥೆಯವರು 'ಸಾಹಿತ್ಯ ಪ್ರಶಸ್ತಿ' ಸನ್ಮಾನ್ - ೨೦೦೪
- ಸಾಹಿತ್ಯ ಸೇವೆಗಾಗಿ ೭ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ
- ಮಕ್ಕಳ ಪುಸ್ತಕ 'ತನನ ದಿನನ' ಗಾಗಿ ಜೆ.ಪಿ.ರಾಜರತ್ನಂ ಸ್ಮಾರಕ ಮಕ್ಕಳ ಸಾಹಿತ್ಯ ಪ್ರಶಸ್ತಿ ಪಡೆದರು.
- ಪರಬಲ್ತ ಪೆರಿಪಾಲೆಲು ಕಾದಂಬರಿಗೆಎಸ್. ಯು. ಪಣಿಯಾಡಿ ೨೦೧೩ ಪ್ರಶಸ್ತಿ ಪಡೆದರು.
- ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯಿಂದ ಗೌರವ ಮತ್ತು ಪುಸ್ತಕ ಪ್ರಶಸ್ತಿಗಳು ೨೦೧೩ ರಲ್ಲಿ ಲಭಿಸಿತ್ತು.[೨]