ಚಿಕ್ಕಲಕಿ ಒಂದು ಗ್ರಾಮ ಹಾಗೂ ಪುಣ್ಯಕ್ಷೇತ್ರ.ಇದು ಕರ್ನಾಟಕ ರಾಜ್ಯದ ಬಾಗಲಕೋಟ ಜಿಲ್ಲೆಜಮಖಂಡಿ ತಾಲ್ಲೂಕಿನಲ್ಲಿದೆ. ಚಿಕ್ಕಲಕಿ ಗ್ರಾಮವು ಜಮಖಂಡಿ - ಬಿಜಾಪೂರ ರಾಜ್ಯ ಹೆದ್ದಾರಿಯಲ್ಲಿ ಇದೆ. ಜಿಲ್ಲಾ ಕೇಂದ್ರ ಬಾಗಲಕೋಟ ಯಿಂದ ಸುಮಾರು ೧೦೦ ಕಿ. ಮಿ. ಇದ್ದು ಸಾವಳಗಿ ಹೋಬಳಿ ವ್ಯಾಪ್ತಿಯಲ್ಲಿ ಬರುತ್ತದೆ. ಗ್ರಾಮದಲ್ಲಿ ಸರಕಾರಿ ಉಪ ಪ್ರಾಥಮಿಕ ಆರೋಗ್ಯ ಕೇಂದ್ರ, ಗ್ರಾಮ ಪಂಚಾಯತ ಮತ್ತು ಅಂಚೆ ಕಚೇರಿ ಇದೆ.

ಚಿಕ್ಕಲಕಿ
ಚಿಕ್ಕಲಕಿ
village
Population
 (೨೦೧೨)
 • Total೨೦೦೦

ದೇವಾಲಯಗಳು

ಬದಲಾಯಿಸಿ

ಶ್ರೀ ಪಾಂಡುರಂಗ ದೇವಾಲಯ, ಶ್ರೀ ಮಹಾಲಕ್ಷ್ಮಿ ದೇವಸ್ಥಾನ ಹಾಗೂ ಶ್ರೀ ಹಣಮಂತ ದೇವಾಲಯಗಳನ್ನು ನಿರ್ಮಿಸಿದ್ದಾರೆ. ಪ್ರಸಿದ್ದ ಮಾಳಿಂಗೇಶ್ವರ ದೇವಾಲಯ ಇದೆ. ಮತ್ತು ಅಮೋಘಸಿದ್ದೇಶ್ವರ ದೇವಾಲಯಗಳಿವೆ.

ಮಸೀದಿಗಳು

ಬದಲಾಯಿಸಿ

ಮುಸ್ಲಿಂ ಸಮುದಾಯದ ದರ್ಗಾ ಹಾಗೂ ಮಸೀದಿ ಇದೆ.

ಸಂಘಟನೆಗಳು

ಬದಲಾಯಿಸಿ

ಛತ್ರಪತಿ ಶಿವಾಜಿ ಯುವಕ ಮಂಡಳಿ, ಶ್ರೀ ಬಸವೇಶ್ವರ ಯುವಕ ಮಂಡಳಿ ಹಾಗೂ ಕನಕ ಸೇನೆ ಇದೆ.

ನೀರಾವರಿ

ಬದಲಾಯಿಸಿ

ಗ್ರಾಮದ ಪ್ರತಿಶತ ೬೫ ಭಾಗ ಭೂಮಿ ಕಾಲುವೆ, ತೆರದ ಬಾವಿ, ಕೊಳವೆ ಬಾವಿಯಿಂದ ನೀರಾವರಿ ಇದ್ದು ಪ್ರಮುಖವಾಗಿ ಕಬ್ಬು , ಮೆಕ್ಕೆಜೋಳ, ಜೋಳ, ಉಳ್ಳಾಗಡ್ಡಿ (ಈರುಳ್ಳಿ), ನಿಂಬೆಹಣ್ಣು , ಪಪ್ಪಾಯ, ಅರಿಶಿನ, ನೆಲಕಡಲೆ, ಶೇಂಗಾ(ಕಡಲೆಕಾಯಿ), ಸೂರ್ಯಕಾಂತಿ , ದ್ರಾಕ್ಷಿ , ದಾಳಿಂಬೆ, ಗೋಧಿ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಾರೆ.

ಹಬ್ಬಗಳು

ಬದಲಾಯಿಸಿ

ಪ್ರತಿವರ್ಷ ಶ್ರೀ ಹನುಮಾನ ಉತ್ಸವ, ಶ್ರೀ ಪಾಂಡುರಂಗ ಸಪ್ತಾಹ(ದಿಂಡಿ), ಕಾರ ಹುಣ್ಣುಮೆ, ಯುಗಾದಿ, ದಸರಾ, ದೀಪಾವಳಿ, ನಾಗರ ಪಂಚಮಿ, ಉರಸು ಹಾಗೂ ಮೊಹರಮ್ ಹಬ್ಬಗಳನ್ನು ಆಚರಿಸುತ್ತಾರೆ.

ಶಿಕ್ಷಣ

ಬದಲಾಯಿಸಿ

ಗ್ರಾಮದಲ್ಲಿರುವ ಶಿಕ್ಷಣ ಸಂಸ್ಥೆಗಳು

  • ಸರಕಾರಿ ಹಿರಿಯ ಪ್ರಾಥಮಿಕ ಶಾಲೆ
  • ನೇತಾಜಿ ಸುಭಾಸ್ ಚಂದ್ರ ಬೋಸ್ ಕಿರಿಯ ಪ್ರಾಥಮಿಕ ಶಾಲೆ
  • ಸರಕಾರಿ ಪ್ರೌಢಶಾಲೆ