ಚಿಂತನೆ
ಚಿಂತನೆಯು ಯೋಚನೆ, ಯೋಚನೆಗಳನ್ನು ಉತ್ಪಾದಿಸುವ ಕ್ರಿಯೆ, ಅಥವಾ ಯೋಚನೆಗಳನ್ನು ಉತ್ಪಾದಿಸುವ ಪ್ರಕ್ರಿಯೆಯ ಪರಿಣಾಮವಾಗಿ ಆಗುವ ಕಲ್ಪನೆಗಳು ಅಥವಾ ಕಲ್ಪನೆಗಳ ವಿನ್ಯಾಸಗಳನ್ನು ನಿರ್ದೇಶಿಸಬಹುದು. ವಾಸ್ತವವಾಗಿ ಚಿಂತನೆಯು ಎಲ್ಲರಿಗೂ ಪರಿಚಿತವಾದ ಒಂದು ಮೂಲಭೂತ ಮಾನವ ಚಟುವಟಿಕೆ ಎಂಬುದರ ನಡುವೆಯೂ, ಚಿಂತನೆಯೆಂದರೇನು ಅಥವಾ ಅದು ಹೇಗೆ ನಿರ್ಮಾಣವಾಗುತ್ತದೆ ಎಂಬುದಕ್ಕೆ ಯಾವುದೇ ಸಾಮಾನ್ಯವಾಗಿ ಸ್ವೀಕೃತ ಸಹಮತವಿಲ್ಲ. ಚಿಂತನೆಯು ಅನೇಕ ಮಾನವ ಕ್ರಿಯೆಗಳು ಮತ್ತು ಸಂವಹನಗಳ ಆಧಾರವಾಗಿರುವುದರಿಂದ, ಅದರ ಭೌತಿಕ ಮತ್ತು ತತ್ವ ಮೀಮಾಂಸಾ ಮೂಲಗಳು, ಪ್ರಕ್ರಿಯೆಗಳು, ಮತ್ತು ಪರಿಣಾಮಗಳನ್ನು ತಿಳಿಯುವುದು ಕೃತಕ ಬುದ್ಧಿಮತ್ತೆ, ಜೀವಶಾಸ್ತ್ರ, ತತ್ವಶಾಸ್ತ್ರ, ಮನೋವಿಜ್ಞಾನ, ಮತ್ತು ಸಮಾಜಶಾಸ್ತ್ರವನ್ನು ಒಳಗೊಂಡಂತೆ, ಅನೇಕ ಶೈಕ್ಷಣಿಕ ವಿಭಾಗಗಳ ಸುದೀರ್ಘಕಾಲದ ಗುರಿಯಾಗಿದೆ.