ಜಂಬೂ ಸವಾರಿ (ಚಲನಚಿತ್ರ)
ಜಂಬೂ ಸವಾರಿ 2014 ರ ಕನ್ನಡ ಅಪರಾಧ ಹಾಸ್ಯ ಚಲನಚಿತ್ರವಾಗಿದ್ದು, ಪ್ರಜ್ವಲ್ ದೇವರಾಜ್ ಮತ್ತು ನಿಕ್ಕಿ ಗಲ್ರಾನಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರವನ್ನು KC ವೇಣುಗೋಪಾಲ್ ನಿರ್ದೇಶಿಸಿದ್ದಾರೆ ಮತ್ತು HPR ಎಂಟರ್ಟೈನ್ಮೆಂಟ್ ಪ್ರೈವೇಟ್ ಲಿಮಿಟೆಡ್ ಬ್ಯಾನರ್ ಅಡಿಯಲ್ಲಿ ಹರಿ ಪ್ರಸಾದ್ ರಾವ್ ನಿರ್ಮಿಸಿದ್ದಾರೆ. ಚಿತ್ರಕ್ಕೆ ಎಸ್.ಪ್ರೇಮಕುಮಾರ್ ಸಂಗೀತ ಸಂಯೋಜಿಸಿದ್ದಾರೆ. [೧] ಇದನ್ನು 13 ಜೂನ್ 2014 ರಂದು ಬಿಡುಗಡೆ ಮಾಡಲಾಯಿತು.
ಈ ಚಿತ್ರವು ನಿಖಿಲ್ ಸಿದ್ಧಾರ್ಥ್ ಮತ್ತು ಸ್ವಾತಿ ರೆಡ್ಡಿ ಅಭಿನಯದ ಯಶಸ್ವಿ ತೆಲುಗು ಚಿತ್ರ ಸ್ವಾಮಿ ರಾ ರಾ ರಿಮೇಕ್ ಆಗಿದೆ. [೨] [೩]
ಪಾತ್ರವರ್ಗ
ಬದಲಾಯಿಸಿ- ಬಾಲು ಪಾತ್ರದಲ್ಲಿ ಪ್ರಜ್ವಲ್ ದೇವರಾಜ್
- ಪೂರ್ವಿಯಾಗಿ ನಿಕ್ಕಿ ಗಲ್ರಾನಿ
- ಪಿಂಕಿ ಪಾತ್ರದಲ್ಲಿ ಚೈತ್ರಾ ರೈ
- ಸೇತುರಾಮ್ ಪಾತ್ರದಲ್ಲಿ ಅಚ್ಯುತ್ ಕುಮಾರ್
- ಮಿತ್ರ
- ಶೋಭರಾಜ್
ಧ್ವನಿಮುದ್ರಿಕೆ
ಬದಲಾಯಿಸಿಸಂ. | ಹಾಡು | ಹಾಡುಗಾರರು | ಸಮಯ |
---|---|---|---|
1. | "ಊರೇ ಎದ್ದಿರಲು" | ಎಲ್. ಎನ್. ಶಾಸ್ತ್ರಿ | |
2. | "ತುಸು ಮೆಲ್ಲನೆ" | ಕೌಶಿಕ್ | |
3. | "ಕಣ್ಣಿಗೂ ಕಾಣದೆ" | ಆಕಾಂಕ್ಷಾ ಬದಾಮಿ, ಕೌಶಿಕ್ | |
4. | "ಬೆಂಡೆ ಕಲ್ಲೂರಿನಲಿ" | ಶಿಲ್ಪಾ | |
5. | "ಲೈಫ್ ಅಂದ್ರೆ" | ಎಸ್. ಪ್ರೇಮ್ ಕುಮಾರ್ |
ಬಿಡುಗಡೆ
ಬದಲಾಯಿಸಿಚಲನಚಿತ್ರವು 13 ಜೂನ್ 2014 ರಂದು ಕರ್ನಾಟಕದಾದ್ಯಂತ ಬಿಡುಗಡೆಯಾಯಿತು.
ಟೈಮ್ಸ್ ಆಫ್ ಇಂಡಿಯಾ ಚಿತ್ರಕ್ಕೆ ಐದು ಸ್ಟಾರ್‌ಗಳಲ್ಲಿ ಮೂರು ರೇಟಿಂಗ್ ನೀಡುತ್ತ "ಪ್ರಜ್ವಲ್ ಲೈವ್‌ವೈರ್ ಪ್ರದರ್ಶನದೊಂದಿಗೆ ಮನ ಸೆಳೆಯುತ್ತಾನೆ. ಮನಮೋಹಕ ಚೈತ್ರಾ ರೈ ತಮ್ಮ ಪಾತ್ರಕ್ಕೆ ಜೀವ ಮತ್ತು ಆತ್ಮವನ್ನು ತುಂಬಿದ್ದಾರೆ. ಎಸ್ ಪ್ರೇಮಕುಮಾರ್ ಅವರ ಸಂಗೀತ ಮತ್ತು ವಿ ಪ್ರತಾಪ್ ಅವರ ಛಾಯಾಗ್ರಹಣವು ಚಿತ್ರಕಥೆ ಮತ್ತು ಅಭಿನಯವನ್ನು ಬಲಪಡಿಸುತ್ತದೆ" ಎಂದು ಹೇಳಿತು. [೪]
ಉಲ್ಲೇಖಗಳು
ಬದಲಾಯಿಸಿ- ↑ "'Jamboo Savari' Audio Comes - Kannada News". IndiaGlitz.com. 26 May 2014.
- ↑ "Prajwal in 'Jamboo Savari' - Kannada News". IndiaGlitz.com. 12 September 2013.
- ↑ https://www.thehansindia.com/posts/index/Cinema/2014-06-13/Jamboo-Savari-Kannada-movie-review/98314
- ↑ https://timesofindia.indiatimes.com/entertainment/kannada/movie-reviews/jambo-savaari/movie-review/36564868.cms