ಚೈಲ್ಡ್ ಲೈನ್ ಇಂಡಿಯಾ

ಚೈಲ್ಡ್‌ಲೈನ್ ​​ಇಂಡಿಯಾ ಬದಲಾಯಿಸಿ

ಚೈಲ್ಡ್‌ಲೈನ್ ಇಂಡಿಯಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಒಂದು ಯೋಜನೆಯಾಗಿದೆ. [೧] ಚೈಲ್ಡ್‌ಲೈನ್ ಇಂಡಿಯಾ ಫೌಂಡೇಶನ್ ಭಾರತದ ಸರ್ಕಾರೇತರ ಸಂಸ್ಥೆ (ಎನ್.ಜಿ.ಒ) ಆಗಿದೆ. [೨] ಅದು ತೊಂದರೆಯಲ್ಲಿರುವ ಮಕ್ಕಳಿಗಾಗಿ ಚೈಲ್ಡ್‌ಲೈನ್ ​​ಎಂಬ ದೂರವಾಣಿ ಸಹಾಯವಾಣಿಯನ್ನು ನಿರ್ವಹಿಸುತ್ತದೆ.

ವಿವರಣೆ ಬದಲಾಯಿಸಿ

೦ ರಿಂದ ೧೮ ವರ್ಷದೊಳಗಿನ ಎಲ್ಲ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಚೈಲ್ಡ್‌ಲೈನ್ ಕಾರ್ಯನಿರ್ವಹಿಸುತ್ತದೆ. ಆರೈಕೆ ಮತ್ತು ರಕ್ಷಣೆಯ ಅಗತ್ಯವಿರುವ ಎಲ್ಲ ಮಕ್ಕಳಿಗೆ ಹಾಗು ವಿಶೇಷವಾಗಿ ಹೆಚ್ಚು ದುರ್ಬಲ ವಿಭಾಗಗಕ್ಕೆ ಸೇರಿದ ಮಕ್ಕಳಿಗೆ ಇದು ವಿಶೇಷ ಗಮನ ಹರಿಸುತ್ತದೆ.

  • ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಬಲಿಯಾದವರು.
  • ಅಸಂಘಟಿತ ಮತ್ತು ಸಂಘಟಿತ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಬಾಲ ಕಾರ್ಮಿಕರು.
  • ಭಾವನಾತ್ಮಕ ಬೆಂಬಲ ಮತ್ತು ಮಾರ್ಗದರ್ಶನ ಅಗತ್ಯವಿರುವ ಮಕ್ಕಳು.
  • ವಾಣಿಜ್ಯ ಲೈಂಗಿಕ ಕಾರ್ಯಕರ್ತೆಯರ ಮಕ್ಕಳು.
  • ಮಕ್ಕಳ ಕಳ್ಳಸಾಗಣೆಗೆ ಬಲಿಯಾದವರು.
  • ಪೋಷಕರು ಅಥವಾ ಪಾಲಕರು ಕೈಬಿಟ್ಟ ಮಕ್ಕಳು.
  • ಕಾಣೆಯಾದ ಮಕ್ಕಳು.
  • ಮಾದಕದ್ರವ್ಯಕ್ಕೆ ಬಲಿಯಾದ ಮಕ್ಕಳು.
  • ವಿಭಿನ್ನ ಸಾಮರ್ಥ್ಯದ ಮಕ್ಕಳು.
  • ಮಾನಸಿಕ ವಿಕಲಚೇತನ ಮಕ್ಕಳು.
  • ಎಚ್ಐವಿ / ಏಡ್ಸ್ ಸೋಂಕಿತ ಮಕ್ಕಳು.
  • ಸಂಘರ್ಷ ಮತ್ತು ವಿಪತ್ತಿನಿಂದ ಬಳಲುತ್ತಿರುವ ಮಕ್ಕಳು.

ಆರೈಕೆ ಮತ್ತು ರಕ್ಷಣೆಯ ಅಗತ್ಯವಿರುವ ಮಕ್ಕಳಿಗೆ ಇದು ಸಹಾಯ ಮಾಡುತ್ತದೆ. ಚೈಲ್ಡ್‌ಲೈನ್ ಸಂಖ್ಯೆ - ೧೦೯೮. ಚೈಲ್ಡ್‌ಲೈನ್ ​​ಒಂದು ವರ್ಷದಲ್ಲಿ ಸರಾಸರಿ ಎರಡು ಮಿಲಿಯನ್ ಕರೆಗಳನ್ನು ಸ್ವೀಕರಿಸಿದೆ. ಭಾರತದ ೨೦೧೧ ರ ಜನಗಣತಿಯ ಪ್ರಕಾರ ಭಾರತವು ೫ ರಿಂದ ೧೪ ವರ್ಷದೊಳಗಿನ ೪.೩೫ ಲಕ್ಷಕ್ಕೂ ಹೆಚ್ಚು ದುಡಿಯುವ ಮಕ್ಕಳನ್ನು ಹೊಂದಿದೆ.

ಇತಿಹಾಸ ಬದಲಾಯಿಸಿ

ಚೈಲ್ಡ್ ಲೈನ್ ​​ಅನ್ನು ಮೊದಲ ಬಾರಿಗೆ ಪ್ರಾಯೋಗಿಕ ಯೋಜನೆಯಾಗಿ ಜೂನ್ ೧೯೯೬ ರಲ್ಲಿ ಜೆರೂ ಬಿಲ್ಲಿಮೋರಿಯಾ ಅವರು ಸ್ಥಾಪಿಸಿದರು. [೩] ಇವರು ಕುಟುಂಬ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್‌ನ (ಟಿ.ಐ.ಎಸ್.ಎಸ್) ಪ್ರಾಧ್ಯಾಪಕರು. [೪] ತರುವಾಯ ಭಾರತದಾದ್ಯಂತ ಸೇವೆಗಳನ್ನು ಬೆಂಬಲಿಸಲು ಭಾರತ ಸರ್ಕಾರವು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಅಡಿಯಲ್ಲಿ ೧೯೯೮-೯೯ರಲ್ಲಿ ಭಾರತದಾದ್ಯಂತ ಚೈಲ್ಡ್ ಲೈನ್ ​​ಅನ್ನು ಸ್ಥಾಪಿಸಿತು. ಇದು ಸಚಿವಾಲಯ ಮತ್ತು ಕ್ಷೇತ್ರದಲ್ಲಿ ಕೆಲಸ ಮಾಡುವ ವಿವಿಧ ಎನ್‌.ಜಿ.ಒ ಗಳ ನಡುವೆ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿದೆ. ಸಚಿವಾಲಯದ ಕಾರ್ಯದರ್ಶಿ ಪ್ರತಿಷ್ಠಾನದ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಾರೆ. ಮೇ ೨೦೧೩ ರಲ್ಲಿ ಅಹಮದಾಬಾದ್ ಚೈಲ್ಡ್ ಲೈನ್, ನಗರದ ವಿವಿಧ ಭಾಗಗಳಲ್ಲಿ ಕೆಲಸ ಮಾಡುತ್ತಿರುವ ೧೪ ರಿಂದ ೧೭ ವರ್ಷದೊಳಗಿನ ೧೬ ಮಕ್ಕಳನ್ನು ರಕ್ಷಿಸಿತು.

ಕಾರ್ಯಾಚರಣೆ ಬದಲಾಯಿಸಿ

ಇದರ ಪ್ರಧಾನ ಕಚೇರಿ ಮುಂಬೈನ ವರ್ಲಿಯ ಪಿ.ಬಿ.ಮಾರ್ಗದಲ್ಲಿರುವ ಸುಮರ್ ಕೇಂದ್ರ ಕಟ್ಟಡದ ೪ ನೇ ಮಹಡಿಯಲ್ಲಿದೆ. ಮುಂಬೈ ಜೊತೆಗೆ ನವದೆಹಲಿ, ಕೋಲ್ಕತಾ ಮತ್ತು ಚೆನ್ನೈನಲ್ಲಿ ಪ್ರಾದೇಶಿಕ ಕಚೇರಿಗಳನ್ನು ಸಹ ಹೊಂದಿದೆ.

ಉಲ್ಲೇಖ ಬದಲಾಯಿಸಿ

  1. https://en.wikipedia.org/wiki/Ministry_of_Women_and_Child_Development
  2. https://en.wikipedia.org/wiki/Non-governmental_organization
  3. https://en.wikipedia.org/wiki/Jeroo_Billimoria
  4. https://en.wikipedia.org/wiki/Tata_Institute_of_Social_Sciences