ಚಿಮಣಿಯು (ಹೊಗೆಕೊಳವೆ, ಹೊಗೆನಳಿಕೆ, ಹೊಗೆಗೂಡು) ಕಲ್ಲುಗಳು, ಜೇಡಿಮಣ್ಣು ಅಥವಾ ಲೋಹದಿಂದ ತಯಾರಿಸಲ್ಪಟ್ಟ ಒಂದು ವಾಸ್ತುಶಿಲ್ಪೀಯ ವಾತಾಯನ ರಚನೆ. ಇದು ಬಾಯ್ಲರ್, ಒಲೆ, ಕುಲುಮೆ, ದಹನ ಸಾಧನ ಅಥವಾ ಅಗ್ನಿಸ್ಥಳವು ಉತ್ಪತ್ತಿ ಮಾಡಿದ ಬಿಸಿ ವಿಷಯುಕ್ತ ನಿಷ್ಕಾಸ ಅನಿಲಗಳು ಅಥವಾ ಹೊಗೆಯನ್ನು ಮನುಷ್ಯರಿರುವ ಪ್ರದೇಶಗಳಿಂದ ಪ್ರತ್ಯೇಕಿಸುತ್ತದೆ. ಸಾಮಾನ್ಯವಾಗಿ ಅನಿಲಗಳು ಸರಾಗವಾಗಿ ಹರಿಯುವುದನ್ನು ಖಚಿತಪಡಿಸಲು ಚಿಮಣಿಗಳು ಲಂಬವಾಗಿರುತ್ತವೆ, ಅಥವಾ, ಸಾಧ್ಯವಾದಷ್ಟು ಲಂಬವಾಗಿರುತ್ತವೆ. ಇದು ಚಿಮಣಿ ಪರಿಣಾಮ ಎಂದು ಪರಿಚಿತವಾಗಿರುವ ಪ್ರಕ್ರಿಯೆಯಿಂದ ದಹನ ಕ್ರಿಯೆಯಲ್ಲಿ ಗಾಳಿಯನ್ನು ಸೆಳೆಯುತ್ತದೆ. ಚಿಮಣಿಯ ಒಳಗಿನ ಜಾಗವನ್ನು ಫ಼್ಲೂ ಎಂದು ಕರೆಯಲಾಗುತ್ತದೆ. ಚಿಮಣಿಗಳು ದೊಡ್ಡ ಕೈಗಾರಿಕಾ ಸಂಸ್ಕರಣಾಗಾರಗಳು, ಪಳೆಯುಳಿಕೆ ಇಂಧನ ದಹನ ಸ್ಥಳಗಳ ಪಕ್ಕದಲ್ಲಿರುತ್ತವೆ ಅಥವಾ ಕಟ್ಟಡಗಳು, ಊಗಿಬಂಡಿಗಳು ಹಾಗೂ ಹಡಗುಗಳ ಭಾಗವಾಗಿರುತ್ತವೆ.

ಮೇಲಿನ ಉದ್ದನೆಯ ಭಾಗವೇ ಚಿಮಣಿ

ಬಾಹ್ಯ ಸಂಪರ್ಕಗಳು ಬದಲಾಯಿಸಿ

"https://kn.wikipedia.org/w/index.php?title=ಚಿಮಣಿ&oldid=929779" ಇಂದ ಪಡೆಯಲ್ಪಟ್ಟಿದೆ