ಚಿಲುಮೆ
ಚಿಲುಮೆ ಎಂದರೆ ತುದಿಯಿಂದ ತುದಿಯವರೆಗೆ ಸಂಪರ್ಕವಿರುವ ನೆಟ್ಟಗಿರುವ ಶಂಕುವಿನಾಕಾರದ ಕೊಳವೆ. ಸಾಂಪ್ರದಾಯಿಕವಾಗಿ ಇದನ್ನು ಜೇಡಿಮಣ್ಣಿನಿಂದ ತಯಾರಿಸಲಾಗುತ್ತದೆ ಮತ್ತು ಕನಿಷ್ಠಪಕ್ಷ ಎಂಟನೇ ಶತಮಾನದಿಂದ ಭಾರತದ್ದಲ್ಲಿ ಸಾಧುಗಳು ಇದನ್ನು ಬಳಸುತ್ತ ಬಂದಿದ್ದಾರೆ.. ಇದನ್ನು ಭಾರತದಲ್ಲಿ ಆವಿಷ್ಕರಿಸಲಾಯಿತು. ಚಿಲುಮೆಯಿಂದ ಸೇದುವ ಸಂಸ್ಕೃತಿಯು ೧೯೬೦ರ ದಶಕದ ಮಧ್ಯದಿಂದ ಭಾರತದಿಂದ ವಿಶ್ವದ ಉಳಿದೆಡೆ ಹರಡಿದೆ.
ಚಿಲುಮೆ ಕಲ್ಲು
ಬದಲಾಯಿಸಿಚಿಲುಮೆಯನ್ನು ಸೇದುವಾಗ, ಹಲವುವೇಳೆ ಚಿಲುಮೆ ಕಲ್ಲನ್ನು ಕೊಳವೆಯ ಒಳಹಾಕಲಾಗುತ್ತದೆ. ಕಸಕಡ್ಡಿಗಳನ್ನು ನೇರವಾಗಿ ಸೇದುವುದನ್ನು ತಡೆಯುವುದು ಇದರ ಉದ್ದೇಶವಾಗಿದೆ ಮತ್ತು ಇತರ ಕೊಳವಗೆಳಲ್ಲಿ ಬಳಸಲ್ಪಡುವ ಪರದೆ ಅಥವಾ ಶೋಧಕದಂತೆ ಕಾರ್ಯನಿರ್ವಹಿಸುತ್ತದೆ. ಇವು ಸಾಮಾನ್ಯವಾಗಿ ಬಿಗಿಯಾಗಿ ಹೊಂದಿಕೊಳ್ಳುತ್ತವೆ ಮತ್ತು ಹೊಗೆಯು ಮುಕ್ತವಾಗಿ ಸಾಗುವುದಕ್ಕೆ ಆಸ್ಪದ ಕೊಡಲು ಸಾಮಾನ್ಯವಾಗಿ ಕೇಂದ್ರಭಾಗದ ಮೂಲಕ ಕೊರೆದ ಸಣ್ಣ ತೂತನ್ನು ಹಾಗೂ ಪಾರ್ಶ್ವಗಳಲ್ಲಿ ಸೀಳುಗಳನ್ನು ಹೊಂದಿರುತ್ತವೆ.
ಉಲ್ಲೇಖಗಳು
ಬದಲಾಯಿಸಿ