ಚಾಡ್
ಚಾಡ್ ( ಅಧಿಕೃತವಾಗಿ ಚಾಡ್ ಗಣರಾಜ್ಯ) ಮಧ್ಯ ಆಫ್ರಿಕಾದ ಒಂದು ಸಾರ್ವಭೌಮ ರಾಷ್ಟ್ರ. ಸುತ್ತಲೂ ಭೂಪ್ರದೇಘಗಳಿಂದ ಆವೃತವಾಗಿರುವ ಚಾಡ್‌ನ ಉತ್ತರದಲ್ಲಿ ಲಿಬ್ಯಾ, ಪೂರ್ವಕ್ಕೆ ಸುಡಾನ್, ದಕ್ಷಿಣದಲ್ಲಿ ಮಧ್ಯ ಆಫ್ರಿಕನ್ ಗಣರಾಜ್ಯ, ನೈಋತ್ಯದಲ್ಲಿ ಕೆಮೆರೂನ್ ಮತ್ತು ನೈಜೀರಿಯ ಹಾಗೂ ಪಶ್ಚಿಮದಲ್ಲಿ ನೈಜರ್ ರಾಷ್ಟ್ರಗಳಿವೆ. ಯಾವುದೇ ಸಾಗರತೀರ/ಸಮುದ್ರತೀರದಿಂದ ಬಲುದೂರದಲ್ಲಿದ್ದು ಹೆಚ್ಚಿನಂಶ ಮರುಭೂಮಿಯ ವಾತಾವರಣವನ್ನು ಹೊಂದಿರುವ ಚಾಡ್ ದೇಶವನ್ನು ಕೆಲವೊಮ್ಮೆ ಆಫ್ರಿಕಾದ ಮೃತ ಹೃದಯವೆಂದು ಕರೆಯಲಾಗುತ್ತದೆ. ಚಾಡ್ ದೇಶವನ್ನು ಭೌಗೋಳಿಕವಾಗಿ ಮೂರು ಭಾಗಗಳಾಗಿ ವಿಂಗಡಿಸಬಹುದು. ನಾಡಿನ ಉತ್ತರಭಾಗದ ಮರುಭೂಮಿ ಪ್ರದೇಶ, ಮಧ್ಯಭಾಗದ ಪೂರ್ಣ ಒಣ ಪ್ರದೇಶ ಮತ್ತು ದಕ್ಷಿಣಭಾಗದ ಫಲವತ್ತಾದ ಸವಾನ್ನಾ ಪ್ರದೇಶ.ಚಾಡ್ ಸರೋವರವು ನಾಡಿನ ಅತಿ ದೊಡ್ಡ ಜಲಮೂಲವಾಗಿದ್ದು ದಕ್ಷಿಣ ಭಾಗದ ಪ್ರದೇಶಗಳಿಗೆ ನೀರುಣಿಸುವುದು. ಚಾಡ್‌ನಲ್ಲಿ ೨೦೦ಕ್ಕೂ ಹೆಚ್ಚು ಬುಡಕಟ್ಟುಗಳ ಜನರಿರುವರು. ಫ್ರೆಂಚ್ ಮತ್ತು ಅರಾಬಿಕ್ ನಾಡಿನ ಅಧಿಕೃತ ಭಾಷೆಗಳು. ಬಹುಸಂಖ್ಯಾಕ ಜನತೆ ಇಸ್ಲಾಂ ಧರ್ಮದ ಅನುಯಾಯಿಗಳು.
ಚಾಡ್ ಗಣರಾಜ್ಯ | |
---|---|
Coat of arms
| |
Motto: "ಏಕತೆ, ದುಡಿಮೆ, ಪ್ರಗತಿ" | |
Anthem: "ಲಾ ಚಾದಿಯನ್" | |
Capital | ಎನ್‍ಜಮೇನ |
Largest city | ರಾಜಧಾನಿ |
Official languages | ಫ್ರೆಂಚ್, ಅರಾಬಿಕ್ |
Demonym(s) | ಚಾಡಿಯನ್ |
Government | ಗಣರಾಜ್ಯ |
ಇಡ್ರಿಸ್ ದೆಬೀ | |
• ಪ್ರಧಾನಿ | ಡೆಲ್ವಾ ಕಾಸ್ಸಿರೆ ಕೌಮಕೋಯೆ |
ಸ್ವಾತಂತ್ರ್ಯ ಫ್ರಾನ್ಸ್ ನಿಂದ | |
• ದಿನಾಂಕ | ಆಗಸ್ಟ್ 11 1960 |
• Water (%) | 1.9 |
Population | |
• 2005 estimate | 10,146,000 (75ನೆಯದು) |
• 1993 census | 6,279,921 |
GDP (PPP) | 2005 estimate |
• Total | $15.260 billion (128ನೆಯದು) |
• Per capita | $1,519 (163ನೆಯದು) |
HDI (2004) | 0.368 Error: Invalid HDI value · 171ನೆಯದು |
Currency | CFA ಫ್ರಾಂಕ್ (XAF) |
Time zone | UTC+1 (WAT) |
• Summer (DST) | UTC+1 (ಪರಿಗಣನೆಯಲ್ಲಿಲ್ಲ) |
Calling code | 235 |
Internet TLD | .td |