'ಚೇಲಾವರ ಜಲಪಾತ'

ಇದು ತು೦ಬ ಸು೦ದರವಾದ ಕಾರಣ ಪ್ರವಾಸಿ ಸ್ಥಳವಾಗಿದೆ. ರಮಣೀಯ ಕೊಡಗು ಜಿಲ್ಲೆಯಲ್ಲಿ ಹೆಜ್ಜೆ ಹೆಜ್ಜೆಗೂ ಜಲಪಾತಗಳಿವೆ. ಮಳೆಗಾಲ ಆರಂಭವಾಯಿತೆಂದರೆ ಅವುಗಳು ಭೋರ್ಗರೆಯುತ್ತಾ ಧುಮ್ಮಿಕುತ್ತವೆ. ದಟ್ಟ ಕಾನನದ ನಡುವೆ ರುದ್ರನರ್ತನಗೈಯುತ್ತಿರುವ ಚೇಲಾವರ ಜಲಪಾತದ ಸೊಬಗು ಕಣ್ಣಿಗೊಂದು ಹಬ್ಬ!. ದಟ್ಟ ಕಾನನದ ನಡುವೆ ಬೆಳ್ಳಗಿನ ಹಾಲ್ನೋರೆ ಸೂಸುತ್ತ ಧುಮ್ಮಿಕುತ್ತಿರುವ ಚೇಲಾವರ ಫಾಲ್ಸ್ ಮಡಿಕೇರಿಯಿಂದ ೩೦ ಕಿ.ಮೀ. ದೂರದ ಚೆಯ್ಯಂಡಾಣೆ ಗ್ರಾಮದಲ್ಲಿದೆ. ಈ ಜಲಪಾತ ಸುಮಾರು ೧೫೦ ಅಡಿ ಎತ್ತರದಿಂದ ರುದ್ರನರ್ತನಗೈಯುತ್ತದೆ. ಇತ್ತೀಚೆಗೆ ಕೊಡಗು ಭಾರೀ ಮಳೆಯಿಂದ ಮೈದುಂಬಿಕೊಂಡಿರುವ ಈ ಜಲಪಾತ ಭೋರ್ಗರೇಯುತ್ತಾ ಧುಮ್ಮಿಕುವ ಆ ಕ್ಷಣ ರೋಮಾಂಚನಕಾರಿ.

ಪ್ರಕೃತಿ ಸೊಬಗು: ತಂಪಾದ ಗಾಳಿ- ನಿತ್ಯ ಹರಿದ್ವರ್ಣ ಕಾಡಿನ ನಡುವೆ ಹುದುಗಿರುವ ಈ ಫಾಲ್ಸ್ ನೋಡುಗರ ಮನಸ್ಸನ್ನು ಮುದಗೊಳಿಸುತ್ತಿದೆ. ಈ ಫಾಲ್ಸ್‌ನ ವಿಶೇಷತೆಯೆಂದರೆ ಜಲಪಾತದ ಕೆಳಗೂ ಹಾಗೂ ಮೇಲಕ್ಕೂ ಸಲೀಸಾಗಿ ತೆರಳಬಹುದು. ಇದುವರೆಗೂ ಪ್ರವಾಸಿಗರ ಕಣ್ಣಿಗೆ ಬೀಳದೆ ಎಲೆಮರೆಯ ಕಾಯಿಯಂತೆ ಮೂಲೆ ಸೇರಿದ್ದ ಈ ಜಲಪಾತ ಇತ್ತೀಚೆಗೆ ಜನಪ್ರಿಯಗೊಂಡ ಹಿನ್ನೆಲೆಯಲ್ಲಿ ಈಗ ಪ್ರವಾಸಿಗರು ಮುಗಿ ಬೀಳುತ್ತಿದ್ದಾರೆ. ಪ್ರಕೃತಿಯ ಸೊಬಗನ್ನು ಆಸ್ವಾದಿಸಿ ಕುಣಿದು ಕುಪ್ಪಳಿಸುತ್ತಿದ್ದಾರೆ.

ಚೇಲಾವರದ ಸೌಂದರ್ಯಕ್ಕೆ ಮರುಳಾಗದಿರಿ...! --- http://www.newskannada.com/nudhichitra/63630 Archived 2016-08-21 ವೇಬ್ಯಾಕ್ ಮೆಷಿನ್ ನಲ್ಲಿ.