ಶ್ರೀ. ಜಯಪತಾಕ ಸ್ವಾಮೀಜಿ

(ಜಯಪತಾಕ ಸ್ವಾಮೀಜಿ ಇಂದ ಪುನರ್ನಿರ್ದೇಶಿತ)

ಕೆನಡಾರಾಷ್ಟ್ರದ ಮಾಂಟ್ರಿಯಲ್ ಶಾಖೆಯ ಪ್ರಮುಖ ಮಠಾಧೀಶರಾಗಿ ಶ್ರೀ. ಜಯಪತಾಕ ಸ್ವಾಮಿಜಿ[] ವೈಷ್ಣವ, ಭಕ್ತಿ ಪಂಥದ ಪ್ರಮುಖ ಆಚಾರ್ಯರು, ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. 'ಭಕ್ತಿ ವೇದಾಂತ ಬುಕ್ ಟ್ರಸ್ಟಿ'ಗೆ (BBT) ಪ್ರಾಂತೀಯ ಟ್ರಸ್ಟಿಗಳಲ್ಲೊಬ್ಬರಾಗಿ ಕಾರ್ಯ ನಿರ್ವಹಣೆಯ ಜವಾಬ್ದಾರಿಯನ್ನೂ ಹೊತ್ತಿದ್ದಾರೆ' ಇವರು, ಶ್ರೀ. ಎ.ಸಿ. ಭಕ್ತಿವೇದಾಂತ ಸ್ವಾಮಿ ಶ್ರೀಲ ಪ್ರಭುಪಾದ ರ ಅನುಯಾಯಿಗಳಲ್ಲಿ ಅತಿ ಹಿರಿಯ ಶಿಷ್ಯರಲ್ಲೊಬ್ಬರು. ಇಸ್ಕಾನ್ ದೇವಾಲಯದ ಗವರ್ನಿಂಗ್ ಬಾಡಿ ಕಮೀಶನ್ ನ ಸದಸ್ಯ ರಲ್ಲೊಬ್ಬರು. ಶ್ರೀಲಾ ಪ್ರಭುಪಾದರ ಶಿಷ್ಯರಲ್ಲಿ ಅತಿ ಎಳೆಯವಯಸ್ಸಿನವರು. ಅವರಿಗೆ ಸನ್ಯಾಸ ದೀಕ್ಷೆ ಕೊಟ್ಟಾಗ ಅವರ ವಯಸ್ಸು ಕೇವಲ ೨೧ ವರ್ಷಗಳು. ಅಂದಿನಿಂದ ವಿಶ್ವದಾದ್ಯಂತ ದೇಶದೇಶಗಳಿಗೂ ಹೋಗಿ ಕೃಷ್ಣತತ್ವವನ್ನು ಪ್ರಚಾರಮಾಡಿದರು. ಕೃಷ್ಣ ಭಕ್ತಿ ಪ್ರಸಾರದಲ್ಲಿ ಶ್ಲಾಘನೀಯ ಕೆಲಸಮಾಡುತ್ತಿದ್ದಾರೆ.

ಚಿತ್ರ:ISKON060.JPG
'ಟೊರಾಂಟೋನಗರದ ಇಸ್ಕಾನ್ ಮಂದಿರ'

ಬಾಲ್ಯ,ವಿದ್ಯಾಭ್ಯಾಸ,ಅಧ್ಯಾತ್ಮದಲ್ಲಿ ಆಸಕ್ತಿ

ಬದಲಾಯಿಸಿ
ಚಿತ್ರ:ISKON066.JPG
'ರಾಧಾ ಗೋಪೀನಾಥ್ ಜಿ'

ಜಯಪತಾಕ ಸ್ವಾಮೀಜಿ ಯವರ ಪೂರ್ವಾಶ್ರಮದ ನಾಮ, ಗಾರ್ಡನ್ ಜಾನ್ ಎಡ್ಮನ್೨ ಎಂದು. ಅವರ ತಂದೆಯವರ ಹೆಸರು, ಗಾರ್ಡನ್ ಜಾನ್ ಎಡ್ಮನ್ ಮತ್ತು ತಾಯಿಯವರ ಹೆಸರು, ಲೊರೇನ್ ಎಡ್ಮನ್ (ಗೋಲಿಚ್) ಎಂದು. ಎಡ್ಮನ್ ರವರು, ಏಪ್ರಿಲ್ ೯, ೧೯೪೯, ಮಿಲ್ವಾಕಿ, ವಿಸ್ಕಾನ್ಸಿನ್ ನಲ್ಲಿ ಜನಿಸಿದರು. 'ಎಡ್ಮನ್' ರವರು, ತಮ್ಮ ೧೬ ನೆಯ ಪ್ರಾಯದಲ್ಲಿ ಪೂರ್ವ ಪದವಿ ಪ್ರದಾನ ಮಾಡುವ 'ಸೆಂಟ್ ಜಾನ್ ಅಕ್ಯಾಡೆಮಿ'ಯ ಗ್ರಾಜುಏಶನ್ ಮುಗಿಸಿ ತಮ್ಮ ಇಯತ್ತೆಯಲ್ಲೇ ಪ್ರಥಮರಾಗಿ ತೇರ್ಗಡೆ ಹೊಂದಿದರು. ಇದಾದಮೇಲೆ ಬ್ರೌನ್ ಕಾಲೇಜ್ ಗೆ ಭರ್ತಿಯಾದಾಗ ಅವರಿಗೆ 'ಶಿಷ್ಯ ವೃತ್ತಿವೇತನ' ದೊರೆಯಿತು. ಕಾಲೇಜಿಗೆ ಸೇರಿದ ದಿನದಿಂದ 'ಭಗವಾನ್ ಗೌತಮ ಬುದ್ಧ' ನಮೇಲೆ ದೊರೆತ ವ್ಯಾಖ್ಯಾನದಿಂದ ಅತ್ಯಂತ ಪ್ರಭಾವಿತರಾದರು. ಓದಿನ ಮೇಲೆ ಅವರಿಗೆ ಆಸಕ್ತಿ ಕಡಿಮೆಯಾಗತೊಡಗಿತು. ಅಧ್ಯಾತ್ಮ ಜ್ಞಾನದ ಅರಿವಿನಕಡೆಗೆ ಮನಸ್ಸು ವಾಲಿತು. ಅದನ್ನು ಒಬ್ಬ ಗುರುವಿನ ಸಹಾಯದಿಂದಾರೂ ಪಡೆದುಕೊಳ್ಳುವ ಹಂಬಲ ಕಾಡತೊಡಗಿತು. ಭಾರತದ ಸಂತರು ಮಹಾತ್ಮರ ಬಗ್ಗೆ ಕೇಳಿತಿಳಿದಿದ್ದ ಗಾರ್ಡನ್ ಜಾನರಿಗೆ ಅಲ್ಲಿಗೆ ಹೋಗಿ ಸದ್ಗುರು ಒಬ್ಬರ ಸಾನ್ನಿಧ್ಯದಲ್ಲಿ ಜ್ಞಾನಾರ್ಜನೆ ಮಾಡಲು ಹಾತೊರೆಯುತ್ತಿದ್ದರು ಆ ಸಮಯದಲ್ಲಿ ಅವರನ್ನು ಆಕರ್ಷಿಸಿದವರು,' ಹರೇ ರಾಮ ಹರೇಕಿಷ್ಣ ಪಂಥದ ಸನ್ಯಾಸಿಗಳು ಹಾಗೂ ಅವರ ಅನುಯಾಯಿಗಳು. ಅವರೆಲ್ಲಾ ಅತ್ಯಂತ ಶ್ರದ್ದಾಭಕ್ತಿಗಳಿಂದ ಭಗವದ್ ಕೀರ್ತನೆಗಳನ್ನು ಹಾಡುತ್ತಾ, ಜಪಮಾಡುತ್ತಾ ’Back to Godhead' ಎಂಬ ಪತ್ರಿಕೆಯನ್ನು ಶ್ರದ್ಧಾಳುಗಳಿಗೆಲ್ಲಾ ಹಂಚುತ್ತಿದ್ದದ್ದನ್ನು ಅವರು ವೀಕ್ಷಿಸಿದರು. 'ಎಡ್ಮನ್' ರವರು, ಅಮೆರಿಕದ ಸ್ಯಾನ್ ಫ್ರಾನ್ಸಿಸ್ ಕೋನಗರದ ಇಸ್ಕಾನ್ ದೇವಾಲಯಕ್ಕೆ ಹೋಗಿ, ಅಲ್ಲಿ ಶ್ರೀಲಾ ಪ್ರಭುಪಾದ ರನ್ನು ಭೆಟ್ಟಿಯಾದರು. ಜಾನ್ ರವರ ಅಧ್ಯಾತ್ಮದ ಬಗ್ಗೆ ಇದ್ದ ಅಪಾರ ಶ್ರದ್ಧೆ, ಜ್ಞಾನ-ಜಿಜ್ಞಾಸೆಗೆ ಮಾರುಹೋದ ಪ್ರಭುಪಾದರು, ಅವರಿಗೆ ದಿವ್ಯ ಜ್ಞಾನವನ್ನು ಬೋಧಿಸಿದ್ದಲ್ಲದೆ, ಅಂದಿನಿಂದ ಜಾನ್ ರವರ ಹೆಸರನ್ನು ಜಯಪತಾಕಾ ದಾಸ ರೆಂದು ನಾಮಕರಣ ಮಾಡಲಾಯಿತು. ಮುಂದೆ ಅಮೆರಿಕದ ನ್ಯೂಯಾರ್ಕ್ ನ ಮಂದಿರಕ್ಕೂ ಮುಖ್ಯಸ್ಥರನ್ನಾಗಿ ನೇಮಿಸಲಾಯಿತು. ಇಸ್ಕಾನ್ ಪ್ರಕಟಣೆಗಳನ್ನು ವಿಶ್ವದ ಬೇರೆ ಬೇರೆ ಇಸ್ಕಾನ್ ಶಾಖೆಗಳಿಗೆಲ್ಲಾ ತಲುಪಿಸುವ ಕೆಲಸವನ್ನು ಒಪ್ಪಿಸಲಾಯಿತು.[]

ಕಲ್ಕತ್ತಾನಗರಕ್ಕೆ ಬಂದರು

ಬದಲಾಯಿಸಿ
ಚಿತ್ರ:Photos 015.JPG
'ಪ್ರವಚನದ ಸಮಯದಲ್ಲಿ'

'ಜಯಪತಾಕಾದಾಸರು' ಭಾರತಕ್ಕೆ ಭೇಟಿನೀಡಲು ತಮ್ಮ ಗುರುಗಳ ಅನುಮತಿ ಕೇಳಿದರು. ಕೊಲ್ಕತ್ತಾದಲ್ಲಿ ತರಕಾರಿ ಖರೀದಿಸುವಾಗ ಜನರ ಜೊತೆ ಬೆರೆತಾಗ, ತಮ್ಮ ಜೊತೆಗಾರರ ಹತ್ತಿರ ಮಾತಾಡಿ ಬೆಂಗಾಲಿ ಭಾಷೆಯನ್ನು ಗಮನವಿಟ್ಟು ಕಲಿತರು. ಮನೆಮನೆಗಳಲ್ಲಿ ಸತ್ಸಂಗಗಳನ್ನು ಆಯೋಜಿಸಿ ಪೂಜಾ, ಹರಿನಾಮ ಸಂಕೀರ್ತನೆ ಕಾರ್ಯಮಗಳನ್ನು ನಡೆಸಿದರು. ಎಡ್ಮನ್ ಹರಿ ಕಥಾ ಸಂಗ್ರಹ ಪುಸ್ತಕಗಳನ್ನು ಭಕ್ತರಿಗೆ ವಿತರಿಸುವ ಕಾರ್ಯದಲ್ಲಿ ತಮ್ಮ ಬಹಳ ಸಮಯವನ್ನು ಕಳೆಯುತ್ತಿದ್ದರು. ಸನ್ ೧೯೭೦ ರಲ್ಲಿ 'ರಾಧಾಷ್ಟಮಿ ಹಬ್ಬ'ದಂದು, ಶ್ರೀಲ ಪ್ರಭುಪಾದರು ಜಾನ್ ರಿಗೆ ಸನ್ಯಾಸ ದೀಕ್ಷೆಯನ್ನು ಉಪದೇಶಮಾಡಿದರು. 'ತ್ರಿದಂಡಿ ಭಿಕ್ಷು', ಜಯಪತಾಕ ದಾಸ ಸ್ವಾಮಿ ಯೆಂಬ ನಾಮಕರಣಮಾಡಿದರು.

ಮಾಯಾಪುರದಲ್ಲಿ ಆಶ್ರಮ

ಬದಲಾಯಿಸಿ

ಕಲ್ಕತ್ತಾನಗರದ ಮಾಯಾಪುರದಲ್ಲಿ ಇಸ್ಕಾನ್ ಮಂದಿರಕ್ಕೆ ಸರಕಾರದಿಂದ ಜಮೀನು ಸಿಕ್ಕಾಗ ಶ್ರೀಲ ಪ್ರಭುಪಾದರು, ಜಯ ಪತಾಕದಾಸ ರನ್ನು ೫ ಜನ ಭಿಕ್ಷುಗಳ ಜೊತೆಮಾಡಿ ಕಳಿಸಿಕೊಟ್ಟರು. ಆಧುನಿಕ ಕೃಷಿವಿಧಾನಗಳನ್ನು ಅಲ್ಲಿನ ರೈತರಿಗೆ ತಿಳಿಸಿದ್ದಲ್ಲದೆ ಅಲ್ಲಿನ ಕೃಷಿಕರಿಂದ ಬಂಗಾಲಿಭಾಷೆಯನ್ನು ಕಲಿತರು. ಆಗಲೇ ಮಾಯಾಪುರದಲ್ಲಿ ಶ್ರೀಲ ಸ್ವಾಮಿಗಳ ನೇತೃತ್ವದಲ್ಲಿ ಕಮಲದಳದಾಕಾರದ ಮಂದಿರದ ಕಾರ್ಯ ಆರಂಭವಾಯಿತು. ಅದರ ಮೇಲ್ವಿಚಾರಣೆಯ ಜವಾಬ್ದಾರಿಯನ್ನು ಶ್ರೀಲಾರು 'ಜಯಪತಾಕ ಸ್ವಾಮಿಯವರಿಗೆ ವಹಿಸಿದರು. ಗುರು, ಶ್ರೀಲಾರವರ ಅಪ್ಪಣೆಯಂತೆ ಜಯಪತಾಕಾದಾಸರು, ಭಾರತೀಯ ಪೌರತ್ವಕ್ಕೆ ಅರ್ಜಿಸಲ್ಲಿಸಿದರು. ಇದರಿಂದಾಗಿ ಭಾರತವನ್ನು ಬಿಟ್ಟುಹೋಗುವಂತಿರಲಿಲ್ಲ. ಆ ಸಮಯದಲ್ಲಿ ಜಯಪತಾಕರು ಬಂಗಾಳದ ಗ್ರಾಮಪ್ರದೇಶಗಳಿಗೆ ಭೇಟಿನೀಡಿ ಅಲ್ಲಿನ ಜನರಿಗೆ ಕೃಷ್ಣಪಂಥದಬಗ್ಗೆ ಪ್ರವಚನಗಳನ್ನು ನೀಡಿದರು. ಗುರುಗಳ ಆಜ್ಞೆಯನ್ನು ಶಿರಸಾವಹಿಸಿ, ಜಯಪತಾಕರು, ಪ್ರತಿ ತಿಂಗಳೂ, ೧೦ ಸಾವಿರ ದೊಡ್ಡ ಪುಸ್ತಕಗಳು, ಮತ್ತು ೧ ಲಕ್ಷ ಚಿಕ್ಕ ಪುಸ್ತಕಗಳನ್ನು ಮಾರಾಟಮಾಡುವ ಪರಿಕ್ರಮದಲ್ಲಿ ಯಶಸ್ವಿಯಾಗಿದ್ದಾರೆ. ಇಂದಿಗೂ ಜಯಪತಾಕರು, ವಿಶ್ವದಾದ್ಯಂತ ವಿಷ್ಣುಭಕ್ತರಿಗೆ ದಿವ್ಯ-ಜ್ಞಾನವನ್ನು ನೀಡುತ್ತಾ ಬಂದಿದ್ದಾರೆ. ಮೇಲೆತಿಳಿಸಿದ ಎಲ್ಲಾ ಕಾರ್ಯಗಳು ಇಂದಿಗೂ ಅವರ ಜೀವನದ ಮಹತ್ವದ ಸಂಗತಿಗಳಾಗಿವೆ. ಇಂದಿನ ದಿನಗಳಲ್ಲಿ ಅವರ ಆರೋಗ್ಯದಲ್ಲಿ ತೃಟಿಯುಂಟಾದರೂ ಲೆಕ್ಕಿಸದೆ, ಈ ಮಹದುದ್ದೇಶಕ್ಕೆ ತಮ್ಮ ಅಮೂಲ್ಯ ಸಮಯವನ್ನು ಮುಡಿಪಾಗಿಟ್ಟಿದ್ದಾರೆ.

ಕೆನಡಾ ದೇಶದಲ್ಲಿ ಇಸ್ಕಾನ್ ಶಾಖೆ

ಬದಲಾಯಿಸಿ
ಚಿತ್ರ:BVP062.JPG
'ಶ್ರೀಲ ಪ್ರಭುಪಾದರ ಮೂರ್ತಿ'

೧೯೬೮ ರಲ್ಲಿ ಶ್ರೀ. ಜಯಪತಾಕ ಸ್ವಾಮೀಜಿ ಯವರು, ಕೆನಡಾದ ಮಾಂಟ್ರಿಯಲ್ ನಲ್ಲಿ ಮೊದಲು ಇಸ್ಕಾನ್ ಶಾಖೆ ಯನ್ನು ಸ್ಥಾಪಿಸಿದರು. 'ಜಯ ಪತಾಕದಾಸ ಬ್ರಹ್ಮಚಾರಿ'ಯೆಂದು ಕರೆಯಲ್ಪಟ್ಟರು. ಮೊಟ್ಟಮೊದಲು ಅಧ್ಯಕ್ಷರಾಗಿ ನಿರ್ವಹಿಸಿದ ಕಾರ್ಯ. ಪುಸ್ತಕಗಳನ್ನು ಪ್ರಕಟಿಸಿ ಬೇರೆ ಶಾಖೆಗಳಿಗೆ ವಿತರಿಸುವ ಕಾರ್ಯ. ಭಾರತದಲ್ಲೂ ಈ ಕಾರ್ಯವನ್ನು ಮುಂದುವರೆಸಿದರು. ಶ್ರೀಲ ಪ್ರಭುಪಾದರು ಬೋಧಿಸಿದ ೬ ತಿಂಗಳಲ್ಲೇ ಅವರು ಕೆನಡಾ ದೇಶದ ಟೋರಂಟೋನಗರಕ್ಕೆ ಆಗಮಿಸಿ ಅಲ್ಲಿನ ಪ್ರಪ್ರಥಮ ಅಧ್ಯಕ್ಷರಾದರು. ಅಕ್ಟೋಬರ್ ೨೦೦೮ ರಲ್ಲಿ ಮುಂಬೈನಲ್ಲಿದ್ದಾಗ ತೀವ್ರ ಹೃದಯಾಘಾತಕ್ಕೆ ಒಳಗಾದರು, ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆದರು. ಗುರುಗಳ ಆಶೀರ್ವಾದದ ಫಲದಿಂದ ಸ್ಥಿತಿ ಉತ್ತಮಗೊಂಡು, ವಿಶ್ವದಾದ್ಯಂತ ಪರ್ಯಟನೆ ಮಾಡುತ್ತಿದ್ದಾರೆ. ಪ್ರಭುಪಾದರ ದಿವ್ಯತತ್ವಬೋಧೆಗಳನ್ನು ಪ್ರಚಾರಮಾಡುವ ಮಹದುದ್ದೇಶ ಹೊಂದಿದ್ದಾರೆ. ಸನ್ ೨೦೧೨ ರ, ಜೂನ್ ೭ ರಿಂದ ಜೂನ್ ೯, ರ ವರೆಗೆ ಟೊರಾಂಟೊನ ಇಸ್ಕಾನ್ ಮಂದಿರದಲ್ಲಿರುತ್ತಾರೆ.

ಉಲ್ಲೇಖಗಳು

ಬದಲಾಯಿಸಿ

ಟೊರಾಂಟೋ ಶಾಖೆಯ ವಿಳಾಸ : ೨೪೩, ಅವೆನ್ಯೂ ರಸ್ತೆ,ಟೊರಾಂಟೋ,ON, M56 2J6.

ಹೆಚ್ಚಿನ ಮಾಹಿತಿಗಳಿಗೆ ಸಂಪರ್ಕ ಅಧಿಕಾರಿಯನ್ನು ಭೇಟಿಮಾಡಬಹುದು : ಸನಾತನ ಸೇವಕ್ ದಾಸ, ದೂರ ಸಂಪರ್ಕ ನಂ : ೯೦೫ ೮೯೦ ೬೪೮೮ ಅಥವಾ ೬೪೭ ೨೭೦ ೨೩೪೧,

ವಿಳಾಸ : ೧೩೪, ೪೯೫೦ ಆಲ್ಬಿನಾ ವೇ, ಮಿಸ್ಸಿಸ್ಸುಗಾ, ON L4Z 436