ಚುರಮರಿ ಶೇಷಗಿರಿರಾಯರು
ಚುರಮರಿ ಶೇಷಗಿರಿರಾಯರು ೧೮೨೭ರಲ್ಲಿ ಧಾರವಾಡದಲ್ಲಿ ಜನಿಸಿದರು. ಇವರ ತಂದೆ ರಾಮರಾಯರು.
ಶಿಕ್ಷಣ
ಬದಲಾಯಿಸಿಶೇಷಗಿರಿರಾಯರ ಪ್ರಾಥಮಿಕ ಶಿಕ್ಷಣ ಧಾರವಾಡದಲ್ಲಿ ಆಯಿತು. ಆ ಬಳಿಕ ಪುಣೆಗೆ ಹೋಗಿ ಮಾಧ್ಯಮಿಕ ಶಿಕ್ಷಣ ಮುಗಿಸಿ, ಇಂಜನಿಯರಿಂಗ ಕಾಲೇಜು ಸೇರಿದರು.
ಉದ್ಯೋಗ
ಬದಲಾಯಿಸಿಕಾಲೇಜು ಶಿಕ್ಷಣ ಮುಗಿಸುತ್ತಿದ್ದಂತೆ, ಮುಂಬಯಿ ಸರಕಾರದ ಲೋಕೋಪಯೋಗಿ ಇಲಾಖೆಯಲ್ಲಿ ಓವರ್ಸಿಯರ್ ಹುದ್ದೆಯಲ್ಲಿ ವೃತ್ತಿಜೀವನ ಪ್ರಾರಂಭಿಸಿದರು.
ಮುಂಬಯಿ ಪ್ರಾಂತ ಆ ಕಾಲದಲ್ಲಿ ಬಹಳ ದೊಡ್ಡದಾಗಿತ್ತು. ಶೇಷಗಿರಿರಾಯರು ಮುಂಬಯಿ ಹಾಗು ಸಿಂಧಗಳಲ್ಲಿ ಕೆಲಸ ಮಾಡಿ ಹಾವೇರಿ ಜಿಲ್ಲೆಯ ಮದಗ ಮಾಸೂರ ಕೆರೆಯ ಜೀರ್ಣೋದ್ಧಾರ ಕೆಲಸಕ್ಕಾಗಿ ಈ ಭಾಗಕ್ಕೆ ಬಂದರು.
ಸಾಹಿತ್ಯ
ಬದಲಾಯಿಸಿಡೆಪ್ಯೂಟಿ ಚೆನ್ನಬಸಪ್ಪನವರು ಹಾಗು ಚುರಮರಿ ಶೇಷಗಿರಿರಾಯರು ಆಪ್ತಮಿತ್ರರು.ಚೆನ್ನಬಸಪ್ಪನವರ ಒತ್ತಾಯದಿಂದಾಗಿ ಶೇಷಗಿರಿರಾಯರು ಕಾಳಿದಾಸನ ‘ಅಭಿಜ್ಞಾನ ಶಾಕುಂತಲಮ್’ ನಾಟಕವನ್ನು ಕನ್ನಡದಲ್ಲಿ ಅನುವಾದಿಸಿ, ಉಚಿತ ಸ್ಥಳಗಳಲ್ಲಿ ಗೀತಗಳನ್ನು ಕೂಡಿಸಿ, ರಂಗಪ್ರಯೋಗಕ್ಕೆ ಯೋಗ್ಯವನ್ನಾಗಿ ಮಾಡಿದ್ದರು. ಆದರೆ ೧೮೭೦ರಲ್ಲಿ ರಚಿಸಲಾದ ಈ ನಾಟಕ ೧೮೯೧ ಅಥವಾ ೧೮೯೩ರಲ್ಲಿ ಬಾದಾಮಿಯಲ್ಲಿ ಪ್ರಯೋಗಿಸಲ್ಪಟ್ಟಿತು. ಆ ಬಳಿಕ ೧೯೦೫ರಲ್ಲಿ ಧಾರವಾಡದಲ್ಲಿ ಭಾರತ ಕಲೋತ್ತೇಜಕ ಸಂಘದವರಿಂದ ಪ್ರಯೋಗಗೊಂಡಿತು.
ಇವರ ಕೃತಿಗಳು:
- ಶಾಕುಂತಲ (೧೮೭೦)
- ಮೃಚ್ಛಕಟಿಕ
- ಸುಂದರಾ
- ಜೈಮಿನಿ ಭಾರತದ ಮರಾಠಿ ಅನುವಾದ
- ಬಹಿರ್ಲಾಪಿಕಾ ಹಾಗು ಇತರ ಕವನಗಳು
೧೮೯೪ರಲ್ಲಿ ಶೇಷಗಿರಿರಾಯ ಚುರಮರಿ ತಮ್ಮ ಮನೆಯಲ್ಲಿಯೆ ವೈಜ್ಞಾನಿಕ ಪ್ರಯೋಗವೊಂದನ್ನು ಮಾಡುತ್ತಿದ್ದಾಗ, ಸೀಸೆ ಒಡೆದು, ವಿಷವಾಯುವಿನ ಸೇವನೆಯಿಂದ ಮೃತರಾದರು.