ಜಗದೀಶ್ ಭೋಲಾ
ಜಗದೀಶ್ ಭೋಲಾ ಮಾಜಿ ಕ್ರೀಡಾಪಟುವಾಗಿದ್ದು, ಮಾದಕವಸ್ತು ಕಳ್ಳಸಾಗಣೆದಾರ ಎಂದು ಆರೋಪಿಸಲಾಗಿದೆ. ಅವರು ಭಾರತೀಯ ಕುಸ್ತಿಯ "ಕಿಂಗ್ ಕಾಂಗ್" ಎಂದು ಪ್ರಸಿದ್ಧರಾಗಿದ್ದರು ಮತ್ತು ಅವರ ಕುಸ್ತಿ ವೃತ್ತಿಜೀವನದಲ್ಲಿ ಅರ್ಜುನ ಪ್ರಶಸ್ತಿಯನ್ನು ಗಳಿಸಿದ್ದರು.
ಆರಂಭಿಕ ಜೀವನ
ಬದಲಾಯಿಸಿಭೋಲಾ ಅವರು ಪಂಜಾಬಿನ ಬಟಿಂಡಾ ಜಿಲ್ಲೆಯ ಚೌಕೆ ಎಂಬ ಪಟ್ಟಣದಲ್ಲಿ ಜನಿಸಿದರು. ಭೋಲಾ ತನ್ನ ಬಾಲ್ಯದ ಬಹುಪಾಲನ್ನು ತನ್ನ ತಾಯಿಯ ಕುಟುಂಬದೊಂದಿಗೆ ಕಳೆದರು. ಚಿಕ್ಕ ವಯಸ್ಸಿನಲ್ಲಿಯೇ ಕುಸ್ತಿಯನ್ನು ವೃತ್ತಿಯಾಗಿ ಸ್ವೀಕರಿಸಲು ಅವರ ತಾಯಿಯ ಚಿಕ್ಕಪ್ಪ ಅವರನ್ನು ಪ್ರೋತ್ಸಾಹಿಸಿದರು ಮತ್ತು ಹಳ್ಳಿಯ ಚೌಕದಲ್ಲಿಯೇ ಅವರಿಂದ ತರಬೇತಿಯನ್ನು ಪಡೆದರು, ಅಲ್ಲಿ ಅನೇಕ ಜನರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಆಟಗಾರರಾಗಿದ್ದಾರೆ. ನಂತರ ಭೋಲಾ ಲುಧಿಯಾನಕ್ಕೆ ಸ್ಥಳಾಂತರಗೊಂಡರು ಮತ್ತು ಕುಸ್ತಿಯಲ್ಲಿ ತಮ್ಮ ಕೌಶಲ್ಯಗಳನ್ನು ಕರಗತ ಮಾಡಿಕೊಳ್ಳಲು ಹೆಸರಾಂತ ಅಖಾರಾವನ್ನು ಸೇರಿದರು.
ವೃತ್ತಿ
ಬದಲಾಯಿಸಿ೧೯೯೧ ರ ದೆಹಲಿಯಲ್ಲಿ ನೆಡೆದ ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕವನ್ನು ಗಳಿಸಿದ ನಂತರ ಕುಸ್ತಿಪಟುವಾಗಿ ಅವರು ಖ್ಯಾತಿಯನ್ನು ಪಡೆದು, ಅವರು ಪ್ರಪಂಚದಾದ್ಯಂತ ಸ್ಪರ್ಧಿಸಿದರು. ಅವರ ಕುಸ್ತಿ ವೃತ್ತಿಗಾಗಿ, ಸರ್ಕಾರವು ಅವರಿಗೆ ಅರ್ಜುನ ಪ್ರಶಸ್ತಿಯನ್ನು ನೀಡಿತು. ಭೋಲಾ ೨೦೦೮ ರಲ್ಲಿ ಬಿಡುಗಡೆಯಾದ ಪಂಜಾಬಿ ಭಾಷೆಯ ಚಲನಚಿತ್ರ ರುಸ್ತಮ್-ಎ-ಹಿಂದ್‌ನಲ್ಲಿ ಕಾಣಿಸಿಕೊಂಡರು. ಪಂಜಾಬ್ ಪೋಲಿಸರಿಂದ ಅಮಾನತುಗೊಳ್ಳುವ ಮೊದಲು ಭೋಲಾ ಅವರು ಪಂಜಾಬ್ ಪೋಲಿಸ್‌ನಲ್ಲಿ ಡಿಎಸ್‌ಪಿಯಾಗಿ ಅಲ್ಪಾವಧಿಗೆ ಸೇವೆ ಸಲ್ಲಿಸಿದರು[೧].
ವೃತ್ತಿಜೀವನದಲ್ಲಿನ ಅವನತಿ
ಬದಲಾಯಿಸಿ೨೦೦೮ ರಲ್ಲಿ ಭೋಲಾ ಅವರು ಡ್ರಗ್ ದಂಧೆಯಲ್ಲಿ ಮುಂಬೈ ಪೊಲೀಸರಿಗೆ ಸಿಕ್ಕಿಬಿದ್ದು ವಿವಾದಕ್ಕೆ ಒಳಗಾಗಿದ್ದರು. ಸರ್ಕಾರವು ಅವರ ಅರ್ಜುನ ಪ್ರಶಸ್ತಿಯನ್ನು ಹಿಂತೆಗೆದುಕೊಂಡ ನಂತರ, ಪಂಜಾಬ್ ಪೊಲೀಸರು ೨೦೦೮ ರಲ್ಲಿ ಭೋಲಾ ಅವರನ್ನು ಅವರ ಡಿಎಸ್‌ಪಿ ಹುದ್ದೆಯಿಂದ ಅಮಾನತುಗೊಳಿಸಿದರು [೨]
ಭೋಲಾ ತನ್ನ ಮಾದಕವಸ್ತು ಕಳ್ಳಸಾಗಣೆ ವ್ಯಾಪಾರವನ್ನು ಮರುಪ್ರಾರಂಭಿಸಿ ಹೆಚ್ಚಿನ ಸಂಪತ್ತನ್ನು ಗಳಿಸಿದನು ಮತ್ತು ಎರಡು ಐಷಾರಾಮಿ ಬಂಗಲೆಗಳು, ದುಬಾರಿ ಕಾರುಗಳನ್ನು ಹೊಂದಿದ್ದನು ಮತ್ತು ಅದರ ಪರಿಧಿಯ ಸುತ್ತಲೂ ಹೆಚ್ಚಿನ ರೆಸಲ್ಯೂಶನ್ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ ಸಕ್ಕರೆ ಕಾರ್ಖಾನೆಯನ್ನು ಹೊಂದಿದ್ದನು.
₹ ೭೦೦ ಕೋಟಿಯ ಸಿಂಥೆಟಿಕ್ ಡ್ರಗ್ ಕಾರ್ಟೆಲ್‌ನಲ್ಲಿ ಭಾಗವಹಿಸಿದ್ದ ಆರೋಪದ ಮೇಲೆ ರಾಮ್ ಸಿಂಗ್ ಎಂಬ ಬಾಕ್ಸರ್ ಜೊತೆಗೆ ಪಂಜಾಬ್ ಪೊಲೀಸರು ಬೋಲಾ ಅವರನ್ನು ೨೦೧೫ ರಲ್ಲಿ ಮತ್ತೆ ಬಂಧಿಸಿದರು. [೩]
ಮೂಲಗಳ ಪ್ರಕಾರ, ಭೋಲಾ ಅವರು ಮನೆಯಿಂದಲೇ ಅಕ್ರಮವಾಗಿ ಮಾದಕವಸ್ತು ತಯಾರಿಕಾ ವ್ಯವಹಾರ ನಡೆಸಿದ್ದಕ್ಕಾಗಿ ಶಿಕ್ಷೆಗೆ ಒಳಗಾದರು. ಪಂಜಾಬ್ ಪೊಲೀಸರ ಪ್ರಕಾರ ಈತ ಪಂಜಾಬ್ ಮೂಲದ ಡ್ರಗ್ ರಾಕೆಟ್ ಮುಖ್ಯಸ್ಥ. ಈತ ಪಾಕಿಸ್ತಾನದ ಗಡಿ ಪ್ರದೇಶಗಳಿಂದ ಡ್ರಗ್ಸ್ ಸಾಗಾಟ ಮಾಡಿ ಮುಂಬೈ ಮತ್ತು ಹಿಮಾಚಲ ಪ್ರದೇಶದ ಕೆಲವು ಭಾಗಗಳಿಗೆ ಸರಬರಾಜು ಮಾಡುತಿದ್ದನು[೪].
ಉಲ್ಲೇಖಗಳು
ಬದಲಾಯಿಸಿ- ↑ https://www.indiatvnews.com/crime/news/know-how-arjuna-award-winner-jagdish-bhola-became-a-smuggler-4594.html?page=3
- ↑ "Police seize drugs, cash from Arjuna Awardee Wrestler Jagdish Bhola's home, Bhola absconds". Archived from the original on 25 ಮಾರ್ಚ್ 2014. Retrieved 9 July 2016.
- ↑ "Drug lord Jagdish Bhola fractures his leg in jail". Archived from the original on 2017-02-16. Retrieved 2024-02-01.
- ↑ https://www.indiatoday.in/india/north/story/punjab-politicians-in-dock-for-alleged-connections-to-drug-lords-176476-2014-01-12