ಹಸನಬ್ಬ, ಸಮಾಜ ಸೇವೆಯನ್ನು ತಮ್ಮ ಆತ್ಮ ಸಂತೋಷಕ್ಕಾಗಿ ಮಾಡುತ್ತಿರುವ ಒಬ್ಬ ಅಪರೂಪದ ವ್ಯಕ್ತಿ. 'ಹಸನಬ್ಬ', ಮಲೆನಾಡಿನ ದಟ್ಟ ಅರಣ್ಯ ಪ್ರದೇಶಗಳ ಮಧ್ಯೆ ಮನೆಮಾಡಿ ಅಲ್ಲೇ ವಾಸಿಸುತ್ತಾ ಅಲ್ಲಿನ ಜನರ ಕಷ್ಟಕ್ಕೆ ಭುಜಕೊಟ್ಟು ಅದರಲ್ಲೇ ತೃಪ್ತಿಯನ್ನು ಕಾಣುತ್ತಿರುವ ಸರಳಜೀವಿ, ಪ್ರಶಂಸನೀಯರು

ಜನನ, ವಿದ್ಯಾಭ್ಯಾಸ ಮತ್ತು ವೃತ್ತಿ ಬದಲಾಯಿಸಿ

ಉಜಿರೆ ಹತ್ತಿರದ ಲ್ಯಾಲ್ ಹುಟ್ಟೂರು. ಊಟಕ್ಕೂ ಕಷ್ಟವಿದ್ದ ಕಾಲದಲ್ಲಿ ಒಂದನೆಯ ತರಗತಿ ತನಕ ಓದಿದರು ತಮ್ಮ ೮ ನೆಯ ವಯಸ್ಸಿನಲ್ಲಿ ಶಾಲೆಗೆ ಶರಣುಹೊಡೆದರು. ಬಡತನದ ಬೇಗೆ, ಬಾಳೆಹೊನ್ನೂರಿಗೆ ಹೋಗಿ ಅಲ್ಲಿನ ಚಿಕ್ಕ ಹೋಟೆಲ್ ಒಂದರಲ್ಲಿ ಲೋಟತೊಳೆಯುವ ನೌಕರಿ ಹಿಡಿದರು. ೧೮ ನೆಯ ವಯಸ್ಸಿನಲ್ಲಿ ತಮ್ಮ ಹುಟ್ಟೂರಿಗೆ ಮರಳಿ ಚಿಕ್ಕದಾದ ಒಂದು ಹೋಟೆಲ್ ತೆರೆದರು. ಮನೆಕಟ್ಟಿ ಸಂಸಾರ ಪ್ರಾರಂಭಿಸಿದರು. ಹೋಟೆಲ್ ಗೆ ಬರುತ್ತಿದ್ದ ಲಾರಿ ಚಾಲಕರು ಕೊಟ್ಟ ವರ್ತಮಾನದಿಂದ ಆ ಮಾರ್ಗದಲ್ಲಿ ಆಗುವ ಅಪಘಾಟಗಳ ಒಂದು ಪರಿಚಯವಾಯಿತು. ೬೧ ವರ್ಷ ವಯಸ್ಸಿನ ಹರೆಯದ ಹಸನಬ್ಬ, ತಟದಲ್ಲಿ ಒಂದು ಚಿಕ್ಕ ಹೋಟೆಲ್ ಇಟ್ಟುಕೊಂಡಿದ್ದಾರೆ. ಬದಿಯಲ್ಲೇ ಮನೆ ೪೧ ವರ್ಷಗಳಿಂದ ಇಲ್ಲೇವಾಸ್ತವ್ಯ. ಸಮಸ್ಯೆಗಳಿಗೆ ಸ್ಪಂದಿಸುತ್ತಾ ಅದರಲ್ಲೇ ಒಂದು ಸಮಾಧಾನವನ್ನು ಕಂಡ ಗಟ್ಟಿ ವ್ಯಕ್ತಿ. ತಿಂಗಳಿಗೆ ಕನಿಷ್ಟ ೩-೪ ಮತ್ತು ವರ್ಷಕ್ಕೆ ಸರಾಸರಿ ೪೦-೫೦. ಸಾವಿರಾರು ಅವಘಡಗಳ ಕಂಡು ಅದನ್ನು ದಿಟ್ಟತನದಿಂದ ಎದುರಿಸಿ ಸಾವಿರಾರು ದಾರಿಹೋಕರಿಗೆ ನೆರವಾಗಿದ್ದಾರೆ. ತಾವೇ ಆ ಸ್ಥಳಗಳಿಗೆ ಹೋಗಿ ಕೈಲಾದ ಸಹಾಯಮಾಡುವ ಬೆಳೆಸಿಕೊಂಡರು. ತಮ್ಮಮಾರುತಿ ೮೦೦ ವಾಹನದಲ್ಲಿ ತಮ್ಮ ಕೆಲವು ಗೆಳೆಯರ ಜೊತೆಗೆ ಅಲ್ಲಿಗೆ ತಲುಪಿ, ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುತ್ತಾರೆ. ಬದುಕುಳಿದ ಗಾಯಾಳುಗಳನ್ನು ಬೆಳ್ತಂಗಡಿಯ ಆಸ್ಪತ್ರೆಗೆ ಸಾಗಿಸುತ್ತಾರೆ. ೬೧ ವರ್ಷದ ಹರೆಯದ, ಹಸನಬ್ಬ ರಿಗೆ, ಪತ್ನಿ ಮತ್ತು ೩ ಜನ ಗಂಡುಮಕ್ಕಳು. ಮಗ, ಬದ್ರುದ್ದೀನ್ ಅಜ್ಮನ್, ಕೊನೆಯ ವರ್ಷದ ಬಿ.ಕಾಂ ನಲ್ಲಿ ಓದುತ್ತಿದ್ದಾನೆ.

ಹಸನಬ್ಬನವರಿಗೆ ಪ್ರೇರಣೆ ಬದಲಾಯಿಸಿ

ಒಮ್ಮೆ ಚಿಕ್ಕಮಗಳೂರಿನಿಂದ ಚಾರ್ಮಡಿ ಘಾಟ್ ನಲ್ಲಿ ಪ್ರಯಾಣಿಸುತ್ತಿದ್ದ ಅಪ್ಪ, ಮಗ, ಅಪಘಾತವೊಂದರಲ್ಲಿಗಂಭೀರವಾಗಿ ಗಾಯಗೊಂಡು ಪ್ರಜ್ಞಾಹೀನಾವಸ್ಥೆಯಲ್ಲಿದ್ದರು. ಹಸನಬ್ಬನವರಿಗೆ ಈ ಸುದ್ದಿಯನ್ನು ತಲುಪಿಸಿದಾಗ ಅವರು ತತ್ ಕ್ಷಣವೇ ಅಲ್ಲಿಗೆ ಧಾವಿಸಿ, ಇಬ್ಬರನ್ನೂ ರಕ್ಷಿಸಿ, ೧೦೦ ಕಿ.ಮೀ.ದೂರದ ಮಂಗಳೂರಿನ ಆಸ್ಪತ್ರೆಯೊಂದಕ್ಕೆ ಹೆಚ್ಚಿನ ಚಿಕಿತ್ಸೆಗಾಗಿ ಸೇರಿಸಿದರು. ೧೧ ದಿನಗಳ ಕಾಲ ಪ್ರಜ್ಞಾಹೀನಾವಸ್ಥೆಯಲ್ಲಿದ್ದು ಚೇತರಿಸಿಕೊಂಡ ಅವರಿಬ್ಬರೂ ನಂತರ ಹಸನಬ್ಬನವರ ಮನೆಗೆ ಬಂದು ಕೃತಜ್ಞತೆ ಸಲ್ಲಿಸಿದರು. ಆಗ ಹಸನಬ್ಬರ ತಾಯಿ ಮಗನಿಗೆ, "ಸಮಾಜಸೇವೆಯನ್ನು ನಿಲ್ಲಿಸಬೇಡ, ಪ್ರಾಣ ರಕ್ಷಣೆಗಿಂತ ಮಿಗಿಲಾದ ಪುಣ್ಯದ ಕೆಲಸ ಬೇರೊಂದಿಲ್ಲ" ಎಂದು ಹರಸಿದರಂತೆ. ತಾಯಿಯವರ ಈ ನುಡಿಗಳಿಂದ ಸ್ಪೂರ್ಥಿಪಡೆದ ಹಸನಬ್ಬ ಅಂದಿನಿಂದ ಇಂದಿನ ತನಕ , ಚಾರ್ಮಡಿ ಘಾಟ್ ನಲ್ಲಿ ತೊಂದರೆಯಲ್ಲಿ ಸಿಲುಕಿಕೊಂಡವರ ರಕ್ಷಣೆಯ ಕೆಲಸವನ್ನು ಹಚ್ಛಿನ ಶ್ರದ್ಧೆಯಿಂದ ನಡೆಸಿಕೊಂಡುಬರುತ್ತಿದ್ದಾರೆ. ಚಾರ್ಮಾಡಿ ಘಾಟ್ ಇರುವ ಸ್ಥಳ, ಕೊಟ್ಟಿಗೆ ಹಾರ ಮತ್ತು ಉಜಿರೆ ಯ ಮಧ್ಯೆ ಕಾಡುಮೇಡಿನ ದುರ್ಗಮ ದಾರಿಯಲ್ಲಿ ಸಾಗಿದರೆ ಚಾರ್ಮಾಡಿಎಂಬ ಸಣ್ಣ ಗ್ರಾಮ ಸಿಗುತ್ತದೆ. ಇಲ್ಲಿಂದ ಶುರುವಾಗುವ ಘಾಟ್ ಸುಮಾರು ೧೧ ಹೆರ್ ಪಿನ್ ತಿರುವುಗಳನ್ನು ಹೊಂದಿದ 'ಕರ್ನಾಟಕದ ಅತ್ಯಂತ ದುರ್ಗಮ ಘಾಟ್' ಎಂದು ಹೆಸರಾಗಿದೆ. ಇಲ್ಲಿನ ಬಹುತೇಕ ರಸ್ತೆಗಳು ತೀರ ಕಿರಿದಾಗಿವೆ. ತಲೆ ಎತ್ತಿದರೆ ಕಾಣದಷ್ಟು ಎತ್ತರವಿರುವ ಭಾರಿ ಬೆಟ್ಟಗಳ ಸಮೂಹ, ದೂರದಲ್ಲಿ ಪ್ರಪಾತಗಳು, ಬದಿಯಲ್ಲಿ ದಟ್ಟವಾದ ಅಡವಿ, ಕೇವಲ ೨೦ ಅಡಿಯಲ್ಲಿ ಏನಿದೆ ಎಂದು ತಿಳಿಯಲಾರದಷ್ಟು ಕಡಿದಾದ ತಿರುವುಗಳು, ಮಳೆಗಾಲದಲ್ಲಿ ಜಿಟಿಜಿಟಿ ಒಂದೇ ಸಮನೆ ಸುರಿಯುವ ನೀರಿನ ಹನಿಗಳು, ಮಂಜಿನ ಮುಸುಕು, ಚಳಿಗಾಲದಲ್ಲಿ ರಾತ್ರಿಯೋ, ಹಗಲೋ ಎಂದು ಕಂಡುಹಿಡಿಯಲಾರದಷ್ಟು ಕಾವಳ ಮಂಜು. ರಸ್ತೆ ವಾಹನ ಚಾಲಕರಿಗೆ ಒಂದು ದೊಡ್ಡ ಸವಾಲನ್ನು ಒಡ್ಡುತ್ತವೆ.

ಅಪಘಾತಗಳು ಸಾಮಾನ್ಯ ಬದಲಾಯಿಸಿ

ಇಂತಹ ರಸ್ತೆಯಲ್ಲಿ ಅಪಘಾತಗಳು ಸರ್ವೇಸಾಮಾನ್ಯ. ಮಳೆಗಾಲದಲ್ಲಿ ಗುಡ್ಡದ ಕಲ್ಲುಬಂಡೆಗಳು ಜಾರಿ ಕುಸಿದು ಬಿದ್ದರೆ, ಮಣ್ಣಿನ ಚಿಕ್ಕ ಬೆಟ್ಟಗಳು ಕುಸಿದು ಜರುಗಿ ಕೆಳಗೆ ಬಿದ್ದು ಚಿಕ್ಕ ರಸ್ತೆಯನ್ನು ವಾಹನ ಸಂಚಾರಕ್ಕೆ ಸಂಚುಕಾರನೀಡುತ್ತವೆ. ಇದೇ ಸುಸಂಧಿಯನ್ನು ಉಪಯೋಗಿಸಿಕೊಂಡು ಪಾತಕಿಗಳು ಎಲ್ಲೋ ಕೊಲೆಮಾಡಿದ ದೇಹಗಳನ್ನು ಇಲ್ಲಿನ ಕಂದಕಗಳಲ್ಲಿ ಎಸೆದುಹೋಗುತ್ತಾರೆ. ೨೨ ಕಿ.ಮೀ ಏರುಪೇರಿನ ದಾರಿಯಲ್ಲಿ ಅತಿಭಾರಹೊತ್ತ ಟ್ರಕ್ ಗಳು ಮೇಲೇರಲಾರದೆ ಮುಗ್ಗರಿಸಿ ಬಿದ್ದೊ ಇಲ್ಲವೇ ವಾಪಸ್ ಹಿಂದಕ್ಕೆ ಸರಿಯುತ್ತವೆ. ಮತ್ತೆಕೆಲವು ವಾಹನಗಳು ಇಳಿಜಾರಿನಲ್ಲಿ ಬ್ರೇಕ್ ಹಿಡಿದೆ ಸಾಗಬೇಕು. ಈ ರಸ್ತೆಯಲ್ಲಿ ಸಿಗುವ ಅಣ್ಣಪ್ಪನ ಗುಡಿಬಿಟ್ಟರೆ ಜನವಸತಿ ಇರುವ ಸ್ಥಳವಿಲ್ಲ. ಇಂತಹ ಸನ್ನಿವೇಶದಲ್ಲಿ ದಾರಿಹೋಕರ ಸೇವೆಗೆ ನೆರವಾಗುವ ಆಪದ್ಭಾಂಧವನೆಂದರೆ ಹಸನಬ್ಬ

ಚಾರ್ಮಾಡಿ ಹಸನಬ್ಬನವರ ವಿಳಾಸ ಬದಲಾಯಿಸಿ

ಚಾರ್ಮಡಿ ಘಾಟ್ ನಲ್ಲಿ ಪ್ರಯಾಣಿಸುವ ಬಹುತೇಕ ವಾಹನ ಚಾಲಕರ ಜೇಬಿನಲ್ಲಿ ತಮ್ಮ ಇಷ್ಟದೇವತೆಗಳ ಫೋಟೋಗಳ ಜೊತೆಗೆ, ಹಸನಬ್ಬರ ದೂರವಾಣಿ ಸಂಖ್ಯೆಯೂ ತಪ್ಪದೆ ಇರುತ್ತದೆ. ಈ ದುರ್ಗಮ ದಾರಿಯಲ್ಲಿ ಯಾವುದೇ ಅವಘ್ಹಡಗಳು ಸಂಭವಿಸಲಿ, ಅವರಲ್ಲಿ ಯಾರಾದರೊಬ್ಬರು, ಕಾಕನಿಗೆ ಹೇಳೋಣ, ಎಂದು ಚಾರ್ಮಾಡಿ ಹಸನಬ್ಬರಿಗೆ ಕರೆಮಾಡುತ್ತಾರೆ.

ಗೌರವ,ಪ್ರಶಸ್ತಿಗಳು ಬದಲಾಯಿಸಿ

  • ೧೯೮೯ ರಲ್ಲಿ ಪುತ್ತೂರಿನ ಸಹಾಯಕ ಪೋಲಿಸ್ ಉಪವಿಭಾಗಾಧಿಕಾರಿ ಗಗನ್ ದೀಪ್ ಸನ್ಮಾನಿಸಿ ಪ್ರೋತ್ಸಾಹಿಸಿದರು.
  • ೨೦೦೧ ರಲ್ಲಿ 'ದ.ಕ.ಜಿಲ್ಲೆಯ ರಾಜ್ಯೋತ್ಸವಪ್ರಶಸ್ತಿ',
  • 'ಬೆಂಗಳೂರಿನ ಅಖಿಲಭಾರತಚಾಲಕರ ಸಂಘ ಸಾರಥಿ ನಂಬರ್ ೧',
  • 'ಬೆಂಗಳೂರಿನ ಬ್ಯಾರೀಸ್ ಅಸೋಸಿಯೇಷನ್ ನ ವರ್ಷದ ವ್ಯಕ್ತಿ ಪ್ರಶಸ್ತಿ'
  • 'ಟೈಮ್ಸ್ ಆಫ್ ಇಂಡಿಯ ಪತ್ರಿಕೆ'ಯ, 'ಒನ್ ಮ್ಯಾನ್ ಆಂಬ್ಯುಲೆನ್ಸ್ ಪ್ರಶಸ್ತಿ'

ಉಲ್ಲೇಖ ಬದಲಾಯಿಸಿ