ಜಗ್ಗಲಿಗೆ ಮೇಳಅಥವಾ ಜಗ್ಗ ಹಲಿಗೆ ಕುಣಿತವು ಕರ್ನಾಟಕದ ಧಾರವಾಡ ಜಿಲ್ಲೆಯ ಬ್ಯಾಹಟ್ಟಿ ಮತ್ತು ಸುತ್ತುಮುತ್ತಲಿನ ಪ್ರದೇಶಗಳಲ್ಲಿ ಹೆಚ್ಚು ಪ್ರಚಲಿತವಿರುವ ಒಂದು ಜಾನಪದ ಕುಣಿತವಾಗಿದೆ.ಉಗಾದಿ ಮತ್ತು ಹೋಳಿ ಹಬ್ಬದಂದು ಇದನ್ನು ಹೆಚ್ಚಾಗಿ ಸಾರ್ವಜನಿಕವಾಗಿ ಪ್ರದರ್ಶಿಸುತ್ತಾರೆ.ಜಗ್ಗ ಹಲಿಗೆಯು ಒಂದು ಬೃಹತ್ ತಾಳವಾದ್ಯವಾಗಿದೆ.ಇದನ್ನು ಎತ್ತಿನಗಾಡಿಯ ಚಕ್ರಗಳಿಗೆ ಎಮ್ಮೆಯ ಚರ್ಮವನ್ನು ಹೊಂದಿಸಿ ತಯಾರಿಸುತ್ತಾರೆ.ಇದನ್ನು ಜನರು ಗುಂಪಾಗಿ ಉರುಳಿಸಿಕೊಂಡು ಹೋಗುವಾಗ ತಾಳಬದ್ಧವಾಗಿ ಬಾರಿಸುತ್ತಾರೆ. ಇದನ್ನು ನಿಯಂತ್ರಿಸಲು ಒಬ್ಬ ನಿಯಂತ್ರಕ ಚಿಕ್ಕ ಪ್ರಮಾಣದ ವಾದ್ಯವಾದ ಕನಿಹಲಿಗೆ ಯನ್ನು ಬಾರಿಸಿಕೊಂಡು ತಾಳಬದ್ಧವಾಗಿ ಕುಣಿಯುವುದು ಇದರ ಪ್ರಮುಖ ಆಕರ್ಷಣೆ.ಈ ಪ್ರದರ್ಶನವು ಸುಮಾರು ೧೫ ಜನರಿಂದ ಕೂಡಿರುತ್ತದೆ.[] ಭಾರತ ಬಹು ಸಂಸ್ಕೃತಿಗಳ ನಾಡು. ಹಲವು ಧರ್ಮಗಳ ಬೀಡು. ಆದರೆ ಇಂದು ಪ್ರಾದೇಶಿಕ, ಬಾಷೆ ಸಂಸ್ಕೃತಿ ಅಳಸಿ ಹೋಗುವ ಮುನ್ಸೂಚನೆಗಳು ವಾಸ್ತವದಲ್ಲಿ ಗೋಚರವಾಗುತ್ತಿವೆ. ಆದರೆ, ಇನ್ನೂ ಕೆಲವೊಂದು ಗ್ರಾಮಗಳಲ್ಲಿ ಭಾರತದ ಸಂಸ್ಕೃತಿ ಸಾಹಿತ್ಯವನ್ನು ಬಿಂಬಿಸುವ ಕಾರ್ಯ ಜನಪದಗಳ ಮೂಲಕ ಆಗುತ್ತಿದೆ. ಜಾನಪದ ಹಾಡುಗಳು, ಗಾಯಕರು ಪ್ರಸ್ತುತವಾಗಿ ಇಂದು ಬೆರಳೆಣಿಕೆಯಷ್ಟು ಉಳಿದುಕೊಂಡಿದ್ದಾರೆ. ನಮ್ಮ ಆಚಾರ,ವಿಚಾರಗಳು,ಪರಂಪರೆ, ಸಂಸ್ಕೃತಿ ಬಿಂಬಿಸುವ; ಕರಡಿ ಮಜಲು, ಕೊಡದ ಕುಣಿತ, ಜೋಗತಿಯ ಕುಣಿತ,ಡೊಳ್ಳು ಕುಣಿತ, ದಿಮ್ಮಿ ಮೇಳ, ದಟ್ಟಿಯ ಕುಣಿತ, ಮರವಂತಿಕೆ, ಭಜನೆ, ಭೂತೇರ ಕುಣಿತ, ಹೆಜ್ಜೆ ಮೇಳ, ಹೆಜ್ಜೆಮಜಲು, ರಿವಾಯತ್, ಜಗ್ಗಲಗಿ ಮೇಳದಂತಹ ಜನಪದಗಳು ಇಂದು ಕಣ್ಮರೆಯಾಗುತ್ತಿವೆ. ಉತ್ತರ ಕರ್ನಾಟಕದ ಜಾನಪದ ಕಲೆಯಲ್ಲಿ ಒಂದಾಗಿರುವ ಜಗ್ಗಲಗಿ ಮೇಳವೂ ಇದಕ್ಕೆ ಹೊರತಲ್ಲ .ಕನ್ನಡಿಗರ ಪ್ರಾದೇಶಿಕ ಪರಂಪರೆಯ ತುರ್ತುಪಸ್ಥಿತಿ ಸಮಯ ಇದು ಎಂದು ಹೇಳುವುದು ಸಮಯೋಚಿತವಾಗಿದೆ.ಅಲಿಖಿತವಾದ ವಿಧದ ಮೂಲಕ ಹಾಡುಗಾರಿಕೆ, ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರು, ಸಾಹಿತ್ಯವನ್ನು ತಮ್ಮದೆ ದಾಟಿಯಲ್ಲಿ ಉಳಿಸಿಕೊಂಡು ಬಂದಿರುವ ಹಾಡುಗಳನ್ನೆ ನಾವು ಇಂದು ಜಾನಪದ ಎಂದು ಪರಿಗಣಿಸಿದ್ದೆವೆ. ಆಧುನಿಕ ಸ್ಪರ್ಶ ಸಿಗದ ಜಾನಪದಕಷ್ಟದಲ್ಲಿ ಉಸಿರಾಡುತ್ತಿದೆ. ಇದನ್ನುಅರೆತಿರುವ ಸರ್ಕಾರ ಜಾನಪದ ವಿಶ್ವವಿಧ್ಯಾಲಯ ತೆರೆದು ಜಾನಪದ ಉಳಿಸಿ,ಬೆಳೆಸುವ ಕಾರ್ಯಮಾಡುತ್ತಿರುವುದು ಸ್ವಾಗತಾರ್ಹ. ಆದರೆ ಜನ ಸಾಮಾನ್ಯರು ಇಂದು ಪಾಶ್ಚಾತ್ಯ ಸಂಸ್ಕೃತಿ ಅನುಸರಿಸುವ ಮನಸ್ಥಿತಿ ಬದಲಾವಣೆ ಹೊಂದುವಲ್ಲಿ ವಿಫಲರಾಗಿದ್ದಾರೆ.ಉಡುಗೆ, ತೊಡುಗೆ, ಆಭರಣ, ಅಲಂಕಾರ, ಬಣ್ಣ ಬಾಷೆ ಹೀಗೆ ಸಂಸ್ಕೃತಿ ಕನ್ನಡಿಯಂತಿರುವ ಸಾಮಾಜಿಕ ನೈತಿಕ ಅಂಶಗಳು ಇಂದು ಕಣ್ಮರೆಯಾಗುತ್ತವೆ.ಕಾರಣ ನಮ್ಮಲ್ಲಿ ಅಡವಳಿಕೊಂಡಿರುವ ಪಾಶ್ಚಿಮಾತ್ಯ ಸಂಸ್ಕೃತಿ. ಇಲ್ಲೊಂದು ಗ್ರಾಮವಿದೆ.ಜನಪದೀಯವಾಗಿ ಸಾಹಿತ್ಯಿಕವಾಗಿ ತನ್ನತನ ಯಾವತ್ತು ಬಿಟ್ಟುಕೊಡದಿರುವ ಗ್ರಾಮ. ಇಲ್ಲಿ ಯುವಕರ ತಂಡವೊಂದು ನಿರಂತರವಾಗಿ ಶ್ರಮಿಸುತ್ತಿದೆ.ರಾಜ್ಯ, ರಾಜಧಾನಿ,ನವದೆಹಲಿಯಲ್ಲಿ ನಡೆಯು ಗಣರಾಜ್ಯೋತ್ಸವ ನಡೆಯುವ ಕಾರ್ಯಕ್ರಮದಲ್ಲಿ ತಂಡದ ಸದಸ್ಯರು ಭಾಗಿಯಾಗಿದ್ದಾರೆ. ಜಾನಪದವೆ ಜೀವ, ಜೀವನ ಎಂದು ಬದುಕುತ್ತಿರುವ ಇವರೆಲ್ಲರ ಸಾಮಾಜಿಕ ಕಾರ್ಯಕ್ಕೆ ಹಲಾವರು ವೇದಿಕೆಗಳು ಇವರನ್ನು ಅಭಿನಂದಿಸಿವೆ.

ಜಗ್ಗಲಗಿ ವಾದ್ಯ

ಬದಲಾಯಿಸಿ

ಜಗ್ಗಲಗಿ ಎನ್ನುವುದು ಒಂದು ಭಿನ್ನವಾದ ನಾದಹೊಮ್ಮಿಸುವ ವಿಶೇಷ ವಾದ್ಯ. ಈ ಪರಿಕರವನ್ನು ಮರಣ ಹೊಂದಿದ ಪ್ರಾಣಿಗಳ ಚರ್ಮದಿಂದ, ಎತ್ತಿನ ಗಾಡಿಯ, ಚಕ್ಕಡಿ ಗಾಲಿಯ ಕಬ್ಬಿಣ ಹಳಿಯಿಂದ ಈ ವಾದ್ಯ ತಯಾರಿಸಲಾಗುತ್ತದೆ.ನೋಡಲು ಇದು ಬೃಹುತ್ತಾಕಾರವಾದವಾಗಿದ್ದು. ಅಂದ ಹೆಚ್ಚಾಗಲು ಗ್ರಾಮೀಣ ಸೊಗಸಿನ ಚಿತ್ರಣಗಳನ್ನು ಇದರ ಮೇಲೆ ಬಿಡಿಸಲಾಗಿರುತ್ತದೆ.

ಜಗ್ಗಲಗಿಯ ಮೇಳದ ಇತಿಹಾಸ

ಬದಲಾಯಿಸಿ

ಈ ಜಗ್ಗಲಗಿ ಜಾನಪದ ವಾದ್ಯದ ಇತಿಹಾಸ ಸ್ವಾತಂತ್ರ ಪೂರ್ವದಿಂದಲೂ ಇದೆ. ಇಂದು ಕರ್ನಾಟಕದಲ್ಲಿ ಕೆಲವೊಂದಿಷ್ಟು ಪ್ರದೇಶಗಳಲ್ಲಿ ಸಾಂಸ್ಕೃತಿಕ ಪರಂಪರೆಯನ್ನು ಆಚರಿಸಲಾಗುತ್ತದೆ. ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ಜಗ್ಗಲಗಿ ವಾದ್ಯವನ್ನು ಜಾನಪದ ಹಾಡುವುದರ ಮೂಲಕ ಆಕರ್ಷಿಣಿಯ ರೀತಿಯಲ್ಲಿ ಉಳಿಸಿಕೊಂಡು ಬಂದಿವೆ. ಜಗ್ಗಲಗಿ ಮೇಳ,ತಂಡ, ಜಾತ್ರೆ, ಮೈಸೂರು ದಸರಾ, ಕನ್ನಡ ಮತ್ತು ಸಂಸ್ಕುçತಿ ಇಲಾಖೆಯ ಕೆಲವು ಕಾರ್ಯಕ್ರಮಗಳಲ್ಲಿ ಭಾಗವಸುವುದರ ಮೂಲಕ ಜಾನಪದ ಸಾಹಿತ್ಯ ಪಸರಿಸುವ ಕಾರ್ಯವನ್ನು ಮಾಡುತ್ತಿದೆ. ಧಾರವಾಡ ತಾಲೂಕು, ಕೇಲಗೆರಿ ಗ್ರಾಮದಲ್ಲಿ, ೧೯೫೩ ರಲ್ಲಿ ಜಗ್ಗಲಗಿ ಮೇಳ ಪ್ರಾರಂಭವಾಯಿತು. ತಂಡದ ಸದಸ್ಯರು ಬಸಪ್ಪ ಯಲ್ಲಪ್ಪ ಹಂಚಿನಮನಿ,ಫಕ್ಕಿರಪ್ಪ ಕಲ್ಲಪ್ಪ ಹಂಚಿನಮನಿ,ದೇವರಾಜ ಕರಿಯಪ್ಪ ಬೆವಿನಗಡ,ಕಲ್ಲಪ್ಪ ಯಲ್ಲಪ್ಪ ಹಂಚಿನಮನಿ ಇನ್ನಿತರ ಸದಸ್ಯರು ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ಕೆಲವೊಂದು ಗ್ರಾಮ, ಕುಟುಂಬಗಳು. ಅಂಥ ಕುಟುಂಬ ಹಂಚಿನಮನಿಯವರ ಕುಟುಂಬವೂ ಒಂದು. ಈ ಮನೆಯ ಸದಸ್ಯರೆ ಹೆಚ್ಚಾಗಿ ಈ ತಂಡದಲ್ಲಿ ಇದ್ದಾರೆ.ಮೈಸೂರು ದಸರಾದಲ್ಲಿ ವರ್ಷವೂ ಈ ತಂಡ ಭಾಗವಹಿಸುತತ್ತದೆ. ಹಂಪಿಯಲ್ಲಿ ಬಿಜಾಪೂರ ತಾಲೂಕಿನ ಸಾಂಭಾದಲ್ಲಿ ಪ್ರತಿ ವರ್ಷ ಇವರು ಕಾರ್ಯಕ್ರಮವನ್ನು ನೀಡುತ್ತಾರೆ. ಆಳ್ವಾಸ್ ಶೀಕ್ಷಣ ಸಂಸ್ಥೆಯಲ್ಲಿ ನಡೆಯುವ ನುಡಿಸಿರಿ ಕಾರ್ಯಕ್ರಮದಲ್ಲಿ ಪ್ರತಿ ವರ್ಷವೂ ಈ ತಂಡ ಭಾಗವಹಿಸುತ್ತದೆ. ವಜ್ರಮಹೊತ್ಸವ, ಕರಾವಳಿ ಉತ್ಸವ ಬಳ್ಳಾರಿ ಜಿಲ್ಲೆ, ಕರ್ನಾಟಕ ರಾಜ್ಯದಾದ್ಯಂತ ಇವರ ತಂಡದಿAದ ನೀಡಿದೆ. ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ೨೦೧೧ ರಲ್ಲಿ ಇವರ ತಂಡ ಬಾಗವಹಿಸಿತ್ತು. ಪ್ರತಿ ವರ್ಷ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಇವರ ತಂಡ ಭಾಗವಹಿಸುತ್ತದೆ.

ಉಲ್ಲೇಖಗಳು

ಬದಲಾಯಿಸಿ
  1. "FOLK ARTS & DANCES OF KARNATAKA". Archived from the original on 2015-07-07. Retrieved 29 ಜುಲೈ 2015.
  1. https://books.google.co.in/books?id=W1mYAwAAQBAJ&pg=PT141&lpg=PT141&dq=%E0%B2%9C%E0%B2%97%E0%B3%8D%E0%B2%97%E0%B2%B2%E0%B2%BF%E0%B2%97%E0%B3%86+%E0%B2%AE%E0%B3%87%E0%B2%B3&source=bl&ots=tF9RNYleOS&sig=ACfU3U2JF5zhTFxYue4JP8a4IOqKGFOWtw&hl=kn&sa=X&ved=2ahUKEwjv-I-AgJznAhV-yTgGHWlSBo4Q6AEwEXoECAoQAQ
  2. http://www.aayaama.com/ed8/%2B%2B.php