ಜಬಲ್ಪುರ್‌ನಲ್ಲಿರುವ ಪ್ರವಾಸಿ ಆಕರ್ಷಣೆಗಳ ಪಟ್ಟಿ
ಜಬಲ್ಪುರ್ ಮಧ್ಯ ಪ್ರದೇಶ ಮತ್ತು ಮಧ್ಯ ಭಾರತದಲ್ಲಿ ಪ್ರವಾಸೋದ್ಯಮಕ್ಕಾಗಿ ಅತ್ಯಂತ ಮಹತ್ವದ ನಗರಗಳಲ್ಲಿ ಒಂದಾಗಿದೆ. ಕಾನ್ಹಾ ರಾಷ್ಟ್ರೀಯ ಉದ್ಯಾನ, ಬಂಧ್ವಾಗಢ್ ರಾಷ್ಟ್ರೀಯ ಉದ್ಯಾನ, ಮತ್ತು ಪೆಂಚ್ ರಾಷ್ಟ್ರೀಯ ಉದ್ಯಾನದಂತಹ ವಿಶ್ವಪ್ರಸಿದ್ಧ ಹುಲಿ ಮೀಸಲು ಪ್ರದೇಶಗಳಿಗೆ ಜಬಲ್ಪುರ್ ಮೂಲಕ ಸುಲಭವಾಗಿ ಭೇಟಿ ಕೊಡಬಹುದು. ಭಾರತದಲ್ಲಿನ ಎಲ್ಲ ಪ್ರಮುಖ ಮಹಾನಗರಗಳ ಮೂಲಕ ಸಂಪರ್ಕದ ಕಾರಣ ಮಧ್ಯಭಾರತದಲ್ಲಿನ ವನ್ಯಜೀವಿ ಪ್ರವಾಸಗಳಿಗೆ ಪ್ರವೇಶದ್ವಾರವಾಗಿ ಜಬಲ್ಪುರ್ ನಗರವನ್ನು ಯಾವಾಗಲೂ ಆರಿಸಿಕೊಳ್ಳಲಾಗುತ್ತದೆ.
ಜಬಲ್ಪುರ್‌ನಲ್ಲಿರುವ ಕೆಲವು ಪ್ರಮುಖ ಪ್ರವಾಸಿ ಆಕರ್ಷಣೆಗಳೆಂದರೆ:
- ಭೇಡಾಘಾಟ್‍ನಲ್ಲಿರುವ ಧುವ್ಞಾಧಾರ್ ಜಲಪಾತ ಮತ್ತು ಮಾರ್ಬಲ್ ರಾಕ್ಸ್ ಜಬಲ್ಪುರ್‌ನ ಅತ್ಯಂತ ಪ್ರಸಿದ್ಧ ಪ್ರವಾಸಿ ಸ್ಥಳವಾಗಿದೆ.
- ಚೌಸಠ್ ಯೋಗಿನಿ ದೇವಾಲಯ, ಜಬಲ್ಪುರ್
- ಗೋಂಡ್ ರಾಜ ಮದನ್‍ಸಾಹಿ ೧೧೧೬ರಲ್ಲಿ ನಿರ್ಮಿಸಿದನು ಎಂದು ಹೇಳಲಾಗಿರುವ ಮದನ್ ಮೆಹೆಲ್ ಕೋಟೆ.[೧]
- ೧೯೬೪ರಲ್ಲಿ ನಿರ್ಮಿಸಲಾದ ರಾನಿ ದುರ್ಗಾವತಿ ಸಂಗ್ರಹಾಲಯ. ಈ ಸಂಗ್ರಹಾಲಯದಲ್ಲಿ ಪ್ರಾಚೀನ ವಸ್ತುಗಳು ಮತ್ತು ಶಿಲ್ಪಗಳಿವೆ.
- ೭೬ ಅಡಿ ಎತ್ತರದ ಶಿವನ ವಿಗ್ರಹಕ್ಕೆ ಪ್ರಸಿದ್ಧವಾಗಿರುವ ಕಾಚ್‍ನಾರ್ ನಗರ.[೨]
- ದುಮ್ನಾ ನೈಸರ್ಗಿಕ ಮೀಸಲು ಪ್ರದೇಶ
- ಬಾರ್ಗಿ ಅಣೆಕಟ್ಟು
- ಗ್ವಾರೀಘಾಟ್
- ತಿಲ್ವಾರಾ ಘಾಟ್
- ತ್ರಿಪುರ ಸುಂದರಿ ದೇವಾಲಯ
- ಲಾಮೇತಾ ಘಾಟ್
- ಘುಘ್ರಾ ಜಲಪಾತ
ಛಾಯಾಂಕಣ
ಬದಲಾಯಿಸಿ-
ಹನುಮಾನ್ತಾಲ್ ಸರೋವರದ ದಡದಲ್ಲಿರುವ ಹನುಮಾನ್ತಾಲ್ ಬಡಾ ಜೈನ್ ಮಂದಿರ್, ಜಬಲ್ಪುರ್
-
ಮದನ್ ಮೆಹೆಲ್ ಕೋಟೆ
-
ಕಾಚ್‍ನಾರ್ ನಗರ, ಜಬಲ್ಪುರ್‌ನಲ್ಲಿರುವ ಶಿವನ ವಿಗ್ರಹ
ಉಲ್ಲೇಖಗಳು
ಬದಲಾಯಿಸಿ- ↑ "Tourism". jabalpur. Retrieved 2015-07-02.
- ↑ "Jabalpur". Jabalpur Tourism Promotion Council. Jabalpur Tourism Promotion Council. Archived from the original on 19 April 2014. Retrieved 19 April 2014.