ಜಯಂತಿ ಎಸ್. ಬಂಗೇರ ಇವರು ಮೂಡಬಿದಿರೆಯ ಪ್ರಥಮ ಲೇಖಕಿ,ಇವರು "ಕಿತ್ತೂರು ರಾಣಿ ಚೆನ್ನಮ್ಮ" ಪ್ರಶಸ್ತಿ ಪಡೆದಿದ್ದಾರೆ[೧].ಇವರ ಸಾಹಿತ್ಯ ಕೆಲಸಗಳು ಅಪಾರ.ಕಥೆ, ಕಾದಂಬರಿ,ನಾಟಕ ಹೀಗೆ ಎಲ್ಲದರಲ್ಲೂ ಪಳಗಿರುವ ಇವರು ನಟಿಯಾಗಿಯೂ ಗುರುತಿಸಿಕೊಂಡವರು.ಕನ್ನಡ- ತುಳು ಎರಡು ಭಾಷೆಗಳಲ್ಲೂ ನಾಟಕಗಳನ್ನೆಲ್ಲಾ ಬರೆಯುವುದಾದರೂ ತುಳುವಿನ ಮೇಲೆ ಅಪಾರ ಪ್ರೀತಿ ಇತ್ತು.

ಕೃತಿ ಬದಲಾಯಿಸಿ

ಇವರ ಮೊದಲ ಕೃತಿ 'ಮನಸ್ಸ್ ಬದಲಾನಗ'

ಕಾದಂಬರಿ ಬದಲಾಯಿಸಿ

  • ಸೊರಗೆದ ಪೂ

ನಾಟಕಗಳು ಬದಲಾಯಿಸಿ

  1. ಮಾಯಿದ ಪುಣ್ಯಮೆ
  2. ಸತ್ಯ ನೆಗಪುನಗ
  3. ಮಾಪು ಮಲ್ಪುಲ ಮುಂತಾದವು

ಪ್ರಶಸ್ತಿಗಳು ಬದಲಾಯಿಸಿ

ಈ ಮೇಲ್ಕಂಡ ಕೃತಿ, ಕಾದಂಬರಿ, ನಾಟಕಗಳಿಗೆ ಇವರಿಗೆ ದೊರಕಿರುವ ಪ್ರಶಸ್ತಿಗಳು; ಬದಲಾಯಿಸಿ

  1. ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ
  2. ತುಳುಕೂಟ, ಉಡುಪಿ ಇವರಿಂದ ೨೦೦೨ರ ಎಸ್.ಯು.ಪಣಿಯಾಡಿ ಪ್ರಶಸ್ತಿ
  3. ಧರ್ಮಸ್ಥಳ ರತ್ನವರ್ಮ ಹೆಗ್ಗಡೆ ನಾಟಕ ಪ್ರಶಸ್ತಿ
  4. ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ[೨]
  5. ತುಳುನಾಡ ತುಳುಶ್ರೀ ಪ್ರಶಸ್ತಿ[೩]

ಇತರ ಮಾಹಿತಿಗಳು ಬದಲಾಯಿಸಿ

  1. ಇವರು ನಟಿಯಾಗಿ ದಕ್ಷಿಣಕನ್ನಡದಿಂದಾಚೆ ಬೆಂಗಳೂರು,ದೆಹಲಿಗಳಲ್ಲಿಯೂ ಅಭಿನಯಿಸಿದ್ದಾರೆ.
  2. 'ಬಂದೇ ಬರತಾವ ಕಾಲ' ಟಿ.ವಿ. ಧಾರಾವಾಹಿಗಳಲ್ಲಿಯೂ ಅಭಿನಯಿಸಿದ್ದಾರೆ.
  3. ಈಗ ಏನನ್ನಾದರೂ ಸಾಧಿಸಬೇಕೆಂಬ ತುಡಿತವಿರುವ ಇವರು ತುಳು ಪತ್ರಿಕೆಯೊಂದನ್ನು ಹೊರತರುವ ತರತುರಿಯಲ್ಲಿದ್ದಾರೆ.

ಉಲ್ಲೇಖ ಬದಲಾಯಿಸಿ

  1. "ಆರ್ಕೈವ್ ನಕಲು". Archived from the original on 2016-03-05. Retrieved 2015-12-12.
  2. "ಆರ್ಕೈವ್ ನಕಲು". Archived from the original on 2016-03-04. Retrieved 2015-12-12.
  3. "ಆರ್ಕೈವ್ ನಕಲು". Archived from the original on 2016-03-04. Retrieved 2015-12-12.