ಜನರಲ್ ಪೋಸ್ಟ್ ಆಫೀಸ್, ಮುಂಬಯಿ
'ಜನರಲ್ ಪೋಸ್ಟ್ ಆಫೀಸ್,' ಕಟ್ಟಡ
ಬದಲಾಯಿಸಿಮುಂಬಯಿನ ಜನರಲ್ ಪೋಸ್ಟ್ ಆಫೀಸ್ ಕಟ್ಟಡ,(GPO) [೧]'ಛತ್ರಪತಿ ಶಿವಾಜಿ ಮಹಾರಾಜ್ ರೈಲ್ವೆ ಟರ್ಮಿನಸ್' (CST)(ಹಿಂದೆ,ಇದರ ಹೆಸರು,'ವಿಕ್ಟೋರಿಯ ಟರ್ಮಿನಸ್'(VT) ಎಂದಿತ್ತು) ನ ಹಿಂಭಾಗದಲ್ಲಿದೆ. ಈ ಬೃಹತ್ ಕಟ್ಟಡದ ನಿರ್ಮಾಣ ಕಾರ್ಯ, ೧೯೦೪ ರಲ್ಲಿ ಆರಂಭವಾಗಿ ೧೯೧೩ ರಲ್ಲಿ ಮುಗಿಯಿತು. ತಗುಲಿದ ವೆಚ್ಚ : ೧೮,೦೯೦೦೦ ರೂಪಾಯಿಗಳು. 'ಇಂಡೊ ಸರೆಸೆನಿಕ್'ಶೈಲಿಯಲ್ಲಿ ಮೇಲ್ಭಾಗದ ವರ್ತುಲ, ಕರ್ನಾಟಕದ ಬಿಜಾಪುರದ 'ಗೋಲ್ ಗುಂಬಝ್' ಮಾದರಿಯಲ್ಲಿದೆ. [೨]
ಅಂದಿನ ಸುಪ್ರಸಿದ್ಧ ಬ್ರಿಟಿಷ್ ಕಟ್ಟಡ ನಿರ್ಮಾತ, 'ಜಾನ್ ಬೇಗ್ 'ರವರು ಇದನ್ನು ನಿರ್ಮಿಸಿದರು. ಕಟ್ಟಡದ ಒಳಭಾಗದಲ್ಲಿ ಅಮೃತಶಿಲೆಯನ್ನು ಎಲ್ಲೆಡೆ ವಿಶೇಷವಾಗಿ ಬಳಸಿದ್ದಾರೆ ; ಹಾಗೂ ತಲೆಯೆತ್ತಿ ಹಲವುಬಾರಿ ನೋಡುವಷ್ಟು ಅತಿ ಎತ್ತರದ ಭವ್ಯವಾದ ಸೂರು, ಅನೇಕ ಕುಶಲ ಕೆತ್ತನೆಗಳಿಂದ ಕೂಡಿದೆ. ಭವ್ಯವಾದ ಸುರುಳಿಸುತ್ತಿದಂತೆ ರಚಿಸಿದ ಮಹಡಿ ಮೆಟ್ಟಲುಗಳು, ಮತ್ತು ಅದನ್ನು ಚಿತ್ತಾಕರ್ಷಕ ಕಬ್ಬಿಣದ ಕಂಬಿಗಳಲ್ಲಿ ನಿರ್ಮಿಸಿದ್ದು,ಇಂತಹ ಕುಸರಿಕೆಲಸಗಳು ಪ್ರತಿಬ್ರಿಟಿಷ್ ನಿರ್ಮಿತ ಭವನಗಳಲ್ಲೆಲ್ಲಾ ಕಂಡುಬರುತ್ತಿತ್ತು. ಆಗಿನ 'ಬ್ರಿಟಿಷ್ ಸರ್ಕಾರ' ದ ಛಾಪನ್ನು ಕಾಣಬಹುದು. [೩]
ಅಂಚೆ ವಿತರಣೆ
ಬದಲಾಯಿಸಿ೧೭೯೪ ರಲ್ಲಿ 'ಚಾರ್ಲ್ಸ್ ಎಲ್ಫಿನ್ ಸ್ಟೋನ್' ಎಂಬ ಇಂಗ್ಲೀಷ್ ನಾಗರಿಕ, ಮುಂಬಯಿ ಪ್ರೆಸಿಡೆನ್ಸಿಗೆ 'ಪೋಸ್ಟ್ ಮಾಸ್ಟರ್ ಜನರಲ್' ಅಧಿಕಾರಿಯಾಗಿ ನಿಯುಕ್ತನಾದನು. ಇದಕ್ಕೆ ಮೊದಲು ಮುಂಬಯಿಗೆ ಈಸ್ಟ್ ಇಂಡಿಯ ಕಂಪೆನಿಯವರ ಕಡೆಯಿಂದ ಒಬ್ಬ ಏಜೆಂಟರು ಈ ಸೇವೆಯನ್ನು ನಡೆಸುವ ವ್ಯವಸ್ಥೆಯಿತ್ತು. ಹೆಚ್ಚಾಗಿ ಬರುತ್ತಿದ್ದ ಟಪಾಲುಗಳು ವಿದೇಶಗಳಿಂದ ; ಹೆಚ್ಚಾಗಿ ಇಂಗ್ಲೆಂಡಿನಿಂದ. ಅಂಚೆಯನ್ನು ಬೋರಿಬಂದರಿನಿಂದ ತಂದು ವಿತರಿಸುವ ಕೆಲಸವನ್ನು ಜನರಲ್ ಪೋಸ್ಟ್ ಆಫೀಸ್ ನಿರ್ವಹಿಸುತ್ತಿತ್ತು. ಮುಂಬಯಿನಿಂದ ದೂರ ಪ್ರದೇಶಗಳಿಗೆ, ರಾಜ್ಯದ ಪ್ರಮುಖ ಪಟ್ಟಣಗಳಿಗೆ ಅಂಚೆ ತಲುಪಿಸುವ ವ್ಯವಸ್ಥೆಮಾಡಲು ಆಲೋಚಿನೆ ಇತ್ತು. ೧೭೬೬ ರಲ್ಲಿ 'ಲಾರ್ಡ್ ಕ್ಲೈವ್' ಈ ವ್ಯಸ್ಥೆಯನ್ನು ತರುವಲ್ಲಿ ಮುಂದಾಳತ್ವವನ್ನು ವಹಿಸಿದ್ದರು. 'ಸರ್ ವಾರನ್ ಹೇಸ್ಟಿಂಗ್ಸ್', 'ಗವರ್ನರ್ ಜನರಲ್' ಆಗಿ ಅಧಿಕಾರ ವಹಿಸಿಕೊಂಡ ಬಳಿಕೆ, ೧೭೭೪ ರಲ್ಲಿ, ಮೊಟ್ಟಮೊದಲ ಅಂಚೆ ಕಛೇರಿ 'ಕಲ್ಕತ್ತಾ' ನಗರದಲ್ಲಿ ಸ್ಥಾಪನೆಯಾಯಿತು. ಮೊದಲು ಅಂಚೆ ವಿಲೇವಾರಿ ಕೆಲಸವನ್ನು ಗಟ್ಟಿಮುಟ್ಟಾದ ಸೈನಿಕ ವೇಷದ ಗಂಡಸರು ಮಾಡುತ್ತಿದ್ದರು.
ಜಿ.ಪಿ.ಒ. ಐತಿಹ್ಯ
ಬದಲಾಯಿಸಿಚೆನ್ನೈ-ಮುಂಬಯಿ ಮಾರ್ಗದಲ್ಲಿ ಅಂಚೆ ವಿತರಣೆ ಕೆಲಸ ಮಾರನೆಯ ವರ್ಷವೇ ಆರಂಭವಾಯಿತು. ಆದರೆ ಮುಂಬಯಿ ಜಿ.ಪಿ.ಒ ಆರಂಭವಾಗಲು ಸಮಯ ಹಿಡಿಯಿತು. ಸುಮಾರು ೫೦ ವರ್ಷಗಳ ನಂತರ, ಅಂಚೆ ಪತ್ರವ್ಯವಹಾರ ಜಾರಿಗೆ ಬಂದಿತು. ಅಂದಿನ ದಿನಗಳಲ್ಲಿ ಜಿ.ಪೊ.ಒ, ಅಪೊಲೋ ಬಂದರಿನ ದ್ವಾರದ ಹತ್ತಿರದ ಚಿಕ್ಕ,ಚಿಕ್ಕ ಕಟ್ಟಡಗಳಲ್ಲಿತ್ತು. ಒಮ್ಮೆ ಬೆಂಕಿ ಆಕಸ್ಮಿಕದಿಂದ ಅವು ನಾಶವಾದವು. ೧೮೬೯ ರಲ್ಲಿ ಮುಂಬಯಿ ಸರಕಾರ ಜನರಲ್ ಪೋಸ್ಟ್ ಆಫೀಸನ್ನು ತನ್ನದೇ ಆದ ಸ್ವಂತ ಕಟ್ಟಡಕ್ಕೆ ವರ್ಗಾಯಿಸಲಾಯಿತು. ಅಂಚೆ ಕಾರ್ಯಾಚರಣೆ ಹೆಚ್ಚಾಗಿದ್ದು ಹೆಚ್ಚು ಜಾಗಬೇಕಾಯಿತು. ಆಗ ಹೊಸಕಟ್ಟಡ ನಿರ್ಮಾಣಕ್ಕೆ ಸರಕಾರ ಒತ್ತು ಕೊಟ್ಟಿತು. ಕೊನೆಗೆ, 'ಜಾನ್ ಬೇಗ್' ಎಂಬ ಕಟ್ಟಡ ನಿರ್ಮಾತನಿಗೆ ಈ ಜವಾಬ್ದಾರಿಯನ್ನು ವಹಿಸಿಕೊಡಲಾಯಿತು. 'ಜಾನ್ ಬೇಗ್' ಆಗಿನ ಕಂಪೆನಿ ಸರಕಾರಕ್ಕೆ ಸಲಹಾಕಾರ ವಾಸ್ತುಶಿಲ್ಪಿಯಾಗಿದ್ದರು. ಕಟ್ಟಡ ಮುಗಿಯಲು, ೯ ವರ್ಷ ಹಿಡಿಯಿತು. ೧೯೦೪ ರಿಂದ ೧೯೧೩ ರಲ್ಲಿ ಜಿಪಿಒ ಸ್ಥಳಾಂತರಿಸಿತು. ೧೨,೦೦೦ ಚದರ ಮೀ. ವಿಸ್ತೀರ್ಣ ಹೊಂದಿತ್ತು (ಎರಡೂ ಮಾಳಿಗೆ ಸೇರಿ) ಜನರಲ್ ಪೋಸ್ಟ್ ಆಫೀಸ್, ವಿಟಿ ರೈಲ್ವೆ ನಿಲ್ದಾಣದ ಸಮೀಪದಲ್ಲಿದೆ. ಇಂಡೊ ಸರಸೆನಿಕ್ ಶೈಲಿಯಲ್ಲಿ ನಿರ್ಮಿಸಿದ ಕಟ್ಟಡದೊಳಭಾಗದಲ್ಲಿ ಬೃಹತ್ ಕಮಾನುಗಳು, ಇದ್ದು, ಗಾಳಿ-ಬೆಳಕು ಚೆನ್ನಾಗಿ ಬರುವ ಪರಿಸರದ ಕಟ್ಟಡ, ಎಲ್ಲಾ ವಿಧದಲ್ಲೂ ಅನೂಕೂಲವಾಗಿದೆ. ರಾಷ್ಟ್ರದಲ್ಲೇ ಅತಿ ದೊಡ್ಡ ಪೋಸ್ಟ್ ಆಫೀಸೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ವಿಶ್ವದಲ್ಲಿ ಅತಿದೊಡ್ಡ ಅಂಚೆಕಛೇರಿಗಳಲ್ಲೊಂದು. ಒಟ್ಟಾರೆ ೫೦,೦೦೦ ವಿಳಾಸಗಾರರಿಗೆ ಸೇವೆ ಸೌಲಭ್ಯ ಕಲ್ಪಿಸಿದೆ. ಅತಿಹೆಚ್ಚು ಅಂಚೆ ವಿತರಣೆ. ಜಿ.ಪಿ.ಒ. ನಲ್ಲಿ ೧೦೧ ಕೌಂಟರ್ ಗಳಿವೆ. ೧೨೦೦ ಚ.ಮೀ. ವಿಸ್ತೀರ್ಣದ ಭಾರಿ, 'ಬೈ ಸೆಂಟೆನರಿ ಹಾಲ್' ಇದೆ. ಕೆಲಸದ ಸಮಯ : ಬೆಳಿಗ್ಯೆ ೮ ರಿಂದ ರಾತ್ರಿ ೧೧ ರವರೆಗೆ ತೆರೆದಿರುತ್ತದೆ. ಸುಮಾರು ೨೫ ಸಹಸ್ರಜನರಿಗೆ ಸೇವೆಲಭ್ಯವಿದೆ. ಹಲವಾರು ಕೌಂಟರ್ ಗಳು, ಕಂಪ್ಯೂಟರಿಕರಣ ಹೊಂದಿವೆ. ಪ್ರಾಚೀನ ಕಾಲದ ಐತಿಹಾಸಿಕ ಕಟ್ಟಡದಲ್ಲಿ ಆಧುನಿಕ ಸೌಕರ್ಯಗಳ ಲಭ್ಯತೆಯಿರುವ ಜಿ.ಪಿ ಒ, ಮುಂಬಯಿನ ಬಿಡುವಿಲ್ಲದ ಜನಜೀವನಕ್ಕೆ ಸಮರ್ಪಕವಾಗಿ ಸ್ಪಂದಿಸುತ್ತಿದೆ.
ಮೊದಲ ಮಹಾಯುದ್ಧದ ಸಮಯದಲ್ಲಿ
ಬದಲಾಯಿಸಿ೧೯೧೪-೧೮,ಜನರಲ್ ಪೋಸ್ಟ್ ಅಫೀಸಿನೊಳಗೆ ಒಂದು ಅಮೃತಶಿಲೆಯ ಫಲಕವನ್ನು ಸ್ಥಾಪಿಸಲಾಗಿದೆ. ('Roll of honour', The Post office of India, During the great war of 1914-1918)
ನೂರು ವರ್ಷಗಳ ಅನವರತ ಸೇವೆ
ಬದಲಾಯಿಸಿಭಾರತದ ಅತಿದೊಡ್ಡ ಅಂಚೆಕಚೇರಿಯ ಸೇವೆಯನ್ನು ಮುಂಬಯಿನಗರದ ನಾಗರಿಕರು ನೆನೆಯುತ್ತಾರೆ. [೪] ಅತ್ಯಾಧುನಿಕ ಎ.ಟಿ.ಎಮ್. ಮೊದಲಾದ ಸೇವೆಗಳು ಲಭ್ಯವಾಗಲಿವೆ.
ಉಲ್ಲೇಖಗಳು
ಬದಲಾಯಿಸಿ- ↑ 'history.htm Maharashtra postal circle, History' Archived 2015-04-07 ವೇಬ್ಯಾಕ್ ಮೆಷಿನ್ ನಲ್ಲಿ. ',]
- ↑ The Indian Express, CitiesMumbai, City’s largest dome bears indelible stamp of Bombay’s long history
- ↑ 'Stones of Empire: The Buildings of the Raj', By :Jan Morris, Simon Wincheste
- ↑ India’s largest post office building turns 100 symbolising the nation’s growth-post-history. By Quaid Najmi, Mumbai 07 Apr 2015