ಜಪಪುಷ್ಪಇದರ ವೈಜ್ಞಾನಿಕ ಹೆಸರು ಹೈಬಿಸ್ಕಸ್ ರೊಸ-ಸಿನೆನ್ಸಿಸ್. ಆಡುಮಾತಿನಲ್ಲಿಚೀನೀ ದಾಸವಾಳ, ಚೀನಾ ಗುಲಾಬಿ, ಹವಾಯಿಯನ್ ದಾಸವಾಳ,ಮ್ಯಾಲೋ ಗುಲಾಬಿಎಂದುಕರೆಯಲಾಗುತ್ತದೆ. ಇದು ಉಷ್ಣವಲಯದಲ್ಲಿ ಬೆಳೆಯುವ ಹೂಬಿಡುವ ಸಸ್ಯವಾಗಿದೆ. ಜಪಪುಷ್ಪವನ್ನು 1753ರಲ್ಲಿ ಕಾರ್ಲ್‍ಲಿನ್ನಿಯಸ್‍ ಅವರ ಸ್ಪೀಸೀಸ್ ಪ್ಲಾಂಟರಮ್ನಲ್ಲಿ ಹೆಸರಿಸಲಾಯಿತು. ರೋಸಾ-ಸಿನೆನ್ಸಿಸ್ ಲ್ಯಾಟಿನ್ ಪದವಾಗಿದ್ದುಇದರ ಅರ್ಥಚೀನಾದ ಗುಲಾಬಿ ಎಂದು ಆದರೆ ಜಪಪುಷ್ಪಕ್ಕು ನಿಕಟ ಸಂಬಂಧವಿಲ್ಲ.

China Rose plant


China Rose (312648213)


ವಿವರಣೆ

ಬದಲಾಯಿಸಿ

ಜಪಪುಷ್ಪ ನಿತ್ಯಹರಿದ್ವರ್ಣ ಪೊದೆಯಾಗಿದೆ.ಸಸ್ಯದಗಾತ್ರ 1-3 ಮೀ, 3-9 ಅಡಿಇರುತ್ತದೆ.ಇದು 5ದಳದ ಹೂವನ್ನು ಹೊಂದಿರುತ್ತದೆ.ರೂಟ್‍ ಒಂದು ಕವಲೊಡೆದ ಡ್ಯಾಪ್‍ ರೂಟ್‍ ಆಗಿದೆ. ಕಾಂಡವು ವೈಮಾನಿಕ, ನೆಟ್ಟಗೆ, ಹಸಿರು ಸಿಲಿಂಡಕಾರದ ಮತ್ತು ಶಾಖೆಯಂತಿದೆ.ಎಲೆಯು ಸರಳವಾಗಿದ್ದು ಎಲೆಯ ಆಕಾರ ಅಂಡಾಕಾರವಾಗಿದೆ. ತುದಿ ತೀವ್ರವಾಗಿರುತ್ತದೆ.ಈ ಗಿಡಗಳಿಗೆಗಿಡ ಹೇನುಗಳು ಹಾನಿ ಮಾಡುತ್ತವೆ.

ಹೂವಿನ ಲಕ್ಷಣಗಳು

ಬದಲಾಯಿಸಿ
  • ಸಂಪೂರ್ಣ ದ್ವಿಲಿಂಗಿ*ಇದು ವರ್ಷ ಪೂರ್ತಿ ಅರಳುತ್ತದೆ.
  • ಜಪಪುಷ್ಪಅದರಗಾತ್ರ ಮತ್ತು ಕೆಂಪು ಬಣ್ಣ ಹೊರತಾಗಿಯು ಹಕ್ಕಿಗಳಿಗೆ ಆಕರ್ಷಕವಾಗಿದೆ.
  • ಇದಕ್ಕೆಗಿಡ ಹೇನುಗಳು ಹಾನಿ ಮಾಡುತ್ತವೆ.[]

ವೈಜ್ಞಾನಿಕ ವರ್ಗೀಕರಣ

ಬದಲಾಯಿಸಿ
  • ಸಾಮ್ರಾಜ್ಯ: ಪ್ಲಾಂಟ
  • ಕುಟುಂಬ: ಮಾಲ್ವಸಿಯೆ
  • ಲಿಂಗ : ಹೈಬಿಸ್ಕಸ್
  • ಜಾತಿ: ರೋಸಾ ಸಿನೆನ್ಸಿಸ್

ಹೂ ಬಣ್ಣಗಳು

ಬದಲಾಯಿಸಿ

ಹವಾಮಾನ

ಬದಲಾಯಿಸಿ
  • ಮೆಡಿಟರೇನಿಯನ್ ಹವಾಮಾನ
  • ಉಷ್ಣವಲಯ ಹವಾಮಾನ

ಉಪಯೋಗಗಳು

ಬದಲಾಯಿಸಿ

ಜಪಪುಷ್ಪ ಹೂವುಗಳು ಖಾದ್ಯವಾಗಿಯು ಬಳಕೆಯಾಗುತ್ತದೆ. ಪೆಸಿಫಿಕ್ ದ್ವೀಪಗಳಲ್ಲಿ ಸಲಾಡ್‍ಗಳಲ್ಲಿ ಬಳಸಲಾಗುತ್ತದೆ.ಕೂದಲ ಆರೈಕೆಯಲ್ಲೂಇದು ಸಹಾಯಕಾರಿಯಾಗಿದೆ.ಭಾರತದ ಕೆಲವು ಭಾಗಗಳಲ್ಲಿ ಬೂಟುಗಳನ್ನು ಬೆಳಗಿಸಲು ಇದನ್ನು ಬಳಸಲಾಗುತ್ತದೆ.ಇನ್ನೂದೇವರ ಪೂಜೆಗಳಿಗೆ ಕೆಂಪು ಹೂ ವಿಶೇಷವಾಗಿದೆ.ಇಂಡೋನೇಷ್ಯಾದಲ್ಲಿ ಈ ಹೂವುಗಳನ್ನು ಕೆಂಬಂಗ್ ಸೆಪಟುಎಂದುಕರೆಯಲಾಗುತ್ತದೆ.ಇದುಅಕ್ಷರಶಃ ಶೂ ಹೂ ಎಂದುಅರ್ಥ.ಜಪಪುಷ್ಪ ಹಲವಾರು ವೈದಕೀಯಗುಣವನ್ನು ಹೊಂದಿದೆ. ಇದು ಚರ್ಮದ ಆರೈಕೆಯಲ್ಲಿ ಸಹಾಯಕರಿ.ಇದನ್ನುಅಲಂಕಾರಿಕ ಸಸ್ಯವಾಗಿ ವ್ಯಾಪಾಕವಾಗಿ ಬೆಳೆಸಲಾಗುತ್ತಿದೆ.[]

ಬೆಳೆಸುವ ಸ್ಥಳ

ಬದಲಾಯಿಸಿ

ಇದು ಉಷ್ಣವಲಯದ ನಿತ್ಯಹರಿದ್ವರ್ಣ ಪೊದೆ ಸಸ್ಯವಾಗಿದೆ.ಬಿಸಿಲ ಕೊಠಡಿಗಳಲ್ಲಿ ಬೆಳೆಸಬಹುದು.ತೇವ ಸಾವಯುವ ಮಣ್ಣಿನಲ್ಲಿ ಸಮೃದ್ದವಾಗಿ ಬೆಳೆಯುತ್ತದೆ.ಇದರರೂಟ್ಸ್ ಎಂದಿಗೂ ಒಣಗದಂತೆ ನೋಡಿಕೊಳ್ಳಬೇಕು.ವಸಂತಕಾಲದಆರಂಭದಲ್ಲಿ ಈ ಗಿಡವನ್ನು ಕತ್ತರಿಸಿಕೊಳ್ಳಬಹುದು[]

ವಿಶೇಷತೆ

ಬದಲಾಯಿಸಿ

ಜಪಪುಷ್ಪಇದು ಮಲೇಷಿಯದ ರಾಷ್ಟ್ರೀಯ ಹೂವು. ಇದು ಮಲಯದಲ್ಲಿ ಬಂಗರಾಯಎಂದಯಕರೆಯಲ್ಪಡುತ್ತದೆ.12ನೆ ಶತಮನದಲ್ಲಿ ಮಲಯ ಪರ್ಯಾಯ ದ್ವೀಪದೊಳಗೆ ಪರಿಚಯಿಸಲಾಯಿತು.ಇದು 1958ರಲ್ಲಿ ರಾಷ್ಟ್ರೀಯ ಹೂವು ಆಗಿ ನಾಮ ನಿರ್ದೇಶನಗೊಂಡಿತು.1960 ಜುಲೈ 28 ರಂದು ಮಲೇಷಿಯ ಸರ್ಕಾರ ಜಪಪುಷ್ಪವನ್ನುರಾಷ್ಟ್ರೀಯ ಹೂವು ಎಂದು ಘೋಷಿಸಿತು.

ಉಲ್ಲೇಖ

ಬದಲಾಯಿಸಿ
  1. http://www.karensgardentips.com/garden-types-styles-and-designs/rose-garden/characteristics-of-old-garden-roses-china-roses/
  2. https://www.pinterest.com/pin/336995984596609899/
  3. "ಆರ್ಕೈವ್ ನಕಲು". Archived from the original on 2018-10-30. Retrieved 2018-09-30.
  4. https://www.nature-and-garden.com/gardening/china-rose.html.
"https://kn.wikipedia.org/w/index.php?title=ಜಪಪುಷ್ಪ&oldid=1250562" ಇಂದ ಪಡೆಯಲ್ಪಟ್ಟಿದೆ