ಚೇರಮ
ಚೇರಮನು ಒಬ್ಬ ೬೩ ಶಿವಭಕ್ತರಲ್ಲಿ ಒಬ್ಬನು. ಇವನನ್ನು ಕುರಿತು ಚೇರಮಾಂಕನು "ಚೇರಮಕಾವ್ಯ"ವನ್ನೂ ವಿರುಪರಾಜನು "ತ್ರಿಭುವನತಿಲಕ" ಎಂಬ ಕಾವ್ಯವನ್ನೂ ಬರೆದಿದ್ದಾನೆ. ಹರಿಹರನೂ ಕೂಡ ಚೇರಮನ ಕುರಿತು ಕಾವ್ಯವನ್ನು ರಚಿಸಿದ್ದಾನೆ.
"ಚೇರಮಕಾವ್ಯ"ದಲ್ಲಿ ನಾರದನ ಸಲಹೆಯಂತೆ ಶಿವನು ಭಸಿತಕಾಯನನ್ನು ವೀರಶೈವಧರ್ಮವನ್ನು ಸ್ಥಾಪಿಸಲು ಭೂಮಿಗೆ ಕಳಿಸುತ್ತಾನೆ. ಭಸಿತಕಾಯನು ಚೇರಮನಾಗಿ ಹುಟ್ಟಿ ನಂಬಿಯಣ್ಣನ ಜತೆಗೂಡಿ ಶೈವಧರ್ಮವನ್ನು ಸಾರಿ ಶಿವಸಾಯುಜ್ಯವನ್ನು ಸೇರುತ್ತಾನೆ.