ಚಾರಿತ್ರಿಕ ಭಾಷಾವಿಜ್ಞಾನ

ಚಾರಿತ್ರಿಕ ಭಾಷಾವಿಜ್ಞಾನ :ಭಾಷಾವಿಜ್ಞಾನದ[] ಎರಡು ಪ್ರಮುಖ ಭಾಗಗಳಿವೆ ವರ್ಣನಾತ್ಮಕ ಭಾಷಾವಿಜ್ಞಾನ(ಡಿಸ್ಕ್ರಿಪ್ಟಿವ್ ಲಿಂಗ್ವಿಸ್ಟಿಕ್ಸ್) ಮತ್ತು ಚಾರಿತ್ರಿಕ ಭಾಷಾವಿಜ್ಞಾನ []. ಒಂದು ಭಾಷೆಯ ಸಮಗ್ರ ಚರಿತ್ರೆಯನ್ನು ಅದರ ಪರಿವಾರದ ಸ್ವರೂಪವನ್ನು ಕಾಲಕ್ರಮದಂತೆ ವಿವರಿಸುವುದು ಚಾರಿತ್ರಿಕ ಭಾಷಾವಿಜ್ಞಾನದ ಉದ್ದೇಶ. ಇದನ್ನು ಐತಿಹಾಸಿಕ ಭಾಷಾವಿಜ್ಞಾನವೆಂದೂ ಕರೆಯುವುದಿದೆ. ಈ ಕಾರ್ಯವನ್ನು ತೌಲನಿಕ ಪದ್ಧತಿಯ ಮುಖಾಂತರ ಸಾಧಿಸಲಾಗುವುದು.[]

ವಿಶೇಷತೆ

ಬದಲಾಯಿಸಿ

ನಿರಂತರ ಬದಲಾವಣೆ ಯಾವುದೇ ಜೀವಂತ ಭಾಷೆಯ ವಿಶಿಷ್ಟ ಲಕ್ಷಣಗಳಲ್ಲಿ ಒಂದು. ಈ ಬದಲಾವಣೆಗೆ ಕಾರಣ ಎನಿಸುವ ಅಂಶ ಹಾಗೂ ಕಾರಣಗಳನ್ನೂ ವಿವೇಚಿಸುವುದು ಮೊದಲ ಕೆಲಸ. ಒಮ್ಮೆ ಒಂದಾಗಿದ್ದ ಭಾಷೆ ಕಾರಣಾಂತರಗಳಿಂದ ಒಡೆದು ಅನೇಕ ಭಾಷೆಗಳಾಗುವುದುಂಟು. ಈ ಭಾಷೆಗಳ ಪರಸ್ಪರ ತೌಲನಿಕ ಅಧ್ಯಯನದ ಮೂಲಕ ಮೂಲಭಾಷೆಯನ್ನು ಗುರುತಿಸುವುದು, ಕೆಲವೇಳೆ ರಚಿಸುವುದು ಇನ್ನೊಂದು ಕೆಲಸ. ಇಂಥ ಸಾಧನೆಗೆ ಅವಶ್ಯಕವಾದ ಎಲ್ಲ ಪ್ರಕ್ರಿಯೆ ಮತ್ತು ಸಿದ್ಧಾಂತಗಳನ್ನೂ ಚಾರಿತ್ರಿಕ ಭಾಷಾವಿಜ್ಞಾನ ಒಳಗೊಂಡಿದೆ.[]

ಸ್ಥಾನ ಮತ್ತು ಉದ್ದೇಶ

ಬದಲಾಯಿಸಿ

ಮೊದಮೊದಲು ಚಾರಿತ್ರಿಕ ಭಾಷಾವಿಜ್ಞಾನದ ಭಾಷಾಭ್ಯಾಸ ತಳಹದಿಯಾಗಿತ್ತು. ಕಾಲಾಂತರದಿಂದ ಅದರ ಸ್ಥಾನವನ್ನು ವರ್ಣನಾತ್ಮಕ ಭಾಷಾವಿಜ್ಞಾನ ಸೈದ್ಧಾಂತಿಕವಾಗಿ ಆವರಿಸಿತು. ಇತ್ತೀಚೆಗೆ ಅದೇ ಭಾಷಾವಿಜ್ಞಾನದ ಸಾಮ್ರಾಜ್ಞೆ ಎನಿಸಿದೆ. ಒಂದು ಪ್ರದೇಶದ ಒಂದು ಕಾಲದ ಒಂದು ಭಾಷೆಯ ಅಭ್ಯಾಸವನ್ನು ಮಾಡುವುದು ವರ್ಣನಾತ್ಮಕ ಭಾಷಾವಿಜ್ಞಾನದ ಉದ್ದೇಶ. ಭಾಷಾಭ್ಯಾಸದ ಕಾಲ ಮತ್ತು ಪ್ರದೇಶಗಳ ಮಿತಿ ಹೆಚ್ಚಾದರೆ, ತುಲನೆ ತಲೆದೋರುತ್ತದೆ. ತುಲನೆ ಬಂದೊಡನೆ ಚಾರಿತ್ರಿಕ ರೀತಿ ಕಾಣಿಸಿಕೊಳ್ಳುತ್ತದೆ. ಹೀಗೆ ಒಂದು ಭಾಷೆಯ ಕೇವಲ ಭಿನ್ನ ಕಾಲ ಅಥವಾ ಪ್ರದೇಶಗಳ ಅನೇಕ ಹಂತಗಳ ತುಲನಾತ್ಮಕ ಅಧ್ಯಯನವೇ ಚಾರಿತ್ರಿಕ ಭಾಷಾವಿಜ್ಞಾನದ ಒಂದು ಭಾಗ. ಒಂದು ಪ್ರದೇಶದ ಒಂದು ಕಾಲದ ಒಂದು ಭಾಷೆಯ ಅಭ್ಯಾಸವನ್ನು ಮಾಡುವುದು ವರ್ಣನಾತ್ಮಕ ಭಾಷಾವಿಜ್ಞಾನದ ಉದ್ದೇಶ. ಭಾಷಾಭ್ಯಾಸದ ಕಾಲ ಮತ್ತು ಪ್ರದೇಶಗಳ ಮಿತಿ ಹೆಚ್ಚಾದರೆ, ತುಲನೆ ತಲೆದೋರುತ್ತದೆ. ತುಲನೆ ಬಂದೊಡನೆ ಚಾರಿತ್ರಿಕ ರೀತಿ ಕಾಣಿಸಿಕೊಳ್ಳುತ್ತದೆ. ಹೀಗೆ ಒಂದು ಭಾಷೆಯ ಕೇವಲ ಭಿನ್ನ ಕಾಲ ಅಥವಾ ಪ್ರದೇಶಗಳ ಅನೇಕ ಹಂತಗಳ ತುಲನಾತ್ಮಕ ಅಧ್ಯಯನವೇ ಚಾರಿತ್ರಿಕ ಭಾಷಾವಿಜ್ಞಾನದ ಒಂದು ಭಾಗ.

ಮುಖ್ಯ ಸಂಗತಿಗಳು

ಬದಲಾಯಿಸಿ

ಒಂದು ಪ್ರದೇಶದ ಒಂದು ಕಾಲದ ಒಂದು ಭಾಷೆಯ ಅಭ್ಯಾಸವನ್ನು ಮಾಡುವುದು ವರ್ಣನಾತ್ಮಕ ಭಾಷಾವಿಜ್ಞಾನದ ಉದ್ದೇಶ. ಭಾಷಾಭ್ಯಾಸದ ಕಾಲ ಮತ್ತು ಪ್ರದೇಶಗಳ ಮಿತಿ ಹೆಚ್ಚಾದರೆ, ತುಲನೆ ತಲೆದೋರುತ್ತದೆ. ತುಲನೆ ಬಂದೊಡನೆ ಚಾರಿತ್ರಿಕ ರೀತಿ ಕಾಣಿಸಿಕೊಳ್ಳುತ್ತದೆ. ಹೀಗೆ ಒಂದು ಭಾಷೆಯ ಕೇವಲ ಭಿನ್ನ ಕಾಲ ಅಥವಾ ಪ್ರದೇಶಗಳ ಅನೇಕ ಹಂತಗಳ ತುಲನಾತ್ಮಕ ಅಧ್ಯಯನವೇ ಚಾರಿತ್ರಿಕ ಭಾಷಾವಿಜ್ಞಾನದ ಒಂದು ಭಾಗ[].

ವ್ಯಾಕರಣ ವ್ಯವಸ್ಥೆಯ ಬದಲಾವಣೆ

ಬದಲಾಯಿಸಿ

ಇದರಲ್ಲಿ ವ್ಯಾಕರಣ ಮತ್ತು ಪದಕೋಶಗಳ ಬದಲಾವಣೆಗಳು ಸೇರುತ್ತವೆ. ವ್ಯಾಕರಣದ ತಿರುಳಿನಲ್ಲಿ ಆಗುವ ಬದಲಾವಣೆ ಇಲ್ಲಿ ಮುಖ್ಯ. ಈ ತಿರುಳಿನಲ್ಲಿ ವ್ಯಾಕರಣ ವರ್ಗ, ವಾಕ್ಯ ಖಂಡ ಮತ್ತು ರಚನೆಗಳು ಅಡಕವಾಗಿವೆ. ಹಳಗನ್ನಡದಲ್ಲಿ -ಇಸು ಪ್ರತ್ಯಯ ಸಾಮಾನ್ಯವಾಗಿ ಧಾತುರೂಪಗಳಿಗೆ ಹಚ್ಚುತ್ತಿದ್ದು. ಹೊಸಗನ್ನಡದಲ್ಲಿ ಅದನ್ನು ನಾಮರೂಪಗಳಿಗೂ ಹಚ್ಚುವ ರೂಢಿ ಬಂದಿದೆ. ಉದಾ: ರಚಿಸು, ರಮಿಸು, ವಚನಿಸು, ಸಮರ್ಪಿಸು, ಕವನಿಸು-ಹೀಗೆ ವ್ಯಾಕರಣ ಬದಲಾವಣೆಯಾದದ್ದು ಕಂಡುಬರುತ್ತದೆ. ಅಲ್ಲದೆ ಕನ್ನಡದಲ್ಲಿ ಕರ್ಮಣಿ ಪ್ರಯೋಗವನ್ನು ಬಳಕೆ ಮಾಡುವುದುಂಟು. ಇದು ಸಂಸ್ಕೃತದ ಪ್ರಭಾವದಿಂದ ಬಂದದ್ದು. ಇದೂ ವ್ಯಾಕರಣದ ಬದಲಾವಣೆಯೇ.

ಪದಕೋಶ ಬದಲಾವಣೆ

ಬದಲಾಯಿಸಿ

ಭಾಷೆಯಲ್ಲಿನ ಪದಗಳ ಸಂಖ್ಯೆಯಲ್ಲಿ ಆಗುವ ಬದಲಾವಣೆಗೆ ಪದಕೋಶ ಬದಲಾವಣೆ ಎನ್ನುವರು. ಪದಕೋಶಗಳ ಮೂಲಕ ಇದನ್ನು ತಿಳಿದುಕೊಳ್ಳಬಹುದು. ಸ್ವೀಕರಣದ ಪರಿಣಾಮದಿಂದ ಬೇರೊಂದು ಭಾಷೆಯಿಂದ ಅನೇಕ ಪದಗಳು ಒಂದು ಭಾಷೆಗೆ ಸೇರಿಕೊಳ್ಳುತ್ತವೆ. ಕನ್ನಡದ ಪದ ಸಂಗ್ರಹದಲ್ಲಿ ಸಂಸ್ಕೃತ, ಪ್ರಾಕೃತ, ತಮಿಳು, ಪೋರ್ಚುಗೀಸ್, ಪಾರಸಿ, ಹಿಂದಿ, ಇಂಗ್ಲಿಷ್ ಮೊದಲಾದ ಭಾಷೆಗಳಿಂದ ಅನೇಕ ಪದಗಳು ಸೇರ್ಪಡೆಯಾಗಿವೆ. ನಮ್ಮಲ್ಲಿಲ್ಲದ ವಸ್ತುವನ್ನು ನಿರ್ದೇಶಿಸುವಾಗ ಹಳೆಯ ಎರಡು ಪದಗಳನ್ನು ಸೇರಿಸಿ ಹೊಸ ಸಮಾಸ ಪದವನ್ನು ಸೃಷ್ಟಿ ಮಾಡಿರುವುದುಂಟು. ಉದಾ : ಸೀಮೆಯೆಣ್ಣೆ. ಕೆಲವೇಳೆ ಅನ್ಯಭಾಷಾ ಪದದ ಅನುವಾದ ಮಾಡಿರುವುದೂ ಉಂಟು. ಉದಾ : ಹ್ಯಾಂಡ್‍ಬ್ಯಾಗ್=ಕೈಚೀಲ.[]

ಭಾಷಾವಿಜ್ಞಾನದ ಅಧ್ಯಯನದಲ್ಲಿ ಚಾರಿತ್ರಿಕ ಭಾಷಾವಿಜ್ಞಾನದ ಸ್ಥಾನ

ಬದಲಾಯಿಸಿ

ಐತಿಹಾಸಿಕ ಭಾಷಾವಿಜ್ಞಾನದ ಅಧ್ಯಯನದಿಂದ ಜಗತ್ತಿನಲ್ಲಿ ಎಷ್ಟು ಭಾಷೆಗಳು ಬಳಕೆಯಲ್ಲಿವೆಯೆಂಬುದನ್ನು ಸ್ಥೂಲವಾಗಿ ತಿಳಿದುಕೊಳ್ಳಲು ಸಾಧ್ಯವಿದೆ. ಜಗತ್ತಿನ ಭಾಷಾಕುಟುಂಬಗಳಲ್ಲಿ ಇಂಡೋ-ಯೂರೋಪಿಯನ್ ಭಾಷಾಕುಟುಂಬ ಅತಿ ವಿಶಾಲವೂ ಮಹತ್ತ್ವದ್ದೂ ಆಗಿದೆ. ಈ ಕುಟುಂಬದಲ್ಲಿ ಜರ್ಮಾಜಿಕ್, ಕೆಲ್ಟಿಕ್, ರೋಮಾನ್ಸ್, ಬಾಲ್ಟಿಕ್ ಶಾಖೆಗಳಿವೆ. ಫಿಸ್ನೊ-ಅಗ್ರಿಕ್, ಆಲ್ಟಿಕ್, ಕಕೇಷನ್, ಬಾಸ್ಕ, ಆಫ್ರೋ-ಏಷ್ಯಾಟಿಕ್, ದ್ರಾವಿಡ-ಭಾಷಾ ಕುಟುಂಬ-ಮೊದಲಾದವನ್ನು ಪಟ್ಟಿ ಮಾಡಬಹುದು. ಇವಲ್ಲದೆ ಏಷ್ಯ ಮತ್ತು ಅಮೆರಿಕ ಖಂಡಗಳಲ್ಲಿ ಹಲವಾರು ಭಾಷಾಕುಟುಂಬಗಳನ್ನೂ ಇತ್ತೀಚೆಗೆ ಗುರುತಿಸಲಾಗಿದೆ. ಒಂದು ಭಾಷೆ ಬಳಕೆಯಾಗುವ ಪ್ರದೇಶದ ಅಂತರ ಹಿಗ್ಗಿದಷ್ಟೂ ಅದರ ಭಿನ್ನತೆಯೂ ಹೆಚ್ಚುತ್ತದೆ. ಇಂಥ ಪರಿಸ್ಥಿತಿಗೆ ಪ್ರಾದೇಶಿಕ ಮತ್ತು ಸಾಮಾಜಿಕ ವೈವಿಧ್ಯಗಳು ಕಾರಣವಾಗುತ್ತವೆ. ಈ ಭಿನ್ನತೆಯ ಕಾರಣ ಒಂದು ಪ್ರದೇಶದ ಮಾತು ಮತ್ತೊಂದು ಪ್ರದೇಶದವರಿಗೆ ಅರ್ಥವಾಗುವುದಿಲ್ಲ. ಇಂಥ ಪರಿಸ್ಥಿತಿಯಲ್ಲಿ ಒಂದು ಸಾಮಾನ್ಯ ಸಂಪರ್ಕ ಮಾಧ್ಯಮದ ಆವಶ್ಯಕತೆ ಅತ್ಯಗತ್ಯ. ಈ ಸಾಮಾನ್ಯ ಸಂಪರ್ಕ ಮಾಧ್ಯಮವೇ ಪ್ರಮಾಣ ಭಾಷೆಯೆನಿಸಿಕೊಳ್ಳುವುದು. ಹೀಗೆ ಚಾರಿತ್ರಿಕ ಭಾಷಾವಿಜ್ಞಾನ ವ್ಯಾಪಕ ಸ್ವರೂಪವನ್ನು ಹೊಂದಿ, ಭಾಷಾವಿಜ್ಞಾನದ ಅಧ್ಯಯನದಲ್ಲಿ ಮಹತ್ತ್ವದ ಸ್ಥಾನ ಪಡೆದಿದೆ.[]

ಉಲ್ಲೇಖಗಳು

ಬದಲಾಯಿಸಿ
  1. "Historical linguistics". Encyclopedia Britannica (in ಇಂಗ್ಲಿಷ್). Retrieved 11 January 2020.
  2. "Diachronic Linguistics - an overview | ScienceDirect Topics". www.sciencedirect.com. Retrieved 11 January 2020.
  3. writer, Richard Nordquist Richard Nordquist is a freelance; English, former professor of; Grammar, Rhetoric who wrote college-level; textbooks, Composition. "An Introduction to Historical Linguistics". ThoughtCo (in ಇಂಗ್ಲಿಷ್). Retrieved 11 January 2020.
  4. https://www.jstor.org/stable/373642
  5. https://www.jstor.org/stable/10.3366/j.ctt1g0b5gq
  6. "Historical linguistics". Encyclopedia Britannica (in ಇಂಗ್ಲಿಷ್). Retrieved 11 January 2020.
  7. "What does Historical Linguistics study? – All About Linguistics". Archived from the original on 11 ಜನವರಿ 2020. Retrieved 11 January 2020.